ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ನ.23ರಂದು ಮಳಲಿ ಮಠದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಧರ್ಮ ಸಮಾರಂಭ; ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ

On: November 21, 2026 1:34 PM
Follow Us:

ರಿಪ್ಪನ್‌ಪೇಟೆ, ನ.21: ಪವಿತ್ರ ಕಾರ್ತಿಕ ಮಾಸದ ದೀಪಗಳ ಬೆಳಕು ಕೇವಲ ದೇವಾಲಯಗಳನ್ನಷ್ಟೇ ಬೆಳಗಿಸುವುದಿಲ್ಲ, ಭಕ್ತರ ಮನಸ್ಸಿನಲ್ಲಿ ಭಕ್ತಿ, ಶ್ರದ್ಧೆ, ಸಂಸ್ಕಾರ ಮತ್ತು ಧಾರ್ಮಿಕ ಜಾಗೃತಿಯ ಜ್ಯೋತಿಯನ್ನು ಪ್ರಜ್ವಲಿಸುತ್ತದೆ. ಸಾವಿರಾರು ವರ್ಷಗಳ ಭಾರತೀಯ ಸನಾತನ ಧಾರ್ಮಿಕ ಪರಂಪರೆಯ ಪ್ರತೀಕವಾಗಿರುವ ಕಾರ್ತಿಕ ದೀಪೋತ್ಸವವು ಭಕ್ತಿ ಮತ್ತು ಆಧ್ಯಾತ್ಮಿಕತೆಯ ಸಂಗಮವಾಗಿದೆ. ಇಂತಹ ಪವಿತ್ರ ಸಂದರ್ಭದಲ್ಲಿ ಶಿವಭಕ್ತಿ, ಗುರುಪರಂಪರೆ ಹಾಗೂ ಧಾರ್ಮಿಕ ಸಂಸ್ಕೃತಿಯ ನೆಲೆವೀಡಾಗಿರುವ ತೀರ್ಥಹಳ್ಳಿ ತಾಲ್ಲೂಕಿನ ಮಳಲಿ ಶ್ರೀಮನ್ ಮಹಾಸಂಸ್ಥಾನ ಮಠದಲ್ಲಿ ನವೆಂಬರ್ 23ರಂದು ಕಾರ್ತಿಕ ದೀಪೋತ್ಸವ ಧರ್ಮಸಮಾರಂಭ ಭಕ್ತಿಭಾವದಿಂದ ನಡೆಯಲಿದೆ.

