ಶಿವಮೊಗ್ಗ: ಅನಂತಪುರದ ಮಂಜಪ್ಪ ಕೆ. ಅವರು ಬೈಕಿನಲ್ಲಿ ಪ್ರಯಾಣಿಸುತ್ತಿದ್ದಾಗ ಒಂದು ಬ್ಯಾಗ್ ಬಿಳಿಸಿಕೊಂಡು ಹೋಗಿದ್ದರು. ಬ್ಯಾಗ್‌ನಲ್ಲಿ ಒಂದು ಬಂಗಾರದ ಉಂಗುರ, ಒಂದು ಬೆಳ್ಳಿ ಉಂಗುರ ಹಾಗೂ ಒಂದು ಜೋಡಿ ಬೆಳ್ಳಿಯ ಕಿವಿಯೋಲೆಗಳಿದ್ದವು.
ಶಿವಮೊಗ್ಗದ ಗೋಪಿ ಸರ್ಕಲ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಎ.ಎಸ್.ಐ. ಮೋಹನ್ ಹಾಗೂ ಪೊಲೀಸರಾದ ರಾಜೇಸಾಬ್ ಮತ್ತು ಮುನೇಶಪ್ಪ ಅವರಿಗೆ ಬ್ಯಾಗ್ ಸಿಕ್ಕಿತು. ತಕ್ಷಣವೇ ಅವರು ಬ್ಯಾಗ್‌ನೊಳಗಿದ್ದ ಬಿಲ್‌ನಲ್ಲಿ ನೀಡಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ಮಾಲೀಕರಾದ ಮಂಜಪ್ಪ ಅವರನ್ನು ಸಂಪರ್ಕಿಸಿದರು. ನಂತರ ಮಂಜಪ್ಪ ಅವರೇ ಬಂದು ತಮ್ಮ ವಸ್ತುಗಳನ್ನು ಸುರಕ್ಷಿತವಾಗಿ ವಾಪಸ್ ಪಡೆದುಕೊಂಡರು.
ಬ್ಯಾಗ್ ಮರಳಿ ಸಿಕ್ಕ ಹಿನ್ನೆಲೆಯಲ್ಲಿ ಸಂತೋಷಗೊಂಡ ಮಂಜಪ್ಪ ಅವರು, “ಇಂದು ಪೊಲೀಸರ ಪ್ರಾಮಾಣಿಕತೆ ಹಾಗೂ ಮಾನವೀಯತೆ ನನಗೆ ದೊಡ್ಡ ನೆರವಾಯಿತು. ನಾನು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ,” ಎಂದು ಪ್ರತಿಕ್ರಿಯಿಸಿದರು.
ಸ್ಥಳೀಯ ನಾಗರಿಕರು ಸಹ ಈ ಘಟನೆಗೆ ಸಂತೋಷ ವ್ಯಕ್ತಪಡಿಸಿ, “ಪೊಲೀಸರು ಸಮಾಜದಲ್ಲಿ ನಿಜವಾದ ಭದ್ರತಾ ಭಾವನೆ ಮೂಡಿಸುವಂತಹ ಕಾರ್ಯ ಮಾಡಿರುವುದು ಶ್ಲಾಘನೀಯ,” ಎಂದು ಅಭಿಪ್ರಾಯಪಟ್ಟರು.
ಶಿವಮೊಗ್ಗ ಪೊಲೀಸ್ ಇಲಾಖೆಯ ಈ ಕಾರ್ಯಾಚರಣೆ ಸಾರ್ವಜನಿಕರಿಂದ ಮೆಚ್ಚುಗೆ ಪಡೆಯುತ್ತಿದೆ.