ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಜರ್ಮನಿಯ ನೆಲದಲ್ಲಿ ಕನ್ನಡಿಗನ ‘Selfybook.ai, App’ ಜಾಗತಿಕ ಲಾಂಚ್: ಡಿಜಿಟಲ್ ಜಗತ್ತಿನಲ್ಲಿ ಹೊಸ ಕ್ರಾಂತಿ!

On: May 20, 2026 3:30 PM
Follow Us:

ಯುರೋಪ್: ಇಂದಿನ ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ಯುಗದಲ್ಲಿ ಜಾಗತಿಕ ತಂತ್ರಜ್ಞಾನ ಭೂಪಟದಲ್ಲಿ ಭಾರತದ ಹೆಸರು ಸುವರ್ಣಾಕ್ಷರಗಳಲ್ಲಿ ಮೂಡಿಬರುತ್ತಿದೆ. ಇದಕ್ಕೆ ಇತ್ತೀಚಿನ ಪ್ರತಿಷ್ಠಿತ ಉದಾಹರಣೆ ಎಂಬಂತೆ, ಕರ್ನಾಟಕದ ಹೆಮ್ಮೆಯ ಮಲೆನಾಡಿನ ಮಡಿಲು ಚಿಕ್ಕಮಗಳೂರಿನ ಪ್ರತಿಭಾನ್ವಿತ ಎಐ ಇನ್ನೋವೇಟರ್ ಮತ್ತು ಉದ್ಯಮಿ ನಂಜೇಶ್ ಬೆಣ್ಣೂರು ಹಾಗೂ ಅವರ ತಂಡ ಅಭಿವೃದ್ಧಿಪಡಿಸಿರುವ, ಭಾರತದ ಹೆಮ್ಮೆಯ ಡೀಪ್‌ಟೆಕ್ ಸ್ಟಾರ್ಟ್‌ಅಪ್ ‘Selfybook.ai’ ಈಗ ಜರ್ಮನಿಯ ನೆಲದಲ್ಲಿ ಅತ್ಯಂತ ಯಶಸ್ವಿಯಾಗಿ ಲೋಕಾರ್ಪಣೆಗೊಂಡಿದೆ.

ಸಾಮಾಜಿಕ ಜಾಲತಾಣಗಳ ಇತಿಹಾಸದಲ್ಲೇ ಹೊಸ ಯುಗಕ್ಕೆ ನಾಂದಿ ಹಾಡಲಿರುವ ಈ ಭಾರತೀಯ ಎಐ ಆಪ್, ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

​ಜರ್ಮನಿಯ ಎರ್ಲಾಂಗನ್ ನಗರದ ಪ್ರತಿಷ್ಠಿತ ‘Gemeindezentrum Frauenaurach’ ಸಭಾಂಗಣದಲ್ಲಿ ‘ಬಸವ ಸಮಿತಿ ಯುರೋಪ್’ ವತಿಯಿಂದ ಆಯೋಜಿಸಲಾಗಿದ್ದ ದ್ವಿತೀಯ ಬಸವ ಜಯಂತಿ ಸಮಾವೇಶದ ಭವ್ಯ ವೇದಿಕೆಯಲ್ಲಿ ಈ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಲಾಯಿತು. ಯುರೋಪ್‌ನ ವಿವಿಧ ಮೂಲೆಗಳಿಂದ ಆಗಮಿಸಿದ್ದ ನೂರಾರು ಕನ್ನಡಿಗರು, ತಂತ್ರಜ್ಞರು ಮತ್ತು ಗಣ್ಯರ ಸಮ್ಮುಖದಲ್ಲಿ ಈ ಆಪ್ ಬಿಡುಗಡೆಯಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಜರ್ಮನಿಯ ಭಾರತೀಯ ರಾಯಭಾರಿ (Ambassador of India to Germany) ಅಜಿತ್ ವಿನಾಯಕ ಗುಪ್ತೆ ಅವರು ಈ ಆಪ್ ಅನ್ನು ಅನಾವರಣಗೊಳಿಸಿ, ಭಾರತೀಯ ತಂತ್ರಜ್ಞಾನದ ಸಾಮರ್ಥ್ಯವನ್ನು ಶ್ಲಾಘಿಸಿದರು. ಬಸವತ್ವ ಪೀಠದ ಪೀಠಾಧಿಪತಿಗಳಾದ ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಅವರು ಈ ನವೀನ ಆವಿಷ್ಕಾರಕ್ಕೆ ಆಶೀರ್ವದಿಸಿದರು. ಪ್ರಸಿದ್ಧ ಇಂಡೋಲಜಿಸ್ಟ್ ಪ್ರೊ. ಡಾ. ರಾಬರ್ಟ್ ಜೆ. ಜೈಡೆನ್‌ಬೋಸ್, ವಿಎಚ್‌ಪಿ ಯುರೋಪ್ ಪ್ರತಿನಿಧಿ ರಾಹುಲ್ ನಾರಾಯಣ್ ಜಿ ಹಾಗೂ ಚಿಕ್ಕಮಗಳೂರಿನ ಐಸಿರಿ ಫೌಂಡೇಶನ್ ಮತ್ತು ಇಸಿರಿ ಟುಡೇ ಅಧ್ಯಕ್ಷರಾದ ರೋಹನ್ ಭಾರ್ಗವಪುರಿ ಅವರು ಅತಿಥಿಗಳಾಗಿ ಉಪಸ್ಥಿತರಿದ್ದು ಕನ್ನಡಿಗರ ಈ ಜಾಗತಿಕ ಸಾಧನೆಯನ್ನು ಪ್ರಶಂಸಿಸಿದರು.

