ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ರೋಟರಿ ಶಿವಮೊಗ್ಗ ಪೂರ್ವದ ನೂತನ ಪದಾಧಿಕಾರಿಗಳ ಪದಗ್ರಹಣ; ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಆರೋಗ್ಯ ಸೇವೆಗೆ ವಿಶೇಷ ಆದ್ಯತೆ: ಡಿ.ಕೆ. ಶೇಷಗಿರಿ

On: July 13, 2026 10:05 PM
Follow Us:

ಶಿವಮೊಗ್ಗ: ಸಮಾಜಮುಖಿ ಸೇವಾ ಚಟುವಟಿಕೆಗಳ ಮೂಲಕ ಜನಮನದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ರೋಟರಿ ಕ್ಲಬ್ ಆಫ್ ಶಿವಮೊಗ್ಗ ಪೂರ್ವದ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇತ್ತೀಚೆಗೆ ಸಾಗರ ರಸ್ತೆಯಲ್ಲಿರುವ ಶಿವಮೊಗ್ಗ ಅರೆಕಾನಟ್ ಮರ್ಚೆಂಟ್ಸ್ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಸಂಸ್ಥೆಯ ನೂತನ ಅಧ್ಯಕ್ಷರಾಗಿ ಡಿ.ಕೆ. ಶೇಷಗಿರಿ, ಕಾರ್ಯದರ್ಶಿಯಾಗಿ ಮನೋಹರ ಆರ್. ಹಾಗೂ ಉಪಾಧ್ಯಕ್ಷರಾಗಿ ವಿಜಯ ಕುಮಾರ್ ಜಿ. ಅವರು ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಡಿ. ಕಿಶೋರ್ ಕುಮಾರ್ ಮತ್ತು ನಿಕಟಪೂರ್ವ ಕಾರ್ಯದರ್ಶಿ ಧನಂಜಯ ಬಿ.ಆರ್. ಅವರು ನೂತನ ತಂಡಕ್ಕೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.

​ಚುನಾಯಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಅವರು ಪದಗ್ರಹಣ ಅಧಿಕಾರಿಯಾಗಿ ಪಾಲ್ಗೊಂಡು, ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ರೋಟರಿ ಎಂದರೆ ಬೆಳಕು, ಇದು ಹೃದಯ ಶ್ರೀಮಂತಿಕರ ವೇದಿಕೆ: ವಸಂತ್ ಹೋಬಳಿದಾರ್

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಅವರು, “ರೋಟರಿ ಎಂದರೆ ಸಮಾಜದ ಕತ್ತಲೆಯನ್ನು ಓಡಿಸುವ ಬೆಳಕು. ಇದು ಕೇವಲ ಶ್ರೀಮಂತರ ಸಂಸ್ಥೆ ಎಂಬ ಅಪವಾದವಿತ್ತು, ಆದರೆ ಈಗ ಆ ಅಪವಾದ ದೂರಾಗಿದೆ. ಇಲ್ಲಿರುವ ಸದಸ್ಯರೆಲ್ಲರೂ ಹಣದ ಶ್ರೀಮಂತರಿಗಿಂತಲೂ ಮಿಗಿಲಾಗಿ ‘ಹೃದಯ ಶ್ರೀಮಂತಿಕೆ’ಯನ್ನು ಹೊಂದಿದ್ದಾರೆ,” ಎಂದು ಶ್ಲಾಘಿಸಿದರು.

“ಸದಸ್ಯರೆಲ್ಲರೂ ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಸೇವೆಯನ್ನು ಅಪ್ಪಿಕೊಳ್ಳಬೇಕು. ಯುವ ಪೀಳಿಗೆಗೆ ಸೂಕ್ತ ಮಾರ್ಗದರ್ಶನ ನೀಡಿ, ಅವರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಬೇಕು. ಆ ಮೂಲಕ ಮತ್ತಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು,” ಎಂದು ಅವರು ಕರೆ ನೀಡಿದರು.

ಸ್ವಚ್ಛತೆ, ಪರಿಸರ, ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ: ನೂತನ ಅಧ್ಯಕ್ಷ ಡಿ.ಕೆ. ಶೇಷಗಿರಿ

ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಡಿ.ಕೆ. ಶೇಷಗಿರಿ ಅವರು, “ರೋಟರಿ ಸಂಸ್ಥೆಯು ಜಗತ್ತಿನಾದ್ಯಂತ ತನ್ನ ಅನನ್ಯ ಸೇವೆಗೆ ಹೆಸರುವಾಸಿಯಾಗಿದೆ. ನನ್ನ ಅಧಿಕಾರಾವಧಿಯಲ್ಲಿ ಸಮಾಜಕ್ಕೆ ಉಪಯುಕ್ತವಾಗುವಂತಹ ಸಾಕಷ್ಟು ಕೆಲಸಗಳನ್ನು ಮಾಡುವ ಹಂಬಲ ನನಗಿದೆ. ವಿಶೇಷವಾಗಿ ಸ್ವಚ್ಛತೆ, ಪರಿಸರ ಸಂರಕ್ಷಣೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು,” ಎಂದರು.

