ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

‘ಅಭಿಮಾನೋತ್ಸವ’ ಯಶಸ್ವಿ, ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಇಂದಿನಿಂದಲೇ ಶ್ರಮಿಸಿ: ಬಿ.ವೈ.ರಾಘವೇಂದ್ರ ಕರೆ

On: May 15, 2026 10:34 PM
Follow Us:

ಸರ್ವರ ಸಹಕಾರದಿಂದ ‘ಯಡಿಯೂರಪ್ಪ ಅಭಿಮಾನೋತ್ಸವ’ ಅಭೂತಪೂರ್ವ ಯಶಸ್ಸು: ಸಂಸದ ಬಿ.ವೈ.ರಾಘವೇಂದ್ರ ಹರ್ಷ

ಬೆಂಗಳೂರು: ಕೋಟ್ಯಂತರ ಅಭಿಮಾನಿಗಳು ಹಾಗೂ ಕಾರ್ಯಕರ್ತರ ನಿರಂತರ ಶ್ರಮ ಮತ್ತು ಸರ್ವರ ಸಹಕಾರದಿಂದ ಚಿತ್ರದುರ್ಗದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ‘ಅಭಿಮಾನೋತ್ಸವ’ ಸಮಾರಂಭವು ಅತ್ಯಂತ ಅಪೂರ್ವ ಹಾಗೂ ಐತಿಹಾಸಿಕ ಯಶಸ್ಸು ಸಾಧಿಸಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ಯುವಿ. ರಾಘವೇಂದ್ರ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದ ‘ಗಾಯತ್ರಿ ವಿಹಾರ’ದಲ್ಲಿ ಹಮ್ಮಿಕೊಂಡಿದ್ದ ಅಭಿಮಾನೋತ್ಸವದ ಯಶಸ್ಸಿನ ಅಭಿನಂದನಾ ಕಾರ್ಯಕ್ರಮ ಹಾಗೂ ಕೃತಜ್ಞತಾ ಔತಣಕೂಟದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದ ಯಶಸ್ಸಿನ ಕುರಿತು ಮಾತನಾಡಿದ ಸಂಸದರು, “ಈ ಬೃಹತ್ ಸಮಾವೇಶದ ಯಶಸ್ಸಿನ ಹಿಂದೆ ಪಕ್ಷದ ಕಾರ್ಯಕರ್ತರು ಮತ್ತು ವಿವಿಧ ಪ್ರಕೋಷ್ಠಗಳ ಸಂಚಾಲಕರ ಅಹೋರಾತ್ರಿ ಶ್ರಮವಿದೆ. ಚಿತ್ರದುರ್ಗದ ಬಿರು ಬಿಸಿಲನ್ನೂ ಲೆಕ್ಕಿಸದೆ ಸಮಾವೇಶಕ್ಕೆ ಹರಿದುಬಂದಿದ್ದ ಲಕ್ಷಾಂತರ ಜನರಿಗೆ ಕುಡಿಯುವ ನೀರು ಮತ್ತು ಮಜ್ಜಿಗೆ ವಿತರಿಸುವ ಮೂಲಕ ಸ್ವಯಂಸೇವಕರು ಮಾನವೀಯತೆ ಮೆರೆದಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಶ್ರಮಿಸಿದ ಪ್ರತಿಯೊಬ್ಬರನ್ನೂ ನಾವು ಕೃತಜ್ಞತೆಯಿಂದ ಸ್ಮರಿಸಬೇಕಾಗಿದೆ. ಪಕ್ಷದ ಶಾಸಕರು, ಮಾಜಿ ಶಾಸಕರು ಹಾಗೂ ಮುಖಂಡರು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿದ್ದಾರೆ” ಎಂದು ಶ್ಲಾಘಿಸಿದರು.