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ 1008 ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ಸೋಮವಾರ ಸಂಜೆ 5 ಗಂಟೆಗೆ ನಡೆಯಲಿರುವ ಈ ಧಾರ್ಮಿಕ ಸಮಾರಂಭವು ನಾಡಿನ ಹಲವು ಮಠಾಧೀಶರು, ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಸಮಾಜದ ಗಣ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರ ಸಮಾಗಮಕ್ಕೆ ಸಾಕ್ಷಿಯಾಗಲಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್. ಚನ್ನಬಸಪ್ಪ, ಬೇಳೂರು ಗೋಪಾಲಕೃಷ್ಣ, ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥಗೌಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಹರತಾಳು ಹಾಲಪ್ಪ, ಸಾಗರದ ಬಿ.ಎ. ಇಂದೂಧರಗೌಡ, ಶಿವಮೊಗ್ಗದ ಎಸ್.ಎಸ್. ಜ್ಯೋತಿಪ್ರಕಾಶ್, ಕೋಣಂದೂರಿನ ಕೆ.ಆರ್. ಪ್ರಕಾಶ್, ಚನ್ನಬಸಪ್ಪಗೌಡ, ಬಿ. ಯುವರಾಜ್, ಉಮೇಶ್ ಮಸೂರು, ಹೆಚ್.ವಿ. ಈಶ್ವರಪ್ಪಗೌಡ ಹಾಗೂ ಎನ್.ಎನ್. ವರ್ತೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿಗಳು ಸಮಾರಂಭದ ನೇತೃತ್ವ ವಹಿಸಲಿದ್ದು, ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಸಮ್ಮುಖ ವಹಿಸಲಿದ್ದಾರೆ. ಕವಲೇದುರ್ಗದ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿಗಳು ಉಪದೇಶಾಮೃತ ನೀಡಲಿದ್ದಾರೆ. ಮಳಲಿ ಸಂಸ್ಥಾನ ಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿಗಳು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಧಾರ್ಮಿಕ ಸಮಾರಂಭದಲ್ಲಿ ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಲನಗೌಡ, ಹೊಸನಗರದ ಡಿ.ಆರ್. ವಿನಯಕುಮಾರ್ ದುಮ್ಮ, ಹಾಲುಗುಡ್ಡೆಯ ಹೆಚ್.ಎನ್. ಯೋಗಕೇಶಗೌಡ, ಹೊಸನಗರದ ಈಶ್ವರಪ್ಪಗೌಡ, ಕಮದೂರಿನ ಪರಮೇಶಗೌಡ ಕೆ.ವಿ., ಹುಗಡಿಯ ಡಾ. ಶಶಿಕಾಂತ ಹೆಚ್.ಸಿ. ಹಾಗೂ ಕಗ್ಗಲಿಯ ಡಾ. ಸುಧೀನ್ ಪಾಟೀಲ್ ಅವರಿಗೆ ಶ್ರೀ ಜಗದ್ಗುರುಗಳಿಂದ ಗುರುರಕ್ಷೆ ನೀಡಲಾಗುವುದು.

ಬೆಂಗಳೂರಿನ ಹಿರಿಯ ಪತ್ರಕರ್ತ ಆರ್.ಎಸ್. ಪ್ರಶಾಂತ್ ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.

ಕಾರ್ತಿಕ ದೀಪೋತ್ಸವದ ಧಾರ್ಮಿಕ ಮಹತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾಡಿನ ವಿವಿಧ ಮಠಗಳ ಶಿವಾಚಾರ್ಯರು ಭಾಗವಹಿಸಲಿದ್ದಾರೆ. ತೊಗರಸಿ ಪಂಚವರ್ಣಿಗೆ ಮಠ, ಶಾಂತಪುರ, ಬಿಳಕಿ, ಕೋಣಂದೂರು, ಸಂಗೊಳ್ಳಿ, ತಾವರೆಕೆರೆ, ದುಗ್ಗಲಿ-ಕಡೇನಂದಿಹಳ್ಳಿ, ಹಣಮಾಪುರ, ಹರನಹಳ್ಳಿ ಹಾಗೂ ಸಿಂದಗಿ ಮಠಗಳ ಶಿವಾಚಾರ್ಯರು ಸಮಾರಂಭದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಲಿದ್ದಾರೆ.

ಕಾರ್ತಿಕ ದೀಪೋತ್ಸವದ ಅಂಗವಾಗಿ ನವೆಂಬರ್ 23ರಂದು ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಲಿವೆ. ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಹಾಗೂ ಶ್ರೀ ಆದಿಗುರು ನಾಗಾರ್ಜುನ ಶಿವಾಚಾರ್ಯರು ಸೇರಿದಂತೆ ಲಿಂಗೈಕ್ಯ ಶಿವಾಚಾರ್ಯರ ಕರ್ತೃಗದ್ದುಗೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು.

ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ, ಶ್ರೀ ಚೌಡೇಶ್ವರಿ ದೇವಿಗೆ ಸಹಸ್ರ ಕುಂಕುಮಾರ್ಚನೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಇದರೊಂದಿಗೆ ಶ್ರೀ ಗುರುಗಳ ಪಾದಪೂಜೆಯೂ ನೆರವೇರಲಿದೆ.

