ಕಾನೂನು ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸುವ ಕಾನ್‌ಸ್ಟೆಬಲ್‌ಗಳ ಗೋಳು ಕೇಳುವವರಿಲ್ಲದಂತಾಗಿದೆ. ಪತಿ-ಪತ್ನಿ ಪ್ರಕರಣ ಹಾಗೂ ಪರಸ್ಪರ ವರ್ಗಾವಣೆ ವಿಚಾರವಾಗಿ ಕಾನ್‌ಸ್ಟೆಬಲ್‌ಗಳ ಮನವಿಗೆ ಕಿವಿಗೊಡದ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ಮುಂದುವರಿದಿದೆ.
ದಯಾಮರಣ ಕೋರಿ ಪತ್ರ: ದಯಾಮರಣ ನೀಡುವಂತೆ ಕೋರಿ ಹಲವು ಕಾನ್‌ಸ್ಟೆಬಲ್ ಗಳು ವರ್ಗಾವಣೆ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಮಾನ್ಯ ರಾಷ್ಟ್ರಪತಿಗಳಿಗೆ, ಮಾನ್ಯ ರಾಜ್ಯಪಾಲರು ಕರ್ನಾಟಕ ರಾಜ್ಯ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

8 ವರ್ಷ ಸೇವೆ ಪೂರೈಸಿರುವವರನ್ನು ಅಂತರ ಜಿಲ್ಲಾ ವರ್ಗಾವಣೆ ಮಾಡುವುದಾಗಿ ಪೊಲೀಸ್ ಇಲಾಖೆ ಮಾರ್ಗಸೂಚಿ ಪ್ರಕಟಿಸಿತ್ತು. 07 ಮತ್ತು 08 ವರ್ಷಗಳ ಹೆಚ್ಚು ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸಿದರು ಸಹ ನಮ್ಮ ವರ್ಗಾವಣೆ ಮಾಡುತ್ತಿಲ್ಲ. ಹಾಗೂ ಸರ್ಕಾರದ ಆದೇಶ ಮತ್ತು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡುತ್ತೀರುತ್ತಾರೆ.
ಸದರಿ 03 ತಿಂಗಳಿಗೆ ಒಮ್ಮೆ 100-150 ಜನ ಸಿಬ್ಬಂದಿಗಳ ವರ್ಗಾವಣೆಗೆ ಎನ್.ಓ.ಸಿ ಕರೆಯುತ್ತಾರೆ. ಅದರಲ್ಲಿ ಬರಿ 10-20 ಜನ ಸಿಬ್ಬಂದಿಯರು ಮಾತ್ರ ವರ್ಗಾವಣೆ ಹೊಂದುತ್ತಾರೆ. ಅದರಲ್ಲಿ ಬರಿ ಕಡಿಮೆ ಜನ ಪತಿ ಪತ್ನಿ ಪ್ರಕರಣದ ಸಿಬ್ಬಂದಿಯವರಾಗಿರುತ್ತಾರೆ. ವರ್ಗಾವಣೆಗೆ ಅರ್ಹ ಇಲ್ಲದ ಸಿಬ್ಬಂದಿಯವ ಹೆಸರನ್ನು ಪದೇ ಪದೇ ಎನ್.ಓ.ಸಿಗೆ ಕರೆಯುತ್ತಾರೆ. ನಂತರ ಈ ಅರ್ಜಿಗಳನ್ನು ತಿರಸ್ಕರಿಸುತ್ತಾರೆ. ಈದೇ ರೀತಿಯಾಗಿ 3-4 ಬಾರಿ ಮಾಡಿ ನಮ್ಮ ವರ್ಗಾವಣೆ ಮಾಡಬಾರದೆಂದು ನಮ್ಮ ಇಲಾಖೆಯ ಉದ್ದೇಶವಾಗಿರುತ್ತದೆ.

ಪ್ರಸ್ತುತ ಡಿ.ಜಿ.&ಐ.ಜಿ.ಪಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತೀರುವ ಹಂಪಣ್ಣ ಎಂಬುವರು ಪತಿ-ಪತ್ನಿ ಪ್ರಕರಣದಲ್ಲಿ ವರ್ಗಾವಣೆ ಮಾಡದಂತೆ ಮೇಲಾಧೀಕಾರಿಗಳಿಗೆ ಪದೇ ಪದೇ ಹೋಗಿ ಹೇಳುತ್ತಾರೆ. ಪತಿ-ಪತ್ನಿ ಒಂದೇ ಜಿಲ್ಲೆಯಲ್ಲಿ ಕೆಲಸ ಮಾಡಲು 8 ವರ್ಷದಿಂದ ವರ್ಗಾವಣೆಗಾಗಿ ಕಾಯುತ್ತಿದ್ದವರಿಗೆ ಸರ್ಕಾರ ‘ಕೈ’ ಕೊಟ್ಟಿತ್ತು. ಪತಿ-ಪತ್ನಿ ಪ್ರಕರಣಗಳನ್ನು ಮೊದಲ ಆದ್ಯತೆಯಾಗಿ ಪರಿಗಣಿಸುವುದಾಗಿ ಹೇಳಿ ಇಲಾಖೆ ಸುಮ್ಮನಾಗಿರುವ ಬಗ್ಗೆ ಸಿಬ್ಬಂದಿ ಬೆಂಕಿಕಾರಿದ್ದಾರೆ.
ಗೃಹಸಚಿವರ ಪತ್ರಕ್ಕೂ ಬೆಲೆ ಇಲ್ಲ: ಪೊಲೀಸ್ ಇಲಾಖೆಯಲ್ಲಿ
ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಪೈಕಿ ಪತಿ-ಪತ್ನಿ ಪ್ರಕರಣದಲ್ಲಿ 7 ವರ್ಷ ಸೇವೆ ಪೂರೈಸಿದ ಸಿಬ್ಬಂದಿಗೆ ವರ್ಗಾವಣೆಯಲ್ಲಿ ಮೊದಲ ಆದ್ಯತೆ ನೀಡುವಂತೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. 2017ನೇ ಸಾಲಿನಲ್ಲಿ ನೇಮಕಾತಿ ಹೊಂದಿದ ಕಾನ್‌ಸ್ಟೆಬಲ್‌ಗಳಲ್ಲಿ ಪತಿ-ಪತ್ನಿ ಪ್ರಕರಣದಲ್ಲಿ 7 ವರ್ಷ ಪೂರೈಸಿದವರನ್ನು ವರ್ಗಾವಣೆಗೊಳಿಸುವಂತೆ ಗೃಹಸಚಿವ ಡಾ.ಜಿ.ಪರಮೇಶ್ವರ ಹಲವು ಬಾರಿ ಆಡಳಿತ ವಿಭಾಗದ ಎಡಿಜಿಪಿ ಅವರಿಗೆ ಲಿಖಿತ ಪತ್ರ ಕಳುಹಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ದಂಪತಿ ಹೇಳುವುದೇನು?
- ಪತಿ ಒಂದು ಜಿಲ್ಲೆಯಲ್ಲಿ, ಪತ್ನಿ ಇನ್ನೊಂದು ಜಿಲ್ಲೆಯಲ್ಲಿ ಕೆಲಸ. ಅನೇಕ ಪೊಲೀಸರಿಗೆ ಮಕ್ಕಳೇ ಆಗಿಲ್ಲ.
- ಪೊಲೀಸ್ ಇಲಾಖೆಯ ಪತಿ ಪತ್ನಿ ಪ್ರಕರಣದಲ್ಲಿ ಕರ್ತವ್ಯ ನಿರ್ವಹಿಸುತ್ತೀರುವ ಕುಟುಂಬದವರಿಗೆ ಏನಾದರು ಅನಾಹುತಗಳಾದರೆ ನಮ್ಮ ಇಲಾಖೆಯ ಡಿ.ಜಿಪಿಐ.ಜಿ, ಎ.ಡಿ.ಜಿ.ಪಿ ಆಡಳಿತ ಹಾಗು ಎ.ಓ ಹಂಪಣ್ಣನೆ ಕಾರಣ ಆದ್ದರಿಂದ ಆದಷ್ಟು ಬೇಗನೆ ನಮ್ಮ ವರ್ಗಾವಣೆಯನ್ನು ಮಾಡಿಕೊಂಡಬೇಕು.
- ಪತಿ-ಪತ್ನಿ ದೂರವಾಗಿರುವುದರಿಂದ ಒತ್ತಡದಲ್ಲಿ ಕೆಲಸ, ದಿನೇದಿನೆ ಕೌಟಂಬಿಕ ಕಲಹ ಜಾಸ್ತಿ.
- ಪತಿ-ಪತ್ನಿ ಒಂದೇ ಕಡೆ ಕರ್ತವ್ಯ ನಿರ್ವಹಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶಕ್ಕೂ ಮಾನ್ಯತೆ ಇಲ್ಲ.
- ಷರತ್ತಿನ ಅನ್ವಯ ಸೇವಾ ಜೇಷ್ಠತೆ ಬಿಟ್ಟುಕೊಟ್ಟರೂ ವರ್ಗಾವಣೆಗೆ ಪರಿಗಣಿಸುತ್ತಿಲ್ಲ.

- ಪೊಲೀಸ್ ಇಲಾಖೆಯ ಪತಿ ಪತ್ನಿ ಪ್ರಕರಣದಲ್ಲಿ ಕರ್ತವ್ಯ ನಿರ್ವಹಿಸುತ್ತೀರುವ ಕುಟುಂಬದವರಿಗೆ ಏನಾದರು ಅನಾಹುತಗಳಾದರೆ ನಮ್ಮ ಇಲಾಖೆಯ ಡಿ.ಜಿಪಿಐ.ಜಿ, ಎ.ಡಿ.ಜಿ.ಪಿ ಆಡಳಿತ ಹಾಗು ಎ.ಓ ಹಂಪಣ್ಣನೆ ಕಾರಣ ಆದ್ದರಿಂದ ಆದಷ್ಟು ಬೇಗನೆ ನಮ್ಮ ವರ್ಗಾವಣೆಯನ್ನು ಮಾಡಿಕೊಂಡಬೇಕು.
- ರಾಜ್ಯದ ಹಲವು ಮಂತ್ರಿಗಳು ಹಾಗೂ ಶಾಸಕರು ಸಹ ಪಿ.ಡಿ ಕಚೇರಿಗೆ ದೂರವಾಣಿ ಮೂಲಕ ಕರೆ ಮಾಡಿ ಪತಿ-ಪತ್ನಿ ಪ್ರಕರಣದಲ್ಲಿ ವರ್ಗಾವಣೆ ಮಾಡುವಂತೆ ಹೇಳುತ್ತಾರೆ. ಅದಕ್ಕೆ ನಾವು ಮೊದಲ ಆದ್ಯತೆಯನ್ನು ಪತಿ-ಪತ್ನಿ ಪ್ರಕರಣಕ್ಕೆ ಕೊಟ್ಟಿರುತ್ತೇವೆಂದು ಹೇಳಿತ್ತಾರೆ. ಆದರೆ ಯಾವುದೇ ವರ್ಗಾವಣೆಯನ್ನು ಮಾಡುವುದಿಲ್ಲ.
- ವರ್ಗಾವಣೆ ಮಾಡದಿದ್ದರೆ ಸಾಮೂಹಿಕ ದಯಾಮರಣ ಕೊಡಿ ಅಥವಾ ವಿಚ್ಚೇದನ ಕೊಡಿಸಿ.

ಸಿಬ್ಬಂದಿ ಪರಸ್ಪರ ವರ್ಗಾವಣೆಯಿಂದ ಎರಡು ಜಿಲ್ಲೆಗಳಲ್ಲೂ ರಿಕ್ತ ಸ್ಥಾನದ ಸಮಸ್ಯೆ ಆಗಲ್ಲ. ಸ್ವಂತ ಖರ್ಚಿನಲ್ಲಿ ಪರಸ್ಪರ ವರ್ಗಾವಣೆಯಾಗುವುದರಿಂದ ಇಲಾಖೆಗೂ ಆರ್ಥಿಕ ನಷ್ಟವಿಲ್ಲ. ಸಿಬ್ಬಂದಿಗೆ ವಯಸ್ಸಾದ ತಂದೆ-ತಾಯಿ ಹಾಗೂ ಕುಟುಂಬ ವರ್ಗದವರಿದ್ದಾರೆ. ಅಂತಹವರನ್ನೂ ವರ್ಗಾವಣೆ ಮಾಡಲು ಇಲಾಖೆ ಹಿರಿಯ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.