ಜೊತೆಗೆ, ಸಮಾಜಕ್ಕೆ ದೀರ್ಘಕಾಲೀನ ಅನುಕೂಲ ಮಾಡಿಕೊಡುವ ಕೆಲವು ‘ಶಾಶ್ವತ ಯೋಜನೆ’ಗಳನ್ನು ರೂಪಿಸುವ ಆಲೋಚನೆ ಇದೆ ಎಂದು ತಿಳಿಸಿದ ಅವರು, “ನನ್ನ ಹೊಸ ತಂಡದೊಂದಿಗೆ ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಸಮಾಜಮುಖಿಯಾಗಿ ಕೆಲಸ ನಿರ್ವಹಿಸುತ್ತೇನೆ. ಮುಂಬರುವ ವರ್ಷ ನಮಗೆ ಕೇವಲ ಅಧಿಕಾರಾವಧಿಯಲ್ಲ, ಬದಲಿಗೆ ಅದೊಂದು ‘ಸೇವೆಯ ಹಬ್ಬ’ವಾಗಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

​ಕಾರ್ಯಕ್ರಮದಲ್ಲಿ ಮಾತನಾಡಿದ ಲೆಫ್ಟಿನೆಂಟ್‌ ಮಹೇಶ್ ಆಲೇಮನೆ ಅವರು, “ನಾವು ಮಾಡುವ ಸೇವೆ ಸಮಾಜದಲ್ಲಿ ಶಾಶ್ವತವಾಗಿ ಉಳಿಯುವಂತಿರಬೇಕು. ಸೂಕ್ತ ಯೋಜನೆಗಳನ್ನು ರೂಪಿಸಿ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸಂಸ್ಥೆಗೆ ಹೆಚ್ಚಿನ ಸದಸ್ಯರನ್ನು ಸೇರ್ಪಡೆಗೊಳಿಸುವುದರ ಜೊತೆಗೆ, ಮಹಿಳಾ ಸದಸ್ಯರ ಪಾಲ್ಗೊಳ್ಳುವಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು,” ಎಂದು ಸಲಹೆ ನೀಡಿದರು.

​ಅಸಿಸ್ಟೆಂಟ್ ಗವರ್ನರ್ ನಾಗರಾಜ್ ಎಸ್. ಮಾತನಾಡಿ, “ರೋಟರಿ ಸಂಸ್ಥೆ ಮತ್ತಷ್ಟು ಬೆಳೆಯಲು ಎಲ್ಲ ಸದಸ್ಯರ ಸಹಕಾರ ಅಗತ್ಯ. ಸಂಸ್ಥೆಯ ದೇಣಿಗೆ ಪ್ರಮಾಣ ಹೆಚ್ಚಾಗಬೇಕು. ನಾವು ಕೈಗೊಳ್ಳುವ ಕಾರ್ಯಕ್ರಮಗಳು ತಕ್ಷಣದ ಪರಿಹಾರವಾಗದೆ, ಸಮಾಜದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಂತಿರಬೇಕು. ನಿಸ್ವಾರ್ಥ ಸೇವೆಯಿಂದ ಮಾತ್ರ ಜೀವನದಲ್ಲಿ ನಿಜವಾದ ತೃಪ್ತಿ ಸಾಧಿಸಲು ಸಾಧ್ಯ. ಹೀಗಾಗಿ ಜಿಲ್ಲಾ ಮಟ್ಟದ ಶಾಶ್ವತ ಕಾರ್ಯಕ್ರಮಗಳಿಗೂ ಹೆಚ್ಚಿನ ಆದ್ಯತೆ ನೀಡಿ,” ಎಂದು ಕೋರಿದರು.

