ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಗೋವಾದಲ್ಲಿ ಕಾಶೀ ಜಗದ್ಗುರುಗಳ ಸಾನಿಧ್ಯದಲ್ಲಿ ಇಷ್ಟಲಿಂಗ ದೀಕ್ಷೆ: ವೀರಶೈವ ಧರ್ಮ ಜಾಗೃತಿಗೆ ಹೊಸ ಶಕ್ತಿ

On: January 14, 2026 10:20 PM
Follow Us:

ಪಣಜಿ: ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ಆಶ್ರಯದಲ್ಲಿ ಮಡಗಾಂವ್‌ನಲ್ಲಿ ಇತ್ತೀಚೆಗೆ ಕಾಶೀ ಜಗದ್ಗುರುಗಳ ಸಾನಿಧ್ಯದಲ್ಲಿ ಇಷ್ಟಲಿಂಗ ದೀಕ್ಷೆ ಹಾಗೂ ಧರ್ಮ ಜಾಗೃತಿ ಸಮಾರಂಭವು ಭಕ್ತಿಭಾವದಿಂದ ನೆರವೇರಿತು. ಗೋವಾದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ವೀರಶೈವ ಲಿಂಗಾಯತ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ದೀಕ್ಷೆ ಪಡೆದು ಧಾರ್ಮಿಕ ಚೈತನ್ಯವನ್ನು ಅನುಭವಿಸಿದರು.

ಸಮಾರಂಭದಲ್ಲಿ ಆಶೀರ್ವಚನ ನೀಡಿದ ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, “2013ರಲ್ಲಿ ರಷ್ಯಾ ದೇಶದ ನಾಗರಿಕರ ಅಪೇಕ್ಷೆಯಂತೆ ಕಾಶೀ ಪೀಠದಿಂದ ಮೊದಲ ಬಾರಿಗೆ ಇಷ್ಟಲಿಂಗ ದೀಕ್ಷೆ ನೀಡಲಾಗಿತ್ತು. ಅದು ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಆ ಘಟನೆಯಿಂದ ಪ್ರೇರಿತರಾಗಿ ಗೋವಾದ ವೀರಶೈವ ಲಿಂಗಾಯತರು ಸಂಘಟಿತರಾಗಿ ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜವನ್ನು ಸ್ಥಾಪಿಸಿದ್ದಾರೆ. ಇದು ಧರ್ಮ ಜಾಗೃತಿಯ ದೃಷ್ಠಿಯಿಂದ ಶ್ಲಾಘನೀಯ ಬೆಳವಣಿಗೆ” ಎಂದರು.

ಸಮಾಜದ ರಾಜ್ಯಾಧ್ಯಕ್ಷೆಯಾಗಿ ಜಯಶ್ರೀ ಹೊಸಮನಿ ಅವರು ಸಮರ್ಥವಾಗಿ ನೇತೃತ್ವ ವಹಿಸಿಕೊಂಡು ಉತ್ತಮ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವುದನ್ನು ಜಗದ್ಗುರುಗಳು ಶ್ಲಾಘಿಸಿದರು. “ಮಾನವನ ಆತ್ಮೋನ್ನತಿಗೆ ಇಷ್ಟಲಿಂಗ ದೀಕ್ಷೆ ಅತ್ಯಾವಶ್ಯಕ. ವೀರಶೈವ ಲಿಂಗಾಯತ ಸಮುದಾಯದಲ್ಲಿ ಜನಿಸಿದ ಪ್ರತಿಯೊಬ್ಬರೂ ದೀಕ್ಷೆ ಪಡೆದು ಮೋಕ್ಷಮಾರ್ಗದಲ್ಲಿ ಮುನ್ನಡೆಯಬೇಕು. ಈ ನಿಟ್ಟಿನಲ್ಲಿ ಇಂತಹ ದೀಕ್ಷಾ ಸಮಾರಂಭಗಳು ಇನ್ನಷ್ಟು ಹೆಚ್ಚಾಗಬೇಕು” ಎಂದು ಕರೆ ನೀಡಿದರು.