​ಚಿಕ್ಕಮಗಳೂರಿನಂತಹ ನಗರದಿಂದ ಜಾಗತಿಕ ಮಟ್ಟದ ಎಐ ತಂತ್ರಜ್ಞಾನವನ್ನು ರೂಪಿಸಿ, ಅದನ್ನು ಜರ್ಮನಿಯಂತಹ ಮುಂದುವರಿದ ದೇಶದಲ್ಲಿ ಭಾರತದ ರಾಯಭಾರಿಗಳ ಸಮ್ಮುಖದಲ್ಲಿ ಲಾಂಚ್ ಮಾಡಿರುವುದು ಸಾಮಾನ್ಯದ ಮಾತಲ್ಲ. ಕಾರ್ಯಕ್ರಮದಲ್ಲಿ ಮಾತನಾಡಿದ ಐಸಿರಿ ಫೌಂಡೇಶನ್ ಅಧ್ಯಕ್ಷ ರೋಹನ್ ಭಾರ್ಗವಪುರಿ ಅವರು, “ನಮ್ಮ ದೇಶದ, ಅದರಲ್ಲೂ ನಮ್ಮ ಕರ್ನಾಟಕದ ಹೆಮ್ಮೆಯ ತಂತ್ರಜ್ಞಾನ ಜಾಗತಿಕ ವೇದಿಕೆಯಲ್ಲಿ ಅನಾವರಣಗೊಂಡಿರುವುದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡುವಂತಹ ವಿಷಯ. ನಂಜೇಶ್ ಬೆಣ್ಣೂರು ಮತ್ತು ಅವರ ತಂಡದ ಈ ಸಾಧನೆ ಇಂದಿನ ಯುವ ಪೀಳಿಗೆಗೆ ದಾರಿದೀಪ” ಎಂದು ಮುಕ್ತ ಕಂಠದಿಂದ ಹೊಗಳಿದರು.

​ಪ್ರಸ್ತುತ ದಿನಗಳಲ್ಲಿ ಜನರು ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ಸೆಲ್ಫಿ ಹಾಗೂ ವೀಡಿಯೊಗಳನ್ನು ಹಂಚಿಕೊಳ್ಳಲು ಅಪಾರ ಸಮಯ ಕಳೆಯುತ್ತಿದ್ದಾರೆ. ಆದರೆ ಅಲ್ಲಿ ಸಿಗುವ “ಲೈಕ್ಸ್”, “ವ್ಯೂಸ್” ಮತ್ತು “ಫಾಲೋವರ್ಸ್”ಗಳು ಕೇವಲ ಸಂಖ್ಯೆಗಳಾಗಿ ಉಳಿಯುತ್ತಿವೆಯೇ ಹೊರತು ಕ್ರಿಯೇಟರ್ಸ್‌ಗೆ ಅದರಿಂದ ಸೂಕ್ತ ಆರ್ಥಿಕ ಅಥವಾ ನೈಜ ಮೌಲ್ಯ ಸಿಗುತ್ತಿಲ್ಲ. ಈ ಕೊರತೆಯನ್ನು ನೀಗಿಸಲು Selfybook Application Pvt Ltd ಸಂಸ್ಥೆ ವಿಶಿಷ್ಟ ವೇದಿಕೆಯನ್ನು ಸೃಷ್ಟಿಸಿದೆ.

​ಇದು ಕೇವಲ ಒಂದು ಸೋಶಿಯಲ್ ಮೀಡಿಯಾ ಆಪ್ ಅಲ್ಲ; ಇದು ಕೃತಕ ಬುದ್ಧಿಮತ್ತೆ (AI) ಆಧಾರಿತ ಅತ್ಯಾಧುನಿಕ ‘ಸೋಶಿಯಲ್ ಟೆಕ್ನಾಲಜಿ’ ವೇದಿಕೆಯಾಗಿದೆ. ಇಲ್ಲಿ ಬಳಕೆದಾರರು ತಮ್ಮ ಸೆಲ್ಫಿ ಮತ್ತು ಕಂಟೆಂಟ್‌ಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮದೇ ಆದ ಡಿಜಿಟಲ್ ಪ್ರಭಾವ (Digital Influence) ಹಾಗೂ ಅದಕ್ಕೊಂದು ನೈಜ ಮೌಲ್ಯವನ್ನು ಪಡೆದುಕೊಳ್ಳಬಹುದು.

​ಈ ಆಪ್‌ನ ಬೆನ್ನೆಲುಬಾಗಿ ನಿಂತಿರುವುದು ಸಂಸ್ಥಾಪಕರಾದ ನಂಜೇಶ್ ಬೆಣ್ಣೂರು ಮತ್ತು ಅವರ ಅತ್ಯಂತ ದಕ್ಷ ತಾಂತ್ರಿಕ ತಂಡ. ಅವರ ಕಲ್ಪನೆಯಲ್ಲಿ ಮೂಡಿಬಂದಿರುವ AVAE (AI Validated Audience Exchange) ತಂತ್ರಜ್ಞಾನವು ಇನ್ಫ್ಲುಯೆನ್ಸರ್ಸ್, ಕಂಟೆಂಟ್ ಕ್ರಿಯೇಟರ್ಸ್ ಮತ್ತು ಉದ್ಯಮಗಳ (Businesses) ನಡುವಿನ ಸಂಪರ್ಕವನ್ನೇ ಸಂಪೂರ್ಣವಾಗಿ ಬದಲಾಯಿಸಲಿದೆ.

  • ಫೇಕ್ ಎಂಗೇಜ್‌ಮೆಂಟ್‌ಗೆ ಬ್ರೇಕ್: ಸದ್ಯದ ಇನ್ಫ್ಲುಯೆನ್ಸರ್ ಮಾರ್ಕೆಟಿಂಗ್‌ನಲ್ಲಿ ಕಂಡುಬರುವ ಬೋಟ್ಸ್ (Bots) ಹಾಗೂ ನಕಲಿ ಲೈಕ್ಸ್ ಹಾವಳಿಯನ್ನು ಈ ಎಐ ತಂತ್ರಜ್ಞಾನ ಸಂಪೂರ್ಣವಾಗಿ ತಡೆಗಟ್ಟುತ್ತದೆ.
  • ನೈಜ ಮೌಲ್ಯಮಾಪನ: ಕ್ರಿಯೇಟರ್ಸ್ ತಮ್ಮ ನಿಜವಾದ ಆಡಿಯನ್ಸ್ ಅಟೆನ್ಷನ್ ಅನ್ನು ಉದ್ಯಮಗಳಿಗೆ ಎಐ ಮೂಲಕ ಮೌಲ್ಯೀಕರಿಸಿ ಬಿಡ್ ಮಾಡಬಹುದು.
  • ಉದ್ಯಮಗಳಿಗೆ ಲಾಭ: ಬಿಸಿನೆಸ್‌ಗಳಿಗೆ ಕೇವಲ ಭ್ರಮೆಗಳಲ್ಲ, ಬದಲಿಗೆ ಅತ್ಯಂತ ವಿಶ್ವಾಸಾರ್ಹ ಮತ್ತು ವ್ಯಾಲಿಡ್ ಲೀಡ್ಸ್ (Valid Leads) ಲಭ್ಯವಾಗಲಿವೆ.
  • link: https://selfybook.ai

