ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

“ವಿಶ್ವ ದಾಖಲೆ ಪುಸ್ತಕದಲ್ಲಿ ಕರ್ನಾಟಕದ ‘ಶಕ್ತಿ’ ಯೋಜನೆ! ಸಿದ್ದರಾಮಯ್ಯ ಸರ್ಕಾರದ ಹೆಗ್ಗಳಿಕೆ”

On: August 18, 2025 11:13 PM
Follow Us:

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು. ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ಕರ್ನಾಟಕ ಸಾರಿಗೆ ಇಲಾಖೆಯ KSRTC, BMTC, NWKRTC ಮತ್ತು KKRTC ನಾಲ್ಕೂ ನಿಗಮಗಳಲ್ಲಿ ಉಚಿತವಾಗಿ ಸಂಚರಿಸುತ್ತಿದ್ದಾರೆ. ಇದೀಗ, ಶಕ್ತಿ ಯೋಜನೆ ಪ್ರತಿಷ್ಠಿತ “ಗೊಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​”ಗೆ ಸೇರ್ಪಡೆಯಾಗಿದೆ. 2023ರ ಜೂನ್ 11 ರಿಂದ 2025 ಜುಲೈ 25ರ ಅವಧಿಯಲ್ಲಿ ನಾಲ್ಕೂ ನಿಗಮದ ಸಾರಿಗೆ ಬಸ್​ಗಳಲ್ಲಿ 5049476416 ಮಹಿಳೆಯರು (500 ಕೋಟಿ) ಉಚಿತ ಟಿಕೇಟ್ ಪಡೆದು ಪ್ರಯಾಣ ಮಾಡಿದ್ದಾರೆ. ಈ ಕಾರಣದಿಂದ ಶಕ್ತಿ ಯೋಜನೆ ಗೊಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​​ನಲ್ಲಿ ಸ್ಥಾನ‌ ಪಡೆದಿದೆ.

Beyond Free Rides ಎಂಬ ಹೆಸರಿನಲ್ಲಿ Sustainable Mobility Network ವು ದೇಶದ 10 ನಗರಗಳಲ್ಲಿ ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಬಸ್ ಪ್ರಯಾಣದ ಬಗ್ಗೆ ನಡೆಸಿರುವ ಅಧ್ಯಯನ ನಡೆಸಿತು. ಬೆಂಗಳೂರಿನಲ್ಲಿ ಶೇ 23 ರಷ್ಟು ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಶೇ 21 ರಷ್ಟು ಹೆಚ್ಚು ಮಹಿಳಾ ಉದ್ಯೋಗಿಗಳು ಸರ್ಕಾರಿ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಅಧ್ಯಯನ ವರದಿಯಲ್ಲಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಮಹಿಳೆಯರಿಗೆ ಉಚಿತ ಬಸ್‌ ಸೌಲಭ್ಯ ಒದಗಿಸುತ್ತಿರುವ ಶಕ್ತಿ ಯೋಜನೆ ಜಾರಿಗೆ ಬಂದು ಎರಡು ವರ್ಷ ಕಳೆದಿದೆ. 2023ರ ಜೂನ್‌ 11 ರಂದು ಆರಂಭವಾಗಿದ್ದ ಈ ಯೋಜನೆಗೆ ಮಹಿಳೆಯರು ‌ಬಹುಪರಾಕ್ ಎಂದಿದ್ದಾರೆ. 2025ರ ಜುಲೈ 14ರವರೆಗೆ ನಾಲ್ಕೂ ನಿಗಮಗಳಲ್ಲಿ 500 ಕೋಟಿ ಮಹಿಳೆಯರು ಸಂಚಾರ ಮಾಡಿದ್ದರು. ನಾಲ್ಕೂ ನಿಗಮಗಳಲ್ಲಿ ಪ್ರತಿದಿನ ಅಂದಾಜು 80 ಲಕ್ಷಕ್ಕೂ ಹೆಚ್ಚಿನ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯಡಿ ಉಚಿತ ಟಿಕೆಟ್​ ಪಡೆದು ಪ್ರಯಾಣಿಸಿದ್ದರು

ಬಿಎಂಟಿಸಿಯಲ್ಲಿ 157.33 ಕೋಟಿ, ಕೆಎಸ್​ಆರ್​ಟಿಸಿಯಲ್ಲಿ 151 ಕೋಟಿ, ಎನ್​ಡಬ್ಲೂಕೆಆರ್​ಟಿಸಿಯಲ್ಲಿ 117 ಕೋಟಿ ಮತ್ತು ಕೆಕೆಆರ್​ಟಿಸಿಯಲ್ಲಿ 72 ಕೋಟಿ ಮಹಿಳೆಯರು ಜುಲೈ 14ರವರೆಗೆ ಸಂಚಾರ ಮಾಡಿದ್ದರು.

K.M.Sathish Gowda

Join WhatsApp

Join Now

Facebook

Join Now

Leave a Comment