ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ನಿಂತಿರುವ ಲಾರಿಗೆ ಬಸ್ ಡಿಕ್ಕಿ- ಇಬ್ಬರು ಸಾವು

On: July 30, 2025 5:19 PM
Follow Us:

ಶಿವಮೊಗ್ಗ: ನಿಂತಿರುವ ಲಾರಿಗೆ ಖಾಸಗಿ ಬಸ್ ಒಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವಾಗಿದ್ದು 15 ಜನರಿಗೆ ಗಾಯಗಳಾಗಿದೆ. ಇದರಲ್ಲಿ ಐದು ಜನ ಸೀರಿಯಸ್ ಆಗಿದ್ದಾರೆ. ಗಾಜನೂರಿನ ಬಳಿ ನಿಂತಿದ್ದ ಲಾರಿಗೆ ಖಾಸಗಿ ಬಸ್ (ದುರ್ಗಾಂಬ) ಬಸ್ ಡಿಕ್ಕಿ ಆಗಿದೆ. ಎದುರಿನಿಂದ ವಾಹನ ಬಂದ ವಾಹನದ ಲೈಟ್ ರಿಫ್ಲೆಕ್ಷನ್ ಆದ ಕಾರಣ ಎಡಕ್ಕೆ ಬಸ್ ನ್ನ ಎಳೆದ ಪರಿಣಾಮ ಸೈಡ್ ನಲ್ಲಿ ನಿಂತಿದ್ದ ಲಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಲಾರಿಗೆ ರಿಫ್ಲೆಕ್ಟರ್ ಇಲ್ಲದ ಕಾರಣ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.    ಘಟನೆಯಲ್ಲಿ ಪ್ರಯಾಣಿಕರಾದ ಚಳ್ಳಕೆರೆಯ ನಿವಾಸಿ ಹರ್ಷಿತ್ (25). ಬಸ್ ನಿರ್ವಾಹಕ   ಅಣ್ಣಪ್ಪ (35) ಎಂಬುವರು ಸಾವನ್ನಪ್ಪಿದ್ದಾರೆ. ಅಣ್ಣಪ್ಪನವರು   ಹೊಸನಗರ ತಾಲೂಕಿನ ನಿವಾಸಿ ಆಗಿದ್ದು ನಿರ್ವಾಹಕರಾಗಿ ಇತ್ತೀಚೆಗೆ ಸೇರಿಕೊಂಡಿದ್ದರು ಚಾಲಕನಿಗೆ ತರಿಚಿದ ಗಾಯಗಳಾಗಿವೆ. ಸುಮಾರು 15 ಜನಿಗೆ ಗಾಯಗಳಾಗಿವೆ. ಗಂಭೀರವಾದವರಲ್ಲಿ  ಮಂಜುನಾಥ್(45), ಪಾಲಮ್ಮ (60), ಪ್ರಸಾದ್ (43) ಸುಜಾತ(40),  ಬಿಂದು (20) ಎಂದು ಗುರುತಿಸಲಾಗಿದೆ.  ಘಟನೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.    ಈ ಘಟನೆ ಬೆಳಿಗ್ಗೆ ನಾಲ್ಕು ಗಂಟೆಗೆ ನಡೆದಿದೆ. ಬಸ್ಸು ಮಂಗಳೂರಿನಿಂದ ಶಿವಮೊಗ್ಗದ ಕಡೆ ಬರ್ತಾಯಿತ್ತು ಎಂಬ ಮಾಹಿತಿಲಭ್ಯವಾಗಿದೆ. ಗಾಯಾಳುಗಳನ್ನ‌ಮೆಗ್ಗಾನ್ ಗೆ ದಾಖಲಿಸಲಾಗಿದೆ.

K.M.Sathish Gowda

Join WhatsApp

Join Now

Facebook

Join Now

Read more

ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯ ಹತ್ಯೆ: ಪತ್ನಿ ಹಾಗೂ ಪ್ರಿಯಕರನಿಗೆ ಗಲ್ಲು ಶಿಕ್ಷೆ – ಭದ್ರಾವತಿ ಪೊಲೀಸರ ಚಾಣಾಕ್ಷ ತನಿಖೆಗೆ ದೊರೆತ ಐತಿಹಾಸಿಕ ಜಯ,.!

ಶಿವಮೊಗ್ಗ ಗ್ರಾಮಾಂತರ ಪೊಲೀಸರ ಮಿಂಚಿನ ಕಾರ್ಯಾಚರಣೆ: 24 ಗಂಟೆಯೊಳಗೆ ಸರಗಳ್ಳರ ಬಂಧನ

“ನೈಟಿ ಧರಿಸಿದ್ದಕ್ಕೆ ಕೋಪ: ಹೆಂಡತಿಯನ್ನು ಜೀವಂತ ಸುಟ್ಟ ಪತಿ”

ನಟ ದುನಿಯಾ ವಿಜಯ್ ಸೇರಿದಂತೆ ಹಲವು ಮಂದಿ ಶೇರ್ ಮಾಡಿದ ಝಾಂಬಿ ಡ್ರಗ್ ಸುಳ್ಳು ವಿಡಿಯೋ ಪ್ರಕರಣ: ವೈರಲ್ ಮಾಡಿದವರ ವಿರುದ್ಧ ಕ್ರಮಕ್ಕೆ ಪೊಲೀಸ್ ಆಯುಕ್ತರ ಎಚ್ಚರಿಕೆ

“ಭದ್ರಾವತಿಯಲ್ಲಿ ಸಾಲದ ಕಿರುಕುಳಕ್ಕೆ ಜೀವ ಬಲಿ,.! 5 ವರ್ಷಗಳ ಬಳಿಕ ಆರೋಪಿತರಿಗೆ 10 ವರ್ಷ ಜೈಲು”

ಹನುಮಂತಪುರದಲ್ಲಿ ಬೆಚ್ಚಿಬೀಳಿಸಿದ ಘಟನೆ: ಅಡಕೆ ತೋಟದಲ್ಲಿ ಉರಿದುಹೋದ ಜೀವ – ಶಿವಮೊಗ್ಗ ಉಪನ್ಯಾಸಕರ ರಹಸ್ಯ ಸಾವು, ಕೊಲೆ ಶಂಕೆ‌,.!

Leave a Comment