ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಡಿ.ಕೆ. ಶಿವಕುಮಾರ್ ಸಂಪುಟಕ್ಕೆ 19 ನೂತನ ಸಚಿವರ ಸೇರ್ಪಡೆ

On: August 3, 2026 7:27 PM
Follow Us:
ಲೋಕಭವನದಲ್ಲಿ ರಾಜ್ಯಪಾಲರಿಂದ ಪ್ರಮಾಣವಚನ ಬೋಧನೆ; ವಿವಿಧ ರೀತಿಯಲ್ಲಿ ಪ್ರತಿಜ್ಞೆ ಸ್ವೀಕರಿಸಿದ ಸಚಿವರು

ಬೆಂಗಳೂರು, ಆ.3: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟದ ವಿಸ್ತರಣೆಯ ಅಂಗವಾಗಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ ಡಾ. ಅಜಯ್ ಸಿಂಗ್, ಹಿರಿಯ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಸೇರಿದಂತೆ ಒಟ್ಟು 19 ಮಂದಿ ಶಾಸಕರು ಸೋಮವಾರ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ರಾಜ್ಯ ಸಚಿವ ಸಂಪುಟಕ್ಕೆ ಹೊಸ ಮುಖಗಳ ಸೇರ್ಪಡೆಯಾಗಿದ್ದು, ಸರ್ಕಾರದ ಆಡಳಿತಕ್ಕೆ ಮತ್ತಷ್ಟು ಬಲ ದೊರೆತಿದೆ.

ಬೆಂಗಳೂರಿನ ಲೋಕಭವನದಲ್ಲಿ ನಡೆದ ಸರಳ ಆದರೆ ಗೌರವಯುತ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಸಚಿವರಿಗೆ ಪದ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಪ್ರಮಾಣವಚನ ಸ್ವೀಕರಿಸಿದ ಸಚಿವರಲ್ಲಿ ಡಾ. ಅಜಯ್ ಸಿಂಗ್ ಮತ್ತು ಹೆಚ್.ಸಿ. ಬಾಲಕೃಷ್ಣ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕೆ.ಎಸ್. ಬಸವಂತಪ್ಪ ಅವರು ಜಗಜ್ಯೋತಿ ಬಸವೇಶ್ವರರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರು ಕೇವಲ ಪ್ರತಿಜ್ಞೆ ಸ್ವೀಕರಿಸುವ ಮೂಲಕ ಪದಗ್ರಹಣ ಮಾಡಿದರು.

ಎನ್. ಚೆಲುವರಾಯಸ್ವಾಮಿ, ಲಕ್ಷ್ಮಣ ಸವದಿ, ಮಧು ಬಂಗಾರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಬಿ. ನಾಗೇಂದ್ರ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಸಿ.ಎಂ. ನರೇಂದ್ರಸ್ವಾಮಿ ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಗಂಗಾಧರ ಅಜ್ಜನ ಹೆಸರನ್ನು ಸ್ಮರಿಸಿ ಪ್ರಮಾಣವಚನ ಸ್ವೀಕರಿಸಿದರು.

ಪುಟ್ಟರಂಗಶೆಟ್ಟಿ, ಟಿ. ರಘುಮೂರ್ತಿ, ರುದ್ರಪ್ಪ ಲಮಾಣಿ ಹಾಗೂ ಕೆ.ಎಂ. ಶಿವಲಿಂಗೇಗೌಡ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಿಜ್ವಾನ್ ಅರ್ಷದ್ ಅವರು ಪ್ರತಿಜ್ಞೆ ಸ್ವೀಕರಿಸಿದರೆ, ಸಂತೋಷ್ ಲಾಡ್ ಅವರು ಯಾವುದೇ ದೇವರು ಅಥವಾ ವ್ಯಕ್ತಿಯ ಹೆಸರನ್ನು ಉಲ್ಲೇಖಿಸದೇ ಸಂವಿಧಾನದ ಆಶಯದಂತೆ ಪ್ರತಿಜ್ಞೆ ಸ್ವೀಕರಿಸಿದರು.

ವಿಜಯಾನಂದ ಕಾಶಪ್ಪನವರ್ ಅವರು ಕೂಡಲ ಸಂಗಮ, ಪಂಚಪೀಠಾಧಿಪತಿಗಳು, ಬುದ್ಧ, ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ದೇವರ ಹೆಸರನ್ನು ಸ್ಮರಿಸಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಗಮನ ಸೆಳೆದರು. ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರು ಅಲ್ಲಾಹ್ ಹಾಗೂ ತಮ್ಮ ತಾಯಿಯ ಹೆಸರನ್ನು ಉಲ್ಲೇಖಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಶಿವರಾಜ್ ತಂಡರಗಿ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಸಚಿವ ಸಂಪುಟ ವಿಸ್ತರಣೆಯೊಂದಿಗೆ ಪ್ರಾದೇಶಿಕ ಹಾಗೂ ಸಾಮಾಜಿಕ ಸಮತೋಲನಕ್ಕೆ ಆದ್ಯತೆ ನೀಡಲಾಗಿದೆ ಎಂಬ ಅಭಿಪ್ರಾಯಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಹೊಸ ಸಚಿವರಿಗೆ ಯಾವ ಯಾವ ಖಾತೆಗಳು ಹಂಚಿಕೆಯಾಗಲಿವೆ ಎಂಬುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶೀಘ್ರದಲ್ಲೇ ಖಾತೆ ಹಂಚಿಕೆ ಕುರಿತು ಅಂತಿಮ ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿದೆ.

