ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

“ಸಿಎಂ ಆಗುವ ಆಸೆ ಇಲ್ಲ, ನಾನು ಕುರ್ಚಿ ರಾಜಕಾರಣ ಮಾಡೋದಿಲ್ಲ”: ಡಿಕೆ ಶಿವಕುಮಾರ್ ಸ್ಪಷ್ಟನೆ

On: October 11, 2025 4:14 PM
Follow Us:

ಬೆಂಗಳೂರು, ಅ. 11: ನಾನು ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಲೇ ಇಲ್ಲ. ನಾನು ಜನರ ನಡುವೆ ಇದ್ದಾಗ ಕೆಲವರು ‘ನೀವು ಸಿಎಂ ಆಗುವ ಸಮಯ ಹತ್ತಿರ ಇದೆಯಂತೆ’ಎಂದು ಮನವಿ ಮಾಡಿದರು. ನಾನು ಅದಕ್ಕೆ ಉತ್ತರಿಸದೇ ನಡೆದೆ. ಜನರಲ್ಲಿ ಕೆಲವರು ಕೇಳಿದ ಮಾತನ್ನು ಕೆಲ ಮಾಧ್ಯಮಗಳು ತಿರುಚಿ ಪ್ರಸಾರ ಮಾಡುತ್ತಿರುವುದು ನೋವು ತಂದಿದೆ, ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಶನಿವಾರ ಲಾಲ್ ಬಾಗ್ ಉದ್ಯಾನದಲ್ಲಿ ನಡೆದ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ನಂತರ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದರು.

ಜನರ ಸೇವೆ ಮಾಡಲು ಬಂದಿದ್ದೇನೆ, ಕುರ್ಚಿಗಾಗಿ ಅಲ್ಲ

ನಾನು ಸಿಎಂ ಹುದ್ದೆಗೆ ಆತುರಪಡುತ್ತಿದ್ದೇನೆ ಎಂಬಂತೆ ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ನಾನು ಇಲ್ಲಿಗೆ ಬಂದಿರುವುದು ಸಾರ್ವಜನಿಕರ ಸೇವೆ ಮಾಡಲು, ರಾಜಕಾರಣ ಮಾಡಲು ಅಲ್ಲ. ನಾನು ಸಿಎಂ ಆಗುವ ಸಮಯ ಹತ್ತಿರ ಬಂದಿದೆ ಎಂದು ನಾನು ಹೇಳಿದ್ದೇ ಇಲ್ಲ. ಯಾರೋ ಸಾರ್ವಜನಿಕರು ಕೇಳಿದ ಪ್ರಶ್ನೆಗೆ ನಾನು ಪ್ರತಿಕ್ರಿಯಿಸದೆ ಮುಂದೆ ನಡೆದೆ, ಎಂದರು.

ಇನ್ನಷ್ಟು ಸ್ಪಷ್ಟಪಡಿಸುತ್ತಾ ,ನನಗೆ ನನ್ನ ಗುರಿ ಗೊತ್ತಿದೆ. ಭಗವಂತ ಯಾವಾಗ ಅವಕಾಶ ಕೊಡುತ್ತಾನೊ ಆಗ ನೋಡಿಕೊಳ್ಳುತ್ತೇನೆ. ಆದರೆ ನಿರಂತರವಾಗಿ ಸುಳ್ಳು ಸುದ್ದಿ ಹರಡಿಸಿದರೆ ಮಾನಹಾನಿ ಮೊಕದ್ದಮೆ ಹಾಕುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.

ಬೆಂಗಳೂರಿನ ಸಮಸ್ಯೆಗಳನ್ನು ತಿಳಿಯಲು ‘ಉದ್ಯಾನ ನಡಿಗೆ’

