ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗದಲ್ಲಿ ಐತಿಹಾಸಿಕ ಅಡ್ಡಪಲ್ಲಕ್ಕಿ ಮಹೋತ್ಸವ ಯಶಸ್ವಿಗೊಳಿಸಿದ ಸಮಾಜದ ಅಪ್ರತಿಮ ಕಣ್ಣುಗಳು ಸಿ.ಎಸ್. ಷಡಾಕ್ಷರಿ ಹಾಗೂ ಬಳ್ಳೇಕೆರೆ ಸಂತೋಷ್

On: May 22, 2026 12:16 AM
Follow Us:

ಅಡ್ಡಪಲ್ಲಕ್ಕಿ ಮಹೋತ್ಸವದ ಮೂಲಕ ಶಿವಮೊಗ್ಗದ ಕೀರ್ತಿ ಹೆಚ್ಚಿಸಿದ ವೀರಶೈವ ಲಿಂಗಾಯತ ಸಮಾಜದ ಹೆಮ್ಮೆಯ ಜೋಡಿ ಸಿ.ಎಸ್. ಷಡಾಕ್ಷರಿ ಹಾಗೂ ಬಳ್ಳೇಕೆರೆ ಸಂತೋಷ್

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಇತಿಹಾಸದಲ್ಲಿ ಮೇ 17 ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನ. ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಅಂದು ನೆರೆದಿದ್ದ ಸಹಸ್ರಾರು ಭಕ್ತಸಾಗರ, ಮೊಳಗಿದ ಶಿವನಾಮ ಸ್ಮರಣೆ, ಭಕ್ತಿ-ಭಾವದ ಪರಾಕಾಷ್ಠೆ ನಾಡಿನ ಆಧ್ಯಾತ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿತ್ತು. ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವ, ಬೃಹತ್ ಧರ್ಮಜಾಗೃತಿ ಸಮಾವೇಶ ಹಾಗೂ ರೈತರ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ವೀರಶೈವ ಲಿಂಗಾಯತ ಸಮಾಜದಿಂದ ನಡೆದ ಅಭಿನಂದನಾ ಸಮಾರಂಭ ಜಗತ್ ಪ್ರಸಿದ್ಧ ಐತಿಹಾಸಿಕ ಕಾರ್ಯಕ್ರಮವಾಗಿ ಹೊರಹೊಮ್ಮಿತು.

ಈ ಮಹೋತ್ಸವವನ್ನು ಕೇವಲ ಒಂದು ಕಾರ್ಯಕ್ರಮವಾಗಿ ಉಳಿಸದೇ, ಇಡೀ ಸಮಾಜದ ಗರಿಮೆಯನ್ನಾಗಿ ಜಗತ್ತಿಗೆ ಸಾರಿದ ಮಹಾನ್ ರೂವಾರಿಗಳು, ವೀರಶೈವ ಲಿಂಗಾಯತ ಸಮಾಜದ ಎರಡು ಕಣ್ಣುಗಳಂತಿರುವ ಧೀಮಂತ ಸಂಘಟಕರಾದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಹಾಗೂ ಸಮಾಜದ ಯುವ ಮುಖಂಡರಾದ ಬಳ್ಳೇಕೆರೆ ಸಂತೋಷ್.

​ಯಾವುದೇ ಒಂದು ಮಹತ್ಕಾರ್ಯ ಯಶಸ್ವಿಯಾಗಬೇಕಾದರೆ ಅದರ ಹಿಂದಿನ ಯೋಜನೆ ಬಲಿಷ್ಠವಾಗಿರಬೇಕು. ಈ ಐತಿಹಾಸಿಕ ಕಾರ್ಯಕ್ರಮದ ರೂಪುರೇಷೆಗಳು ಸಿದ್ಧವಾಗಿದ್ದು ಎರಡು ತಿಂಗಳ ಮುಂಚೆಯೇ, ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘದ ಕಚೇರಿಯಲ್ಲಿ. ಅಲ್ಲಿ ಸಿ.ಎಸ್. ಷಡಾಕ್ಷರಿ ಹಾಗೂ ಬಳ್ಳೇಕೆರೆ ಸಂತೋಷ್ ಜೋಡಿ ಈ ಕಾರ್ಯಕ್ರಮವನ್ನು ಅತ್ಯಂತ ಭವ್ಯವಾಗಿ ನಡೆಸಲೇಬೇಕೆಂದು ಪಣತೊಟ್ಟಿತು.

ಪಂಚಪೀಠದ ಜಗದ್ಗುರುಗಳಾದ ಶ್ರೀ ರಂಭಾಪುರಿ ಜಗದ್ಗುರುಗಳು, ಶ್ರೀ ಉಜ್ಜಯಿನಿ ಜಗದ್ಗುರುಗಳು, ಶ್ರೀ ಕೇದಾರ ಜಗದ್ಗುರುಗಳು, ಶ್ರೀ ಶ್ರೀಶೈಲ ಜಗದ್ಗುರುಗಳು ಹಾಗೂ ಶ್ರೀ ಕಾಶಿ ಜಗದ್ಗುರುಗಳನ್ನು ಖುದ್ದಾಗಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಜಗದ್ಗುರುಗಳ ಸಲಹೆಯ ಮೇರೆಗೆ ಮೇ 17ರ ದಿನಾಂಕ ನಿಗದಿಯಾಗುತ್ತಿದ್ದಂತೆ, ಈ ಶಕ್ತಿಶಾಲಿ ಜೋಡಿಯ ಸಾಹಸಯಾತ್ರೆ ಆರಂಭವಾಯಿತು.

