ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸೊರಬ ತಾಲೂಕಿನ ಅತಿ ಎತ್ತರದ “ಕುಬಟೂರು ಮಹಾರಾಜ” ಗಣೇಶನಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪರಿಂದ ವಿಶೇಷ ಪೂಜೆ

On: September 1, 2025 3:01 PM
Follow Us:

ಗಣೇಶ ಚತುರ್ಥಿಯ ಸಂಭ್ರಮ ದೇಶಾದ್ಯಂತ ಕಳೆಗಟ್ಟಿದ್ದು, ಸೊರಬ ತಾಲೂಕಿನ ಕುಬಟೂರಿನಲ್ಲಿ ಭಕ್ತರ ಆಕರ್ಷಣೆಯ ಕೇಂದ್ರವಾಗಿರುವ 16 ಅಡಿ ಎತ್ತರದ ಗಣೇಶ ಮೂರ್ತಿ ಈ ಬಾರಿ ವಿಶೇಷ ಗಮನ ಸೆಳೆದಿದೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವರಾದ ಶ್ರೀ ಎಸ್. ಮಧು ಬಂಗಾರಪ್ಪ ಅವರು ತಮ್ಮ ಸ್ವಗ್ರಾಮ ಕುಬಟೂರಿನಲ್ಲಿ ಯುವಕ ಮಂಡಳಿಯವರು ಪ್ರತಿಷ್ಠಾಪಿಸಿರುವ ಈ ಅತೀ ಎತ್ತರದ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ರಾಜಧಾನಿ ಬೆಂಗಳೂರಿನಿಂದ ತರಿಸಲಾದ ಈ ಗಣೇಶ ಮೂರ್ತಿ ಸೊರಬ ತಾಲೂಕಿನಲ್ಲೇ ಅತಿ ಎತ್ತರದ ಮೂರ್ತಿಯಾಗಿದ್ದು, “ಕುಬಟೂರು ಮಹಾರಾಜ” ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ.

ಕಲಾತ್ಮಕವಾಗಿ ನಿರ್ಮಿಸಲಾದ ಮಂಟಪದಲ್ಲಿ, ಸಿಂಹಾಸನದ ಮೇಲೆ ರಾಜಗಾಂಭೀರ್ಯದಿಂದ ಅಲಂಕರಿಸಿರುವ ಗಣಪತಿಯನ್ನು ನೋಡಲು ಸುತ್ತಮುತ್ತಲಿನ ತಾಲೂಕು ಹಾಗೂ ಗ್ರಾಮಗಳಿಂದ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಎಲ್ಲ ಜಾತಿ, ಜನಾಂಗದ ಜನರು ಒಟ್ಟಾಗಿ ಸೇರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಸೆಪ್ಟೆಂಬರ್ 12 ರಂದು ಅನ್ನಸಂತರ್ಪಣಾ ಕಾರ್ಯಕ್ರಮ ಹಾಗೂ ಸೆಪ್ಟೆಂಬರ್ 13 ರಂದು ಸಾಂಸ್ಕೃತಿಕ ಮೆರವಣಿಗೆಗಳೊಂದಿಗೆ “ಕುಬಟೂರು ಮಹಾರಾಜ” ಗಣೇಶನ ವಿಸರ್ಜನೆ ನಡೆಯಲಿದೆ ಎಂದು ಗಣೇಶ ಮಂಡಳಿಯವರು ತಿಳಿಸಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Read more

ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರಿಗೆ ಮಂತ್ರಿಗಿರಿ ಏಕೆ?: ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ಆಕ್ರೋಶ

‘ನಮ್ಮ ಭೂಮಿ–ನಮ್ಮ ಹಕ್ಕು’ ಘೋಷಣೆಗೆ ಶಿವಮೊಗ್ಗ ಜೆಡಿಎಸ್ ಧ್ವನಿ: ಬಿಡದಿ ಪಾದಯಾತ್ರೆಗೆ ಕೆ.ಬಿ. ಪ್ರಸನ್ನ ಕುಮಾರ್ ಬೆಂಬಲ

ಕಾರ್ಪೊರೇಟ್‌ಗಳ ವಿರುದ್ಧ ರೈತರ ಆಕ್ರೋಶ; ರಸ್ತೆ ತಡೆಗೆ ಇಳಿದ ಹೆಚ್.ಆರ್. ಬಸವರಾಜಪ್ಪ ಸೇರಿ ಮುಖಂಡರ ಬಂಧನ

ಶಿವಮೊಗ್ಗದಲ್ಲಿ ‘ಹರ್ ಘರ್ ತಿರಂಗಾ’ ಸಂಭ್ರಮ: 30 ಸಾವಿರ ಮನೆಗಳಿಗೆ ರಾಷ್ಟ್ರಧ್ವಜ ವಿತರಣೆ, ಬೃಹತ್ ತಿರಂಗಾ ಯಾತ್ರೆಗೆ ಬಿಜೆಪಿ ಸಿದ್ಧತೆ

ದೇಶವಿರೋಧಿ ಕಾಂಗ್ರೆಸ್‌ನಿಂದ ದೇಶಾಭಿಮಾನ ಕಲಿಯುವ ಅಗತ್ಯವಿಲ್ಲ: ವಿಜಯೇಂದ್ರ

ಭದ್ರಾ ನೀರು ಹರಿಯಲಿ, ಚಿತ್ರದುರ್ಗದ ಬರ ಅಳಿಯಲಿ! ₹5,300 ಕೋಟಿ ಸಾಲದು, ₹6,200 ಕೋಟಿ ಕೊಡಿ: ಕೇಂದ್ರ ಸರ್ಕಾರಕ್ಕೆ ತರಳಬಾಳು ಶ್ರೀಗಳ ಆಗ್ರಹ

Leave a Comment