ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಬೆನ್ನುತಟ್ಟಿ ಹರಸಿದ ಶ್ರೀ ತರಳಬಾಳು ಜಗದ್ಗುರುಗಳು: ಸನ್ಮಾನಕ್ಕಿಂತ ಮಿಗಿಲಾದ ಜಗದ್ಗುರುಗಳ ಪ್ರೋತ್ಸಾಹದ ನುಡಿ, ಪತ್ರಿಕೋದ್ಯಮದ ಹಾದಿಗೆ ಹಾರೈಕೆಯ ಶ್ರೀರಕ್ಷೆ

On: April 30, 2026 6:52 PM
Follow Us:

ಶಿವಮೊಗ್ಗ ತಾಲ್ಲೂಕಿನ ಸೂಗೂರು ಗ್ರಾಮದಲ್ಲಿ ಭಕ್ತಿ ಮತ್ತು ಸಡಗರದ ವಾತಾವರಣದಲ್ಲಿ ನೆರವೇರಿದ ಶ್ರೀ ಮೃಡಬಸವೇಶ್ವರ ಸ್ವಾಮಿ ದೇವಸ್ಥಾನದ ಗೃಹಪ್ರವೇಶ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಶ್ರೀ ವೇ. ಈಶ್ವರಯ್ಯ ಗಂಗಮ್ಮ ಸಮುದಾಯ ಭವನದ ಉದ್ಘಾಟನಾ ಸಮಾರಂಭವು ನನ್ನ ಬದುಕಿನ ಅತ್ಯಂತ ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಯಿತು.

​ಸಿರಿಗೆರೆ ಬೃಹನ್ಮಠದ ಜಗದ್ಗುರುಗಳಾದ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಸನ್ಮಾನ ಸ್ವೀಕರಿಸುವ ಸೌಭಾಗ್ಯ ನನ್ನದಾಗಿತ್ತು. ಆದರೆ, ಆ ಸನ್ಮಾನಕ್ಕಿಂತಲೂ ಮಿಗಿಲಾದದ್ದು ಜಗದ್ಗುರುಗಳು ತೋರಿದ ಆ ಅಕ್ಕರೆ ಮತ್ತು ವಾತ್ಸಲ್ಯದ ನುಡಿಗಳು.

​ಸನ್ಮಾನದ ಸಂದರ್ಭದಲ್ಲಿ ಪೂಜ್ಯ ಶ್ರೀಗಳು ನನ್ನನ್ನು ಹತ್ತಿರಕ್ಕೆ ಕರೆದು, ಅತ್ಯಂತ ಪ್ರೀತಿಯಿಂದ ನನ್ನ ಹೆಗಲ ಮೇಲೆ ಕೈ ಹಾಕಿ ಮಾತನಾಡಿಸಿದ ಕ್ಷಣ ನನ್ನ ಕಣ್ಣಮುಂದೆ ಈಗಲೂ ಹಸಿರಾಗಿದೆ. ಅಷ್ಟೇ ಅಲ್ಲದೆ:

​“ಶ್ರೀ ಮಠದ ಬಗ್ಗೆ ನೀವು ಮಾಡುವ ಸುದ್ದಿಗಳನ್ನು ನಾನು ಗಮನಿಸುತ್ತಿರುತ್ತೇನೆ. ನಿಮ್ಮ ಬರವಣಿಗೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ, ಇದನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗಿ. ನಮ್ಮ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ,” ಎಂದು ಬೆನ್ನು ತಟ್ಟಿ ಆಶೀರ್ವದಿಸಿದರು. ವಿಶ್ವವನ್ನೇ ಜ್ಞಾನದ ಬೆಳಕಿನಿಂದ ಬೆಳಗುತ್ತಿರುವ, ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ಅದ್ವಿತೀಯರಾಗಿರುವ ಜಗದ್ಗುರುಗಳ ಬಾಯಿಂದ ಇಂತಹ ಮೆಚ್ಚುಗೆಯ ನುಡಿಗಳು ಬಂದಾಗ ನನ್ನ ವೃತ್ತಿ ಬದುಕಿನ ಎಲ್ಲಾ ಶ್ರಮವೂ ಸಾರ್ಥಕವಾಯಿತು ಎಂದು ಭಾವಿಸಿದೆ.

​ಸಾಮಾನ್ಯ ಪತ್ರಕರ್ತನಾದ ನನ್ನ ಕಾರ್ಯವನ್ನು ಗುರುತಿಸಿ, ಸ್ವತಃ ಜಗದ್ಗುರುಗಳೇ ಪ್ರೋತ್ಸಾಹಿಸಿದ್ದು ನನಗೆ ಆನೆಯ ಬಲ ಬಂದಂತಾಗಿದೆ. ಒಬ್ಬ ಪತ್ರಕರ್ತನಿಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಮತ್ಯಾವುದಿದೆ? ಅವರ ಆಶೀರ್ವಾದದ ಆ ಹಸ್ತ ನನ್ನ ಹೆಗಲ ಮೇಲಿರುವುದು ನನಗೊಂದು ರಕ್ಷಾ ಕವಚದಂತೆ ಭಾಸವಾಗುತ್ತಿದೆ. ಸಮಾಜಮುಖಿ ಮತ್ತು ಸತ್ಯನಿಷ್ಠ ಪತ್ರಿಕೋದ್ಯಮದ ಹಾದಿಯಲ್ಲಿ ಮುನ್ನಡೆಯಲು ಈ ಆಶೀರ್ವಾದ ನನಗೆ ಶ್ರೀರಕ್ಷೆಯಾಗಿದೆ.

​ಈ ಅದ್ಭುತ ಸಮಾರಂಭದಲ್ಲಿ ನನಗೆ ಗೌರವ ಸಲ್ಲಿಸಿ, ಜಗದ್ಗುರುಗಳ ಸನ್ನಿಧಿಯಲ್ಲಿ ನಿಲ್ಲುವ ಅವಕಾಶ ಕಲ್ಪಿಸಿಕೊಟ್ಟ ಸೂಗೂರು ಗ್ರಾಮದ ಬಿ.ಆರ್. ಮಹೇಶಣ್ಣ, ಸಾಧು ವೀರಶೈವ ಸಮಾಜದ ಅಧ್ಯಕ್ಷರು ಹಾಗೂ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಹೆಚ್.ಆರ್. ಬಸವರಾಜಪ್ಪರವರಿಗೂ, ಎಸ್. ಜಿ.ಮಲ್ಲಿಕಾರ್ಜುನ್, ಶಿವಕುಮಾರ್ ಅವರಿಗೂ, ಸಮಿತಿಯ ಅಧ್ಯಕ್ಷರಿಗೂ ಹಾಗೂ ಸಮಸ್ತ ಸದಸ್ಯರುಗಳಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.

ಈ ಅನುಭವ ನನ್ನ ಜೀವನದಲ್ಲಿ ಸದಾಕಾಲ ಉಳಿಯುವ ಅಮೂಲ್ಯ ಕ್ಷಣವಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜಮುಖಿ ಮತ್ತು ಸತ್ಯನಿಷ್ಠ ಪತ್ರಿಕೋದ್ಯಮವನ್ನು ಇನ್ನಷ್ಟು ಬಲಪಡಿಸುವ ಸಂಕಲ್ಪಕ್ಕೆ ಕಾರಣವಾಗಿದೆ.

ಪೂಜ್ಯ ಶ್ರೀಗಳ ಆಶೀರ್ವಾದದ ಹಾದಿಯಲ್ಲಿ ನನ್ನ ಲೇಖನಿ ಸಮಾಜದ ಹಿತಕ್ಕಾಗಿ ಸದಾ ಮಿಡಿಯುತ್ತಿರುತ್ತದೆ ಎಂಬ ಸಂಕಲ್ಪದೊಂದಿಗೆ…

ನಿಮ್ಮವ,
ಕೆ.ಎಂ. ಸತೀಶ್ ಗೌಡ

ಮುಖ್ಯ ಸಂಪಾದಕರು, ಡಿಟೆಕ್ಟಿವ್ ನ್ಯೂಸ್ 24
ಶಿವಮೊಗ್ಗ

K.M.Sathish Gowda

Join WhatsApp

Join Now

Facebook

Join Now

Read more

ಬರದ ನಡುವೆ ರೈತರ ನೆರವಿಗೆ ಧಾವಿಸದ ಸರ್ಕಾರ: ಎಕರೆಗೆ ₹50 ಸಾವಿರ ಪರಿಹಾರಕ್ಕೆ ಬಿ.ವೈ. ವಿಜಯೇಂದ್ರ ಒತ್ತಾಯ: ರಾಜ್ಯದ ಹಣಕಾಸು ಸ್ಥಿತಿಗತಿ ಕುರಿತು ಶ್ವೇತಪತ್ರಕ್ಕೆ ಆಗ್ರಹ

