ದಕ್ಷಿಣ ಕನ್ನಡ : ಧರ್ಮಸ್ಥಳದಲ್ಲಿ ನೂರಾರು ಮಹಿಳಾ ಶವಗಳನ್ನು ಹೂತಿದ್ದಾರೆಂದು ಹೇಳಿದ್ದ ಮುಸುಕುಧಾರಿ ಚಿನ್ನಯ್ಯ ಈಗ ಎಸ್‌ಐಟಿ ಬಂಧನಕ್ಕೆ ಒಳಗಾಗಿದ್ದಾನೆ. ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ, ಅವನ ಅಸಲಿ ಮುಖದ ಇತ್ತೀಚಿನ ಫೋಟೋ ಇದೀಗ ಬಹಿರಂಗವಾಗಿದೆ.
ಹಿಂದಿನ ದಿನಗಳಲ್ಲಿ ಚಿನ್ನಯ್ಯನ ಫೋಟೋ 14 ವರ್ಷ ಹಳೆಯದಾಗಿತ್ತು. ಅದು ಚಿನ್ನಯ್ಯ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವೇಳೆಯದ್ದು. ಆದರೆ ಇದೀಗ ರಿವೀಲ್ ಆದ ಫೋಟೋ ಅವನು ಮಾಸ್ಕ್ ಧರಿಸಿ ಓಡಾಡುತ್ತಿದ್ದ ಅವಧಿಯ ನಿಜವಾದ ಚಿತ್ರವಾಗಿದೆ.
ಎಸ್‌ಐಟಿ ತನಿಖೆ ಪ್ರಾರಂಭವಾದ ಜೂನ್ ತಿಂಗಳಿಂದ ಮಾಸ್ಕ್ ಹಾಕಿಕೊಂಡೇ ಕಾಣಿಸಿಕೊಂಡಿದ್ದ ವ್ಯಕ್ತಿ ಇದೇ ಚಿನ್ನಯ್ಯ ಎಂಬುದು ದೃಢವಾಗಿದೆ. ಈ ಹೊಸ ಫೋಟೋವನ್ನು ಚಿನ್ನಯ್ಯ ಸ್ವತಃ ಧರ್ಮಸ್ಥಳದಲ್ಲೇ ತೆಗೆಸಿಕೊಂಡಿದ್ದಾನೆಂಬ ಮಾಹಿತಿ ಲಭ್ಯವಾಗಿದೆ.
ಇದರಿಂದಾಗಿ ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲ ಸೃಷ್ಟಿಸಿದ್ದ “ಮಾಸ್ಕ್ ಮ್ಯಾನ್”ನ ನಿಜವಾದ ರೂಪ ಇದೀಗ ಬಹಿರಂಗಗೊಂಡಿದೆ.