ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಒಳ ಮೀಸಲಾತಿ ನಿರ್ಧಾರ: ಬೆಟ್ಟ ಅಗೆದು ಇಲಿ ಹಿಡಿದ ಸಿದ್ದರಾಮಯ್ಯ – ಗೋವಿಂದ ಕಾರಜೋಳ ಕಿಡಿ

On: April 25, 2026 11:29 PM
Follow Us:

ಬೆಂಗಳೂರು: ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ಒಳ ಮೀಸಲಾತಿ ಜಾರಿ ನಿರ್ಧಾರವು ಕೇವಲ ಕಣ್ಣೊರೆಸು ತಂತ್ರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಲಿತ ಸಮುದಾಯಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ವಿಚಾರದಲ್ಲಿ ಸರ್ಕಾರದ ದ್ವಂದ್ವ ನಿಲುವುಗಳನ್ನು ಅಂಕಿ-ಅಂಶಗಳ ಸಮೇತ ಪ್ರಶ್ನಿಸಿದರು.

ಸಿದ್ದರಾಮಯ್ಯನವರೇ ನೇಮಿಸಿದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ವರದಿಯನ್ನು ಈಗಿನ ಸರ್ಕಾರ ‘ಅವೈಜ್ಞಾನಿಕ’ ಎಂದು ಪರಿಗಣಿಸಿದೆಯೇ? ಎಂಬ ನೇರ ಪ್ರಶ್ನೆಯನ್ನು ಕಾರಜೋಳ ಮುಂದಿಟ್ಟರು.

  • ದ್ವಂದ್ವ ನಿಲುವು: “ನಾಗಮೋಹನ್ ದಾಸ್ ವರದಿಯಲ್ಲಿ ಮೀಸಲಾತಿಯನ್ನು ಶೇ. 17ಕ್ಕೆ ಏರಿಸುವ ಶಿಫಾರಸು ಇತ್ತು. ಆದರೆ ಸರ್ಕಾರ ಅದನ್ನು ಶೇ. 15ಕ್ಕೆ ಸೀಮಿತಗೊಳಿಸಿದೆ. ತಾವು ನೇಮಿಸಿದ ಆಯೋಗದ ವರದಿಯನ್ನು ಒಪ್ಪದಿದ್ದರೆ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವರದಿ ಮಾತ್ರ ವೈಜ್ಞಾನಿಕ ಎಂದು ಸರ್ಕಾರ ಭಾವಿಸಿದೆಯೇ?” ಎಂದು ಅವರು ಕಿಡಿಕಾರಿದರು.
  • ಖಾಜಿ ನ್ಯಾಯ: ಸದಾಶಿವಯ್ಯ ಆಯೋಗ, ನಾಗಮೋಹನ್ ದಾಸ್ ವರದಿ ಹಾಗೂ ಬಸವರಾಜ ಬೊಮ್ಮಾಯಿ ಅವರ ಕಾಲದ ಸಂಪುಟ ಉಪ ಸಮಿತಿ ವರದಿಗಳನ್ನು ಪರಿಗಣಿಸದೇ ಸರ್ಕಾರ ‘ಖಾಜಿ ನ್ಯಾಯ’ ನೀಡುತ್ತಿದೆ ಎಂದು ಅವರು ಆರೋಪಿಸಿದರು.

“ಸಿದ್ದರಾಮಯ್ಯನವರಿಗೆ ಅಹಿಂದ ವರ್ಗಗಳ ಕುರಿತು ನೈಜ ಬದ್ಧತೆ ಇಲ್ಲ. ಅವರದ್ದೇನಿದ್ದರೂ ಕೇವಲ ಅಧಿಕಾರ ಹಿಡಿಯುವ ತಂತ್ರ,” ಎಂದು ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.

“ಸಾವಿರಾರು ಕೋಟಿ ಖರ್ಚು ಮಾಡಿ ವರದಿ ತರಿಸಿದ್ದೀರಿ. ಆದರೆ ಕೆಂಪರಾಜ್ ವರದಿ, ಜಯಪ್ರಕಾಶ್ ಹೆಗ್ಡೆ ವರದಿ ಹಾಗೂ ಮಧುಸೂದನ ನಾಯಕ್ ವರದಿಗಳು ಇಂದು ಎಲ್ಲಿವೆ? ಕುರ್ಚಿ ಉಳಿಸಿಕೊಳ್ಳಲು ಇಡೀ ಪ್ರಪಂಚದಲ್ಲೇ ಇಷ್ಟು ದೊಡ್ಡ ಮೋಸ ಮಾಡುವ ನಾಯಕ ಮತ್ತೊಬ್ಬರಿಲ್ಲ. ಸಿದ್ದರಾಮಯ್ಯನವರು ಮಹಾ ಮೋಸಗಾರ,” ಎಂದು ಕಠಿಣ ಶಬ್ದಗಳಲ್ಲಿ ಟೀಕಿಸಿದರು.