ಪ್ರಜಾಪ್ರಭುತ್ವದ ಶ್ರೇಷ್ಠತೆಗೆ ಸವಾಲೆಸೆದ ಶ್ರೀ ತರಳಬಾಳು ಜಗದ್ಗುರುಗಳು: ನಾಲ್ವಡಿಯವರ ‘ಜನಹಿತ’ದ ಮಾದರಿ ಇಂದೇಕೆ ಸಾಧ್ಯವಾಗುತ್ತಿಲ್ಲ!?ದಾವಣಗೆರೆಯಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿ ಅನಾವರಣ: ವ್ಯವಸ್ಥೆಯ ಆತ್ಮಾವಲೋಕನಕ್ಕೆ ತರಳಬಾಳು ಶ್ರೀಗಳ ಕರೆ

ಮೂರು ಸಾವಿರ ಕಂಠಗಳು… ಒಂದೇ ನಾದ… ಬಸವಣ್ಣನವರ ವಚನಗಳಿಗೆ ದಾವಣಗೆರೆ ಸಾಕ್ಷಿ!: ‘ವಚನ ನಾದಲೋಕ’ದಲ್ಲಿ ಎಲ್ಲರೂ ಭಾಗವಹಿಸಿ ಎಂದು ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಮನವಿ

‘ಗಲಾಟೆ ಗಣಪತಿ’ಗೆ ತೆರೆ: ಭಯದಿಂದ ಭಕ್ತಿಯ ಸಂಭ್ರಮದತ್ತ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ: ಎಸ್‌ಪಿ ನಿಖಿಲ್ ಬಿ. ಅವರ ಕಾರ್ಯತಂತ್ರದಲ್ಲಿ ತಂತ್ರಜ್ಞಾನಾಧಾರಿತ ಕಣ್ಗಾವಲು: ಶಾಂತಿಯುತ ಮೆರವಣಿಗೆಗೆ ಸಾರ್ವಜನಿಕರ ಮೆಚ್ಚುಗೆ

​ಶ್ರೀ ಜಗದ್ಗುರು ರೇಣುಕಾಚಾರ್ಯರು-ಶರಣರನ್ನು ಬೇರ್ಪಡಿಸುವ ಕುತಂತ್ರ ನಿಲ್ಲಲಿ!: ಒಳಗಿನ ಶತ್ರುಗಳಿಂದಲೇ ಧರ್ಮಕ್ಕೆ ಕಂಟಕ, ಸ್ವಾರ್ಥಿಗಳ ಕಪಟ ನಾಟಕ ಇನ್ಮುಂದೆ ನಡೆಯಲ್ಲ!: ಧರ್ಮದ್ರೋಹಿಗಳಿಗೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಖಡಕ್ ಎಚ್ಚರಿಕೆ!

ರೈತರೆ, ಸಾಲಕ್ಕೆ ಹೆದರಬೇಡಿ! ಆತ್ಮಹತ್ಯೆ ಮಾಡಿಕೊಳ್ಳಬೇಡಿ; ಎದೆತಟ್ಟಿ ‘ನಾನು ರೈತ’ ಎಂದು ಹೇಳಿ ಹೋರಾಡಿ: ಬರ ಪರಿಹಾರದ ಹೆಸರಿನಲ್ಲಿ ರೈತರನ್ನು ಕಾಯಿಸುವುದೇಕೆ? ಶಾಶ್ವತ ನೀರಾವರಿ ಕಲ್ಪಿಸಿ, ಸಾಲಮನ್ನಾ ಮಾಡಿ: ಸಿಎಂಗೆ ಎಚ್.ಆರ್. ಬಸವರಾಜಪ್ಪ ಒತ್ತಾಯ

Leave a Comment