ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಪ್ಯಾನ್ ಮತ್ತು ಆಧಾರ್​ನಲ್ಲಿರುವ ಮಾಹಿತಿ ತಪ್ಪಿದ್ದರೆ ಆನ್​ಲೈನ್​ನಲ್ಲೇ ಸರಿಪಡಿಸುವ ಕ್ರಮ ತಿಳಿದಿರಿ

On: July 24, 2025 6:46 PM
Follow Us:

ಬಹಳ ಮಹತ್ವದ ದಾಖಲೆ ಎನಿಸಿರುವ ಆಧಾರ್ ಕಾರ್​ಡ್ ಮತ್ತು ಪ್ಯಾನ್ ಕಾರ್ಡ್​ಗಳಲ್ಲಿರುವ ಮಾಹಿತಿ ಸರಿಹೊಂದಿಕೆಯಾಗಿರುವುದು ಮುಖ್ಯ. ನಿಮ್ಮ ಹೆಸರು, ತಂದೆಯ ಹೆಸರು, ಜನ್ಮದಿನಾಂಕ ಇತ್ಯಾದಿ ವಿವರ ತಪ್ಪಿದ್ದರೆ ತಿದ್ದಲು ಅವಕಾಶ ಇದೆ. ಆನ್​ಲೈನ್​ನಲ್ಲಿ ಆಧಾರ್ ಮತ್ತು ಪ್ಯಾನ್ ದಾಖಲೆಗಳ ಮಾಹಿತಿಯನ್ನು ಪರಿಷ್ಕರಿಸುವ ವಿಧಾನ ಈ ಲೇಖನದಲ್ಲಿದೆ.

ಆಧಾರ್ ಮತ್ತು ಪ್ಯಾನ್ ಕಾರ್ಡ್​ಗಳು ಬಹಳ ಮಹತ್ವದ ದಾಖಲೆಗಳಾಗಿವೆ. ಆಧಾರ್ ಅತಿಮುಖ್ಯ ಗುರುತು ದಾಖಲೆ ಎನಿಸಿದೆ. ಪ್ಯಾನ್ ಕಾರ್ಡ್ ಮುಖ್ಯ ಹಣಕಾಸು ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಹಲವಾರು ಹಣಕಾಸು ಚಟುವಟಿಕೆಗೆ ಪ್ಯಾನ್ ಅಗತ್ಯವಾಗಿದೆ. ಆದಾಯ ತೆರಿಗೆ ಲೆಕ್ಕಾಚಾರಕ್ಕೆ ಪ್ಯಾನ್ ಮುಖ್ಯ ಆಧಾರ. ಹೀಗಾಗಿ, ಇವೆರಡು ದಾಖಲೆಗಳು ಸರಿಯಾದ ಸ್ಥಿತಿಯಲ್ಲಿ ಇರುವುದು ಬಹಳ ಮುಖ್ಯ. ಅಂದರೆ, ಈ ದಾಖಲೆಗಳಲ್ಲಿ ತಪ್ಪು ಮಾಹಿತಿ ಅಥವಾ ದೋಷ ಇದ್ದರೆ ಮತ್ತು ಎರಡರ ಮಾಹಿತಿಯಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ತೊಂದರೆ ಆಗಬಹುದು. ಉದಾಹರಣೆಗೆ, ಎರಡು ದಾಖಲೆಗಳಲ್ಲಿ ನಿಮ್ಮ ಹೆಸರಿನ ಸ್ಪೆಲ್ಲಿಂಗ್ ಬೇರೆ ಬೇರೆ ರೀತಿ ಇರಬಹುದು. ಇಂಥ ಕೆಲ ತಪ್ಪುಗಳನ್ನು ಸರಿಪಡಿಸಲು ಅವಕಾಶ ಇದೆ.

