ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಅಧಿಕಾರವನ್ನು ಆದರ್ಶದ ಪಾಲನೆಗೆ ಸಮರ್ಪಿಸಿದ ಧೀಮಂತ ನಾಯಕ ಯಡಿಯೂರಪ್ಪ: ಬಸವರಾಜ ಬೊಮ್ಮಾಯಿ

On: May 1, 2026 11:48 AM
Follow Us:

ಹಾವೇರಿ: “ರಾಜಕಾರಣದಲ್ಲಿ ಅಧಿಕಾರ ಮತ್ತು ಆದರ್ಶಗಳ ನಡುವೆ ನಿರಂತರ ಸಂಘರ್ಷವಿರುತ್ತದೆ. ಆದರೆ, ಅಧಿಕಾರ ಬಂದಾಗಲೂ ತಮ್ಮ ಮೂಲ ಆದರ್ಶಗಳನ್ನು ಬಿಡದೆ, ಆ ಅಧಿಕಾರವನ್ನು ಸಮಾಜದ ಹಿತಕ್ಕಾಗಿ ಹಾಗೂ ಆದರ್ಶಗಳ ಪಾಲನೆಗಾಗಿ ಬಳಸಿಕೊಂಡವರು ಮಾತ್ರ ಧೀಮಂತ ನಾಯಕರಾಗುತ್ತಾರೆ. ಅಂತಹ ಅಪರೂಪದ ಶಕ್ತಿ ಬಿ.ಎಸ್. ಯಡಿಯೂರಪ್ಪನವರು,” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.

ಚಿತ್ರದುರ್ಗದಲ್ಲಿ ಮೇ 9 ರಂದು ಆಯೋಜಿಸಲಾಗಿರುವ ಬಿ.ಎಸ್. ಯಡಿಯೂರಪ್ಪನವರ 50 ವರ್ಷಗಳ ಸಾರ್ವಜನಿಕ ಜೀವನದ ಸವಿನೆನಪಿನ ‘ಅಭಿಮಾನೋತ್ಸವ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಹಾವೇರಿಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ತಮ್ಮ ಭಾಷಣದಲ್ಲಿ ಮಾರ್ಮಿಕವಾಗಿ ಮಾತನಾಡಿದ ಬೊಮ್ಮಾಯಿಯವರು, “ನಾವೆಲ್ಲರೂ ಸಾರ್ವಜನಿಕ ಜೀವನಕ್ಕೆ ಬರುವಾಗ ಒಂದಿಷ್ಟು ಆದರ್ಶಗಳನ್ನು ಹೊತ್ತು ಬಂದಿರುತ್ತೇವೆ. ಆದರೆ ಅಧಿಕಾರ ಸಿಕ್ಕಾಗ ಪರಿಸ್ಥಿತಿ ಬದಲಾಗುತ್ತದೆ. ಆದರ್ಶ ಎಂಬುದು ಜನ್ಮ ನೀಡಿದ ತಾಯಿಯಂತಿದ್ದರೆ, ಅಧಿಕಾರ ಎಂಬುದು ಕಟ್ಟಿಕೊಂಡ ಹೆಂಡತಿಯಂತೆ. ತಾಯಿ ತನ್ನ ಮಗ ತನ್ನ ಮಾತು ಕೇಳಲಿ ಎಂದು ಬಯಸಿದರೆ, ಹೆಂಡತಿ ತಾನು ತವರು ಮನೆ ಬಿಟ್ಟು ಬಂದಿದ್ದೇನೆ, ತನ್ನ ಮಾತು ಕೇಳಲಿ ಎಂದು ನಿರೀಕ್ಷಿಸುತ್ತಾಳೆ. ಇವೆರಡರ ನಡುವಿನ ಸಮತೋಲನ ಕಾಯ್ದುಕೊಳ್ಳುವುದು ಕಷ್ಟ. ಆದರೆ ಯಡಿಯೂರಪ್ಪನವರು ತಮ್ಮ ಅಧಿಕಾರಾವಧಿಯಲ್ಲಿ ಆದರ್ಶಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಮಾದರಿಯಾಗಿದ್ದಾರೆ,” ಎಂದರು.