ಹಿಂದಿನ ಬಿಜೆಪಿ ಸರ್ಕಾರವು ಅತ್ಯಂತ ವೈಜ್ಞಾನಿಕವಾಗಿ ಮೀಸಲಾತಿ ಹಂಚಿಕೆ ಮಾಡಿತ್ತು ಎಂದು ಕಾರಜೋಳ ಈ ಸಂದರ್ಭದಲ್ಲಿ ನೆನಪಿಸಿದರು:

  1. ಪರಿಶಿಷ್ಟ ಜಾತಿ (ಎ): ಶೇ. 6
  2. ಪರಿಶಿಷ್ಟ ಜಾತಿ (ಬಿ): ಶೇ. 5.5
  3. ಇತರರು: ಶೇ. 4.5
  4. ಅಲೆಮಾರಿ ಸಮುದಾಯಗಳು: ಶೇ. 1
    “ನಾವು ಶೇ. 17ಕ್ಕೆ ಮೀಸಲಾತಿ ಹೆಚ್ಚಿಸಿ, ಸಮಾನ ಹಂಚಿಕೆ ಮಾಡಿದ್ದೆವು. ಆದರೆ ಸಿದ್ದರಾಮಯ್ಯನವರು ಅಂದು ಜನರ ನಡುವೆ ಜಗಳ ಹಚ್ಚಿ ರಾಜಕೀಯ ಲಾಭ ಪಡೆದರು,” ಎಂದರು.

ಮೂರು ವರ್ಷಗಳ ವಿಳಂಬ ಮತ್ತು ದಾರಿ ತಪ್ಪಿಸುವಿಕೆ

2023ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ‘ಮೊದಲ ಅಧಿವೇಶನದಲ್ಲೇ ಒಳ ಮೀಸಲಾತಿ’ ಜಾರಿಗೆ ತರುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ ಈಗ ಮೂರು ವರ್ಷ ಕಳೆದರೂ ಏನೂ ಮಾಡಿಲ್ಲ ಎಂದು ಕಾರಜೋಳ ದೂರಿದರು.

  • ಹೊಡೆದಾಟ ಹಚ್ಚುವ ತಂತ್ರ: “ಎಸ್.ಸಿ ಉಪ ಜಾತಿಗಳ ನಡುವೆ ಸಂಘರ್ಷ ಉಂಟುಮಾಡುವುದು ಮತ್ತು ನ್ಯಾಯಾಲಯದಲ್ಲಿ ಈ ನಿರ್ಧಾರ ಬಿದ್ದುಹೋಗುವಂತೆ ಮಾಡುವುದೇ ಇವರ ಗುರಿ. ಮುನಿಯಪ್ಪ, ಮಹದೇವಪ್ಪ ಅವರಿಗೆ ತೋರಿಸಲು ‘ನಾನು ಮಾಡಿದೆ, ಆದರೆ ಕೋರ್ಟ್ ಒಪ್ಪಲಿಲ್ಲ’ ಎಂಬ ನೆಪ ಸೃಷ್ಟಿಸುತ್ತಿದ್ದಾರೆ,” ಎಂದು ಅವರು ಹೇಳಿದರು.

ರಾಜ್ಯ ಸರ್ಕಾರ ಯಾವುದೇ ಹೊಸ ಆಯೋಗಗಳನ್ನು ರಚಿಸಿದರೆ, ಗೌರವಾನ್ವಿತ ವ್ಯಕ್ತಿಗಳು ಅದರಲ್ಲಿ ಸದಸ್ಯರಾಗಲು ಒಪ್ಪಬಾರದು ಎಂದು ಕಾರಜೋಳ ವಿನಂತಿಸಿದರು. “ಯಾವುದೇ ಆಯೋಗದ ವರದಿಯನ್ನು ಸಿದ್ದರಾಮಯ್ಯನವರು ಗೌರವಿಸುವುದಿಲ್ಲ. ಇದು ಕೇವಲ ಬುದ್ಧಿಜೀವಿಗಳಿಗೆ ಮತ್ತು ನ್ಯಾಯಾಧೀಶರಿಗೆ ಮಾಡುವ ಅವಮಾನ,” ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಶಾಸಕ ಪಿ. ರಾಜೀವ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಉಪಸ್ಥಿತರಿದ್ದು, ಸರ್ಕಾರದ ವಿರುದ್ಧ ಒಕ್ಕೊರಲಿನ ಪ್ರತಿರೋಧ ವ್ಯಕ್ತಪಡಿಸಿದರು.

