ಇದೇ ಮೊದಲ ಬಾರಿಗೆ, ಗಂಭೀರ ಅಸ್ವಸ್ಥೆಯಾಗಿದ್ದ ಯುವತಿಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಮಾನದ ಮೂಲಕ ಮುಂಬೈಗೆ ಏರ್‌ಲಿಫ್ಟ್ ಮಾಡಲಾಗಿದೆ. ಮೆದುಳು ಜ್ವರವೆಂದು ಬಳಲುತ್ತಿದ್ದ 21 ವರ್ಷದ ಯುವತಿಗೆ ಲಿವೆರ್ ಡ್ಯಾಮೇಜ್ ಕಂಡುಬಂದಿದ್ದು, ಅವರನ್ನು ಶಿವಮೊಗ್ಗದ ಖಾಸಗಿ ಶಿವಮೊಗ್ಗದ ಮುಂಬೈನ ರಿಲಯನ್ಸ್ ಆಸ್ಪತ್ರೆಗೆ ವಿಶೇಷ ವಿಮಾನದ ಮೂಲಕ ಕಳುಹಿಸಿಕೊಡಲಾಯಿತು. ಶಿವಮೊಗ್ಗದ ಗಾಂಧಿ ಬಜಾರ್‌ನ ತಿಮ್ಮಪ್ಪ ಕೊಪ್ಪಲು ರಸ್ತೆ ಯ ನಿವಾಸಿ ಹಾಗೂ ಮನೋಜ್ ಮನಿಷಾ ದಂಪತಿಯ ಪುತ್ರಿಯಾಗಿರುವ ಮಾನ್ಯ, ಕಳೆದ ಕೆಲವು ದಿನಗಳಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರು. ಇವರ ಆರೋಗ್ಯ ಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಮುಂಬೈಗೆ ರವಾನಿಸಲು ನಿರ್ಧರಿಸಲಾಯಿತು. ಯುವತಿಯನ್ನು ಖಾಸಗಿ ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಸಾಗಿಸಲು ಶಿವಮೊಗ್ಗ ಪೊಲೀಸರು ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಹಕಾರ ನೀಡಿದರು.

ಐಸಿಯು ಕೇರ್ ವೈದ್ಯರಾದ ಡಾ.ರಾಕೇಶ್ ಮಾತು ಮಾನ್ಯಜೈನ್ 21 ಮುಂಬೈಯಿಂದ ಬಂದಿದ್ದರು. ಇಂಟಿಯರ್ ಡಿಸೈನರ್ ಆಗಿದ್ದರು. ಟ್ರಾವೆಲ್ ಮಾಡಿ ಬಂದಿದ್ದರು. ಜ್ವರ ಬಂದು 7 ದಿನವಾಗಿತ್ತು. ಬೇರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಡೆಂಗ್ಯೂ ಎಂದಾಗಿತ್ತು. ಮಂಗಳವಾರ ಅಮೃತ ಲೈಫ್ ಕೇರ್ ನಲ್ಲಿ ದಾಖಲಾಗಿದ್ದರು. ನಿನ್ನೆ ನಂಜಪ್ಪಕ್ಕೆ ಅಡ್ಮಿಟ್ ಆಗಿದ್ದಾಗ ರಕ್ತ ಪರಿಶೀಲನೆಯಲ್ಲಿ ಲಿವರ್ ಸಮಸ್ಯೆ ಕಂಡುಬಂದಿತ್ತು. ವೆಂಟಿಲೇಟರ್ ಬೇಕಿತ್ತು. ಲಿವರ್ ಫೇಲ್ಯೂರ್ ಆಗುವ ಸಾಧ್ಯತೆಯಿದ್ದು ಟ್ರಾನ್ಸಪಲೆಂಟ್ ಕಂಡು ಬರುವ ಸಾಧ್ಯತೆಯಿದಾಗಿ ಮುಂಬೈನ ರಿಲಿಯನ್ಸ್ ಗೆ ಶಿಫ್ಟ್ ಮಾಡಲಾಗಿದೆ. ಬಹು ಅಂಗಾಂಗ ವಿಫಲವಾಗುವ ಸಾಧ್ಯತೆಯೂ ಇತ್ತು ಎಂದು ವೈದ್ಯ ಡಾ.ರಾಕೇಶ್ ತಿಳಿಸಿದರು. ಓವರ್ ನೈಟ್ ಮುಂಬೈ ನ ರಿಲಿಯನ್ಸ್ ಆಸ್ಪತ್ರೆಗೆ ಹೋಗಬೇಕು ಎಂಬ ಅಂಶ ಗಮನದಲ್ಲಿತ್ತು. ಸಂಪರ್ಕ ಬೆಳೆಸಲಾಗಿತ್ತು. ಕಿಡ್ನಿ ಸಮಸ್ಯೆಯಾಗಿರಲಿಲ್ಲ. ಲಿವರ್ ಫೇಲ್ಯೂರ್ ಆಗುವ ಸಾಧ್ಯತೆಯಿತ್ತು. ಲಿವರ್ ಟ್ರಾಸ್ಪಲೆಂಟ್ ಆಗಬೇಕಿದೆ ಎಂಬ ಅಂಶದಲ್ಲಿ ಮುಂಬೈಗೆ ಏರ್ ಲಿಫ್ಟ್ ಮಾಡಲಾಗಿದೆ. ಇದು ಡೆಂಗ್ಯೂವಿನಲ್ಲಿ 1% ಈ ರೀತಿ ಲಿವರ್ ಡ್ಯಾಮೇಜ್ ಕಂಡು ಬರುತ್ತದೆ ಎಂದರು.