ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

“ನಾವು 5,000 ಕಾರ್ಯಕ್ರಮ ಮಾಡುತ್ತೇವೆ, ತಡೆಯಲು ಯಾರಿಗೂ ಸಾಧ್ಯವಿಲ್ಲ: ಸರ್ಕಾರಕ್ಕೆ ಬಿ.ಎಲ್. ಸಂತೋಷ್ ಸವಾಲು”

On: February 7, 2026 10:43 PM
Follow Us:

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಶತಮಾನೋತ್ಸವದ ಅಂಗವಾಗಿ ಬೆಂಗಳೂರಿನ ಗೋವಿಂದರಾಜನಗರದಲ್ಲಿ ಆಯೋಜಿಸಲಾದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕೆ ನಡೆಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿ, ಇಂತಹ ಕ್ರಮಗಳಿಗೆ ನಾವು ಮಣಿಯುವುದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದರು.

“ದೇಶಕ್ಕಾಗಿ ಬದುಕುವುದು ಕ್ಷಣಿಕವಾದ ವಿಚಾರವಲ್ಲ. ಆರ್‌ಎಸ್‌ಎಸ್ ತನ್ನ ಸ್ವಾರ್ಥಕ್ಕಾಗಿ ಅಥವಾ ಹೊಗಳಿಕೆಗಾಗಿ ಕೆಲಸ ಮಾಡುವ ಸಂಘಟನೆಯಲ್ಲ. ರಾಷ್ಟ್ರ ಮತ್ತು ಸಮಾಜದ ಹಿತಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ” ಎಂದು ಅವರು ಹೇಳಿದರು. ಇಂದಿನ ಕಾರ್ಯಕ್ರಮಕ್ಕೆ ಮೈದಾನ ಪಡೆಯಲು ತೀವ್ರ ಅಡೆತಡೆಗಳನ್ನು ಎದುರಿಸಬೇಕಾಯಿತು ಎಂದು ಆರೋಪಿಸಿದ ಅವರು, “ಮೈದಾನ ಕೊಡದಿದ್ದರೆ ರಸ್ತೆಗಳನ್ನೇ ಮೈದಾನ ಮಾಡುತ್ತೇವೆ. ಹಿಂದೂ ಸಮಾಜ ಈಗ ಎದ್ದು ನಿಂತಿದೆ, ತನ್ನ ಕಾಲುಗಳ ಮೇಲೆ ನಿಂತಿದೆ” ಎಂದು ಘೋಷಿಸಿದರು.

ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಕಟುವಾಗಿ ಪ್ರತಿಕ್ರಿಯಿಸಿದ ಬಿ.ಎಲ್. ಸಂತೋಷ್, “ನಾವು ಇನ್ನೂ 5,000 ಕಾರ್ಯಕ್ರಮಗಳನ್ನು ಮಾಡುತ್ತೇವೆ. ಇವು ದ್ವೇಷ ಭಾಷಣಗಳು ಎಂದು ಕರೆಯಲಾಗುತ್ತಿದೆ. ಆದರೆ ಈ 5,000 ಭಾಷಣಗಳು ಕರ್ನಾಟಕವನ್ನು ಆಳುವ ಅರಸರಿಗೆ ಎಚ್ಚರಿಕೆಯ ಸಂದೇಶಗಳಾಗಿವೆ” ಎಂದು ಹೇಳಿದರು. “ಒಂದು ದಿನ ನೀವು ಭಾರತ ಮಾತಾ ಕಿ ಜೈ ಎಂದು ಘೋಷಿಸಲೇಬೇಕು, ಹರ ಹರ ಮಹಾದೇವ ಎಂದು ಹೇಳಲೇಬೇಕು, ನಮ್ಮ ಜೊತೆ ನಡೆಯಲೇಬೇಕು” ಎಂದು ಹೇಳಿದ ಅವರು, ಹಿಂದುತ್ವ ಹಾಗೂ ಹಿಂದೂ ರಾಷ್ಟ್ರ ಎಂಬುದು ಯಾರ ವಿರುದ್ಧವೂ ಅಲ್ಲ ಎಂಬುದನ್ನು ಒತ್ತಿ ಹೇಳಿದರು.