​ಇದೇ ಸಂದರ್ಭದಲ್ಲಿ ಸಂಸ್ಥೆಗೆ ಸೇರ್ಪಡೆಯಾದ ಹೊಸ ಸದಸ್ಯರನ್ನು ಆತ್ಮೀಯವಾಗಿ ಬರಮಾಡಿಕೊಂಡು ಗೌರವಿಸಲಾಯಿತು. ರೋಟರಿ ಮೂಲಕ ಗಣನೀಯ ಸೇವೆ ಸಲ್ಲಿಸಿದವರನ್ನು ಹಾಗೂ ಸಂಸ್ಥೆಯ ಕಾರ್ಯಗಳಿಗೆ ಉದಾರವಾಗಿ ದೇಣಿಗೆ ನೀಡಿದ ದಾನಿಗಳನ್ನು ಅಭಿನಂದಿಸಲಾಯಿತು. ಇದೇ ವೇಳೆ ರಘುರಾಜ್ ಅವರು ರೋಟರಿ ಸಂಸ್ಥೆಯ ಅಧಿಕೃತ ಮಾಹಿತಿ ಕೈಪಿಡಿಯಾದ ‘ಭಾಸ್ಕರ ಬುಲೆಟಿನ್’ ಅನ್ನು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್, ನೂತನ ಕಾರ್ಯದರ್ಶಿ ಮನೋಹರ್, ನಿಕಟಪೂರ್ವ ಕಾರ್ಯದರ್ಶಿ ಧನಂಜಯ ಬಿ.ಆರ್., ಉಪಾಧ್ಯಕ್ಷ ವಿಜಯಕುಮಾರ್ ಜಿ. ಸೇರಿದಂತೆ ಪ್ರಮುಖರು ಅನಿಸಿಕೆ ಹಂಚಿಕೊಂಡರು. ವೇದಿಕೆಯಲ್ಲಿ ಶಶಿಕಾಂತ್ ನಾಡಿಗ್, ಆಕೃತ್ ಕೆ., ಮಂಜುನಾಥ್ ಕದಂಬ್, ಸುನೀಲ್ ಕುಮಾರ್, ಆಕಾಶ್ ಹಾಗೂ ಕ್ಲಬ್ ಎಡಿಟರ್ ರಘುನಾಥ್ ಹೆಚ್.ಕೆ. ಸೇರಿದಂತೆ ಮೂವತ್ತಕ್ಕೂ ಹೆಚ್ಚು ಪದಾಧಿಕಾರಿಗಳು ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.

​ಡಾ. ಗುಡದಪ್ಪ ಕಸಬಿ ಹಾಗೂ ಸಾಧ್ವಿ ಶ್ರೀಕಾಂತ್ ಅವರು ಸಮಾರಂಭವನ್ನು ನಿರೂಪಿಸಿದರು.

K.M.Sathish Gowda

Join WhatsApp

Join Now

Facebook

Join Now

Read more

ಜಾತಿ ಜನಗಣತಿ ಹೆಸರಿನಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯ; ಬದ್ಧತೆಯ ಕೊರತೆಯಿಂದ ಒಬಿಸಿ ಸಮುದಾಯಗಳ ವಿಶ್ವಾಸಕ್ಕೆ ದ್ರೋಹ: ರಘು ಕೌಟಿಲ್ಯ

​ಎಚ್ಚರ! ಔಷಧವೇ ಆಹಾರವಾಗುವ ಕಾಲ ದೂರವಿಲ್ಲ; ವಿಷಮುಕ್ತ ಆಹಾರ ಇಂದಿನ ಅಗತ್ಯ: ಹೂವಿನಕೆರೆಯಲ್ಲಿ ಸಾವಯವ ಕೃಷಿ ಮಹತ್ವ ಸಾರಿದ ಸೋದೆ ಶ್ರೀಗಳು

ಅರಮನೆ ಮೈದಾನದಲ್ಲಿ ಮೊಳಗಿತು 70 ಲಕ್ಷ ಕುಟುಂಬಗಳ ಸ್ವಾಭಿಮಾನದ ಧ್ವನಿ!; ಒಪಿಎಸ್ ಜಾರಿ, ಎನ್‌ಪಿಎಸ್ ರದ್ದು, ಕೇಂದ್ರ ಮಾದರಿಯ ವೇತನಕ್ಕೆ ಒತ್ತಾಯ: ನೌಕರರ ಭವಿಷ್ಯದ ಪ್ರಶ್ನೆ ಮುಂದಿಟ್ಟ ಸಿ.ಎಸ್. ಷಡಾಕ್ಷರಿ

​ಲಿಂ. ಎಸ್.ಆರ್. ಕಾಶಪ್ಪನವರ 24ನೇ ಪುಣ್ಯಸ್ಮರಣೆ; “ಅಧಿಕಾರಾವಧಿಯಲ್ಲಿ ಕಾಶಪ್ಪನವರು ಮಾಡಿದ ಜನಪರ ಕೆಲಸಗಳು ಎಂದಿಗೂ ಅಮರ”: ಶ್ರೀ ರಂಭಾಪುರಿ ಜಗದ್ಗುರುಗಳು

ಸರ್ಕಾರಿ ನೌಕರರ ಶಕ್ತಿ, ಸಂಘಟನೆಯ ವೈಭವ; ಸಿ.ಎಸ್. ಷಡಾಕ್ಷರಿ ನಾಯಕತ್ವದಲ್ಲಿ ವಿಜೃಂಭಿಸಿದ ‘ನಮ್ಮಭಿಮಾನದ ಅಭಿನಂದನೆ’

ರಾಜ್ಯದ ಅಭಿವೃದ್ಧಿಗೆ ಸರ್ಕಾರಿ ನೌಕರರೇ ಶಕ್ತಿ; ನೌಕರರ ನ್ಯಾಯಸಮ್ಮತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು: ಸಿ.ಎಸ್. ಷಡಾಕ್ಷರಿ

Leave a Comment