ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಡಿಕೆಶಿ ವಿವಾದ: “ಮಾತೃಭೂಮಿಗಿಂತ ಕಾಂಗ್ರೆಸ್ ದೊಡ್ಡದಲ್ಲ” – ಬಿ.ವೈ. ವಿಜಯೇಂದ್ರ ಟೀಕೆ

On: August 26, 2025 9:23 PM
Follow Us:

ಬೆಂಗಳೂರು: ವಿಧಾನಸಭೆಯಲ್ಲಿ “ನಮಸ್ತೇ ಸದಾ ವತ್ಸಲೇ ಮಾತೃಭೂಮಿ…” ಎಂಬ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾರ್ಥನಾ ಗೀತೆಯನ್ನು ಪಠಿಸಿದ್ದಕ್ಕಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ವಲಯದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಟೀಕೆ ಮಾಡಿದ್ದಾರೆ.

ಮಾತೃಭೂಮಿಗೆ ಕೃತಜ್ಞತೆ ಅರ್ಪಿಸುವ ಈ ಗೀತೆ ರಾಷ್ಟ್ರಭಕ್ತಿಯ ಬದ್ಧತೆಯ ಸಂಕೇತ. ಜನನಿ ಮತ್ತು ಜನ್ಮಭೂಮಿ ಮಹತ್ವವನ್ನು ಸಾರುವ ಈ ಗೀತೆ ಪಠಣವೇ ಕಾಂಗ್ರೆಸ್‌ಗೆ ಅಸಹನೆಯ ಕಾರಣವಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟಂತೆ, “ಆರ್‌ಎಸ್‌ಎಸ್‌ ಬಗ್ಗೆ ಕಾಂಗ್ರೆಸ್‌ಗೆ ಮೊದಲಿನಿಂದಲೂ ಅಸಹನೆ. ನೆಹರು ಕುಟುಂಬವನ್ನು ತೃಪ್ತಿಪಡಿಸುವುದರ ಹೊರತಾಗಿ ಅವರಿಗೆ ರಾಷ್ಟ್ರಪ್ರೇಮದ ಪಾಠವಿಲ್ಲ. ಮತಬ್ಯಾಂಕ್ ರಾಜಕೀಯ, ಭ್ರಷ್ಟಾಚಾರ ಮತ್ತು ವಿರೋಧಿ ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದೇ ಕಾಂಗ್ರೆಸ್ ನಿಜವಾದ ಪಠ್ಯಕ್ರಮ.”

ವಿಧಾನಸಭೆಯಲ್ಲಿ ಡಿಕೆಶಿ ಅವರು ಆರ್‌ಎಸ್‌ಎಸ್‌ ಗೀತೆಯನ್ನು ಪಠಿಸಿದ ಬಳಿಕ, ಕಾಂಗ್ರೆಸ್ ನಾಯಕರು ಅದನ್ನು ‘ಮಹಾಪರಾಧ’ವೆಂದು ಪರಿಗಣಿಸಿ, ಡಿಕೆಶಿ ಅವರನ್ನು ಕ್ಷಮಾಪಣೆ ಕೇಳುವಂತೆ ಒತ್ತಾಯಿಸಿರುವುದನ್ನು ವಿಜಯೇಂದ್ರ ಖಂಡಿಸಿದ್ದಾರೆ.

“ಬಂಡೆಯಂಥ ಡಿಕೆಶಿ ಅವರಿಗೇ ಈ ಗತಿ ಆಗಿದ್ದರೆ, ಕಾಂಗ್ರೆಸ್ ಪಕ್ಷದೊಳಗಿನ ಇತರ ದೇಶನಿಷ್ಠ ಕಾರ್ಯಕರ್ತರ ಸ್ಥಿತಿ ಹೇಗಿರಬಹುದು?” ಎಂಬ ಪ್ರಶ್ನೆಯನ್ನು ವಿಜಯೇಂದ್ರ ಎತ್ತಿದ್ದಾರೆ.

ಅವರು ಮತ್ತಷ್ಟು ಟೀಕಿಸಿ, “ತಾಯ್ನೆಲದ ಬದ್ಧತೆಯನ್ನು ತೋರುವುದು ಅಪರಾಧವಲ್ಲ, ಅದಕ್ಕಾಗಿ ಕ್ಷಮಾಪಣೆ ಕೇಳಿಸುವುದು ಕಾಂಗ್ರೆಸ್‌ನ ದಾಸ್ಯ ಮನೋಭಾವವನ್ನು ತೋರಿಸುತ್ತದೆ. ಡಿಕೆಶಿ ಅವರ ಕ್ಷಮೆ, ರಾಹುಲ್ ಗಾಂಧಿಯವರನ್ನು ತಣ್ಣಗಾಗಿಸಲು ಮಾಡಿದ ಬಲಿಯೇ ಹೊರತು ಸ್ವಾಭಿಮಾನವನ್ನು ಉಳಿಸುವ ಹೆಜ್ಜೆಯಲ್ಲ.” ಎಂದು ಕಿಡಿಕಾರಿದ್ದಾರೆ.

 “ಮಾತೃಭೂಮಿಗಿಂತ ಕಾಂಗ್ರೆಸ್ ದೊಡ್ಡದಲ್ಲ. ಡಿಕೆಶಿ ಅವರು ಇದನ್ನು ರಾಹುಲ್ ಗಾಂಧಿಗೆ ತಿಳಿಸಿ ಕನ್ನಡ ನೆಲದ ಘನತೆಯನ್ನು ಎತ್ತಿ ಹಿಡಿಯಬೇಕು.”

K.M.Sathish Gowda

Join WhatsApp

Join Now

Facebook

Join Now

Leave a Comment