​ಯಾವುದೇ ಒಂದು ತಾಂತ್ರಿಕ ಸ್ಟಾರ್ಟ್‌ಅಪ್ ಮಾರುಕಟ್ಟೆಗೆ ಬರುವ ಮೊದಲೇ ಅದರ ಸಾಮರ್ಥ್ಯವನ್ನು ಅಳೆಯಲಾಗುತ್ತದೆ. Selfybook.ai ಪ್ರಸ್ತುತ ಕೇವಲ ಎಂವಿಪಿ (Minimum Viable Product) ಅಂದರೆ ಆರಂಭಿಕ ಮಾದರಿಯ ಹಂತದಲ್ಲಿದ್ದರೂ ಸಹ, ಈಗಾಗಲೇ ಮಾರುಕಟ್ಟೆಯಲ್ಲಿ ಭರ್ಜರಿ ₹5 ಕೋಟಿ ರೂಪಾಯಿಗಳ ವ್ಯಾಲ್ಯುವೇಷನ್ (ಮೌಲ್ಯಮಾಪನ) ಪಡೆದುಕೊಂಡಿದೆ! ಇದು ನಂಜೇಶ್ ಬೆಣ್ಣೂರು ಅವರ ದೀರ್ಘದರ್ಶಿತ್ವ ಹಾಗೂ ಅವರ ತಂಡದ ತಾಂತ್ರಿಕ ನೈಪುಣ್ಯತೆಗೆ ಸಿಕ್ಕ ಬಹುದೊಡ್ಡ ಮನ್ನಣೆಯಾಗಿದೆ.

​ಕೇಂದ್ರ ಸರ್ಕಾರದ ನಿಯಮಾವಳಿಗಳ ಅನ್ವಯ ಇದನ್ನು ಅತ್ಯುನ್ನತ “ಡೀಪ್‌ಟೆಕ್ ಸ್ಟಾರ್ಟ್‌ಅಪ್” (DeepTech Startup) ಎಂದು ಗುರುತಿಸಲಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಆಡಿಯನ್ಸ್ ಅನಾಲಿಟಿಕ್ಸ್, ಡಿಜಿಟಲ್ ಎಂಗೇಜ್‌ಮೆಂಟ್ ಇಂಟೆಲಿಜೆನ್ಸ್ ಹಾಗೂ ಇನ್ಫ್ಲುಯೆನ್ಸರ್ ಎಕಾನಮಿಗಳ ಸಮನ್ವಯದೊಂದಿಗೆ ಈ ಆಪ್ ಸಿದ್ಧಗೊಂಡಿದ್ದು, ಭಾರತೀಯ ಮಾತ್ರವಲ್ಲದೆ ಜಾಗತಿಕ ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸುವುದು ನಿಶ್ಚಿತವಾಗಿದೆ.

ಕಂಟೆಂಟ್ ಕ್ರಿಯೇಟರ್ಸ್ ಹಾಗೂ ಇನ್ಫ್ಲುಯೆನ್ಸರ್ ಎಕಾನಮಿ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿಸಲು ಹೊರಟಿರುವ Selfybook.ai ಮತ್ತು ಅದರ ಸೃಷ್ಟಿಕರ್ತ ನಂಜೇಶ್ ಬೆಣ್ಣೂರು ಹಾಗೂ ತಂಡಕ್ಕೆ ಜಾಗತಿಕ ಮಟ್ಟದಲ್ಲಿ ಜಯ ಸಿಗಲಿ, ಜಗತ್ತಿನಾದ್ಯಂತ ಈ ಕನ್ನಡಿಗರ ಆಪ್ ಧೂಳೆಬ್ಬಿಸಲಿ ಎಂಬುದು ನಮ್ಮ ಆಶಯ.

