ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಫ್ರೆಂಡ್ಸ್ ಸೆಂಟರ್ ಸಂಸ್ಥೆಯ 60ನೇ ವಾರ್ಷಿಕೋತ್ಸವ ಸಂಭ್ರಮ; ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ಫ್ರೆಂಡ್ಸ್ ಸೆಂಟರ್ ಮಾದರಿ ಸಂಸ್ಥೆ: ಶಾಸಕ ಎಸ್.ಎನ್. ಚನ್ನಬಸಪ್ಪ

On: July 8, 2026 5:10 PM
Follow Us:

ಶಿವಮೊಗ್ಗ: ಸಮಾಜಮುಖಿ ಹಾಗೂ ಮಾನವೀಯ ಸೇವಾ ಚಟುವಟಿಕೆಗಳ ಮೂಲಕ ಕಳೆದ ಆರು ದಶಕಗಳಿಂದ ಜನಸೇವೆಯಲ್ಲಿ ತೊಡಗಿರುವ ಫ್ರೆಂಡ್ಸ್ ಸೆಂಟರ್ ಸಂಸ್ಥೆ ಶಿವಮೊಗ್ಗದ ಹೆಮ್ಮೆಯ ಸಂಘಟನೆಗಳಲ್ಲಿ ಒಂದಾಗಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.

ನಗರದ ಗೋಪಾಳದಲ್ಲಿರುವ ಫ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಸ್ಥೆಯ 60ನೇ ವಾರ್ಷಿಕೋತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದ ಆಸ್ತಿಯಾಗಿ ಬೆಳೆದ ಸಂಸ್ಥೆ: ಶಾಸಕ ಎಸ್.ಎನ್. ಚನ್ನಬಸಪ್ಪ

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು, “ಶಿವಮೊಗ್ಗ ನಗರದಲ್ಲಿ ಸುದೀರ್ಘ ಇತಿಹಾಸ ಹೊಂದಿರುವ ಹಾಗೂ ಅತಿ ಹೆಚ್ಚು ಹಿರಿಯ ಪೂರ್ವ ಅಧ್ಯಕ್ಷರ ಮಾರ್ಗದರ್ಶನವನ್ನು ಒಳಗೊಂಡಿರುವ ಹೆಮ್ಮೆಯ ಸಂಸ್ಥೆ ಫ್ರೆಂಡ್ಸ್ ಸೆಂಟರ್ ಆಗಿದೆ. ಕಳೆದ ಆರು ದಶಕಗಳಿಂದ ಸಮಾಜಮುಖಿ ಹಾಗೂ ಜನಪರ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಈ ಸಂಸ್ಥೆಯು ಜಿಲ್ಲೆಯಲ್ಲೇ ಹೆಸರುವಾಸಿಯಾಗಿದೆ” ಎಂದು ಪ್ರಶಂಸಿಸಿದರು.

“ಯುವಜನರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದು, ವಿದ್ಯಾರ್ಥಿಗಳಿಗೆ ನಿರಂತರ ಪ್ರೋತ್ಸಾಹ ನೀಡುವುದು, ರಾಜ್ಯ ಮಟ್ಟದ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಕಲೆ ಮತ್ತು ಸಂಸ್ಕೃತಿಗೆ ಒತ್ತು ನೀಡುತ್ತಾ ಬಂದಿದೆ. ಇದರೊಂದಿಗೆ ರಕ್ತದಾನ ಮತ್ತು ನೇತ್ರಾದಾನ ಶಿಬಿರಗಳಂತಹ ಅತ್ಯಂತ ಶ್ರೇಷ್ಠ ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ” ಎಂದರು.

