ಇಂದು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿ ಸರ್ಕಾರಕ್ಕೆ ನೇರ ಸಂದೇಶ ನೀಡಿದೆ. ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ, ಜಾತಿಗಣತಿ ಸಮೀಕ್ಷೆ ಪಟ್ಟಿಯಲ್ಲಿ ಧರ್ಮ ‘ಹಿಂದೂ’, ಜಾತಿ ‘ಒಕ್ಕಲಿಗ’ ಎಂದೇ ನಮೂದಿಸಬೇಕು ಎಂದು ಏಕಮತದಿಂದ ನಿರ್ಧರಿಸಲಾಯಿತು.
ಕ್ರಿಶ್ಚಿಯನ್ ಜೊತೆ ಸೇರಿಸುವುದಕ್ಕೆ ವಿರೋಧ
ಸಭೆಯಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸ್ಪಷ್ಟವಾಗಿ ಹೇಳಿದ್ದು, “ಯಾವುದೇ ಕಾರಣಕ್ಕೂ ಒಕ್ಕಲಿಗರನ್ನು ಕ್ರಿಶ್ಚಿಯನ್ ಜೊತೆ ಸೇರಿಸಬಾರದು. ಇದು ಸಮುದಾಯಕ್ಕೆ ಅವಮಾನ. ಎಲ್ಲರೂ ಒಂದೇ ರೀತಿಯಾಗಿ ಹಿಂದೂ – ಒಕ್ಕಲಿಗ ಎಂದೇ ಬರೆಯಬೇಕು” ಎಂದು. ಉಪಜಾತಿಗಳಲ್ಲಿಯೂ ಒಕ್ಕಲಿಗ ಎಂಬುದನ್ನೇ ದಾಖಲಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.
ಸಮೀಕ್ಷೆ ಮುಂದೂಡಿಕೆ ಬೇಡಿಕೆ
ಸಭೆಯಲ್ಲಿ ನಾಯಕರಾದ ಹೆಚ್.ಡಿ. ಕುಮಾರಸ್ವಾಮಿ, “ಆತುರಾತುರವಾಗಿ ಸಮೀಕ್ಷೆ ಆರಂಭಿಸುವುದು ಸೂಕ್ತವಲ್ಲ. ಕನಿಷ್ಠ ಮೂರು ತಿಂಗಳು ಮುಂದೂಡಬೇಕು. 15 ದಿನಗಳಲ್ಲಿ ಈ ಕಾರ್ಯ ಪೂರ್ಣಗೊಳಿಸುವುದು ಅಸಾಧ್ಯ. ತೆಲಂಗಾಣ ಮಾದರಿಯಲ್ಲಿ ಹೆಚ್ಚು ಸಮಯ ಕೊಡಬೇಕು” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ನವರಾತ್ರಿ ಸಂದರ್ಭ ಜಾತಿಗಣತಿ ನಡೆಸುವುದು ಸೂಕ್ತವಲ್ಲ ಎಂದೂ ಅವರು ಅಭಿಪ್ರಾಯಪಟ್ಟರು.
ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಸಚಿವ ಅಶ್ವತ್ಥ್ ನಾರಾಯಣ, ಆರ್.ಅಶೋಕ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರು ಭಾಗವಹಿಸಿದರು. ನಿರ್ಣಯ ಮಂಡಿಸಿದ ನಿರ್ಮಲಾನಂದನಾಥ ಸ್ವಾಮೀಜಿಗಳ ಅಭಿಪ್ರಾಯಕ್ಕೆ ಎಲ್ಲರೂ ಬೆಂಬಲ ಸೂಚಿಸಿದರು.
ಒಕ್ಕಲಿಗ ಸಮುದಾಯ ಸಭೆಯ ನಿರ್ಣಯಗಳು
- ಜಾತಿಗಣತಿ ಸಮೀಕ್ಷೆ ಪಟ್ಟಿಯಲ್ಲಿ ಧರ್ಮ ಹಿಂದೂ, ಜಾತಿ ಒಕ್ಕಲಿಗ ಎಂದೇ ನಮೂದಿಸಬೇಕು
- ಯಾವುದೇ ಕಾರಣಕ್ಕೂ ಕ್ರಿಶ್ಚಿಯನ್ ಜೊತೆ ಸೇರಿಸಬಾರದು
- ಉಪಜಾತಿಗಳಲ್ಲೂ ಒಕ್ಕಲಿಗ ಎಂದು ಬರೆಯಬೇಕು
- ಸಮೀಕ್ಷೆಯನ್ನು ಕನಿಷ್ಠ 45 ದಿನ ಮುಂದೂಡಬೇಕು
15 ದಿನಗಳ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸುವುದು ಅಸಾಧ್ಯ – ತೆಲಂಗಾಣ ಮಾದರಿಯಲ್ಲಿ ಹೆಚ್ಚು ದಿನ ನೀಡಬೇಕು
ಒಟ್ಟಿನಲ್ಲಿ, ಸಮುದಾಯ ಜಾತಿಗಣತಿಯನ್ನು ಸ್ವಾಗತಿಸಿದರೂ, ಗೊಂದಲ ಮತ್ತು ಆತುರದ ನಡುವೆ ನಡೆಯುತ್ತಿರುವ ಸಮೀಕ್ಷೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.