ಇತಿಹಾಸದ ವಿಚಾರಗಳ ಕುರಿತು ಮಾತನಾಡಿದ ಅವರು, “ಟಿಪ್ಪು ಸುಲ್ತಾನ್ ಒಂದು ಲಕ್ಷ ಜನರನ್ನು ಕೊಂದಿದ್ದಾನೆ ಎಂಬುದು ದ್ವೇಷ ಭಾಷಣವಲ್ಲ, ಅದು ಇತಿಹಾಸ. ಆ ಸತ್ಯವನ್ನು ಸಹಿಸಲು ಸಾಧ್ಯವಾಗದಿದ್ದರೆ ಅದನ್ನೇ ದ್ವೇಷ ಭಾಷಣ ಎಂದು ಕರೆಯಲಾಗುತ್ತಿದೆ” ಎಂದು ಟೀಕಿಸಿದರು. ಇತಿಹಾಸದ ವಿಚಾರಗಳನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಸಾಮಾಜಿಕ ಸಮತೋಲನ ಹಾಗೂ ಜನಸಂಖ್ಯೆಯ ವಿಚಾರವನ್ನು ಪ್ರಸ್ತಾಪಿಸಿದ ಸಂತೋಷ್, “ಹಿಂದೂಗಳ ಸಂಖ್ಯೆ ಕಡಿಮೆಯಾದ ಕಡೆಗಳಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಗೌರಿಪಾಳ್ಯದಲ್ಲಿ ನಡೆದ ಘಟನೆ ಇದಕ್ಕೆ ಉದಾಹರಣೆ. ಹಿಂದೂಗಳ ಸಂಖ್ಯೆ ಕಡಿಮೆ ಇದ್ದರೆ ಆ ರಸ್ತೆಯಲ್ಲಿ ಸ್ವತಂತ್ರವಾಗಿ ಸಂಚರಿಸಲು ಆಗುವುದಿಲ್ಲ, ಗಣೇಶ ಮೆರವಣಿಗೆ ನಡೆಸಲು ಸಾಧ್ಯವಿಲ್ಲ, ಧರ್ಮಾನುಸಾರ ಪೂಜೆಗೆ ಹೋಗಲು ಅಡ್ಡಿ ಉಂಟಾಗುತ್ತದೆ” ಎಂದು ಹೇಳಿದರು. “ಬೆಳಿಗ್ಗೆ ಹೆಣ್ಣು ಮಕ್ಕಳು ಪೂಜೆಗೆ ಹೋಗುವ ಪರಿಸ್ಥಿತಿಯೂ ಇಲ್ಲದಂತಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.

ಚಾಮರಾಜಪೇಟೆ ಮತ್ತು ಶಿವಾಜಿನಗರ ಕ್ಷೇತ್ರಗಳನ್ನು ಉಲ್ಲೇಖಿಸಿದ ಅವರು, “ಆ ಪ್ರದೇಶಗಳಲ್ಲಿ ಹಿಂದೂ ಅಭ್ಯರ್ಥಿಗಳು ಏಕೆ ಗೆಲ್ಲುವುದಿಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಿಂದೂಗಳ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಅಭ್ಯರ್ಥಿಗಳು ಗೆಲ್ಲುತ್ತಾರೆ. ಆದರೆ ಹಿಂದೂಗಳ ಸಂಖ್ಯೆ ಕಡಿಮೆ ಇರುವ ಕಡೆಗಳಲ್ಲಿ ಹಿಂದೂ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿದರು.

ಹಿಂದೂ ಸಮಾಜವನ್ನು ಒಗ್ಗೂಡಿಸುವ ಅಗತ್ಯವಿದೆ ಎಂದು ಕರೆ ನೀಡಿದ ಅವರು, “ಸಂಘಟನೆ, ಆತ್ಮವಿಶ್ವಾಸ ಮತ್ತು ಸಾಂಸ್ಕೃತಿಕ ಜಾಗೃತಿ ಅತ್ಯಂತ ಮುಖ್ಯ. ಹಿಂದೂ ಸಮಾಜ ತನ್ನ ಹಕ್ಕುಗಳಿಗಾಗಿ ಶಾಂತಿಯುತವಾಗಿ ಆದರೆ ದೃಢವಾಗಿ ಹೋರಾಡಬೇಕು” ಎಂದು ಹೇಳಿದರು.

ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದು, ಆರ್‌ಎಸ್‌ಎಸ್ ಶತಮಾನೋತ್ಸವದ ಅಂಗವಾಗಿ ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಸಂಘಟಕರು ತಿಳಿಸಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Read more

ಯುವಕರು ಸಂಘಟಿತರಾಗಿ ನಾರಾಯಣ ಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿ: ಸಚಿವ ಮಧು ಬಂಗಾರಪ್ಪ

ಧರ್ಮ, ಪರಂಪರೆ ಹಾಗೂ ಮಠಮಾನ್ಯಗಳ ಸಂರಕ್ಷಣೆಗೆ ಸಂಘಟಿತ ಪ್ರಯತ್ನ ಅಗತ್ಯ: ಭಿನ್ನಾಭಿಪ್ರಾಯ ಬದಿಗಿಟ್ಟು ಸಮಾಜದ ಹಿತಕ್ಕಾಗಿ ಒಂದಾಗ ಬೇಕು: ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟು ಕಾಪಾಡುವುದು ಎಲ್ಲರ ಜವಾಬ್ದಾರಿ: ಬಿ.ವೈ. ವಿಜಯೇಂದ್ರ

ಭಕ್ತಿಯ ಮಹಾಪ್ರವಾಹದಲ್ಲಿ ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಲಕ್ಷಾಂತರ ಜನರ ಸಾಕ್ಷಿ! ಕಾಲಿಡಲೂ ಜಾಗವಿಲ್ಲ, ಬಾನಂಗಳದಲ್ಲಿ ಜೈಕಾರ! ಶಿವಮೊಗ್ಗದಲ್ಲಿ ಮೈ ನವಿರೇಳಿಸಿದ ಗಣೇಶೋತ್ಸವದ ಅದ್ಧೂರಿ ಮೆರವಣಿಗೆ!

ಸೆ.26-27ರಂದು ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಮಹಾಸಮ್ಮೇಳನ: ಪಂಚಪೀಠಾಧೀಶರ ಸಾನ್ನಿಧ್ಯ

ಶಿವಮೊಗ್ಗ ಹಿಂದೂ ಗಣಪತಿ ಮೆರವಣಿಗೆಗೆ ಭಕ್ತಿಯ ಸಾಥ್: ಐದು ಸಾವಿರ ಭಕ್ತರಿಗೆ ಅನ್ನದಾಸೋಹ: ಮೂರನೇ ವರ್ಷವೂ ಸೇವಾ ಪರಂಪರೆ ಮುಂದುವರಿಸಿದ ಎಸ್‌ಆರ್‌ವಿ ಎಂಟರ್‌ಪ್ರೈಸಸ್ ಗೆಳೆಯರ ಬಳಗ

50 ವರ್ಷಗಳ ದಾಂಪತ್ಯ ಜೀವನ ಸಮಾಜಕ್ಕೆ ಮಾದರಿ: ಸಂಸ್ಕಾರ, ಶಿಕ್ಷಣದೊಂದಿಗೆ ಬದುಕು ಕಟ್ಟಿಕೊಳ್ಳಿ: ತಾಯ್ನಾಡಿಗೆ ಮರಳಿ ಸೇವೆ ಸಲ್ಲಿಸಿ ಎಂದು ವಿದ್ಯಾರ್ಥಿಗಳಿಗೆ ಕೆ.ಈ. ಕಾಂತೇಶ್ ಕರೆ

Leave a Comment