ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಹ್ಯಾರಿಸ್ ನಲಪಾಡ್ ಹುಟ್ಟುಹಬ್ಬ: ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಬಳಿ ಯುವ ಕಾಂಗ್ರೆಸ್ ವತಿಯಿಂದ ಅನ್ನದಾಸೋಹ ಸೇವೆ

On: January 31, 2026 2:06 PM
Follow Us:

ಶಿವಮೊಗ್ಗ: ರಾಜ್ಯದ ಮುಂಚೂಣಿ ಯುವ ನಾಯಕರಾಗಿರುವ ಹಾಗೂ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ಶ್ರೀ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರ ಹುಟ್ಟುಹಬ್ಬದ ಅಂಗವಾಗಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸಾಮಾಜಿಕ ಸೇವೆಯ ಮೂಲಕ ಅರ್ಥಪೂರ್ಣ ಆಚರಣೆ ನಡೆಸಲಾಯಿತು.

ನಗರದ ಮೆಗನ್ ಆಸ್ಪತ್ರೆಯ ಮುಂಭಾಗ ಸಾರ್ವಜನಿಕರಿಗೆ ಅನ್ನದಾಸೋಹ ವಿತರಿಸುವ ಮೂಲಕ, ಮಾನವೀಯ ಮೌಲ್ಯಗಳು ಹಾಗೂ ಸೇವಾಭಾವನೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಆಸ್ಪತ್ರೆ ಆವರಣದಲ್ಲಿದ್ದ ರೋಗಿಗಳು, ಅವರ ಕುಟುಂಬಸ್ಥರು ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಕೆ.ರಂಗನಾಥ್ ಮಾತನಾಡಿ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರು ಯುವಕರಿಗೆ ಪ್ರೇರಣೆಯಾದ ನಾಯಕರು. ರಾಜಕೀಯದ ಜೊತೆಗೆ ಸಾಮಾಜಿಕ ಸೇವೆಗೆ ಅವರು ನೀಡುತ್ತಿರುವ ಮಹತ್ವವೇ ಇಂತಹ ಕಾರ್ಯಕ್ರಮಗಳಿಗೆ ಪ್ರೇರಣೆಯಾಗುತ್ತಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲೂ ಯುವ ಕಾಂಗ್ರೆಸ್ ವತಿಯಿಂದ ಇಂತಹ ಜನಪರ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್ ಸೂಡ, ಸದಸ್ಯರಾದ ಎಂ. ಪ್ರವೀಣ್ ಕುಮಾರ್, ಹಾಪ್‌ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು. ಜೊತೆಗೆ ಯುವ ಕಾಂಗ್ರೆಸ್ ಮುಖಂಡರಾದ ಎಚ್.ಪಿ. ಗಿರೀಶ್, ಬಿ. ಲೋಕೇಶ್, ಈಟಿ ನಿತಿನ್, ಎಸ್. ಕುಮರೇಶ್, ಆರ್. ಕಿರಣ್, ಎಂ. ರಾಕೇಶ್, ಕೆ.ಎಲ್. ಪವನ್, ಪುಷ್ಪ ಕುಮಾರ್, ಸಚಿನ್, ಇರ್ಫಾನ್, ಶಾರುಖ್, ನದೀಮ್, ವಿನಯ್ ಬಜಾರ್, ಅಜ್ಞಾನ್, ಆಕಾಶ್, ವಿನೋದ್, ಪುನೀತ್ ಹಾಗೂ ಇತರರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಜಲಕ್ರಾಂತಿಗೆ ದೆಹಲಿಯಲ್ಲಿ ಹೊಸ ಚೈತನ್ಯ: ಶ್ರೀ ತರಳಬಾಳು ಜಗದ್ಗುರು ಮತ್ತು ಜಲತಜ್ಞ ಡಾ. ರಾಜೇಂದ್ರ ಸಿಂಗ್ ನಡುವೆ ಮಹತ್ವದ ಮಾತುಕತೆ

ಹಾಸನದಲ್ಲಿ ಗೂಂಡಾಗಿರಿ: ಬೆಟ್ಟದ ಭೈರವೇಶ್ವರ ದೇವಸ್ಥಾನ ಬಳಿ ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ, ಪ್ರಕರಣ ದಾಖಲು

ಶಿವಮೊಗ್ಗ ಪೊಲೀಸರಿಗೆ ಗೌರವ: ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ರಮೇಶ್ ಕುಮಾರ್ ಸೇರಿದಂತೆ ಮೂವರಿಗೆ ಮುಖ್ಯಮಂತ್ರಿ ಪದಕ ಘೋಷಣೆ

ಕೇಂದ್ರವನ್ನು ಟೀಕಿಸುವುದರಲ್ಲೇ 3 ವರ್ಷ ವ್ಯರ್ಥ: ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಶ್ರೀ ರಾಮನವಮಿ ಸಂಭ್ರಮ: ಶಿವಮೊಗ್ಗದಲ್ಲಿ ಅದ್ಧೂರಿ ರಥೋತ್ಸವ ಹಾಗೂ ದುರ್ಗಿಗುಡಿ ಮಿತ್ರಕೂಟದಿಂದ ಪಾನಕ–ಕೋಸಂಬರಿ ವಿತರಣೆ

ಇಂಧನ ಬೆಲೆ ಏರಿಕೆ ಭೀತಿ ನಡುವೆ ಕೇಂದ್ರದ ದೊಡ್ಡ ನಿರ್ಧಾರ: ಪೆಟ್ರೋಲ್ ಸುಂಕ 3 ರೂ., ಡೀಸೆಲ್ ಸುಂಕ ಸಂಪೂರ್ಣ ರದ್ದು

Leave a Comment