“ಅಭಿಮಾನೋತ್ಸವಕ್ಕೆ ಅತ್ಯಂತ ಕಡಿಮೆ ಅವಧಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದ್ದರೂ, ನಮ್ಮ ಆಹ್ವಾನವನ್ನು ಮನ್ನಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸಿದ್ದು ಕಾರ್ಯಕ್ರಮದ ಗರಿಮೆಯನ್ನು ಹೆಚ್ಚಿಸಿತು. ಜೊತೆಗೆ, ರಾಜ್ಯದ ನೂರಾರು ಮಠಾಧೀಶರು, ಪೂಜ್ಯ ಸ್ವಾಮೀಜಿಗಳು ಹಾಗೂ ಹರಗುರು ಚರಮೂರ್ತಿಗಳು ಆಗಮಿಸಿ ಆಶೀರ್ವದಿಸಿದ್ದರಿಂದ ಇಡೀ ಸಮಾರಂಭವು ಅತ್ಯಂತ ಸಾಂಗವಾಗಿ ಮತ್ತು ದಿವ್ಯವಾಗಿ ನೆರವೇರಿತು,” ಎಂದು ಬಿ.ವೈ.ರಾಘವೇಂದ್ರ ಅವರು ನೆನೆದರು.

ಇದೇ ಸಂದರ್ಭದಲ್ಲಿ, ಅಭಿಮಾನೋತ್ಸವ ಮುಗಿದ ಮರುದಿನವೇ ಗೌರವಾನ್ವಿತ ಪ್ರಧಾನಮಂತ್ರಿಯವರು ಬೆಂಗಳೂರಿಗೆ ಆಗಮಿಸಿದ್ದನ್ನು ಸ್ಮರಿಸಿದ ಅವರು, ಪ್ರಧಾನಿಗಳನ್ನು ಸ್ವಾಗತಿಸಲು ಹರಿದುಬಂದಿದ್ದ ಸಹಸ್ರಾರು ಜನಸ್ತೋಮದ ಉತ್ಸಾಹವನ್ನು ಕೊಂಡಾಡಿದರು.

​ಸಮಾವೇಶದ ಶಿಸ್ತಿನ ಬಗ್ಗೆ ಮಾತನಾಡಿದ ಅವರು, “ಇಷ್ಟು ದೊಡ್ಡ ಮಟ್ಟದ ಜನಸಾಗರ ಸೇರಿದ್ದರೂ ಕಾರ್ಯಕ್ರಮಕ್ಕೆ ಯಾವುದೇ ಸಣ್ಣ ಕಪ್ಪು ಚುಕ್ಕೆಯೂ ತಗುಲದಂತೆ ಅತ್ಯಂತ ವ್ಯವಸ್ಥಿತವಾಗಿ ಎಲ್ಲವೂ ನೆರವೇರಿದೆ. ನಾವು ಅಂದುಕೊಂಡಿದ್ದಕ್ಕಿಂತಲೂ ಮಿಗಿಲಾದ ಯಶಸ್ಸು ಸಿಕ್ಕಿರುವುದಕ್ಕೆ ದೈವಾನುಗ್ರಹ ಮತ್ತು ನಿಮ್ಮೆಲ್ಲರ ಹಾರೈಕೆಯೇ ಮುಖ್ಯ ಕಾರಣ” ಎಂದರು.

​ಇಡೀ ರಾಜ್ಯವೇ ತಿರುಗಿ ನೋಡುವಂತಹ ಅನನ್ಯ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಯುವಶಕ್ತಿ ಮತ್ತು ಸ್ವಯಂಸೇವಕರ ಪಾತ್ರ ಅತ್ಯಂತ ದೊಡ್ಡದಾಗಿದೆ. ಯುವಜನರ ಮತ್ತು ಕಾರ್ಯಕರ್ತರ ಈ ನಿರಂತರ ಬೆಂಬಲ ನಮಗೆ ಸದಾ ಶ್ರೀರಕ್ಷೆ ಎಂದು ಅಭಿಪ್ರಾಯಪಟ್ಟ ರಾಘವೇಂದ್ರ ಅವರು, “ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿ (BJP) ಅಧಿಕಾರಕ್ಕೆ ತರಲು ನಾವೆಲ್ಲರೂ ಇಂದಿನಿಂದಲೇ ಒಗ್ಗಟ್ಟಾಗಿ, ಶ್ರದ್ಧೆಯಿಂದ ದುಡಿಯೋಣ” ಎಂದು ನೆರೆದಿದ್ದ ಕಾರ್ಯಕರ್ತರಿಗೆ ಕರೆ ನೀಡಿದರು.

