ಚಿತ್ರದುರ್ಗದಲ್ಲಿ ಎರಡು ಬಸ್ಗಳ ನಡುವೆ ಆಟೋ ಸಿಲುಕಿ ಅಪ್ಪಚ್ಚಿಯಾಗಿದ್ದು, ಈ ಪರಿಣಾಮವಾಗಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಚಿತ್ರದುರ್ಗದ ಬಸ್ ನಿಲ್ದಾಣದ ಸಮೀಪ ನಡೆದಿದೆ. ಹಿಂಭಾಗದಿಂದ ಬಂದ ಬಸ್ಸೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಮುಂಭಾಗದ ಬಸ್‌ಗೆ ಹೋಗಿ ಗುದ್ದಿದೆ. ಈ ವೇಳೆ ಈ ಎರಡು ಬಸ್ಗಳ ನಡುವೆ ಸಿಲುಕಿಕೊಂಡ ಆಟೋ ಅಪ್ಪಚ್ಚಿಯಾಗಿದ್ದು, ಈ ಭೀಕರ ಅಪಘಾತದ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಅಪಘಾತದ ವಿಡಿಯೋ ವೈರಲ್ ಆಗುತ್ತಿದೆ.
ಚಿತ್ರದುರ್ಗದಲ್ಲಿ ಎರಡು ಬಸ್ಗಳ ನಡುವೆ ಸಿಲುಕಿ ಆಟೋ ಅಪ್ಪಚ್ಚಿ – ಭಯಾನಕ ಅಪಘಾತದ ವೀಡಿಯೊ ನೋಡಿ”
On: August 5, 2025 6:15 PM