K.M.Sathish Gowda

Join WhatsApp

Join Now

Facebook

Join Now

Read more

ಬರದ ನಡುವೆ ರೈತರ ನೆರವಿಗೆ ಧಾವಿಸದ ಸರ್ಕಾರ: ಎಕರೆಗೆ ₹50 ಸಾವಿರ ಪರಿಹಾರಕ್ಕೆ ಬಿ.ವೈ. ವಿಜಯೇಂದ್ರ ಒತ್ತಾಯ: ರಾಜ್ಯದ ಹಣಕಾಸು ಸ್ಥಿತಿಗತಿ ಕುರಿತು ಶ್ವೇತಪತ್ರಕ್ಕೆ ಆಗ್ರಹ

ಪ್ರಜಾಪ್ರಭುತ್ವದ ಶ್ರೇಷ್ಠತೆಗೆ ಸವಾಲೆಸೆದ ಶ್ರೀ ತರಳಬಾಳು ಜಗದ್ಗುರುಗಳು: ನಾಲ್ವಡಿಯವರ ‘ಜನಹಿತ’ದ ಮಾದರಿ ಇಂದೇಕೆ ಸಾಧ್ಯವಾಗುತ್ತಿಲ್ಲ!?ದಾವಣಗೆರೆಯಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿ ಅನಾವರಣ: ವ್ಯವಸ್ಥೆಯ ಆತ್ಮಾವಲೋಕನಕ್ಕೆ ತರಳಬಾಳು ಶ್ರೀಗಳ ಕರೆ

ಮೂರು ಸಾವಿರ ಕಂಠಗಳು… ಒಂದೇ ನಾದ… ಬಸವಣ್ಣನವರ ವಚನಗಳಿಗೆ ದಾವಣಗೆರೆ ಸಾಕ್ಷಿ!: ‘ವಚನ ನಾದಲೋಕ’ದಲ್ಲಿ ಎಲ್ಲರೂ ಭಾಗವಹಿಸಿ ಎಂದು ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಮನವಿ

‘ಗಲಾಟೆ ಗಣಪತಿ’ಗೆ ತೆರೆ: ಭಯದಿಂದ ಭಕ್ತಿಯ ಸಂಭ್ರಮದತ್ತ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ: ಎಸ್‌ಪಿ ನಿಖಿಲ್ ಬಿ. ಅವರ ಕಾರ್ಯತಂತ್ರದಲ್ಲಿ ತಂತ್ರಜ್ಞಾನಾಧಾರಿತ ಕಣ್ಗಾವಲು: ಶಾಂತಿಯುತ ಮೆರವಣಿಗೆಗೆ ಸಾರ್ವಜನಿಕರ ಮೆಚ್ಚುಗೆ

​ಶ್ರೀ ಜಗದ್ಗುರು ರೇಣುಕಾಚಾರ್ಯರು-ಶರಣರನ್ನು ಬೇರ್ಪಡಿಸುವ ಕುತಂತ್ರ ನಿಲ್ಲಲಿ!: ಒಳಗಿನ ಶತ್ರುಗಳಿಂದಲೇ ಧರ್ಮಕ್ಕೆ ಕಂಟಕ, ಸ್ವಾರ್ಥಿಗಳ ಕಪಟ ನಾಟಕ ಇನ್ಮುಂದೆ ನಡೆಯಲ್ಲ!: ಧರ್ಮದ್ರೋಹಿಗಳಿಗೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಖಡಕ್ ಎಚ್ಚರಿಕೆ!

ರೈತರೆ, ಸಾಲಕ್ಕೆ ಹೆದರಬೇಡಿ! ಆತ್ಮಹತ್ಯೆ ಮಾಡಿಕೊಳ್ಳಬೇಡಿ; ಎದೆತಟ್ಟಿ ‘ನಾನು ರೈತ’ ಎಂದು ಹೇಳಿ ಹೋರಾಡಿ: ಬರ ಪರಿಹಾರದ ಹೆಸರಿನಲ್ಲಿ ರೈತರನ್ನು ಕಾಯಿಸುವುದೇಕೆ? ಶಾಶ್ವತ ನೀರಾವರಿ ಕಲ್ಪಿಸಿ, ಸಾಲಮನ್ನಾ ಮಾಡಿ: ಸಿಎಂಗೆ ಎಚ್.ಆರ್. ಬಸವರಾಜಪ್ಪ ಒತ್ತಾಯ

Leave a Comment