​ಈ ಅಭಿನಂದನಾ ಸಮಾರಂಭದಲ್ಲಿ ಪಕ್ಷದ ಪ್ರಮುಖ ಮುಖಂಡರು, ವಿವಿಧ ಪ್ರಕೋಷ್ಠಗಳ ಪದಾಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯ ಉತ್ಸಾಹಿ ಕಾರ್ಯಕರ್ತರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಬರದ ನಡುವೆ ರೈತರ ನೆರವಿಗೆ ಧಾವಿಸದ ಸರ್ಕಾರ: ಎಕರೆಗೆ ₹50 ಸಾವಿರ ಪರಿಹಾರಕ್ಕೆ ಬಿ.ವೈ. ವಿಜಯೇಂದ್ರ ಒತ್ತಾಯ: ರಾಜ್ಯದ ಹಣಕಾಸು ಸ್ಥಿತಿಗತಿ ಕುರಿತು ಶ್ವೇತಪತ್ರಕ್ಕೆ ಆಗ್ರಹ

ಪ್ರಜಾಪ್ರಭುತ್ವದ ಶ್ರೇಷ್ಠತೆಗೆ ಸವಾಲೆಸೆದ ಶ್ರೀ ತರಳಬಾಳು ಜಗದ್ಗುರುಗಳು: ನಾಲ್ವಡಿಯವರ ‘ಜನಹಿತ’ದ ಮಾದರಿ ಇಂದೇಕೆ ಸಾಧ್ಯವಾಗುತ್ತಿಲ್ಲ!?ದಾವಣಗೆರೆಯಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿ ಅನಾವರಣ: ವ್ಯವಸ್ಥೆಯ ಆತ್ಮಾವಲೋಕನಕ್ಕೆ ತರಳಬಾಳು ಶ್ರೀಗಳ ಕರೆ

ಮೂರು ಸಾವಿರ ಕಂಠಗಳು… ಒಂದೇ ನಾದ… ಬಸವಣ್ಣನವರ ವಚನಗಳಿಗೆ ದಾವಣಗೆರೆ ಸಾಕ್ಷಿ!: ‘ವಚನ ನಾದಲೋಕ’ದಲ್ಲಿ ಎಲ್ಲರೂ ಭಾಗವಹಿಸಿ ಎಂದು ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಮನವಿ

‘ಗಲಾಟೆ ಗಣಪತಿ’ಗೆ ತೆರೆ: ಭಯದಿಂದ ಭಕ್ತಿಯ ಸಂಭ್ರಮದತ್ತ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ: ಎಸ್‌ಪಿ ನಿಖಿಲ್ ಬಿ. ಅವರ ಕಾರ್ಯತಂತ್ರದಲ್ಲಿ ತಂತ್ರಜ್ಞಾನಾಧಾರಿತ ಕಣ್ಗಾವಲು: ಶಾಂತಿಯುತ ಮೆರವಣಿಗೆಗೆ ಸಾರ್ವಜನಿಕರ ಮೆಚ್ಚುಗೆ

​ಶ್ರೀ ಜಗದ್ಗುರು ರೇಣುಕಾಚಾರ್ಯರು-ಶರಣರನ್ನು ಬೇರ್ಪಡಿಸುವ ಕುತಂತ್ರ ನಿಲ್ಲಲಿ!: ಒಳಗಿನ ಶತ್ರುಗಳಿಂದಲೇ ಧರ್ಮಕ್ಕೆ ಕಂಟಕ, ಸ್ವಾರ್ಥಿಗಳ ಕಪಟ ನಾಟಕ ಇನ್ಮುಂದೆ ನಡೆಯಲ್ಲ!: ಧರ್ಮದ್ರೋಹಿಗಳಿಗೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಖಡಕ್ ಎಚ್ಚರಿಕೆ!

ರೈತರೆ, ಸಾಲಕ್ಕೆ ಹೆದರಬೇಡಿ! ಆತ್ಮಹತ್ಯೆ ಮಾಡಿಕೊಳ್ಳಬೇಡಿ; ಎದೆತಟ್ಟಿ ‘ನಾನು ರೈತ’ ಎಂದು ಹೇಳಿ ಹೋರಾಡಿ: ಬರ ಪರಿಹಾರದ ಹೆಸರಿನಲ್ಲಿ ರೈತರನ್ನು ಕಾಯಿಸುವುದೇಕೆ? ಶಾಶ್ವತ ನೀರಾವರಿ ಕಲ್ಪಿಸಿ, ಸಾಲಮನ್ನಾ ಮಾಡಿ: ಸಿಎಂಗೆ ಎಚ್.ಆರ್. ಬಸವರಾಜಪ್ಪ ಒತ್ತಾಯ

Leave a Comment