✨ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗುವ ಬದುಕು ನಮ್ಮದಾಗಲಿ: ಮಲ್ಲಿಕಾರ್ಜುನ ಕಾನೂರ್

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾನೂರ್ ಅವರು ಮಾತನಾಡಿ, “ನಮ್ಮ ದೈನಂದಿನ ಜೀವನದ ಪಯಣದಲ್ಲಿ ಪ್ರತಿ ಕ್ಷಣವೂ ಹೊಸ ಪರಿಚಯ, ಸ್ನೇಹ ಹಾಗೂ ಆತ್ಮೀಯರ ಬೀಳ್ಕೊಡುಗೆಗಳೊಂದಿಗೆ ಸಾಗುತ್ತಿದೆ. ನಾವು ಈ ಭೂಮಿಯ ಮೇಲೆ ಇಲ್ಲದಿದ್ದರೂ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಜೀವಿಸುವಂತಾಗಬೇಕು. ಸಮಾಜದಲ್ಲಿ ಉತ್ತಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗುವ ಅರ್ಥಪೂರ್ಣ ಹಾಗೂ ಸಾರ್ಥಕ ಬದುಕು ನಮ್ಮದಾಗಬೇಕು” ಎಂದು ಹೇಳಿದರು.

“ಮನದ ಕಣ್ಣನ್ನು ತೆರೆಯದೆ ಕೇವಲ ಆಧುನಿಕ ನಾಗರಿಕತೆಯನ್ನು ದೂಷಿಸುವ ನಮ್ಮ ನಿಲುವುಗಳು ಬದಲಾಗಬೇಕು. ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಜೀವಂತವಾಗಿರಿಸುವಲ್ಲಿ ಈ ಸಂಸ್ಥೆಯ ಪಾತ್ರ ದೊಡ್ಡದಾಗಿದೆ. ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವ, ಶಾಂತಿ, ಸೌಹಾರ್ದತೆ ಮತ್ತು ಸಹಕಾರವನ್ನು ಬೆಳೆಸುವ ನೈತಿಕ ಗುಣಗಳು ಇತರರೊಂದಿಗೆ ಪ್ರೀತಿಯಿಂದ ಬದುಕುವುದನ್ನು ಕಲಿಸುತ್ತವೆ. ಜೀವನದ ಯಾವುದೇ ಹಂತದಲ್ಲೂ ಹೊಸದೊಂದು ಸಕಾರಾತ್ಮಕ ಆರಂಭ ಸಾಧ್ಯ” ಎಂದು ಆಶಯ ವ್ಯಕ್ತಪಡಿಸಿದ ಅವರು, ಇದೇ ಸಂದರ್ಭದಲ್ಲಿ ನೂತನ ಕಾರ್ಯಕಾರಿ ಮಂಡಳಿಯ ಸದಸ್ಯರ ಹೆಸರನ್ನು ಘೋಷಿಸಿದರು.

60ರ ಸಂಭ್ರಮದ ಕುರಿತು ಹರ್ಷ ವ್ಯಕ್ತಪಡಿಸಿದ ಅವರು, “ನೇತ್ರ ಮತ್ತು ರಕ್ತ ಭಂಡಾರದ ಸೇವೆಯೊಂದಿಗೆ ಆರಂಭವಾದ ಈ ಫ್ರೆಂಡ್ಸ್ ಸೆಂಟರ್ 2026ರ ಈ ವರ್ಷಕ್ಕೆ 60ನೇ ವಸಂತಕ್ಕೆ ಕಾಲಿಟ್ಟಿದೆ. ಈ ’60’ ಎಂಬುದು ಕೇವಲ ಸಂಖ್ಯೆಯಲ್ಲ; ಇದು ಸಾವಿರಾರು ಸೇವಾ ಕಾರ್ಯಗಳು, ದೃಢ ಸಂಕಲ್ಪಗಳು, ಸಂತೋಷದ ಕ್ಷಣಗಳು, ಸಾರ್ವಜನಿಕರ ಸಹಕಾರ ಹಾಗೂ ಹಿರಿಯರ ಆಶೀರ್ವಾದದ ಪ್ರತೀಕವಾಗಿದೆ. ಈ ಎಲ್ಲಾ ಶಕ್ತಿಗಳಿಂದಾಗಿ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ” ಎಂದರು.

