ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಹುಬ್ಬಳ್ಳಿಯಲ್ಲಿ ಜೂನ್ 6 ರಂದು ಉತ್ತರ ಕರ್ನಾಟಕದ ವೀರಶೈವ ಲಿಂಗಾಯತ ರಿಯಲ್ ಎಸ್ಟೇಟ್ ಉದ್ಯಮಿಗಳ ಬೃಹತ್ ಸಮಾಗಮ

On: May 7, 2026 9:21 PM
Follow Us:

ಹುಬ್ಬಳ್ಳಿ: ಕಿತ್ತೂರು ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಪ್ರಥಮ ಬಾರಿಗೆ ವೀರಶೈವ ಲಿಂಗಾಯತ ಸಮುದಾಯದ ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಒಂದೇ ವೇದಿಕೆಯಡಿ ತರುವ ನಿಟ್ಟಿನಲ್ಲಿ ಅದ್ದೂರಿ ‘ಬಿಸಿನೆಸ್ ಮೀಟ್’ ಅನ್ನು ಆಯೋಜಿಸಲಾಗಿದೆ.

ಬರುವ ಜೂನ್ 6, 2026ರಂದು ಹುಬ್ಬಳ್ಳಿಯ ಹೋಟೆಲ್ ಡೆನಿಸನ್ಸ್ (Hotel Denissons) ನಲ್ಲಿ ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆಯವರೆಗೆ ಈ ಮಹತ್ವದ ಸಮಾಗಮ ನಡೆಯಲಿದೆ. ‘ವೀರಶೈವ ಲಿಂಗಾಯತ ರಿಯಲ್ ಎಸ್ಟೇಟ್ ನೆಟ್ವರ್ಕ್’ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮಕ್ಕೆ “Realty Nexus-2026” ಎಂದು ಹೆಸರಿಡಲಾಗಿದೆ.

ಈ ಸಮಾವೇಶದ ಮುಖ್ಯ ಗುರಿ ಸಮುದಾಯದ ಉದ್ಯಮಿಗಳ ನಡುವೆ ಪರಸ್ಪರ ಬಾಂಧವ್ಯ ವೃದ್ಧಿಸುವುದು ಮತ್ತು ವ್ಯಾಪಾರ ಜಾಲವನ್ನು (Networking) ವಿಸ್ತರಿಸುವುದಾಗಿದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬಿಲ್ಡರ್‌ಗಳು, ಡೆವಲಪರ್‌ಗಳು, ಏಜೆಂಟ್‌ಗಳು ಹಾಗೂ ಈ ಕ್ಷೇತ್ರಕ್ಕೆ ಪೂರಕವಾದ ವ್ಯವಹಾರಗಳಲ್ಲಿರುವ ಎಲ್ಲ ಉದ್ಯಮಿಗಳನ್ನು ಒಂದುಗೂಡಿಸಿ, ಅವರಿಗೆ ಹೊಸ ಮಾರುಕಟ್ಟೆ ಅವಕಾಶಗಳನ್ನು ಪರಿಚಯಿಸುವುದು ಈ ಒಕ್ಕೂಟದ ಆಶಯವಾಗಿದೆ.

ಹುಬ್ಬಳ್ಳಿಯಲ್ಲಿ ನಡೆಯುವ ಈ ರಾಜ್ಯ ಮಟ್ಟದ ಕಾರ್ಯಕ್ರಮದ ಬೆನ್ನಲ್ಲೇ, ಮುಂದಿನ ದಿನಗಳಲ್ಲಿ ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಸಮುದಾಯದ ಉದ್ಯಮಿಗಳನ್ನು ಒಗ್ಗೂಡಿಸಿ ಪ್ರತ್ಯೇಕ ‘ಬಿಸಿನೆಸ್ ಮೀಟ್’ಗಳನ್ನು ನಡೆಸಲು ಸಂಘಟನೆ ನಿರ್ಧರಿಸಿದೆ. ಇದರಿಂದ ಸ್ಥಳೀಯ ಮಟ್ಟದಲ್ಲಿಯೂ ಉದ್ಯಮದ ಬೆಳವಣಿಗೆಗೆ ಹೆಚ್ಚಿನ ಸಹಕಾರ ಸಿಗಲಿದೆ.

