ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಬಾಳೆಗೊನೆಗಳಲ್ಲಿ ಗಾಂಜಾ–ಸಿಗರೇಟ್ ಕಳ್ಳಸಾಗಾಟ,..!

On: November 20, 2025 9:24 PM
Follow Us:

ಶಿವಮೊಗ್ಗ ಜೈಲು ಅಧಿಕಾರಿಗಳ ತಪಾಸಣೆಯಲ್ಲಿ ರಹಸ್ಯ ಪ್ಯಾಕೆಟ್‌ಗಳ ಪತ್ತೆ,‌!

ಶಿವಮೊಗ್ಗ: ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಬಾಳೆಗೊನೆಗಳ ಮೂಲಕ ಗಾಂಜಾ ಹಾಗೂ ಸಿಗರೇಟುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ನವೆಂಬರ್ 19ರಂದು ಮಧ್ಯಾಹ್ನ 2.15ರ ಸುಮಾರಿಗೆ ಆಟೋ ಚಾಲಕನೊಬ್ಬ ಐದು ಬಾಳೆಗೊನೆಗಳನ್ನು ಕಾರಾಗೃಹದ ಮುಂಭಾಗಕ್ಕೆ ತಂದು, ಕ್ಯಾಂಟೀನ್‌ ಸಿಬ್ಬಂದಿಯ ಸೂಚನೆ ಮೇರೆಗೆ ತಂದಿದ್ದಾಗಿ ತಿಳಿಸಿ ಅಲ್ಲೇ ಇಟ್ಟು ತೆರಳಿದ್ದಾನೆ.

ಕಾರಾಗೃಹದ ಮುಖ್ಯ ಭದ್ರತಾ ಮೇಲ್ವಿಚಾರಣೆಯಲ್ಲಿ ಇದ್ದ ಕೆ.ಎಸ್.ಐ.ಎಸ್.ಎಫ್ ಇನ್ಸ್‌ಪೆಕ್ಟರ್ ಜಗದೀಶ್ ಅವರ ನೇತೃತ್ವದಲ್ಲಿ, ಪ್ರೋ. ಪಿಎಸ್‌ಐ ಪ್ರಭು ಎಸ್., ಹಾಗೂ ಸಿಬ್ಬಂದಿ ಪ್ರವೀಣ ಮತ್ತು ನಿರೂಪಬಾಯಿ ಅವರು ಬಾಳೆಗೊನೆಗಳನ್ನು ಪರಿಶೀಲಿಸಿದಾಗ ಬಾಳೆಗೊನೆಯ ದಿಂಡನ್ನು ಒಳಗಿನಿಂದ ಕೊರೆದು, ಟೇಪ್‌ನಲ್ಲಿ ಸುತ್ತಿದ ಗಾಂಜಾ ಮತ್ತು ಸಿಗರೇಟ್ ಪ್ಯಾಕೆಟ್‌ಗಳು ಪತ್ತೆಯಾಗಿವೆ.

ಈ ಕುರಿತು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್ ರವರ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 694/2025ರಂದು ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಕಲಂ 42 – ಕರ್ನಾಟಕ ಪ್ರಿಸನ್‍ ಆಕ್ಟ್ ತಿದ್ದುಪಡಿ, ಹಾಗೂ NDPS Act 20(b)(II)(A) ಅಡಿಯಲ್ಲಿ ದಾಖಲಿಸಲಾಗಿದೆ.

ಒಟ್ಟು 123 ಗ್ರಾಂ ಗಾಂಜಾ ಹಾಗೂ 40 ಸಿಗರೇಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆದಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment