ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಹೀರೆಕಾಯಿಯ ಒಂದರ ಮೇಲೊಂದು ಪ್ರಯೋಜನಗಳು, ಕೇಳಿದ್ರೆ ಅಚ್ಚರಿಪಡುವಿರಿ!

On: July 30, 2025 8:42 PM
Follow Us:

ಹೀರೆಕಾಯಿ ನೋಡಲು ಅಷ್ಟೇನೂ ಚೆನ್ನಾಗಿ ಕಾಣದಿದ್ದರೂ ಸಹ ಅದರ ಆರೋಗ್ಯ ಪ್ರಯೋಜನಗಳು ಮಾತ್ರ ಅಪಾರ.

ನೋಡಲು ಸ್ವಲ್ಪ ಮೇಲ್ಭಾಗದಲ್ಲಿ ಮೆತ್ತನೆಯ ಮುಳ್ಳಿನ ಆಕಾರವಿದ್ದರೂ ಕೂಡ, ಹೀರೆಕಾಯಿಯ ಒಳ ಭಾಗ ಬೇಯಿಸಿ ತಿನ್ನುವುದರಲ್ಲಿ ತುಂಬಾ ಒಳ್ಳೆಯ ರುಚಿ ಕೊಡುತ್ತದೆ. ಹೀರೆಕಾಯಿಯ ಆರೋಗ್ಯ ಪ್ರಯೋಜನಗಳು ಕೂಡ ಇತರ ತರಕಾರಿಗಳಿಗೆ ಸರಿಸಾಟಿಯಾಗಿ ನಮ್ಮ ಆರೋಗ್ಯವನ್ನು ಕಾಪಾಡಬಲ್ಲ ಶಕ್ತಿ ಪಡೆದಿವೆ.

ಹೀರೆಕಾಯಿಯಲ್ಲಿ ವಿಟಮಿನ್ ‘ ಎ ‘ ಅಂಶ ಗಣನೀಯ ಪ್ರಮಾಣದಲ್ಲಿ ಹೇರಳವಾಗಿದ್ದು, ಕಣ್ಣಿನ ದೃಷ್ಟಿಗೆ ತುಂಬಾ ಸಹಕಾರಿಯಾಗಿ ಇದೆಯೆಂದು ಸ್ವತಃ ಕಣ್ಣಿನ ತಜ್ಞರೇ ಹೇಳುತ್ತಾರೆ.

ಮುಖ್ಯವಾಗಿ ವಯಸ್ಸಾದವರಲ್ಲಿ ಎದುರಾಗುವ ಕಣ್ಣಿನ ಪೊರೆ ಸಮಸ್ಯೆಯನ್ನು ಹೀರೆಕಾಯಿಯಲ್ಲಿರುವ ಬೀಟಾ – ಕ್ಯಾರೋಟಿನ್ ಎಂಬ ವಿಟಮಿನ್ ‘ ಎ ‘ ಅಂಶದ ರೂಪ ಸರಿ ಪಡಿಸುತ್ತದೆ. ಇದರ ಜೊತೆಗೆ ಕಣ್ಣಿನ ಹಲವು ಸಮಸ್ಯೆಗಳನ್ನು ಹೀರೆಕಾಯಿ ಯಲ್ಲಿರುವ ಔಷಧೀಯ ಪರಿಣಾಮಗಳು ಸರಿ ಮಾಡುತ್ತವೆ.

ಹೀರೆಕಾಯಿ ಒಂದು ಆಂಟಿ – ಆಕ್ಸಿಡೆಂಟ್ ಕೂಡ ಆಗಿದ್ದು, ಇದರಲ್ಲಿರುವ ಬೀಟಾ – ಕ್ಯಾರೋಟಿನ್ ಅಂಶ ಕಣ್ಣಿನ ನರಗಳನ್ನು ಮತ್ತು ಕಣ್ಣಿಗೆ ಸಂಪರ್ಕ ಮಾಡುವ ರಕ್ತ ನಾಳಗಳನ್ನು ಯಾವುದೇ ವಿಷಕಾರಿ ಅಂಶಗಳಿಂದ ಪ್ರಭಾವಿತ ಆಗದಂತೆ ನೋಡಿಕೊಂಡು ಫ್ರೀ ರಾಡಿಕಲ್ ಗಳ ಹಾನಿಯಿಂದ ಕಣ್ಣುಗಳ ರಕ್ಷಣೆ ಮಾಡುತ್ತವೆ.

ಹೀರೆಕಾಯಿಯಲ್ಲಿ ಕಬ್ಬಿಣದ ಅಂಶ ಸಾಕಷ್ಟಿದೆ. ಹಾಗಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ನೀವು ಪ್ರತಿ ದಿನ ಸಾಂಬಾರ್ ಅಥವಾ ಸಾಗು ತಯಾರು ಮಾಡುವ ನೆಪದಲ್ಲಿ ಬಳಸಬಹುದು. ನೀವು ಇಡೀ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ದೇಹದಲ್ಲಿನ ಕಬ್ಬಿಣದ ಅಂಶದ ಕೊರತೆಯನ್ನು ನೀಗಿಸುತ್ತದೆ.