ಯಡಿಯೂರಪ್ಪನವರ ಹೋರಾಟದ ಹಾದಿಯನ್ನು ಸ್ಮರಿಸಿದ ಬೊಮ್ಮಾಯಿ, “ಅವರು ಹುಟ್ಟುತ್ತಲೇ ನಾಯಕರಾದವರಲ್ಲ. ಕಠಿಣ ಪರಿಶ್ರಮ, ಛಲ ಮತ್ತು ಜನರೊಂದಿಗಿನ ನಿರಂತರ ಸಂಪರ್ಕ ಅವರನ್ನು ‘ಕರ್ನಾಟಕದ ರಾಜಾಹುಲಿ’ಯನ್ನಾಗಿ ಮಾಡಿದೆ. 1994 ರಲ್ಲಿ ಕೇವಲ ಇಬ್ಬರು ಶಾಸಕರಿದ್ದ ಕಾಲದಲ್ಲೂ ಹರಿಹರದಲ್ಲಿ ಬೃಹತ್ ರೈತ ಹೋರಾಟ ಸಂಘಟಿಸುವ ಮೂಲಕ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಿದರು.

ವಿರೋಧ ಪಕ್ಷದಲ್ಲಿದ್ದಾಗ ಯಾವುದಕ್ಕಾಗಿ ಹೋರಾಡಿದ್ದರೋ, ಅಧಿಕಾರಕ್ಕೆ ಬಂದ ತಕ್ಷಣ ಅದನ್ನು ಜಾರಿಗೆ ತಂದರು. 2008 ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ 10 ಹೆಚ್‌ಪಿ ವಿದ್ಯುತ್ ಉಚಿತವಾಗಿ ನೀಡುವ ಕಡತಕ್ಕೆ ಸಹಿ ಹಾಕಿದ್ದು ಅವರ ರೈತ ಪ್ರೇಮಕ್ಕೆ ಸಾಕ್ಷಿ,” ಎಂದು ಸ್ಮರಿಸಿದರು.

ಯಡಿಯೂರಪ್ಪನವರ ಕಾಲದಲ್ಲಿ ನಡೆದ ನೀರಾವರಿ ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡಿದ ಅವರು:

  • ನಾಲ್ಕು ವರ್ಷಗಳ ಅವಧಿಯಲ್ಲಿ ದಾಖಲೆ ಎಂಬಂತೆ 7.36 ಲಕ್ಷ ಎಕರೆ ಪ್ರದೇಶಕ್ಕೆ ಹೊಸದಾಗಿ ನೀರಾವರಿ ಸೌಲಭ್ಯ ಕಲ್ಪಿಸಲಾಯಿತು.
  • ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ತುಂಗಾ ಮೇಲ್ದಂಡೆ ಯೋಜನೆಯನ್ನು 2012ರಲ್ಲಿ ಪೂರ್ಣಗೊಳಿಸಲಾಯಿತು.
  • ಸಿಂಗಟಾಲೂರು ಏತ ನೀರಾವರಿ, ಕೃಷ್ಣಾ ಮೇಲ್ದಂಡೆ ಮತ್ತು ಕಾವೇರಿ ಕಣಿವೆಯ ಸುಮಾರು 15 ಏತ ನೀರಾವರಿ ಯೋಜನೆಗಳಿಗೆ ವೇಗ ನೀಡಲಾಯಿತು.

“ಪ್ರಧಾನಿ ನರೇಂದ್ರ ಮೋದಿಯವರೇ ಮೆಚ್ಚುವಂತಹ ಸಂಘಟನಾ ಚತುರತೆ ಯಡಿಯೂರಪ್ಪನವರದ್ದು. ಕರ್ನಾಟಕದ ಇತಿಹಾಸದಲ್ಲಿ ನಿಜಲಿಂಗಪ್ಪ, ದೇವರಾಜ ಅರಸು ಅವರ ನಂತರ ಜನಮಾನಸದಲ್ಲಿ ಅಚ್ಚಳಿಯದ ಹೆಸರು ಉಳಿಸಿರುವುದು ಬಿ.ಎಸ್.ವೈ. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳ ವೈಫಲ್ಯ ಹಾಗೂ ರಾಜಕೀಯ ತಂತ್ರಗಾರಿಕೆಯನ್ನು ಮೆಟ್ಟಿ ನಿಂತು, ಬಿಜೆಪಿ ಮತ್ತೆ ಪುಟಿದೇಳಲು ಈ ಅಭಿಮಾನೋತ್ಸವವೇ ಮೊದಲ ಹೆಜ್ಜೆಯಾಗಲಿದೆ. ಮೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಇಕ್ಕಟ್ಟಿಗೆ ಸಿಲುಕುವ ಮುನ್ಸೂಚನೆ ಇದ್ದು, ಅದೇ ಸಮಯದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಬಿಜೆಪಿಗೆ ಹೊಸ ಚೈತನ್ಯ ನೀಡಲಿದೆ,” ಎಂದು ಭವಿಷ್ಯ ನುಡಿದರು.

