ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಕೇರಳ ಚುನಾವಣೆ 2026: ವೀಕ್ಷಕರಾಗಿ ಎಚ್.ಸಿ. ಯೋಗೇಶ್ ಕಾರ್ಯಕ್ಕೆ ಮೆಚ್ಚುಗೆ; ಕಾಂಗ್ರೆಸ್ ನಾಯಕಿ ದೀಪಾ ದಾಸ್ ಮುನ್ಷಿಯಿಂದ ಕೃತಜ್ಞತಾ ಸಂದೇಶ

On: April 10, 2026 5:01 PM
Follow Us:

ಕೇರಳ ವಿಧಾನಸಭಾ ಚುನಾವಣೆ 2026 ರ ಉತ್ಸಾಹಭರಿತ ಹಾಗೂ ಮಹತ್ವದ ಪ್ರಚಾರ ಕಾರ್ಯಗಳು ಮುಕ್ತಾಯದ ಹಂತಕ್ಕೆ ಸಾಗುತ್ತಿರುವ ಸಂದರ್ಭದಲ್ಲಿ ಎಐಸಿಸಿ ಪರವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ವೀಕ್ಷಕರಾಗಿ ಕಾರ್ಯನಿರ್ವಹಿಸಿದ ಎಚ್.ಸಿ. ಯೋಗೇಶ್ ಅವರ ಸೇವೆಯನ್ನು ಎಐಸಿಸಿ ನಾಯಕಿ ದೀಪಾ ದಾಸ್ ಮುನ್ಷಿ ಅವರು ಮನಪೂರ್ವಕವಾಗಿ ಶ್ಲಾಘಿಸಿ, ಕೃತಜ್ಞತೆ ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ಪತ್ರ ಮೂಲಕ ನೀಡಿದ ಅಧಿಕೃತ ಹೇಳಿಕೆಯಲ್ಲಿ ಅವರು, ಕೇರಳದಾದ್ಯಂತ ನಡೆದ ಕಠಿಣ ಹಾಗೂ ಸವಾಲುಗಳಿಂದ ಕೂಡಿದ ಚುನಾವಣಾ ಪ್ರಚಾರದಲ್ಲಿ ಎಚ್.ಸಿ. ಯೋಗೇಶ್ ಅವರು ತೋರಿದ ನಿಸ್ವಾರ್ಥ ಸೇವೆ, ಶಿಸ್ತು ಮತ್ತು ಸಂಘಟನಾ ಬದ್ಧತೆ ಪಕ್ಷದ ಚುನಾವಣಾ ವ್ಯವಸ್ಥೆಗೆ ಮಹತ್ವದ ಬಲ ನೀಡಿದೆಯೆಂದು ತಿಳಿಸಿದ್ದಾರೆ.

ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ ಅವರ ಪುತ್ರರಾಗಿರುವ ಎಚ್.ಸಿ. ಯೋಗೇಶ್ ಅವರು, ತಮ್ಮ ಕುಟುಂಬದ ರಾಜಕೀಯ ಪರಂಪರೆಯನ್ನು ಮುಂದುವರಿಸಿಕೊಂಡು, ಪಕ್ಷದ ತಳಮಟ್ಟದಿಂದ ಹಿಡಿದು ಸಂಘಟನಾ ಮಟ್ಟದವರೆಗೆ ಸಕ್ರಿಯವಾಗಿ ತೊಡಗಿಸಿಕೊಂಡು ಬಂದಿದ್ದಾರೆ. ಮಾಜಿ ಮಹಾನಗರ ಪಾಲಿಕೆ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗಮನಾರ್ಹ ರಾಜಕೀಯ ಅನುಭವವನ್ನು ಪಡೆದಿದ್ದಾರೆ.

ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಗುರುತಿಸಿಕೊಂಡಿರುವ ಯೋಗೇಶ್ ಅವರು, ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ, ಕೇರಳ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾರಿಯಾಗಿ ಕಾರ್ಯನಿರ್ವಹಿಸಿ, ಸಂಘಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ವಿವಿಧ ರಾಜ್ಯಗಳಲ್ಲಿ ಪಕ್ಷದ ಪರವಾಗಿ ನಿರ್ವಹಿಸಿದ ಅವರ ಕಾರ್ಯಗಳು ಹೈಕಮಾಂಡ್ ಮಟ್ಟದಲ್ಲಿ ಉತ್ತಮ ಮೆಚ್ಚುಗೆಗೆ ಪಾತ್ರವಾಗಿವೆ.

ಅವರ ಶಿಸ್ತುಬದ್ಧ ಕಾರ್ಯಶೈಲಿ, ನಾಯಕತ್ವದ ಗುಣಗಳು ಹಾಗೂ ಸಮನ್ವಯ ಸಾಧಿಸುವ ಸಾಮರ್ಥ್ಯವು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ಗಟ್ಟಿಯಾದ ವಿಶ್ವಾಸ ಸಂಬಂಧವನ್ನು ನಿರ್ಮಿಸಲು ಸಹಾಯಕವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೇರಳ ಚುನಾವಣೆಯ ಅವಧಿಯಲ್ಲಿ ಅಭ್ಯರ್ಥಿಗಳ ನಡುವಿನ ಸಮನ್ವಯ, ಬೂತ್ ಮಟ್ಟದ ಕಾರ್ಯಕರ್ತರ ಮಾರ್ಗದರ್ಶನ ಮತ್ತು ಸ್ಥಳೀಯ ನಾಯಕರೊಂದಿಗೆ ಸಮಾಲೋಚನೆ ನಡೆಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು ಎಂದು ದಾಸ್ ಮುನ್ಷಿ ತಿಳಿಸಿದ್ದಾರೆ. ಸಂಕೀರ್ಣ ರಾಜಕೀಯ ಪರಿಸ್ಥಿತಿಯಲ್ಲಿಯೂ ಶಾಂತಿ, ಶಿಸ್ತು ಮತ್ತು ಸಂಘಟನಾ ನಿಯಂತ್ರಣವನ್ನು ಕಾಪಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ.

ಎಐಸಿಸಿ, ಯುಡಿಎಫ್ ಹಾಗೂ ಕೇರಳದ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಧನ್ಯವಾದಗಳನ್ನು ಅರ್ಪಿಸಿರುವ ದಾಸ್ ಮುನ್ಷಿ, ಎಚ್.ಸಿ. ಯೋಗೇಶ್ ಅವರ ಸೇವೆ ಪಕ್ಷದ ಸಂಘಟನಾ ಇತಿಹಾಸದಲ್ಲಿ ಗಮನಾರ್ಹ ಕೊಡುಗೆಯಾಗಿ ಉಳಿಯಲಿದೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ರಾಜಕೀಯ ವಲಯದಲ್ಲಿ ಎಚ್.ಸಿ. ಯೋಗೇಶ್ ಅವರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಸ್ಥಾನಗಳಿಗೆ ಬೆಳೆಯುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸುತ್ತಿವೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಅವರ ಅನುಭವ, ನಿಷ್ಠೆ ಮತ್ತು ಸಂಘಟನಾ ಸಾಮರ್ಥ್ಯವು ಪಕ್ಷದ ಭವಿಷ್ಯದ ನಾಯಕತ್ವದ ಶಕ್ತಿಯಾಗಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಈ ಮೂಲಕ ಕೇರಳ ಚುನಾವಣಾ ವೀಕ್ಷಕರಾಗಿ ಅವರ ಕಾರ್ಯಕಾಲವು ಕೇವಲ ಆಡಳಿತಾತ್ಮಕ ಜವಾಬ್ದಾರಿಯಷ್ಟೇ ಅಲ್ಲದೆ, ಕಾಂಗ್ರೆಸ್ ಪಕ್ಷದಲ್ಲಿ ಅವರ ರಾಜಕೀಯ ಬೆಳವಣಿಗೆಯ ಮಹತ್ವದ ಮೈಲುಗಲ್ಲಾಗಿ ಪರಿಗಣಿಸಲಾಗುತ್ತಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment