ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ದಸರಾ ಉದ್ಘಾಟನೆ ವಿವಾದ: ಸರ್ಕಾರದ ನಿರ್ಧಾರ ತಪ್ಪು – ಆರ್. ಅಶೋಕ

On: August 29, 2025 7:22 PM
Follow Us:

ಮೈಸೂರು: ನಾಡಹಬ್ಬ ದಸರಾ ಸಂಭ್ರಮಕ್ಕೆ ಈ ಬಾರಿ ವಿವಾದದ ಮಸಿ ಬಳಿದ ಹಿನ್ನೆಲೆಯಲ್ಲಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.

“ನಾಡಹಬ್ಬ ದಸರಾ ಧಾರ್ಮಿಕ-ಸಾಂಸ್ಕೃತಿಕ ಪರಂಪರೆಯ ಹಬ್ಬ. ಅದನ್ನು ರಾಜಕೀಯದ ಬಲಿ ಮಾಡಿರುವುದು ಕಾಂಗ್ರೆಸ್ ಸರ್ಕಾರದ ದೊಡ್ಡ ತಪ್ಪು. ಹಿಂದುಗಳ ಭಾವನೆಗಳಿಗೆ ನೋವುಂಟುಮಾಡುವ ವ್ಯಕ್ತಿಯನ್ನು ಉದ್ಘಾಟಕರನ್ನಾಗಿ ಆಯ್ಕೆ ಮಾಡಿರುವುದು ಆಸ್ತಿಕರ ನಂಬಿಕೆಗೆ ಧಕ್ಕೆ ತರುವ ನಿರ್ಧಾರ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉದ್ದೇಶಪೂರ್ವಕವಾಗಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿದ ಅವರು, “ಹಬ್ಬವನ್ನು ಧಾರ್ಮಿಕತೆಗೂ, ಸಂಸ್ಕೃತಿಗೂ ಸಂಬಂಧಿಸಿದಂತೆ ಆಚರಿಸಬೇಕು. ಆದರೆ ಈ ಸರ್ಕಾರ ತುಷ್ಟೀಕರಣ ರಾಜಕಾರಣಕ್ಕಾಗಿ ನಾಡಹಬ್ಬದ ಪವಿತ್ರತೆಯನ್ನೇ ಕೆಡಿಸಿದೆ” ಎಂದು ಕಿಡಿಕಾರಿರುತ್ತಾರೆ.

ನಾಡಹಬ್ಬ ದಸರಾ ಸಂಭ್ರಮ – ವಿವಾದದ ಮಸಿ

ಮೈಸೂರು ದಸರಾ – ನಾಡಿನ ಸಾಂಸ್ಕೃತಿಕ ಹಬ್ಬ, ನವರಾತ್ರಿಯ ಸಂಭ್ರಮಕ್ಕೆ ಈ ಬಾರಿಯೂ ರಾಜಕೀಯ-ಸಾಮಾಜಿಕ ವಿವಾದ ಮಸಿ ಬಳಿದಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ವಿರೋಧದ ಸ್ವರ ಗರಿಗೆದರಿದೆ.

ವಿರೋಧ ವ್ಯಕ್ತಪಡಿಸುತ್ತಾ ಸರ್ಕಾರಕ್ಕೆ ಕೇಳಲಾಗುತ್ತಿರುವ 5 ಪ್ರಶ್ನೆಗಳು:

1️ಉದ್ಘಾಟಕರ ಆಯ್ಕೆ ಯಾರು?
– ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವ ಆಲೋಚನೆ ಮುಖ್ಯಮಂತ್ರಿಗಳದ್ದೇನಾ? ಸಂಪುಟದವರೇ? ಅಥವಾ ಕೆಲವು ಎಡಪಂಥೀಯ ಬುದ್ಧಿಜೀವಿಗಳ ಪ್ರೇರಣೆಯೇ?

2️ ಸಾಹಿತ್ಯ-ಸಂಸ್ಕೃತಿಯ ಸಂಬಂಧವೇನು?
– ಬಾನು ಮುಷ್ತಾಕ್ ಅವರನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದರೆ ಗೌರವ ತರುತ್ತಿತ್ತು. ಆದರೆ, ಹಿಂದೂ ಧಾರ್ಮಿಕ ಪರಂಪರೆಯೊಂದಿಗೆ ನಂಟಿರುವ ದಸರಾ ಉದ್ಘಾಟನೆಯಲ್ಲಿ ಅವರ ಪಾತ್ರವೇನು?

3️ಭುವನೇಶ್ವರಿ ವಿವಾದದ ನೆನಪು
– ಕನ್ನಡ ತಾಯಿ, ಭುವನೇಶ್ವರಿ ಕುರಿತಾದ ಅವರ ಅಭಿಪ್ರಾಯವೇ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಅಂತಹ ವ್ಯಕ್ತಿಯೊಬ್ಬರು ನಾಳೆ ತಾಯಿ ಚಾಮುಂಡೇಶ್ವರಿಯ ಆರಾಧನೆಗೂ ಪ್ರಶ್ನೆ ಎತ್ತುವುದಿಲ್ಲವೆಂಬ ಭರವಸೆ ಹೇಗೆ?

4️ಭಕ್ತರ ಭಾವನೆಗೆ ಅವಮಾನ?
– ಚಾಮುಂಡೇಶ್ವರಿ ದೇವಿಯ ಶಕ್ತಿಪೀಠವಾದ ಮೈಸೂರಿನಲ್ಲಿ, ತಾಯಿ ಚಾಮುಂಡೇಶ್ವರಿಯ ನಾಮದಲ್ಲಿ ನಡೆಯುವ ಹಬ್ಬಕ್ಕೆ ಸಂವೇದನೆಯಿಲ್ಲದ ವ್ಯಕ್ತಿಯಿಂದ ಉದ್ಘಾಟನೆ ಮಾಡಿಸುವುದು ಕೋಟ್ಯಾಂತರ ಭಕ್ತರಿಗೆ ಅವಮಾನವಲ್ಲವೇ?

5️ ಉದ್ದೇಶಪೂರ್ವಕ ವಿವಾದವೇ?
– ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದರೆ ವಿವಾದವಾಗುವುದು ಸರ್ಕಾರಕ್ಕೂ ಗೊತ್ತಿತ್ತು. ಹಾಗಿದ್ದರೂ ಅವರನ್ನು ಆಯ್ಕೆ ಮಾಡಿರುವುದು ಹಿಂದೂ ಭಾವನೆಗೆ ಸವಾಲೇ? ಅಥವಾ ತುಷ್ಟೀಕರಣ ರಾಜಕೀಯದ ಅಹಂಕಾರದ ಪ್ರದರ್ಶನವೇ?

ಈ ಬೆಳವಣಿಗೆ ಹಿನ್ನೆಲೆ, “ನಾಡಹಬ್ಬ ದಸರಾ ಸಂಭ್ರಮವನ್ನು ರಾಜಕೀಯದ ವಿವಾದದ ಬಲಿ ಮಾಡಲಾಗಿದೆ” ಎಂಬ ಅಸಮಾಧಾನ ಜನಮನದಲ್ಲಿ ವ್ಯಕ್ತವಾಗುತ್ತಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment