ಶಿವಮೊಗ್ಗ/ಚಿಕ್ಕಮಗಳೂರು: ವೃಕ್ಷಗಳನ್ನು ಮಕ್ಕಳೆಂದು ಭಾವಿಸಿ ಭೂಮಿಯ ಭವಿಷ್ಯಕ್ಕೆ ಆಮ್ಲಜನಕದ ಅಮೃತ ಉಣಿಸುವ ಪುಣ್ಯಕಾರ್ಯಕ್ಕೆ ತನ್ನ ಜೀವನವನ್ನೇ ಅರ್ಪಿಸಿದ ಪರಿಸರ ತಾಯಿ ಸಾಲುಮರದ ತಿಮ್ಮಕ್ಕ ಅವರ ನಿಧನದ ಸುದ್ದಿ ಎಲ್ಲರನ್ನೂ ಅಘಾತಕ್ಕೊಳಪಡಿಸಿದೆ. ರಾಷ್ಟ್ರ–ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ನಾಡಿನ ಕೀರ್ತಿಯನ್ನು ಬೆಳಗಿದ ಈ ಮಹಾತಾಯಿ, ಮೌನವಾಗಿದ್ದರೂ ನೀಡಿದ ಕೊಡುಗೆ ಅಮೋಘವೆಂದು ಶ್ರೀ ಬಸವತತ್ವ ಪೀಠದ ಡಾ. ಬಸವ ಮರುಳಸಿದ್ಧ ಸ್ವಾಮಿಗಳು ಸಂತಾಪ ವ್ಯಕ್ತಪಡಿಸಿದರು.

“ಮಹಾತಾಯಿ ತಿಮ್ಮಕ್ಕ ದೈಹಿಕವಾಗಿ ನಮ್ಮನ್ನು ಅಗಲಿದರೂ ಅವರು ನೆಟ್ಟು ಬೆಳೆಸಿದ ಮರಗಳ ಮೂಲಕ, ಅವರ ಪ್ರೇರಣೆಯಿಂದ ನಡೆಯುತ್ತಿರುವ ಅನೇಕ ಪರಿಸರ ಸಂರಕ್ಷಣಾ ಕಾರ್ಯಗಳ ಮೂಲಕ ಇತಿಹಾಸದ ಪುಟಗಳಲ್ಲಿ ಹಾಗೂ ನಮ್ಮ ಹೃದಯಗಳಲ್ಲಿ ಚಿರಸ್ಥಾಯಿಯಾಗಿರುವರು,” ಎಂದು ಸ್ವಾಮಿಗಳು ಹೇಳಿದರು.
ಸ್ವಾಮಿಗಳವರು ಚಿಕ್ಕಮಗಳೂರಿನ ಬಸವತತ್ವ ಪೀಠ ಮತ್ತು ಶಿವಮೊಗ್ಗ ಬಸವಕೇಂದ್ರದ ಪರವಾಗಿ ತಿಮ್ಮಕ್ಕರಿಗೆ ನಮನ ಸಲ್ಲಿಸಿದರು.