Kannada Innovator’s “Selfybook.ai” Makes Global Launch in Germany: A New Digital Revolution Begins

Europe: In today’s era of Artificial Intelligence (AI) and digital transformation, India is steadily carving its name in gold on the global technology map. Adding another proud chapter to this journey, Selfybook.ai, an Indian DeepTech startup developed by talented AI innovator and entrepreneur Nanjesh Bennur from Chikkamagaluru, Karnataka, along with his skilled technical team, has now been successfully launched on German soil.

This Indian AI-powered social technology platform is already creating significant buzz in the global tech ecosystem and is being viewed as a potential game-changer in the evolution of social media platforms.

The application was officially introduced to the world during the grand stage of the Second Basava Jayanti Convention, organized by Basava Samiti Europe at the prestigious Gemeindezentrum Frauenaurach auditorium in Erlangen, Germany. The launch event witnessed the presence of hundreds of Kannadigas, technologists, entrepreneurs, and distinguished guests from across Europe.

The app was formally unveiled by Ajit Vinayak Gupte, Ambassador of India to Germany, who praised the innovation and technological capabilities emerging from India. The event was blessed by Sri Dr. Basava Marulasiddha Swamiji, Peethadhipati of Basavatva Peetha.

Renowned Indologist Prof. Dr. Robert J. Zydenbos, VHP Europe representative Rahul Narayan Ji, and Rohan Bhargavapuri, President of Isiri Foundation and Isiri Today from Chikkamagaluru, were among the distinguished guests who appreciated this remarkable global achievement by Kannadigas.

Creating a globally relevant AI platform from a city like Chikkamagaluru and launching it in a technologically advanced country like Germany, in the presence of Indian diplomats and international dignitaries, is no ordinary feat.

Speaking at the event, Isiri Foundation President Rohan Bhargavapuri stated:

“It is a matter of immense pride for every Kannadiga that technology born in Karnataka is now being recognized on a global stage. The achievement of Nanjesh Bennur and his team will inspire the younger generation.”

In today’s social media-driven world, millions of people spend countless hours sharing selfies, photos, and videos on platforms like Facebook and Instagram. However, the “likes,” “views,” and “followers” often remain just numbers without generating meaningful value for creators.

To bridge this gap, Selfybook Application Pvt Ltd has introduced Selfybook.ai, an AI-powered next-generation social technology platform designed to transform digital influence into measurable value.

Rather than functioning as just another social media app, the platform enables users to create, share, and monetize their digital presence in a more authentic and intelligent ecosystem.

At the heart of Selfybook.ai lies the innovative AVAE (AI Validated Audience Exchange) technology conceptualized by founder Nanjesh Bennur and his technical team.

This proprietary AI-driven system aims to redefine the relationship between influencers, content creators, and businesses.

  • Eliminating Fake Engagement:
    The platform uses AI to identify and prevent bots, fake likes, and artificial engagement that currently plague influencer marketing ecosystems.
  • Authentic Audience Validation:
    Creators can showcase and monetize genuine audience attention and engagement through AI-powered validation systems.
  • Reliable Leads for Businesses:
    Businesses gain access to trusted and verified audience insights instead of inflated or manipulated engagement metrics.
  • https://selfybook.ai

Despite currently being at the MVP (Minimum Viable Product) stage, Selfybook.ai has already secured an impressive market valuation of approximately ₹5 crore, highlighting the confidence investors and industry observers have in the startup’s future potential.

The startup has reportedly been recognized under the category of a DeepTech Startup, aligning with emerging innovation frameworks focused on Artificial Intelligence, audience analytics, digital engagement intelligence, and influencer economy technologies.

With its unique integration of AI-powered audience systems and creator-focused monetization strategies, Selfybook.ai is positioning itself as a disruptive force not only in India’s digital ecosystem but also in the broader global creator economy.

As the world increasingly moves toward creator-driven digital ecosystems, platforms like Selfybook.ai could potentially redefine how digital influence is measured, trusted, and monetized.

The success of Nanjesh Bennur and his team stands as an inspiring example of how innovation emerging from regional India can make a meaningful impact on the global technology stage.

The launch of Selfybook.ai in Germany marks not just the introduction of a new application, but the beginning of a larger vision — one that aims to reshape the future of social engagement, creator value, and AI-driven digital trust worldwide.

K.M.Sathish Gowda

Join WhatsApp

Join Now

Facebook

Join Now

Leave a Comment