ಶಿವಮೊಗ್ಗ, ಸೆಪ್ಟೆಂಬರ್ 08, 2025:
ಶಿವಮೊಗ್ಗ ತಾಲ್ಲೂಕಿನ ಹರಮಘಟ್ಟ ಗ್ರಾಮದ
ರೈತ ಸಂಘದ ಹಿರಿಯ ಮುಖಂಡರಾಗಿದ್ದ ದಿ. ಗಂಗಾಧರಪ್ಪನವರ ಪುತ್ರರಾದ ವಿರೂಪಾಕ್ಷಪ್ಪನವರು ಇಂದು ಲಿಂಗೈಕೆರಾಗಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿರುತ್ತಾರೆ.
ವಿರೂಪಾಕ್ಷಪ್ಪನವರು ತಮ್ಮ ತಂದೆಯ ಹಾದಿಯಲ್ಲೇ ರೈತ ಹೋರಾಟ, ಸಮಾಜ ಸೇವೆಯಲ್ಲಿ ತೊಡಗಿಕೊಂಡು ಜನಪ್ರಿಯತೆ ಗಳಿಸಿದ್ದರು. ರೈತರ ಹಕ್ಕು, ಭೂಮಿಯ ರಕ್ಷಣೆ, ಬೆಲೆ ಸ್ಥಿರತೆ ಸೇರಿದಂತೆ ಹಲವಾರು ಹೋರಾಟಗಳಲ್ಲಿ ಅವರು ಧೈರ್ಯದಿಂದ ಪಾಲ್ಗೊಂಡಿದ್ದರು.
ಅವರ ಅಗಲಿಕೆಯಿಂದ ಕುಟುಂಬ, ಬಂಧುಮಿತ್ರರು, ರೈತ ಸಮುದಾಯ ಹಾಗೂ ಹೋರಾಟಗಾರರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. “ಅವರು ಸರಳ ಬದುಕು, ಸ್ಪಷ್ಟ ಮಾತು, ನ್ಯಾಯದ ಹಾದಿಯಲ್ಲಿದ್ದ ಹೋರಾಟಗಾರರು. ಅವರ ಅಭಾವ ಭರ್ತಿಯಾಗದ ನಷ್ಟ” ಎಂದು ಸಹಪಾಠಿಗಳು ಮತ್ತು ಹೋರಾಟದ ಸಂಗಾತಿಗಳು ಕಣ್ಣೀರಿನಿಂದ ನೆನಪಿಸಿಕೊಂಡರು.

ಮೃತರ ಹಿಂದೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದಾರೆ.
“ಹೋರಾಟಗಾರನ ದಾರಿ ಮುಗಿದರೂ, ಹೋರಾಟದ ನೆನಪು ಶಾಶ್ವತ”
“ನ್ಯಾಯದ ಹಾದಿಯ ಹೋರಾಟಗಾರ, ಜನಮನದಲ್ಲಿ ಸದಾ ಜೀವಂತ”
ಅವರ ಜೀವನ, ರೈತರ ಹಕ್ಕಿಗಾಗಿ ಹೋರಾಡುವ ತಲೆಮಾರಿನವರಿಗೆ ಶಾಶ್ವತ ಪ್ರೇರಣೆ ಆಗಿ ಉಳಿಯಲಿದೆ.
ವಿರೂಪಾಕ್ಷಪ್ಪನವರ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರಾದ ಹರಮಘಟ್ಟ ಗ್ರಾಮದಲ್ಲಿ ನಡೆಯಲಿದೆ.