ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟ UPI; ಇನ್ಮುಂದೆ ಬ್ಯಾಲೆನ್ಸ್​ ಚೆಕ್ ಮಾಡೋದಕ್ಕೂ ಮುನ್ನ ಹುಷಾರ್​..!

On: July 27, 2025 8:37 PM
Follow Us:

ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ವ್ಯವಸ್ಥೆಯಲ್ಲಿ ಆಗಸ್ಟ್​ 1ರಿಂದ ಹಲವು ಬದಲಾವಣೆಗಳು ಜಾರಿಗೆ ಬರಲಿವೆ. ಫೋನ್‌ಪೇ, ಗೂಗಲ್ ಪೇ, ಪೇಟಿಎಂ ಮುಂತಾದ ಯುಪಿಐ ಆ್ಯಪ್​ಗಳನ್ನು ದಿನನಿತ್ಯ ಬಳಸುವವರಿಗೆ ಈ ನಿಯಮ ಅನ್ವಯವಾಗುತ್ತದೆ.

ಬ್ಯಾಲೆನ್ಸ್​ ತಿಳಿಯಲು ಮಿತಿ (Limit to know the balance: ಪ್ರತಿ ಯುಪಿಐ App​ನಲ್ಲಿ ಕೆಲ ಬಳಕೆದಾರರು ಪದೇ ಪದೇ ತಮ್ಮ ಬ್ಯಾಲೆನ್ಸ್ ಚೆಕ್​ ಮಾಡುತ್ತಲೇ ಇರುತ್ತಾರೆ. ಈಗ ಬಳಕೆದಾರರು ದಿನಕ್ಕೆ 50ಕ್ಕಿಂತ ಹೆಚ್ಚು ಬಾರಿ ಯುಪಿಐನಲ್ಲಿ ಬ್ಯಾಲೆನ್ಸ್​ ಚೆಕ್​ ಮಾಡುವಂತಿಲ್ಲ. ಒಂದು ವೇಳೆ ಬಳಕೆದಾರರು 2 App​ಗಳನ್ನು ಬಳಸುತ್ತಿದ್ದರೆ, ಒಂದು App​ನಲ್ಲಿ 50 ಬಾರಿ ಸೇರಿದಂತೆ ಒಟ್ಟು 100 ಬಾರಿ ಬ್ಯಾಲೆನ್ಸ್​ ಚೆಕ್ ಮಾಡಬಹುದು. ಈ ಮೂಲಕ ಸರ್ವರ್​ ಮೇಲಿನ ಒತ್ತಡ ಕಡಿಮೆ ಆಗುತ್ತದೆ.

ಆಟೋಪೇಗೆ ನಿಗದಿತ ಸಮಯ (Autopay scheduled time): ನೆಟ್​ಫ್ಲಿಕ್ಸ್​, ಯೂಟ್ಯೂಬ್​ ಸಬ್​ಸ್ಕ್ರಿಪ್ಶನ್​, ಮ್ಯೂಚುವಲ್​ ಫಂಡ್​, ಎಸ್​ಐಪಿ, ಇಎಂಐ, ಯುಟಿಲಿಟಿ ಬಿಲ್​ ಮುಂತಾದವುಗಳಿಗೆ ಸಂಬಂಧಿಸಿದ ಆಟೋಪೇ ವಹಿವಾಟು ಇನ್ನೂ ಮುಂದೆ ನಿಗದಿತ ಸಮಯದ ಸ್ಲಾಟ್​ಗಳಲ್ಲಿ ಮಾತ್ರ ನಡೆಯಲಿದೆ. ಬೆಳಿಗ್ಗೆ  10ರ ಮೊದಲು, ಮಧ್ಯಾಹ್ನ 1ರಿಂದ ಸಂಜೆ 5ರವರೆಗೆ, ರಾತ್ರಿ 9.30ರ ನಂತರ ಮಾತ್ರ ಇನ್ನು ಮುಂದೆ ಆಟೋಪೇ ನಡೆಯಲಿದೆ. ಇದರಿಂದಾಗಿ ಬೆಳಿಗ್ಗೆ  10ರಿಂದ ಮಧ್ಯಾಹ್ನ 1 ಮತ್ತು ಸಂಜೆ 5 ರಿಂದ ರಾತ್ರಿ 9.30ರವರೆಗಿನ ಪೀಕ್​ ಅವರ್​ನಲ್ಲಿ ಸರ್ವರ್​ ಮೇಲಿನ ಒತ್ತಡ ಕಡಿಮೆಯಾಗಲಿದೆ.

ವಹಿವಾಟು ಸ್ಟೇಟರ್​ ಚೆಕಿಂಗ್ (Transaction status checking): ವಹಿವಾಟು ವಿಫಲವಾದರೆ ಬಳಕೆದಾರ ದಿನಕ್ಕೆ ಕೇವಲ 3 ಬಾರಿ ಮಾತ್ರ ಸ್ಟೇಟಸ್​ ಚೆಕ್​ ಮಾಡಬಹುದು. ಮತ್ತು ಪ್ರತಿ ಚೆಕಿಂಗ್​ನ ನಡುವೆ ಕನಿಷ್ಠ 90 ಸೆಕೆಂಡ್​ ಅಂತರ ಇರಬೇಕು. ಇದರಿಂದ ಸರ್ವರ್​ ಮೇಲಿನ ಒತ್ತಡ ಕಡಿಮೆಯಾಗಲಿದೆ.

ಪೇಮೆಂಟ್​ ರಿವರ್ಸಲ್​ಗೆ ಮಿತಿ (Limit on payment reversal): ಬಳಕೆದಾರ 30 ದಿನಗಳಲ್ಲಿ ಕೇವಲ 10 ಬಾರಿ ಪೇಮೆಂಟ್​ ರಿವರ್ಸಲ್​ ವಿನಂತಿ ಸಲ್ಲಿಸಬಹುದು. ಒಬ್ಬನೇ ವ್ಯಕ್ತಿ ಅಥವಾ ಸಂಸ್ಥೆಗೆ 5 ಬಾರಿ ಮಾತ್ರ ರಿವರ್ಸಲ್​ಗೆ  ಕೋರಿಕೆ ಸಲ್ಲಿಸಬಹುದು. 

ರಿಸೀವರ್​ನ ಬ್ಯಾಂಕ್​ ಹೆಸರು ಡಿಸ್​ಪ್ಲೇ (Receiver’s bank name display): ಈ ತಿಂಗಳ ಆರಂಭದಿಂದ ಜಾರಿಯಲ್ಲಿರುವ ನಿಯಮದಂತೆ, ಹಣ ಕಳುಹಿಸುವ ಮೊದಲು ​ರಿಸೀವರ್​ನ ಬ್ಯಾಂಕ್​ನ ಹೆಸರು ಡಿಸ್​ಪ್ಲೇ ಆಗುತ್ತದೆ. ಇದು ತಪ್ಪು ಖಾತೆಗೆ ಹಣ ಕಳುಹಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಈ ಬದಲಾವಣೆಗಳು ಆಟೋಮ್ಯಾಟಿಕ್​ ಆಗಿ ಯುಪಿಐ App​ಗಳಲ್ಲಿ ಅನುಷ್ಠಾನಕ್ಕೆ ಬರಲಿವೆ. ಇದಕ್ಕಾಗಿ ಬಳಕೆದಾರರು ಏನೂ ಮಾಡುವ ಅವಶ್ಯಕತೆ ಇಲ್ಲ.

K.M.Sathish Gowda

Join WhatsApp

Join Now

Facebook

Join Now

Leave a Comment