ಕರ್ನಾಟಕದ ಗಡಿರಾಜ್ಯವಾಗಿರುವ ಗೋವಾದಲ್ಲಿ ಸುಮಾರು ಐದು ಲಕ್ಷಕ್ಕೂ ಅಧಿಕ ಕನ್ನಡಿಗರು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಜುವಾರಿನಗರ, ಪಣಜಿ, ಪೋಂಡಾ, ಬಿಚೋಲಿ, ಸಾಕಳಿ ಹಾಗೂ ವಾಸ್ಕೋ ಪ್ರದೇಶಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ವೀರಶೈವ ಲಿಂಗಾಯತರು ವಾಸವಿದ್ದು, ಅವರು ಧರ್ಮ, ಸಂಸ್ಕೃತಿ ಹಾಗೂ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಹಿರೇಮಠ

ಈ ಧಾರ್ಮಿಕ ಸಮಾರಂಭದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೆರೂರು ಮಠದ ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಗುಳೇದಗುಡ್ಡದ ಡಾ. ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದು ತಮ್ಮ ಆಶೀರ್ವಚನ ನೀಡಿದರು. ಸಮಾಜದ ರಾಜ್ಯಾಧ್ಯಕ್ಷೆ ಜಯಶ್ರೀ ಹೊಸಮನಿ, ಪದಾಧಿಕಾರಿಗಳಾದ ಹನುಮಂತಪ್ಪ ಶಿರೂರರೆಡ್ಡಿ, ಮಹೇಶ್ ಆಲೂರು, ಅನಿಲ್ ಸನದಿ, ಭೀಮನಗೌಡ ಎಸ್. ಪಾಟೀಲ್, ಶಿವಪ್ಪಗೌಡ ಧನ್ನೂರ ಹಾಗೂ ಗೋವಾ ಕನ್ನಡ ಸಂಘದ ಮುರುಳಿ ಮನೋಹರ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಮಹಿಳೆಯರಿಂದ ಶ್ರೀಸಿದ್ಧಾಂತ ಶಿಖಾಮಣಿ ಪಾರಾಯಣ ನಡೆಯಿತು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ಸಮಾರಂಭಕ್ಕೆ ವಿಶೇಷ ಕಳೆ ನೀಡಿದವು. ಭಕ್ತಿಭಾವ, ಧಾರ್ಮಿಕ ಶಿಸ್ತಿನೊಂದಿಗೆ ಇಷ್ಟಲಿಂಗ ದೀಕ್ಷೆ ವಿಧಿ ವಿಧಾನಗಳು ನೆರವೇರಿದವು.

K.M.Sathish Gowda

Join WhatsApp

Join Now

Facebook

Join Now

Read more

ಆಧ್ಯಾತ್ಮಿಕ ಸಂಪತ್ತೇ ಅಮರ; ಭೌತಿಕ ಸಂಪತ್ತು ಶಾಶ್ವತವಲ್ಲ: ಶ್ರೀ ರಂಭಾಪುರಿ ಜಗದ್ಗುರುಗಳು

​ಮೌಲ್ಯಗಳು ಅಂತ್ಯವಾದರೆ ಮಾನವೀಯತೆಯೇ ಅಂತ್ಯಗೊಂಡಂತೆ: ಶ್ರೀ ರಂಭಾಪುರಿ ಜಗದ್ಗುರುಗಳು

ಶಿವಶರಣರ ಪುಣ್ಯಭೂಮಿಯಲ್ಲಿ ಸಂಘರ್ಷ ಬೇಡ; ವಾದ-ವಿವಾದ ಬಿಟ್ಟು ಧರ್ಮ ಸಂಸ್ಕೃತಿ ಗಟ್ಟಿಗೊಳಿಸಿ: ಶ್ರೀ ರಂಭಾಪುರಿ ಜಗದ್ಗುರುಗಳು

​ಭೌತಿಕ ಸಂಪತ್ತಿನಿಂದ ಶಾಂತಿ ಸಿಗದು; ಸತ್ಕರ್ಮದ ಧರ್ಮಾಚರಣೆಯೇ ಬದುಕಿಗೆ ಆಶಾಕಿರಣ: ಶ್ರೀ ರಂಭಾಪುರಿ ಜಗದ್ಗುರುಗಳು

ಬದುಕಿಗೆ ಭಯವಲ್ಲ, ಭರವಸೆ ಮುಖ್ಯ: ಮಳಲಿಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು

ಭಕ್ತಿ, ಧರ್ಮ ಮತ್ತು ಸಂಸ್ಕೃತಿಯ ಮಹಾಸಂಗಮಕ್ಕೆ ಸಾಕ್ಷಿಯಾದ ಸೂಗೂರು: “ದೇವಸ್ಥಾನಗಳು ಕೇವಲ ಕಲ್ಲಿನ ಕಟ್ಟಡಗಳಲ್ಲ, ಸಮಾಜಕ್ಕೆ ಸಂಸ್ಕಾರ ಕಲಿಸುವ ವಿಶ್ವವಿದ್ಯಾಲಯಗಳು”: ಆಯನೂರು ಮಂಜುನಾಥ್

Leave a Comment