ಅದು ಅಲ್ಲದೆ ಹೀರೆಕಾಯಿಯಲ್ಲಿ ವಿಟಮಿನ್ ‘ ಬಿ6 ‘ ಅಂಶ ಹೆಚ್ಚಾಗಿದ್ದು, ಇದು ದೇಹದಲ್ಲಿ ಕಂಡು ಬರುವ ಕೆಂಪು ರಕ್ತ ಕಣಗಳ ಆರೋಗ್ಯವನ್ನು ಕಾಪಾಡುತ್ತದೆ. ಇಡೀ ದೇಹದ ಎಲ್ಲಾ ಅಂಗಾಂಗಗಳಿಗೆ ಸರಿಯಾಗಿ ರಕ್ತ ಸಂಚಾರ ನಿಯಂತ್ರಣ ಮಾಡುವುದರಿಂದ ಹಿಡಿದು ದೇಹದ ಯಾವುದೇ ಬಗೆಯ ನೋವು ಮತ್ತು ಆಯಾಸವನ್ನು ದೂರ ಮಾಡುತ್ತದೆ.

ಆಹಾರದ ಮೂಲಕ ಸೇರುವ ಪ್ರೊಟೀನ್, ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಅಂಶಗಳನ್ನು ಸರಿಯಾಗಿ ಜೀರ್ಣ ಮಾಡಿ ವಿಪರೀತ ಕೊಬ್ಬಿನ ಅಂಶಗಳು ನಿಮ್ಮ ದೇಹದಲ್ಲಿ ಸೇರ್ಪಡೆ ಆಗುವುದನ್ನು ತಪ್ಪಿಸಿ ನಿಮ್ಮ ಸೊಂಟದ ಸುತ್ತ ಮುತ್ತ ಅಡಗಿರುವ ಬೊಜ್ಜಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಕೆಲವು ಆಹಾರ ತಜ್ಞರು ಹೇಳುವ ಹಾಗೆ ಮಧ್ಯಾಹ್ನದ ಸಮಯದಲ್ಲಿ ಊಟ ಮಾಡಿದ ನಂತರ ಒಂದು ಗ್ಲಾಸ್ ಹೀರೆಕಾಯಿ ಜ್ಯೂಸ್ ಗೆ ಸ್ವಲ್ಪ ಜೇನು ತುಪ್ಪ ಮಿಶ್ರಣ ಮಾಡಿ ಕುಡಿಯುವುದರಿಂದ ಮಲಬದ್ಧತೆಯ ಸಮಸ್ಯೆ ದೂರವಾಗಿ ದೇಹದಲ್ಲಿ ಕರುಳಿನ ಚಲನೆ ಉತ್ತಮಗೊಂಡು ಅಜೀರ್ಣತೆಯ ಸಮಸ್ಯೆ ಇಲ್ಲವಾಗುತ್ತದೆ.

K.M.Sathish Gowda

Join WhatsApp

Join Now

Facebook

Join Now

Read more

ಅಂತರರಾಷ್ಟ್ರೀಯ ಯೋಗ ದಿನಾಚರಣೆ: ಯೋಗ, ಪ್ರಾಣಾಯಾಮ ಮತ್ತು ಧ್ಯಾನದಿಂದ ಆರೋಗ್ಯಕರ, ಒತ್ತಡಮುಕ್ತ ಜೀವನ ಸಾಧ್ಯ: ಎಸ್. ರುದ್ರೇಗೌಡ

ಒತ್ತಡದ ಬದುಕಿಗೆ ಯೋಗವೇ ಸಂಜೀವಿನಿ; ಆರೋಗ್ಯವೇ ಅಮೂಲ್ಯ ಆಸ್ತಿ: ಸಿ.ಎಸ್. ಷಡಾಕ್ಷರಿ

ಹುಬ್ಬಳ್ಳಿಯಲ್ಲಿ ಉಚಿತ ಆಯುರ್ವೇದ ಔಷಧ ವಿತರಣೆ:“ಕೋಟಿ ಹಣ ಕೊಟ್ಟರೂ ಕಳೆದುಹೋದ ಆರೋಗ್ಯವನ್ನು ಮರಳಿ ಪಡೆಯಲು ಸಾಧ್ಯವಿಲ್ಲ” – ಶ್ರೀ ರಂಭಾಪುರಿ ಜಗದ್ಗುರುಗಳು

​ಫ್ರೆಂಡ್ಸ್ ಸೆಂಟರ್ ವತಿಯಿಂದ ಸೌಹಾರ್ದಯುತ ‘ಕುಟುಂಬ ಮಿಲನ’ ಸಂಭ್ರಮ: “ಒಂದೆಡೆ ಸೇರುವುದರಿಂದ ಬಾಂಧವ್ಯ ಹಾಗೂ ಆರೋಗ್ಯ ವೃದ್ಧಿ”; ಅಧ್ಯಕ್ಷ ಬಿ.ಜಿ. ಧನರಾಜ್‌

ಭಾರತದಲ್ಲಿ ಕೇವಲ ಶೇ.17 ಜನರಿಗಷ್ಟೇ ಬಿಪಿ ತಪಾಸಣೆಯ ಕಾಳಜಿ: ಹೆಚ್ಚುತ್ತಿರುವ ಒತ್ತಡದ ಬದುಕಿಗೆ ‘AI’ ಸಂಜೀವಿನಿ — ಡಾ. ಬಾಲು

“ಕಾಯಕವೇ ಭಾಗ್ಯ: ಗ್ರಹಗಳಿಗಿಂತ ಪರಿಶ್ರಮವೇ ಮುಖ್ಯ; ಶನಿ ಕಾಟವಲ್ಲ, ಪ್ರಯತ್ನದ ಕೊರತೆಯೇ ವಿಫಲತೆಗೆ ಕಾರಣ”

Leave a Comment