ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

“ಸಮಾಜಮುಖಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನಿಷ್ಠಾವಂತ ಯುವ ನಾಯಕ – ದೀಪಕ್ ಎಂ”

On: September 9, 2025 10:20 PM
Follow Us:

ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ತೊಡಗಿಸಿಕೊಂಡಿರುವ ರಾಜ್ಯ ಯುವ ಕಾರ್ಯದರ್ಶಿ ದೀಪಕ್ ಎಂ.

ಬೆಂಗಳೂರು: ಶಿವಮೊಗ್ಗ ಮೂಲದ ಯುವಕರ ಕಣ್ಮಣಿ, ಸಮಾಜಮುಖಿ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ದೀಪಕ್ ಎಂ, ತಮ್ಮ ನಿಷ್ಠೆ ಮತ್ತು ಶ್ರಮದಿಂದ ಜನಮನ ಗೆದ್ದಿದ್ದಾರೆ.

ದೀಪಕ್ ಎಂ ಅವರು 2024ರಿಂದ ನವದೆಹಲಿಯ HRACF (ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ)ಯ ರಾಜ್ಯ ಯುವ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈ ಹುದ್ದೆಯಲ್ಲಿ ಅವರು ವಿಶೇಷವಾಗಿ ಯುವಕರ ಹಕ್ಕುಗಳ ರಕ್ಷಣೆಯಲ್ಲಿಯೂ, ಸಾರ್ವಜನಿಕ ಹಿತಾಸಕ್ತಿಗಳ  ಹೋರಾಟದಲ್ಲಿಯೂ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ನಿಷ್ಠೆ, ಹೋರಾಟಶೀಲತೆ ಮತ್ತು ಸೇವಾಭಾವನೆಗಳಿಂದ ಅವರು ಇಂದು “ಯುವಕರ ನಾಯಕ” ಎಂಬ ಬಿರುದನ್ನು ಗಳಿಸಿದ್ದಾರೆ.

ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥ ಯುವಕರು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ವಸತಿ, ಆಹಾರ ಮತ್ತು ಮೂಲಭೂತ ಸೌಲಭ್ಯಗಳ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ, ಅವು ಪರಿಹಾರವಾಗುವ ತನಕ ಹೋರಾಟವನ್ನು ಧೈರ್ಯವಾಗಿ ನಡೆಸುವ  ದೀಪಕ್ ಎಂ ಅವರನ್ನು ವಿಭಿನ್ನ ನಾಯಕರನ್ನಾಗಿ ತೋರಿಸಿದೆ.

ಮಾನವ ಹಕ್ಕುಗಳ ರಕ್ಷಣೆಯ ಜೊತೆಗೆ, ಪರಿಸರ ಸಂರಕ್ಷಣೆ, ಶಿಕ್ಷಣದ ಉತ್ತೇಜನ, ಬಡ ವಿದ್ಯಾರ್ಥಿಗಳಿಗೆ ಸಹಾಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ಅವರು ಮುಂಚೂಣಿಯಲ್ಲಿ ಇದ್ದಾರೆ. “ಕೆಲಸದಲ್ಲಿ ಯಶಸ್ಸು ದೊರೆಯುವ ತನಕ ಹೋರಾಟವೇ ನನ್ನ ಮಂತ್ರ” ಎಂಬ ನಿಲುವಿನಿಂದ ಅವರು ನೂರಾರು ಯುವಕರಿಗೆ ಪ್ರೇರಣೆಯಾಗಿದ್ದಾರೆ.

ಯುವಕರ ಬೆಂಬಲ, ಜನರ ವಿಶ್ವಾಸ, ಹಾಗೂ ನಿಷ್ಠಾವಂತ ಹೋರಾಟದಿಂದ ದೀಪಕ್ ಎಂ ಇಂದು ಶಿವಮೊಗ್ಗ ಜಿಲ್ಲೆಗೆ ಮಾತ್ರವಲ್ಲದೆ ರಾಜ್ಯದ ಮಟ್ಟದಲ್ಲಿಯೂ ಜನಪ್ರಿಯ ಯುವ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಅವರ ಸಮರ್ಪಣೆ ಮತ್ತು ಸೇವಾಭಾವನೆಯಿಂದ ಪ್ರೇರೇಪಿತರಾಗಿ ಅನೇಕ ಯುವಕರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಯುವಕರ ಹಕ್ಕುಗಳ ರಕ್ಷಣೆ: ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥ ಯುವಕರು ತಮ್ಮ ಬದುಕಿನಲ್ಲಿ ಎದುರಿಸುವ ವಸತಿ, ಆಹಾರ, ಶಿಕ್ಷಣ ಹಾಗೂ ಉದ್ಯೋಗ ಸಂಬಂಧಿತ ಸಮಸ್ಯೆಗಳ ಪರಿಹಾರವನ್ನು ಒದಗಿಸುವುದು.