ಪಾಲಿಕೆವಾರು ಉದ್ಯಾನಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಇದೇ ಶನಿವಾರ ಲಾಲ್ ಬಾಗ್ ನಲ್ಲಿ ಹಾಗೂ ಭಾನುವಾರ ಜೆ.ಪಿ. ಪಾರ್ಕ್ ನಲ್ಲಿ ಈ ನಡಿಗೆ ಕಾರ್ಯಕ್ರಮ ಇಟ್ಟುಕೊಂಡಿದ್ದೇನೆ. ಇದೇ ರೀತಿ ಮೊದಲ ಹಂತದಲ್ಲಿ 10 ದಿನ 10 ಉದ್ಯಾನಗಳಲ್ಲಿ ಈ ಕಾರ್ಯಕ್ರಮ ಮಾಡಲಿದ್ದೇನೆ. ಸಾರ್ವಜನಿಕರ ಅಭಿಪ್ರಾಯ, ಸಲಹೆ ಪಡೆದು ಅಗತ್ಯ ಬದಲಾವಣೆ ತಿದ್ದುಪಡಿ ಮಾಡಿಕೊಳ್ಳಲು ಈ ಕಾರ್ಯಕ್ರಮ. ನಡಿಗೆಯ ಅವಧಿ ಒಂದು ಗಂಟೆಯಿರುತ್ತದೆ. ಈ ವೇಳೆ ಜನ ಸಾಮಾನ್ಯರ ಬಳಿ ವಿಚಾರಗಳ ವಿನಿಮಯ ಹಾಗೂ ಚರ್ಚೆ ನಡೆಸಲಾಗುವುದು. ಏಕೆಂದರೆ ನಾಯಕರೇ ಒಂದು ಹೇಳುತ್ತಾರೆ. ಜನಸಾಮಾನ್ಯರೇ ಒಂದಷ್ಟು ಹೇಳುತ್ತಾರೆ. ಜನರ ಸಮಸ್ಯೆ ಏನಿದೆ ಎಂದು ಅವರಿಂದಲೇ ತಿಳಿದುಕೊಳ್ಳಬೇಕು. ಈ ದೃಷ್ಟಿಯಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ನಾಯಕರು ಒಂದನ್ನು ಹೇಳುತ್ತಾರೆ, ಜನರು ಒಂದನ್ನು ಹೇಳುತ್ತಾರೆ. ನಿಜವಾದ ಪರಿಸ್ಥಿತಿ ತಿಳಿಯಬೇಕಾದರೆ ಜನರ ನಡುವೆ ನಡೆಯಲೇಬೇಕು. ಈ ನಡಿಗೆಯ ಅವಧಿ ಒಂದು ಗಂಟೆಯಾಗಿರುತ್ತದೆ. ಜನರ ಸಲಹೆ, ಅಸಮಾಧಾನಗಳನ್ನೂ ಕೇಳಿ ಅಗತ್ಯ ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದರು.

ಲಾಲ್ ಬಾಗ್‌ಗೆ ಟನಲ್ ರಸ್ತೆ ಹಾನಿ ಮಾಡುವುದಿಲ್ಲ — ಡಿಕೆಶಿ ಭರವಸೆ

ಟನಲ್ ರಸ್ತೆಯಿಂದ ಲಾಲ್ ಬಾಗ್ ಹಾಳಾಗಲಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ,ಲಾಲ್ ಬಾಗ್ ಹಾಳಾಗಲು ನಾನು ಜೀವಿತದಲ್ಲೇ ಅವಕಾಶ ಕೊಡುವುದಿಲ್ಲ. ಯಾವುದಾದರೂ ಹಾನಿ ಮಾಡಿದ್ರೆ ನನ್ನ ತಲೆ ಒಡೆದು ಹಾಕುತ್ತಾರೆ ಅನ್ನೋ ಭಯವೇ ನನಗೆ ಇದೆ. ಟನಲ್ ರಸ್ತೆ ಒಂದು ಮೂಲೆಯಲ್ಲಿ ಭೂಗರ್ಭದಲ್ಲಿ ಹೋಗುವಂತೆ ಯೋಜನೆ ಮಾಡಲಾಗಿದೆ. ನಾನು ಸ್ವತಃ ಸ್ಥಳ ವೀಕ್ಷಣೆ ಮಾಡಿ ನೋಡುವೆ ಎಂದು ಹೇಳಿದರು.

K.M.Sathish Gowda

Join WhatsApp

Join Now

Facebook

Join Now

Read more

‘ಕೊಟ್ಟ ಮಾತು ಉಳಿಯುತ್ತದೆಯೇ?’ – ಕಾಂಗ್ರೆಸ್ ಒಳಕಿಚ್ಚಿಗೆ ಸುರೇಶ್ ಮಾರ್ಮಿಕ ನುಡಿ, ಡಿಕೆಶಿ ದೆಹಲಿ ಪಯಣ ರಾಜಕೀಯ ಚರ್ಚೆ ತೀವ್ರ

“ಮೊದಲು ನಿಮ್ಮ ಹೈಕಮಾಂಡ್‌ ಹುಡುಕಿ, ಬಳಿಕ ಮೋದಿ ಬಗ್ಗೆ ಮಾತನಾಡಿ”: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ತೀವ್ರ ವಾಗ್ದಾಳಿ

ಪ್ಲಾಸ್ಟಿಕ್ ಮುಕ್ತ ಶಿವರಾತ್ರಿ ಉತ್ಸವಕ್ಕೆ ಹರಕೆರೆ ಹರಕೇಶ್ವರ ದೇವಸ್ಥಾನದಲ್ಲಿ ಸಂಕಲ್ಪ

ಜನಸೇವೆಗೆ ಬದ್ಧ ನಾಯಕತ್ವ: ಹಾರನಹಳ್ಳಿಯಲ್ಲಿ ಡಿ.ಎಸ್. ಅರುಣ್ ಅವರಿಂದ ಪಂಚಾಯಿತಿ ಕಟ್ಟಡ ಉದ್ಘಾಟನೆ ಹಾಗೂ ಹಕ್ಕುಪತ್ರ ವಿತರಣೆ

‘ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು’: ಕಾಂಗ್ರೆಸ್ ನಾಯಕರಿಗೆ ಡಿಕೆಶಿ ಖಡಕ್ ಸಂದೇಶ

ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ–ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಮೇಲೆ ಒತ್ತಡ: ಮುಖ್ಯಮಂತ್ರಿ ಸಿದ್ದರಾಮಯ್ಯ

Leave a Comment