ಶಿವಮೊಗ್ಗ: ಹಿಂದೂ ಮಹಾಸಭಾ ವತಿಯಿಂದ ಆಯೋಜಿಸಲಾದ ಗಣಪತಿ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ನಗರದಾದ್ಯಂತ ಭಕ್ತಿಪೂರ್ಣ ವಾತಾವರಣ ಆವರಿಸಿತ್ತು. ಭೀಮೇಶ್ವರ ದೇವಸ್ಥಾನದಿಂದ ಭವ್ಯ ಮೆರವಣಿಗೆ ಪ್ರಾರಂಭವಾಗಿ, ವಿವಿಧ ಕಲಾ ವೃಂದಗಳು, ನೃತ್ಯ-ಸಂಗೀತ ಹಾಗೂ ಭಜನೆ ಮೇಳಗಳು ಜನರನ್ನು ಆಕರ್ಷಿಸಿತು. ಸಾವಿರಾರು ಭಕ್ತರು ಗಣಪತಿ ಬಪ್ಪನಿಗೆ ಜಯಘೋಷಗಳನ್ನು ಕೂಗುತ್ತಾ ಉತ್ಸಾಹದಿಂದ ಭಾಗವಹಿಸಿದರು.

ಈ ಸಂದರ್ಭದಲ್ಲಿ ಜೆ.ಪಿ.ಎನ್. ರಸ್ತೆಯಲ್ಲಿರುವ ಎಸ್.ಆರ್.ವಿ. ಎಂಟರ್ಪ್ರೈಸ್ ಮಾಲೀಕರಾದ ಗಿರೀಶ್ ಹಾಗೂ ಇವರ ಸ್ನೇಹಿತರ ಬಳಗದಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವಿತರಿಸಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದವರ ಸಾವಿರಾರು ಮಂದಿ ಭಕ್ತಾದಿಗಳು ಪ್ರಸಾದ ಸೇವಿಸಿದರು.

ಗಿರೀಶ್ ಹಾಗೂ ಅವರ ಬಳಗದವರು ಪ್ರತಿವರ್ಷವೂ ಧಾರ್ಮಿಕ ಸೇವಾಭಾವದಿಂದ ಅನ್ನಸಂತರ್ಪಣೆ ಮಾಡುತ್ತಿದ್ದು, ಈ ಬಾರಿ ಗಣಪತಿ ವಿಸರ್ಜನೆ ಮೆರವಣಿಗೆಯ ಭಕ್ತರಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತರಿಗೆ ಪ್ರಸಾದ ಜೊತೆಗೆ ನೀರು ಮತ್ತು ಅಗತ್ಯ ಸೌಲಭ್ಯಗಳನ್ನು ಕೂಡಾ ಒದಗಿಸಲಾಗಿತ್ತು.

ಸ್ಥಳದಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಮಾಡಿದ್ದು, ಎಲ್ಲೆಡೆ ಶಿಸ್ತಿನ ವಾತಾವರಣದಲ್ಲಿ ಕಾರ್ಯಕ್ರಮ ನಡೆಯಿತು.
ಸ್ಥಳೀಯರು ಹಾಗೂ ಭಕ್ತಾದಿಗಳು ಗಿರೀಶ್ ಮತ್ತು ಅವರ ತಂಡದ ಸೇವಾಭಾವವನ್ನು ಮೆಚ್ಚಿ, ಇಂತಹ ಸಮಾಜಮುಖಿ ಕಾರ್ಯಗಳು ಜನರಲ್ಲಿ ಏಕತೆ ಮತ್ತು ಭಕ್ತಿಭಾವವನ್ನು ಹೆಚ್ಚಿಸುತ್ತವೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಮಾಲತೇಶ್, ಭಾವನಿ ಮೋರೆ, ಗಿರೀಶ್, ಚಿದಾನಂದ, ಸಂತೋಷ್, ಮಂಜುನಾಥ್, ರವಿಕುಮಾರ್, ವಿಜಯಕುಮಾರ್ ಇತರರು ಇದ್ದರು.