ಈ ಸಂಪುಟ ವಿಸ್ತರಣೆಯಿಂದ ಸರ್ಕಾರದ ಆಡಳಿತ ಕಾರ್ಯಗಳಿಗೆ ಮತ್ತಷ್ಟು ವೇಗ ಸಿಗಲಿದ್ದು, ವಿವಿಧ ಇಲಾಖೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶವೂ ಇದರಲ್ಲಿ ಅಡಕವಾಗಿದೆ. ನೂತನ ಸಚಿವರಿಗೆ ರಾಜ್ಯದ ವಿವಿಧ ಭಾಗಗಳಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.

K.M.Sathish Gowda

Join WhatsApp

Join Now

Facebook

Join Now

Read more

ಪ್ರಜಾಪ್ರಭುತ್ವದ ಶ್ರೇಷ್ಠತೆಗೆ ಸವಾಲೆಸೆದ ಶ್ರೀ ತರಳಬಾಳು ಜಗದ್ಗುರುಗಳು: ನಾಲ್ವಡಿಯವರ ‘ಜನಹಿತ’ದ ಮಾದರಿ ಇಂದೇಕೆ ಸಾಧ್ಯವಾಗುತ್ತಿಲ್ಲ!?ದಾವಣಗೆರೆಯಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿ ಅನಾವರಣ: ವ್ಯವಸ್ಥೆಯ ಆತ್ಮಾವಲೋಕನಕ್ಕೆ ತರಳಬಾಳು ಶ್ರೀಗಳ ಕರೆ

ಮೂರು ಸಾವಿರ ಕಂಠಗಳು… ಒಂದೇ ನಾದ… ಬಸವಣ್ಣನವರ ವಚನಗಳಿಗೆ ದಾವಣಗೆರೆ ಸಾಕ್ಷಿ!: ‘ವಚನ ನಾದಲೋಕ’ದಲ್ಲಿ ಎಲ್ಲರೂ ಭಾಗವಹಿಸಿ ಎಂದು ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಮನವಿ

‘ಗಲಾಟೆ ಗಣಪತಿ’ಗೆ ತೆರೆ: ಭಯದಿಂದ ಭಕ್ತಿಯ ಸಂಭ್ರಮದತ್ತ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ: ಎಸ್‌ಪಿ ನಿಖಿಲ್ ಬಿ. ಅವರ ಕಾರ್ಯತಂತ್ರದಲ್ಲಿ ತಂತ್ರಜ್ಞಾನಾಧಾರಿತ ಕಣ್ಗಾವಲು: ಶಾಂತಿಯುತ ಮೆರವಣಿಗೆಗೆ ಸಾರ್ವಜನಿಕರ ಮೆಚ್ಚುಗೆ

​ಶ್ರೀ ಜಗದ್ಗುರು ರೇಣುಕಾಚಾರ್ಯರು-ಶರಣರನ್ನು ಬೇರ್ಪಡಿಸುವ ಕುತಂತ್ರ ನಿಲ್ಲಲಿ!: ಒಳಗಿನ ಶತ್ರುಗಳಿಂದಲೇ ಧರ್ಮಕ್ಕೆ ಕಂಟಕ, ಸ್ವಾರ್ಥಿಗಳ ಕಪಟ ನಾಟಕ ಇನ್ಮುಂದೆ ನಡೆಯಲ್ಲ!: ಧರ್ಮದ್ರೋಹಿಗಳಿಗೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಖಡಕ್ ಎಚ್ಚರಿಕೆ!

ರೈತರೆ, ಸಾಲಕ್ಕೆ ಹೆದರಬೇಡಿ! ಆತ್ಮಹತ್ಯೆ ಮಾಡಿಕೊಳ್ಳಬೇಡಿ; ಎದೆತಟ್ಟಿ ‘ನಾನು ರೈತ’ ಎಂದು ಹೇಳಿ ಹೋರಾಡಿ: ಬರ ಪರಿಹಾರದ ಹೆಸರಿನಲ್ಲಿ ರೈತರನ್ನು ಕಾಯಿಸುವುದೇಕೆ? ಶಾಶ್ವತ ನೀರಾವರಿ ಕಲ್ಪಿಸಿ, ಸಾಲಮನ್ನಾ ಮಾಡಿ: ಸಿಎಂಗೆ ಎಚ್.ಆರ್. ಬಸವರಾಜಪ್ಪ ಒತ್ತಾಯ

​ಧರ್ಮ ಮತ್ತು ಕಾಯಕದ ಹಾದಿಯಲ್ಲಿ ‘ಶಿವನ ಕುಮಾರ’: ವೀರಶೈವ-ಲಿಂಗಾಯತ ವೇದಿಕೆಯಲ್ಲಿ ಸಿಎಂ ಡಿ.ಕೆ.ಶಿ ಭಾವನಾತ್ಮಕ ಧರ್ಮಸಂದೇಶ!: ‘ಜಾಗ ನನ್ನದು, ಕಟ್ಟಡ ನಿಮ್ಮದು’ – ಮಠಗಳಿಗೆ 2 ಎಕರೆ ಜಾಗ ನೀಡುವ ಭರವಸೆ

Leave a Comment