ಪ್ಯಾನ್ ದೋಷಗಳನ್ನು ಸರಿಪಡಿಸುವ ಕ್ರಮ

  • ಎನ್​ಎಸ್​ಡಿಎಲ್ ಪ್ಯಾನ್ ವೆಬ್​ಸೈಟ್​ಗೆ ಹೋಗಿ
  • ಚೇಂಜ್/ಕರೆಕ್ಷನ್ ಇನ್ ಪ್ಯಾನ್ ಕಾರ್ಡ್ ಡೀಟೇಲ್ಸ್ ಎಂಬುದರ ಮೇಲೆ ಕ್ಲಿಕ್ ಮಾಡಿ
  • ಪ್ಯಾನ್ ಕಾರ್ಡ್ ವಿವರವನ್ನು ನಮೂದಿಸಿ, ‘ಸಬ್ಮಿಟ್’ ಕೊಡಿ.
  • ನಿಮ್ಮ ಮನವಿ ನೊಂದಾಯಿತವಾದ ಬಳಿಕ ಇಮೇಲ್ ಐಡಿಗೆ ಒಂದು ಟೋಕನ್ ಅಥವಾ ರೆಫರೆನ್ಸ್ ನಂಬರ್ ಬರುತ್ತದೆ.
  • ಪ್ಯಾನ್ ಕಾರ್ಡ್​ನಲ್ಲಿ ನಿಮ್ಮ ಹೆಸರು, ತಂದೆಯ ಹೆಸರು, ಜನ್ಮದಿನಾಂಕ, ಲಿಂಗ, ವಿಳಾಸ, ಸಂಪರ್ಕ ಇತ್ಯಾದಿ ಯಾವ ಮಾಹಿತಿಯನ್ನು ಅಪ್​ಡೇಟ್ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ.
  • ಪರಿಷ್ಕೃತ ಮಾಹಿತಿ ಸಲ್ಲಿಸಿದ ಬಳಿಕ ಅದಕ್ಕೆ ಪೂರಕವಾದ ಸ್ಕ್ಯಾನ್ಡ್ ಡಾಕ್ಯುಮೆಂಟ್ ಅನ್ನು ಅಪ್​ಲೋಡ್ ಮಾಡಿ.
  • ಈಗ ಅಗತ್ಯ ಶುಲ್ಕ ಪಾವತಿಸಿ, ಅಂತಿಮವಾಗಿ ಅರ್ಜಿಯನ್ನು ಸಬ್ಮಿಟ್ ಮಾಡಿ.

ಆಧಾರ್ ಕಾರ್ಡ್​ನಲ್ಲಿರುವ ಮಾಹಿತಿ ಅಪ್​ಡೇಟ್ ಮಾಡುವುದು…

  • ಯುಐಡಿಎಐ ವೆಬ್​ಸೈಟ್​ಗೆ ಹೋಗಿ
  • ನಿಮ್ಮ ಮೊಬೈಲ್ ನಂಬರ್ ಹಾಗೂ ಒಟಿಪಿ ಮೂಲಕ ಲಾಗಿನ್ ಆಗಿ
  • ಅಪ್​ಡೇಟ್ ಆಧಾರ್ ಆನ್​ಲೈನ್ ಎಂಬುದರ ಮೇಲೆ ಕ್ಲಿಕ್ ಮಾಡಿ
  • ಹೆಸರು, ವಿಳಾಸ, ಲಿಂಗ ಮತ್ತು ಫೋನ್ ನಂಬರ್, ಈ ಯಾವುದರ ಮಾಹಿತಿ ಬದಲಿಸಬೇಕು ಎಂಬುದನ್ನು ಆಯ್ಕೆ ಮಾಡಿ.
  • ಬಳಿ ಪರಿಷ್ಕೃತ ಮಾಹಿತಿ ಹಾಕಿ ಅಪ್​ಡೇಟ್ ಕೊಡಿ.
  • ನಂತರ, ಸಬ್ಮಿಟ್ ಕ್ಲಿಕ್ ಮಾಡಿ.
  • ಈಗ 50 ರೂ ಶುಲ್ಕ ಪಾವತಿಸಬೇಕು. ನಂತರ ನಿಮಗೆ ಸರ್ವಿಸ್ ರಿಕ್ವೆಸ್ಟ್ ನಂಬರ್ ಬರುತ್ತದೆ.

K.M.Sathish Gowda

Join WhatsApp

Join Now

Facebook

Join Now

Leave a Comment