ಲಕ್ಷಾಂತರ ಜನರ ಜಮಾವಣೆ: ಮೇ 9 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಈ ಬೃಹತ್ ಸಮಾವೇಶಕ್ಕೆ ಹಾವೇರಿ ಜಿಲ್ಲೆಯೊಂದರಿಂದಲೇ ಸುಮಾರು 1 ಲಕ್ಷ ಅಭಿಮಾನಿಗಳು ಪಾಲ್ಗೊಳ್ಳಬೇಕು ಎಂದು ಬೊಮ್ಮಾಯಿ ಕರೆ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಸಚಿವ ಬಿ.ಸಿ. ಪಾಟೀಲ್, ಮಾಜಿ ಶಾಸಕರಾದ ಅರುಣಕುಮಾರ್ ಪೂಜಾರ, ಶಿವರಾಜ್ ಸಜ್ಜನರ್, ಡಿ.ಎಂ.ಸಾಲಿ ಸೇರಿದಂತೆ ಹಲವು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಗ್ರಾಮ ಆಡಳಿತ ಅಧಿಕಾರಿಗಳ ಕ್ರೀಡಾಕೂಟ: ಶಿಸ್ತು ಮತ್ತು ಏಕತೆಗೆ ಕ್ರೀಡೆ ಪೂರಕ – ಸಿ.ಎಸ್. ಷಡಾಕ್ಷರಿ

​ಕೋಟೆನಾಡಿನಲ್ಲಿ ಬಿಎಸ್‍ವೈ “ಅಭಿಮಾನೋತ್ಸವ”: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ಆಮಂತ್ರಣ ನೀಡಿದ ಬಿ.ವೈ. ವಿಜಯೇಂದ್ರ

​ಬಿಎಸ್‍ವೈ 50 ವರ್ಷಗಳ ರಾಜಕೀಯ ಪಯಣ: ತುಮಕೂರಿನಲ್ಲಿ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬೃಹತ್ ಅಭಿಮಾನೋತ್ಸವಕ್ಕೆ ಸಿದ್ಧತೆ

ಬೆನ್ನುತಟ್ಟಿ ಹರಸಿದ ಶ್ರೀ ತರಳಬಾಳು ಜಗದ್ಗುರುಗಳು: ಸನ್ಮಾನಕ್ಕಿಂತ ಮಿಗಿಲಾದ ಜಗದ್ಗುರುಗಳ ಪ್ರೋತ್ಸಾಹದ ನುಡಿ, ಪತ್ರಿಕೋದ್ಯಮದ ಹಾದಿಗೆ ಹಾರೈಕೆಯ ಶ್ರೀರಕ್ಷೆ

ಶಿವಮೊಗ್ಗದಲ್ಲಿ ‘ದೇಶೀಯ ದರ್ಶಿನಿ’ ಹೋಟೆಲ್ ಉದ್ಘಾಟನೆ: ಯುವ ಉದ್ಯಮಿ ಅವಿನಾಶ್ ಅವರಿಗೆ ಸಿ.ಎಸ್. ಷಡಾಕ್ಷರಿ ಶುಭ ಹಾರೈಕೆ

ಮೇ 9 ಚಿತ್ರದುರ್ಗದಲ್ಲಿ ಬಿಎಸ್‌ವೈ ಅಭಿಮಾನೋತ್ಸವಕ್ಕೆ ಕೌಂಟ್‌ಡೌನ್: ಶಿವಮೊಗ್ಗದಿಂದ 50 ಸಾವಿರ ಕಾರ್ಯಕರ್ತರ ಭಾಗವಹಿಸುವ ನಿರೀಕ್ಷೆ – ಎನ್.ಕೆ. ಜಗದೀಶ್

Leave a Comment