ಸಮಾರಂಭದಲ್ಲಿ ಸಮಾಜಸೇವೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅಶ್ವಥ್ ನಾರಾಯಣ್ ಹಾಗೂ ರಾಜೇಶ್ ಪಿ. ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂದ್ಯಾ ಸತ್ಯನಾರಾಯಣ ಪ್ರಾರ್ಥನೆ ನೆರವೇರಿಸಿದರು. ರವೀಂದ್ರನಾಥ್ ಐತಾಳ್ ವಾರ್ಷಿಕ ವರದಿ ಮಂಡಿಸಿದರು. ರಮೇಶ್ ಬಾಬು ಎಸ್.ಜಿ. ಸ್ವಾಗತಿಸಿದರು. ಮೋಹನ್ ಕುಮಾರ್ ಎಲ್.ಎಂ. ವಂದಿಸಿದರು. ಜಿ. ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಪೂರ್ವಾಧ್ಯಕ್ಷ ನಾಗರಾಜ್ ವಿ. ಸಂಸ್ಥೆಯ ಆರು ದಶಕಗಳ ಬೆಳವಣಿಗೆ ಹಾಗೂ ಸಾಧನೆಗಳ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ನಿಕಟ ಪೂರ್ವಾಧ್ಯಕ್ಷ ಧನರಾಜ್ ಬಿ.ಜೆ., ಸ್ವಪ್ನ ಬದರಿನಾಥ್, ಸುನೀತಾ ಚೇತನ್, ಸ್ಮಿತಾ ನವೀನ್, ಅನಿತಾ ಸುರೇಂದ್ರ ಕಾಸಲ, ಉಮಾ ವೆಂಕಟೇಶ್, ಲೋಕೇಶ್ ಹೆಚ್.ಕೆ., ಪಂಚಾಕ್ಷರಯ್ಯ ಹಿರೇಮಠ್, ಸತ್ಯನಾರಾಯಣ ಜಿ., ವೆಂಕಟೇಶ್ ಮೂರ್ತಿ ಟಿ.ಆರ್., ಮಹೇಶ್ವರಪ್ಪ ಹೆಚ್., ಮೋಹನ್ ಡಿ.ಪಿ. ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಪೂರ್ವಾಧ್ಯಕ್ಷರು ಹಾಗೂ ಗಣ್ಯರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

​ಹಿಂದಿನ ಸಮೀಕ್ಷಾ ವರದಿಗಳಂತೆ ಕಸದ ಬುಟ್ಟಿಗೆ ಹಾಕಬೇಡಿ: ಮಧುಸೂದನ್ ನಾಯಕ್ ವರದಿ ಅಧಿವೇಶನದಲ್ಲಿ ಮಂಡಿಸಲು ಸುನಿಲ್ ಕುಮಾರ್ ಆಗ್ರಹ

​ಅಡಿಕೆ ಬೆಳೆಗಾರರ ರಕ್ಷಣೆಗೆ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದಲ್ಲಿ ಮಹಾರಾಷ್ಟ್ರ ಸಿಎಂ ಭೇಟಿ: ತಡೆಹಿಡಿಯಲಾದ ಸರಕುಗಳ ತ್ವರಿತ ಬಿಡುಗಡೆಗೆ ಆಗ್ರಹ

​ಮತಪಟ್ಟಿ ಅಕ್ರಮ: ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ದೂರು

ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಅಭಿನಂದನಾ ಸಮಾರಂಭಕ್ಕೆ ಸಿಎಂಗೆ ಆಹ್ವಾನ; ನೌಕರರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್

“ಕೆಟ್ಟು ನಿಂತ ಮಳೆ ಮಾಪನ ಯಂತ್ರಗಳಿಂದ ರೈತರ ಹೊಟ್ಟೆಗೆ ಹೊಡೆಯಬೇಡಿ”; ಬರದ ಭೀತಿ ನಡುವೆಯೂ ಸರ್ಕಾರ ನಿರ್ಲಕ್ಷ್ಯ: ಸಿಎಂ, ಸಚಿವರಿಗೆ ಹೆಚ್.ಆರ್. ಬಸವರಾಜಪ್ಪ ನೇರ ಎಚ್ಚರಿಕೆ

ಡಿಜಿಪಿ ಡಾ. ಎಂ.ಎ. ಸಲೀಂ ಅವರ ತ್ವರಿತ ನಿರ್ದೇಶನಕ್ಕೆ ಫಲ; ವೀರಶೈವ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿಯಿಂದ ಕ್ಷಮಾಪಣೆ: ಸಾಮಾಜಿಕ ಜಾಲತಾಣ ದುರ್ಬಳಕೆದಾರರಿಗೆ ಕಠಿಣ ಎಚ್ಚರಿಕೆ

Leave a Comment