ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿಕಾರಿಪುರದಲ್ಲಿ ಬಿಜೆಪಿಯಿಂದ “ರಾಷ್ಟ್ರೀಯ ಏಕತಾ ನಡಿಗೆ”

On: October 31, 2025 8:19 PM
Follow Us:

ಶಿಕಾರಿಪುರ, ಅಕ್ಟೋಬರ್ 31:ಭಾರತೀಯ ಜನತಾ ಪಾರ್ಟಿ (BJP) ವತಿಯಿಂದ ಶಾಸಕ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಶಿಕಾರಿಪುರದಲ್ಲಿ “ಆತ್ಮನಿರ್ಭರ ಭಾರತಕ್ಕಾಗಿ ರಾಷ್ಟ್ರೀಯ ಏಕತಾ ನಡಿಗೆ” ಆಯೋಜಿಸಲಾಯಿತು.

ಈ ನಡಿಗೆಯು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ಅಂಗವಾಗಿ ದೇಶಾದ್ಯಂತ ನಡೆಯುತ್ತಿರುವ “ಒಂದೇ ಭಾರತ – ಆತ್ಮನಿರ್ಭರ ಭಾರತ” ಅಭಿಯಾನದ ಭಾಗವಾಗಿತ್ತು.

ಕಾರ್ಯಕ್ರಮವು ಶಿಕಾರಿಪುರದ ಬಸವೇಶ್ವರ ಪಾರ್ಕ್‌ನ ಹುತಾತ್ಮ ಯೋಧರ ಸ್ಮಾರಕದಲ್ಲಿ ಪುಷ್ಪ ನಮನ ಸಲ್ಲಿಸುವ ಮೂಲಕ ಆರಂಭಗೊಂಡಿತು. ದೇಶದ ಏಕತೆ, ಅಖಂಡತೆ ಮತ್ತು ಸಮಗ್ರತೆಗೆ ಅಮೂಲ್ಯ ಕೊಡುಗೆ ನೀಡಿದ ಭಾರತದ ಉಕ್ಕಿನ ಮನುಷ್ಯ ಹಾಗೂ ಪ್ರಥಮ ಗೃಹ ಸಚಿವ ಸರ್ದಾರ್ ಪಟೇಲ್ ಅವರಿಗೆ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರುಮೂರ್ತಿ, ಜಿಲ್ಲಾಧ್ಯಕ್ಷ ಜಗದೀಶ್, ಮಾಜಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮಂಡಲ ಅಧ್ಯಕ್ಷ ಹನುಮಂತಪ್ಪ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಗಾಯತ್ರಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ನಿಂಬೆಗೊಂದಿ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ರೇಖಾ ರಾಜಶೇಖರ್, ಜಿಲ್ಲಾ ಕಾರ್ಯದರ್ಶಿ ನಿವೇದಿತಾ ರಾಜು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್, ಪುರಸಭಾ ಅಧ್ಯಕ್ಷೆ ಸುನಂದಾ ಮಂಜುನಾಥ್, ಉಪಾಧ್ಯಕ್ಷೆ ರೂಪಾ ಮಂಜುನಾಥ್, ಪುರಸಭಾ ಸದಸ್ಯರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೂಲಕ ಶಿಕಾರಿಪುರದಲ್ಲಿ ರಾಷ್ಟ್ರ ಏಕತೆ, ಆತ್ಮನಿರ್ಭರತೆ ಹಾಗೂ ಜನಸೇವೆಯ ಸಂದೇಶ ಸಾರಲಾಯಿತು.

K.M.Sathish Gowda

Join WhatsApp

Join Now

Facebook

Join Now

Read more

ಜಲಕ್ರಾಂತಿಗೆ ದೆಹಲಿಯಲ್ಲಿ ಹೊಸ ಚೈತನ್ಯ: ಶ್ರೀ ತರಳಬಾಳು ಜಗದ್ಗುರು ಮತ್ತು ಜಲತಜ್ಞ ಡಾ. ರಾಜೇಂದ್ರ ಸಿಂಗ್ ನಡುವೆ ಮಹತ್ವದ ಮಾತುಕತೆ

ಹಾಸನದಲ್ಲಿ ಗೂಂಡಾಗಿರಿ: ಬೆಟ್ಟದ ಭೈರವೇಶ್ವರ ದೇವಸ್ಥಾನ ಬಳಿ ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ, ಪ್ರಕರಣ ದಾಖಲು

ಶಿವಮೊಗ್ಗ ಪೊಲೀಸರಿಗೆ ಗೌರವ: ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ರಮೇಶ್ ಕುಮಾರ್ ಸೇರಿದಂತೆ ಮೂವರಿಗೆ ಮುಖ್ಯಮಂತ್ರಿ ಪದಕ ಘೋಷಣೆ

ಕೇಂದ್ರವನ್ನು ಟೀಕಿಸುವುದರಲ್ಲೇ 3 ವರ್ಷ ವ್ಯರ್ಥ: ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಶ್ರೀ ರಾಮನವಮಿ ಸಂಭ್ರಮ: ಶಿವಮೊಗ್ಗದಲ್ಲಿ ಅದ್ಧೂರಿ ರಥೋತ್ಸವ ಹಾಗೂ ದುರ್ಗಿಗುಡಿ ಮಿತ್ರಕೂಟದಿಂದ ಪಾನಕ–ಕೋಸಂಬರಿ ವಿತರಣೆ

ಇಂಧನ ಬೆಲೆ ಏರಿಕೆ ಭೀತಿ ನಡುವೆ ಕೇಂದ್ರದ ದೊಡ್ಡ ನಿರ್ಧಾರ: ಪೆಟ್ರೋಲ್ ಸುಂಕ 3 ರೂ., ಡೀಸೆಲ್ ಸುಂಕ ಸಂಪೂರ್ಣ ರದ್ದು

Leave a Comment