ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಭದ್ರಾವತಿ ಗುರುಭವನಕ್ಕೆ ₹2 ಕೋಟಿ ಅನುದಾನ: ಸಿ.ಎಸ್. ಷಡಾಕ್ಷರಿ ಅವರ ವಿಶೇಷ ಕಾಳಜಿಗೆ ಶಿಕ್ಷಕ ಸಮುದಾಯದ ಕೃತಜ್ಞತೆ

On: September 10, 2026 10:29 PM
Follow Us:

ಭದ್ರಾವತಿ: ನಗರದ ಗುರುಭವನ ಕಟ್ಟಡ ಕಾಮಗಾರಿಗೆ ಸುಮಾರು ₹2 ಕೋಟಿ ಅನುದಾನ ಮಂಜೂರು ಮಾಡಿಸುವಲ್ಲಿ ವಿಶೇಷ ಆಸಕ್ತಿ ವಹಿಸಿ, ಸರ್ಕಾರದ ಮಟ್ಟದಲ್ಲಿ ಅಗತ್ಯ ಸಹಕಾರ ಒದಗಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರಿಗೆ ಭದ್ರಾವತಿ ತಾಲೂಕಿನ ಶಿಕ್ಷಕ ಹಾಗೂ ಸರ್ಕಾರಿ ನೌಕರರ ಸಂಘಟನೆಗಳ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

ಗುರುಭವನದ ಮೊದಲ ಹಂತದ ಕಟ್ಟಡ ಕಾಮಗಾರಿಯ ಮಳಿಗೆಗಳನ್ನು ಶಾಸಕ ಹಾಗೂ ಕೆಆರ್‌ಐಡಿಎಲ್ ನಿಗಮದ ಅಧ್ಯಕ್ಷರಾದ ಬಿ.ಕೆ. ಸಂಗಮೇಶ್ವರ ಅವರು ಮಳಿಗೆಗಳನ್ನು ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ಶಿಕ್ಷಕ ಹಾಗೂ ಸರ್ಕಾರಿ ನೌಕರರ ಸಂಘಟನೆಗಳ ಪ್ರಮುಖರು, ಗುರುಭವನದ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಆರ್ಥಿಕ ನೆರವು ದೊರಕಿಸುವಲ್ಲಿ ಸಿ.ಎಸ್. ಷಡಾಕ್ಷರಿ ಅವರು ವಹಿಸಿದ ವಿಶೇಷ ಕಾಳಜಿ ಹಾಗೂ ಪ್ರಯತ್ನವನ್ನು ಸ್ಮರಿಸಿದರು.

ಭದ್ರಾವತಿಯಲ್ಲಿ ಶಿಕ್ಷಕರು, ಉಪನ್ಯಾಸಕರು ಹಾಗೂ ಸರ್ಕಾರಿ ನೌಕರರು ವಿವಿಧ ಸಭೆ, ಸಮಾರಂಭ, ತರಬೇತಿ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತೆ ಸುಸಜ್ಜಿತ ಗುರುಭವನ ನಿರ್ಮಾಣವಾಗಬೇಕೆಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಈ ಬೇಡಿಕೆಗೆ ಸ್ಪಂದಿಸಿ ಕಟ್ಟಡ ಕಾಮಗಾರಿಗೆ ಸರ್ಕಾರದಿಂದ ಸುಮಾರು ₹2 ಕೋಟಿ ಅನುದಾನ ದೊರಕುವಂತೆ ಮಾಡಲು ಸಿ.ಎಸ್. ಷಡಾಕ್ಷರಿ ಅವರು ವಿಶೇಷ ಮುತುವರ್ಜಿ ವಹಿಸಿದ್ದರು.

ಸರ್ಕಾರಿ ನೌಕರರು ಹಾಗೂ ಶಿಕ್ಷಕರ ಸಂಘಟನೆಗಳ ಬೇಡಿಕೆಗಳಿಗೆ ಸ್ಪಂದಿಸುವುದರ ಜೊತೆಗೆ, ಅವರ ಮೂಲಸೌಕರ್ಯ ಅಗತ್ಯಗಳನ್ನು ಈಡೇರಿಸಲು ಸಂಘದ ರಾಜ್ಯಾಧ್ಯಕ್ಷರು ನಿರಂತರವಾಗಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ. ಅದರ ಭಾಗವಾಗಿ ಭದ್ರಾವತಿ ಗುರುಭವನ ನಿರ್ಮಾಣಕ್ಕೂ ಅಗತ್ಯ ನೆರವು ದೊರಕಿಸಿಕೊಟ್ಟಿರುವುದು ಶಿಕ್ಷಕ ಸಮುದಾಯದಲ್ಲಿ ಸಂತಸ ಮೂಡಿಸಿದೆ ಎಂದು ಸಂಘಟನೆಗಳ ಪದಾಧಿಕಾರಿಗಳು ತಿಳಿಸಿದರು.

ಗುರುಭವನದ ಮೊದಲ ಹಂತದ ಕಟ್ಟಡ ಕಾಮಗಾರಿ ಪೂರ್ಣಗೊಂಡು ಮಳಿಗೆಗಳು ಉದ್ಘಾಟನೆಯಾಗಿರುವುದು ಭದ್ರಾವತಿಯ ಶಿಕ್ಷಕ ಹಾಗೂ ಸರ್ಕಾರಿ ನೌಕರರ ಪಾಲಿಗೆ ಮಹತ್ವದ ಬೆಳವಣಿಗೆಯಾಗಿದೆ. ಮುಂದಿನ ಹಂತಗಳಲ್ಲಿ ಕಟ್ಟಡದ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಶಿಕ್ಷಕರು ಹಾಗೂ ಸರ್ಕಾರಿ ನೌಕರರ ವಿವಿಧ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಗುರುಭವನವನ್ನು ಅಭಿವೃದ್ಧಿಪಡಿಸುವ ನಿರೀಕ್ಷೆ ವ್ಯಕ್ತವಾಯಿತು.