ಈ ಕುರಿತು ಮಾಹಿತಿ ನೀಡಿರುವ ವೀರಶೈವ ಲಿಂಗಾಯತ ರಿಯಲ್ ಎಸ್ಟೇಟ್ ನೆಟ್ವರ್ಕ್ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರದೀಪ ಕಂಕಣವಾಡಿ ಅವರು, “ನಮ್ಮ ಸಮುದಾಯದ ಉದ್ಯಮಿಗಳು ಆರ್ಥಿಕವಾಗಿ ಸದೃಢರಾಗಬೇಕು ಮತ್ತು ಒಬ್ಬರಿಗೊಬ್ಬರು ಸಹಕಾರ ನೀಡುವ ಮೂಲಕ ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು ಎನ್ನುವುದು ನಮ್ಮ ಆಶಯ.

ಈ ನಿಟ್ಟಿನಲ್ಲಿ Realty Nexus-2026 ಒಂದು ಭದ್ರ ಬುನಾದಿಯಾಗಲಿದೆ. ಸಮುದಾಯದ ಎಲ್ಲಾ ರಿಯಲ್ ಎಸ್ಟೇಟ್ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು,” ಎಂದು ಮನವಿ ಮಾಡಿದ್ದಾರೆ.

“ನಮ್ಮ ಸಮುದಾಯ – ನಮ್ಮ ನೆಟ್ವರ್ಕ್” ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮವು ಉತ್ತರ ಕರ್ನಾಟಕದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸುವ ನಿರೀಕ್ಷೆಯಿದೆ.

K.M.Sathish Gowda

Join WhatsApp

Join Now

Facebook

Join Now

Read more

ಬಿಎಸ್‌ವೈ ಅಭಿಮಾನೋತ್ಸವಕ್ಕೆ ‘ವೈದ್ಯಕೀಯ ಕವಚ’: ಲಕ್ಷಾಂತರ ಅಭಿಮಾನಿಗಳ ಪಾಲಿಗೆ ಸಂಜೀವಿನಿಯಾದ ಡಾ.ಲಕ್ಷ್ಮಣ್, ಡಾ. ಚನ್ನಮಲ್ಲಯ್ಯ, ಡಾ.ನಾರಾಯಣ್ ತಂಡ

ಇಂಧನ ಉಳಿತಾಯಕ್ಕೆ ಪ್ರಧಾನಿ ಮೋದಿ ಮಾದರಿ: ಎಸ್‌ಪಿಜಿ ಬೆಂಗಾವಲು ಪಡೆಯಲ್ಲಿ 50% ಕಡಿತಕ್ಕೆ ಸೂಚನೆ

ದೇಶಕ್ಕೆ ಬುದ್ಧಿ ಹೇಳುವ ಕೇಂದ್ರಕ್ಕೆ ಒಂದು ಪರೀಕ್ಷೆ ನಡೆಸಲಾಗುತ್ತಿಲ್ಲವೇ? : ಸಚಿವ ಮಧು ಬಂಗಾರಪ್ಪ ವಾಗ್ದಾಳಿ

ಬಸವೇಶ್ವರ ಸೊಸೈಟಿಯ ಶತಮಾನೋತ್ಸವ ಸಂಭ್ರಮ: ಮೇ 16 ಮತ್ತು 17ರಂದು ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಯಡಿಯೂರಪ್ಪ ಅವರಿಗೆ ಅಭಿನಂದನಾ ಸಮಾರಂಭ

ವೈದ್ಯಕೀಯ ಆಕಾಂಕ್ಷಿಗಳಿಗೆ ಬಿಗ್ ಅಪ್‌ಡೇಟ್: ನೀಟ್ 2026 ರದ್ದು; ಶೀಘ್ರದಲ್ಲೇ ಮರುಪರೀಕ್ಷೆಯ ಹೊಸ ದಿನಾಂಕ ಘೋಷಣೆ

ಬಿಎಸ್‌ವೈ ಅಭಿಮಾನೋತ್ಸವದ ಅಭೂತಪೂರ್ವ ಯಶಸ್ಸು: ನಾಡಿನ ಜನತೆ ಹಾಗೂ ಆಗಮಿಸಿದ ಗಣ್ಯರಿಗೆ ಸಂಸದ ಬಿ.ವೈ. ರಾಘವೇಂದ್ರ ಕೃತಜ್ಞತೆ

Leave a Comment