ಭ್ರಷ್ಟಾಚಾರ ವಿರೋಧಿ ಹೋರಾಟ : ಸಮಾಜದಲ್ಲಿ ಇರುವ ಭ್ರಷ್ಟಾಚಾರವನ್ನು ಬೇರುಸಹಿತ ತೆಗೆದುಹಾಕಿ, ಪಾರದರ್ಶಕ ಹಾಗೂ ನಿಷ್ಠಾವಂತ ಆಡಳಿತ ವ್ಯವಸ್ಥೆಯನ್ನು ನಿರ್ಮಿಸುವುದು.

ಮಾನವ ಹಕ್ಕುಗಳ ಕಾಪಾಡುವುದು: ಪ್ರತಿಯೊಬ್ಬರೂ ಮಾನವೀಯ ಗೌರವ, ಸಮಾನತೆ ಮತ್ತು ನ್ಯಾಯವನ್ನು ಅನುಭವಿಸುವಂತೆ ಹೋರಾಟ ನಡೆಸುವುದು.

ಸಮಾಜಮುಖಿ ಚಟುವಟಿಕೆಗಳಲ್ಲಿ ಮುಂಚೂಣಿ: ಪರಿಸರ ಸಂರಕ್ಷಣೆ, ಬಡ ವಿದ್ಯಾರ್ಥಿಗಳಿಗೆ ಸಹಾಯ, ಸಾಂಸ್ಕೃತಿಕ ಚಟುವಟಿಕೆಗಳ ಪ್ರೋತ್ಸಾಹ ಸೇರಿದಂತೆ ಹಲವು ಸೇವಾಭಾವಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದು.

ದೀಪಕ್ ರವರ ಮೇಲ್ಕಂಡ ಎಲ್ಲಾ ಉದ್ದೇಶಗಳೊಂದಿಗೆ, “ಯುವಕರ ಹಿತಾಸಕ್ತಿ, ಸಮಾಜಮುಖಿ ಕಾರ್ಯ ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟದ ಮಾರ್ಗದಲ್ಲಿ ಕೈಗೊಂಡ ಪ್ರತಿಯೊಂದು ಹೆಜ್ಜೆಯೂ ಜನಮನದಲ್ಲಿ ನಂಬಿಕೆ ಮೂಡಿಸಿದೆ. ಇಂದಿನ ಪೀಳಿಗೆಗೆ ದಾರಿದೀಪವಾಗಿ, ಮುಂದಿನ ಪೀಳಿಗೆಗೆ ಮಾದರಿಯಾಗಿ, ಅವರು ನಡೆಸುತ್ತಿರುವ ಹೋರಾಟ ಮತ್ತಷ್ಟು ಬಲ ಪಡೆದು ಸಮಾಜದಲ್ಲಿ ಶಾಶ್ವತ ಬದಲಾವಣೆ ತರುವಂತಾಗಲಿ, ಒಳ್ಳೆಯ ಹೋರಾಟ ಮುಂದುವರಿದು, ಯುವಕರ ಕನಸುಗಳು ನಿಜವಾಗಲಿ ಎಂಬುದು ಎಲ್ಲರ ಆಶಯ.

ಯುವಕರ ಹಕ್ಕುಗಳಿಗಾಗಿ ಸದಾ ಧ್ವನಿ ಎತ್ತಿ, ಸಮಾಜಮುಖಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು, ಮುಂದಿನ ದಿನಗಳಲ್ಲೂ ಇದೇ ನಿಷ್ಠೆ ಮತ್ತು ಶ್ರಮದಿಂದ ಸಮಾಜಕ್ಕೆ ಸೇವೆ ಸಲ್ಲಿಸಲಿ, ತನ್ನದೇ ಆದ ಪ್ರತ್ಯೇಕ ಗುರುತನ್ನು ನಿರ್ಮಿಸಿಕೊಂಡಿರುವ ದೀಪಕ್ ಎಂ ಅವರು ನಾಳೆ (ಸೆಪ್ಟೆಂಬರ್ 10) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

DETECTIVE NEWS24 ವತಿಯಿಂದ ದೀಪಕ್ ಎಂ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಜನಸೇವೆಗಾಗಿಯೇ ಕಳೆಯುವ ಯಶಸ್ವಿ ಬದುಕು ದೊರೆಯಲಿ ಎಂದು ಹಾರೈಸುತ್ತೇವೆ.

K.M.Sathish Gowda

Join WhatsApp

Join Now

Facebook

Join Now

Leave a Comment