ಈ ಹಿನ್ನೆಲೆಯಲ್ಲಿ ಭದ್ರಾವತಿ ತಾಲೂಕಿನ ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ಸಹಶಿಕ್ಷಕರ ಸಂಘ, ಪದವಿಪೂರ್ವ ಕಾಲೇಜು ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಸಂಘಟನೆಗಳು ಸೇರಿದಂತೆ ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು ಮತ್ತು ಭದ್ರಾವತಿಯ ಸಮಸ್ತ ಶಿಕ್ಷಕ-ಉಪನ್ಯಾಸಕ ಬಂಧುಗಳ ಪರವಾಗಿ ಸಿ.ಎಸ್. ಷಡಾಕ್ಷರಿ ಅವರನ್ನು ಗೌರವಿಸಿ, ವಿಶೇಷ ಕೃತಜ್ಞತೆ ಸಲ್ಲಿಸಲಾಯಿತು.

ಗುರುಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ದೊರಕಿಸುವಲ್ಲಿ ವಹಿಸಿದ ಮುತುವರ್ಜಿ ಹಾಗೂ ಸಂಪೂರ್ಣ ಸಹಕಾರಕ್ಕಾಗಿ ಸಿ.ಎಸ್. ಷಡಾಕ್ಷರಿ ಅವರಿಗೆ ಅಭಿನಂದನೆ ಸಲ್ಲಿಸಿದ ಸಂಘಟನೆಗಳ ಪ್ರಮುಖರು, ಮುಂದಿನ ದಿನಗಳಲ್ಲಿಯೂ ಶಿಕ್ಷಕರು ಮತ್ತು ಸರ್ಕಾರಿ ನೌಕರರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಇದೇ ರೀತಿಯ ಮಾರ್ಗದರ್ಶನ ಮತ್ತು ಸಹಕಾರ ದೊರೆಯಲಿ ಎಂದು ಆಶಿಸಿದರು.

ಈ ಸಂಧರ್ಭದಲ್ಲಿ ವಿವಿಧ ಸರ್ಕಾರಿ ನೌಕರರ ಮತ್ತು ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರು, ಉಪನ್ಯಾಸಕರು ಹಾಗೂ ಸರ್ಕಾರಿ ನೌಕರರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

‘ವಾಲ್ಮೀಕಿ ನಿಗಮದ ₹187 ಕೋಟಿ ಲೂಟಿ ಹಣ ವಾಪಸ್ ಕೊಡಿ, ಇಲ್ಲವೇ ಮನೆಗೆ ಹೋಗಿ’: ಬಳ್ಳಾರಿ ಬೃಹತ್ ಸಮಾವೇಶದಲ್ಲಿ ಸಿಂಹದಂತೆ ಗರ್ಜಿಸಿದ ವಿಜಯೇಂದ್ರ!

ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಜೆಸಿಐ ಶಿವಮೊಗ್ಗ ಮೆಟ್ರೋ ವಿನೂತನ ಹೆಜ್ಜೆ; 117 ಲೋಹದ ನೀರಿನ ಬಾಟಲಿ ವಿತರಣೆ: ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಪೋಷಕರಿಗೆ ಕರೆ

ವೀರಶೈವ ಲಿಂಗಾಯತ ರಿಯಲ್ ಎಸ್ಟೇಟ್ ನೆಟ್‌ವರ್ಕ್‌ನ ಶಿವಮೊಗ್ಗ ಚಾಪ್ಟರ್‌ಗೆ ಗ್ರ್ಯಾಂಡ್ ಲಾಂಚ್: ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೊಸ ಅವಕಾಶಗಳ ಸೃಷ್ಟಿಗೆ ಡಾ. ಧನಂಜಯ ಸರ್ಜಿ ಕರೆ

‘ಬಳ್ಳಾರಿ ಚಲೋ’ ಮೊದಲ ಹಂತದ ಹೋರಾಟಕ್ಕೆ ನಾಳೆ ತೆರೆ; ಜನಪರ ಹೋರಾಟ ನಿರಂತರ: ಮಾಧ್ಯಮ, ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಸಹಕಾರದಿಂದ ಪಾದಯಾತ್ರೆ ಯಶಸ್ವಿ: ಬಿ.ವೈ. ವಿಜಯೇಂದ್ರ

ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ; ಈಸೂರಿನಿಂದ ಶಿಕಾರಿಪುರದವರೆಗೆ ಸೆ. 11ರಂದು ಬೃಹತ್ ಪಾದಯಾತ್ರೆ: ಸಚಿವ ಮಧು ಬಂಗಾರಪ್ಪ

ಮಲೆನಾಡಿನ ರೈತರ ತಂಟೆಗೆ ಬಂದರೆ ಉಗ್ರ ಹೋರಾಟ; ಕಸ್ತೂರಿರಂಗನ್ ವರದಿ ಜಾರಿಗೆ ಮುಂದಾದರೆ ಸರ್ಕಾರದ ವಿರುದ್ಧ ಸಮರ: ಹರಿಕೃಷ್ಣ

Leave a Comment