ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಭಗವಾನ್ ಮಹಾವೀರ ಜಯಂತಿ ಸಂಭ್ರಮ: ನಮ್ಮೂರ ಬಳಗದಿಂದ ಪುಷ್ಪನಮನ ಹಾಗೂ ಸಿಹಿ ವಿತರಣೆ

On: March 30, 2026 1:09 PM
Follow Us:

ಶಿವಮೊಗ್ಗ: ನಮ್ಮೂರ ಬಳಗದ ವತಿಯಿಂದ ಜೈನ ಧರ್ಮದ 24ನೇ ತೀರ್ಥಂಕರರಾದ ಭಗವಾನ್ ಶ್ರೀ ಮಹಾವೀರರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಅಂಗವಾಗಿ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ. ರಂಗನಾಥ್ ಅವರು, ಭಗವಾನ್ ಮಹಾವೀರರ ಹುಟ್ಟಿದ ಕಾಲದಲ್ಲಿ ದೇಶದ ಸಾಮಾಜಿಕ ಹಾಗೂ ಧಾರ್ಮಿಕ ಪರಿಸ್ಥಿತಿ ಅಸ್ಥಿರವಾಗಿತ್ತು ಎಂದು ವಿವರಿಸಿದರು. ಆ ಸಮಯದಲ್ಲಿ ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳ ಮೇಲೆ ಅನ್ಯಾಯ ನಡೆಯುತ್ತಿತ್ತು. ಧರ್ಮದ ನಿಜಸ್ವರೂಪ ಮಸುಕಾಗಿ, ಆಚಾರ-ವಿಚಾರಗಳು ಮತ್ತು ಆಡಂಬರಗಳಿಗೆ ಹೆಚ್ಚು ಮಹತ್ವ ಸಿಕ್ಕಿತ್ತು. ಜಾತಿಯ ಅಸಮಾನತೆ ಹೆಚ್ಚಾಗುತ್ತಿದ್ದಂತಹ ಸಂದರ್ಭದಲ್ಲೇ ಮಹಾವೀರರು ಜಗತ್ತಿಗೆ ಅಹಿಂಸೆಯ ಮಹತ್ವವನ್ನು ಸಾರಿದರು ಎಂದು ಹೇಳಿದರು.

ಭಗವಾನ್ ಮಹಾವೀರರು ಅಹಿಂಸಾ ತತ್ವವನ್ನು ಪ್ರತಿಪಾದಿಸಿ, ಪರಸ್ಪರ ಸಹಬಾಳ್ವೆ, ಸಹಕಾರ ಮತ್ತು ಸೇವಾಮನೋಭಾವದ ಜೀವನವನ್ನು ನಡೆಸಬೇಕೆಂದು ಬೋಧಿಸಿದರು. ಅವರ ಈ ಮಹಾನ್ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವುದರಿಂದ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಸ್ಥಾಪಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಇಂತಹ ಮಹಾನ್ ದಾರ್ಶನಿಕರ ತತ್ವಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಮತ್ತು ಅವುಗಳನ್ನು ಅನುಸರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸಮಾಜದ ಅಭಿವೃದ್ಧಿಗೆ ಹಾಗೂ ಸರ್ವಜನರ ಹಿತಕ್ಕಾಗಿ ಮಹಾವೀರರ ಮಾರ್ಗದರ್ಶನ ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ನಮ್ಮೂರ ಬಳಗದ ಗೌರವ ಸಂಚಾಲಕರಾದ ಸಿ. ರವಿ, ಸಂಚಾಲಕರಾದ ಕೆ.ಆರ್. ಸುರೇಶ್, ಹೆಚ್.ಪಿ. ಗಿರೀಶ್, ಮದನ್ ಸಿಂಗ್, ಮಹೇಂದ್ರ ಜೈನ್, ರಾಜೇಶ್ ಮಂದಾರ, ಆಚಾರಿ ಗೋಪಿ, ಟಿ. ಗುರುಪ್ರಸಾದ್, ಕೆ.ಎಲ್. ಪವನ್, ರಜನಿಕಾಂತ್, ಆರ್. ಕಿರಣ್, ಕೇಬಲ್ ಲೋಕೇಶ್, ಜಯಪ್ರಕಾಶ್, ಸುಬ್ರಮಣಿ, ನಂದನ್, ಶ್ರೀಕಾಂತ್, ರಾಘವೇಂದ್ರ, ಮನ್ವಿಕ್ ಜೈನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮವು ಶಾಂತಿ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳ ಸಂದೇಶವನ್ನು ಸಮಾಜಕ್ಕೆ ಹಂಚುವಲ್ಲಿ ಯಶಸ್ವಿಯಾಯಿತು.

K.M.Sathish Gowda

Join WhatsApp

Join Now

Facebook

Join Now

Read more

ಮಹಾವೀರ ಜಯಂತಿ: ಅಹಿಂಸೆಯ ಬೆಳಕು ಹರಡಿದ ಮಹಾನ್ ವ್ಯಕ್ತಿತ್ವ, ತ್ಯಾಗದ ಮೂಲಕ ಜ್ಞಾನೋದಯ ಕಂಡ ಮಹಾನ್ ಯೋಗಿ

ಸಿದ್ಧಗಂಗಾ ಸ್ವಾಮೀಜಿ ಸ್ಮರಣೆ: ಜನವರಿ 21ನ್ನು ‘ದಾಸೋಹ ದಿವಸ’ವನ್ನಾಗಿ ಘೋಷಿಸಲು ಸಿಎಂ ಸಿದ್ದರಾಮಯ್ಯರಿಗೆ ಕೇಂದ್ರ ಸಚಿವ ಸೋಮಣ್ಣ ಮನವಿ

“ಕಷ್ಟಗಳು ಜೀವನದಲ್ಲಿ ಪಾಠ ಕಲಿಸಿದರೆ, ನಂಬಿಕೆ ಮನುಷ್ಯನಿಗೆ ಶಕ್ತಿ ತುಂಬುತ್ತದೆ” : ಶ್ರೀ ರಂಭಾಪುರಿ ಜಗದ್ಗುರುಗಳು

ಶರಣರ ವಚನಗಳಲ್ಲಿ ಇಂದಿನ ಆಡಳಿತಕ್ಕೆ ದಾರಿ: ಕುವೆಂಪು ರಂಗಮಂದಿರದಲ್ಲಿ ಅರ್ಥಪೂರ್ಣ ಸಂವಾದ

ಶಿವಮೊಗ್ಗದಲ್ಲಿ 7ನೇ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನಕ್ಕೆ ಭವ್ಯ ಚಾಲನೆ: ವಚನಗಳಲ್ಲಿ ಬದುಕಿನ ಎಲ್ಲ ಪ್ರಶ್ನೆಗಳಿಗೆ ಉತ್ತರ – ಡಾ. ಸಿ. ಸೋಮಶೇಖರ್

ಸತ್ಯದ ಪಥದಲ್ಲಿ ನಡೆದರೆ ದೈವಶಕ್ತಿ ನಮ್ಮ ಜೊತೆ: ಶ್ರೀ ರಂಭಾಪುರಿ ಜಗದ್ಗುರುಗಳು

Leave a Comment