ಕಾರ್ತಿಕ ಮಾಸದ ಪಾವಿತ್ರ್ಯ, ಗುರುಪರಂಪರೆಯ ಮಹತ್ವ ಹಾಗೂ ಶಿವಭಕ್ತಿಯ ಸಂದೇಶವನ್ನು ಸಾರುವ ಈ ಧರ್ಮಸಮಾರಂಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಧಾರ್ಮಿಕ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಳಲಿ ಶ್ರೀಗಳು ಪ್ರಕಟಣೆ ತಿಳಿಸಿದ್ದಾರೆ.

ಗುರುಗಳ ದಿವ್ಯ ಸಾನ್ನಿಧ್ಯ, ಮಠಾಧೀಶರ ಆಶೀರ್ವಚನ, ಧಾರ್ಮಿಕ ಪೂಜಾ ಕೈಂಕರ್ಯಗಳು ಹಾಗೂ ಕಾರ್ತಿಕ ದೀಪಗಳ ಬೆಳಕಿನೊಂದಿಗೆ ಮಳಲಿ ಮಠದಲ್ಲಿ ನಡೆಯಲಿರುವ ಈ ಸಮಾರಂಭವು ಭಕ್ತರ ಪಾಲಿಗೆ ಆಧ್ಯಾತ್ಮಿಕ ಅನುಭೂತಿಯ ಮಹತ್ವದ ಕ್ಷಣವಾಗಲಿದೆ.

K.M.Sathish Gowda

Join WhatsApp

Join Now

Facebook

Join Now

Read more

ಬಸವಣ್ಣನವರ ಮೌಲ್ಯಗಳು ಸೂರ್ಯ–ಚಂದ್ರರಿರುವವರೆಗೂ ಪ್ರಸ್ತುತ; ಬಸವತತ್ವದ ವಿರುದ್ಧದ ಅಪಪ್ರಚಾರಕ್ಕೆ ಮಣಿಯಬೇಡಿ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ

ಕನ್ನಡದ ಭಾಷಾ-ಸಾಂಸ್ಕೃತಿಕ ವೈಭವಕ್ಕೆ ಬಸವಣ್ಣನವರ ಕೊಡುಗೆ ಅಪಾರ; ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಧಾರ್ಮಿಕ ಪರಂಪರೆಗೆ ಅವರೇ ಅಸ್ಮಿತೆ: ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳು

ಭಕ್ತಿಯ ಬೆಳಕಿನಲ್ಲಿ ಕಂಗೊಳಿಸಲಿದೆ ಶ್ರೀ ರಂಭಾಪುರಿ ಪೀಠ; ನ.24ರಂದು ಕಾರ್ತಿಕ ಸಹಸ್ರ ದೀಪೋತ್ಸವದ ಸಂಭ್ರಮ

ಜಾತಿಯ ಸಂಕೋಲೆ ಮುರಿದು ಕಾಯಕಕ್ಕೆ ಘನತೆ ನೀಡಿದ ಬಸವಣ್ಣ; ದುಡಿಮೆಯೇ ಜ್ಞಾನ, ಶ್ರಮವೇ ಶರಣರ ಸಾಧನೆ: ಚನ್ನಯ್ಯ ಬಿ. ಮಾರವಳ್ಳಿ

ಮದುವೆ ಆಡಂಬರಕ್ಕೆ ಕಡಿವಾಣ ಹಾಕಿ, ರೈತನ ಬೆವರಿನ ಅನ್ನಕ್ಕೆ ಗೌರವ ಕೊಡಿ: ಸರಳ ವಿವಾಹಕ್ಕೆ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಕರೆ

ಅಂತರಂಗ ಶುದ್ಧಿಯಾದಾಗಲೇ ಬಹಿರಂಗದ ಬದುಕು ಪವಿತ್ರವಾಗುತ್ತದೆ; ನಡೆ-ನುಡಿಗಳಲ್ಲಿ ಸಾಮರಸ್ಯವೇ ಬಸವಣ್ಣನವರ ಬದುಕಿನ ಸಂದೇಶ: ಬಸನಗೌಡ ಮಾಳಗಿ

Leave a Comment