​ಈ ಇಬ್ಬರು ನಾಯಕರು ಸಮಾಜದ ಪ್ರತಿಯೊಬ್ಬ ಹಿರಿಯರನ್ನು, ಒಳಪಂಗಡಗಳ ಮುಖಂಡರನ್ನು ಖುದ್ದಾಗಿ ಕಂಡು ಸಭೆಗಳನ್ನು ನಡೆಸಿದರು. ಎಲ್ಲರ ಮಾರ್ಗದರ್ಶನ, ಅಭಿಪ್ರಾಯ ಹಾಗೂ ಒಪ್ಪಿಗೆಯನ್ನು ಪಡೆದು ಮುನ್ನಡೆದರು. ಪ್ರತಿ ಹಂತದಲ್ಲೂ ಯಾವುದೇ ಸೋಲಿಗೆ ಹೆದರದೆ, ಗೂಳಿಗಳಂತೆ ಸವಾಲುಗಳನ್ನು ಎದುರಿಸಿ ಮುನ್ನುಗ್ಗಿದ ಈ ಜೋಡಿಯ ಪರಿಶ್ರಮ ಅಪ್ರತಿಮವಾದದ್ದು.

“ಪಂಚಪೀಠಗಳ ಪರಂಪರೆಯು ಸನಾತನ ಧರ್ಮದ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸಿದ ಶ್ರೇಷ್ಠ ಪರಂಪರೆ. ಶಿವಮೊಗ್ಗದಲ್ಲಿ ನಡೆಯಲಿರುವ ಈ ಅಡ್ಡಪಲ್ಲಕ್ಕಿ ಮಹೋತ್ಸವವು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ; ಅದು ನಮ್ಮ ಆಧ್ಯಾತ್ಮಿಕ ಸೌಹಾರ್ದತೆ ಮತ್ತು ಭಕ್ತಿ ಸಂಸ್ಕಾರದ ಪ್ರತೀಕ,” ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಎಸ್. ಷಡಾಕ್ಷರಿಯವರು ಸಮಾಜದ ಸರ್ವರಿಗೂ ಮನವಿ ಮಾಡಿದರು. ಅವರ ಕರೆಗೆ ಸಮಾಜದ ಪ್ರತಿಯೊಂದು ವರ್ಗವೂ ಸ್ಪಂದಿಸಿತು.

ಇನ್ನೊಂದೆಡೆ, “ನಮ್ಮ ವೀರಶೈವ ಲಿಂಗಾಯತ ಸಮಾಜವು ಕೇವಲ ಒಂದು ಸಮುದಾಯವಲ್ಲ; ಅದೊಂದು ಮಹಾನ್ ಸಂಸ್ಕೃತಿ. ಮಠ-ಮಾನ್ಯಗಳು, ದಾಸೋಹ ಮತ್ತು ಶಿಕ್ಷಣ ಪರಂಪರೆಯನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಸಮಾಜದ ಉಳಿವೇ ನಮ್ಮ ಹೆಮ್ಮೆ – ಗುರು ಪರಂಪರೆಯ ಗೌರವವೇ ನಮ್ಮ ಜವಾಬ್ದಾರಿ,” ಎಂದು ಬಳ್ಳೇಕೆರೆ ಸಂತೋಷ್ ಅವರು ಸಮಾಜದಲ್ಲಿ ಜಾಗೃತಿ ಮೂಡಿಸಿದರು.

ಇಂದಿನ ಯುವ ಪೀಳಿಗೆ ಸಂಘಟನೆಯಿಂದ ದೂರ ಸರಿಯುತ್ತಿರುವ ಆತಂಕದ ಮಧ್ಯೆ, ಸಿ.ಎಸ್. ಷಡಾಕ್ಷರಿ ಹಾಗೂ ಬಳ್ಳೇಕೆರೆ ಸಂತೋಷ್ ಯುವ ಸಮುದಾಯಕ್ಕೆ ಹೊಸ ಚೇತನ ನೀಡಿದರು. “ನಾವು ಒಳಪಂಗಡಗಳಾಗಿ ಒಡೆದರೆ ಸೊರಗುತ್ತೇವೆ, ಸಮಾಜವಾಗಿ ಒಂದಾದರೆ ಗೆಲ್ಲುತ್ತೇವೆ” ಎಂಬ ಮಂತ್ರವನ್ನು ಯುವಕರ ಮನದಲ್ಲಿ ಬಿತ್ತಿ, ಸಾವಿರಾರು ಯುವಕರು ಈ ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವಲ್ಲಿ ಈ ಜೋಡಿ ಯಶಸ್ವಿಯಾಯಿತು.

ಈ ಐತಿಹಾಸಿಕ ಮಹೋತ್ಸವದ ಯಶಸ್ಸಿಗಾಗಿ ಒಂದು ಬಲಿಷ್ಠ ಸಮಿತಿಯನ್ನು ರಚಿಸಲಾಗಿತ್ತು. ಸಂಸದರಾದ ಬಿ.ವೈ. ರಾಘವೇಂದ್ರ (ಅಧ್ಯಕ್ಷರು), ಮಾಜಿ ಶಾಸಕ ಆಯನೂರು ಮಂಜುನಾಥ (ಕಾರ್ಯಾಧ್ಯಕ್ಷರು), ಎಸ್. ರುದ್ರೇಗೌಡ (ಗೌರವಾಧ್ಯಕ್ಷರು), ಶಾಸಕರುಗಳಾದ ಬಿ.ಕೆ. ಸಂಗಮೇಶ್ವರ, ಬಿ.ವೈ. ವಿಜಯೇಂದ್ರ, ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ್ ಸರ್ಜಿ, ಹಾಗೂ ಕೋಶಾಧ್ಯಕ್ಷರಾದ ಎಸ್.ಪಿ. ದಿನೇಶ್ ಅವರನ್ನೊಳಗೊಂಡ ತಂಡ ರಚಿಸಲಾಯಿತು. ಇದರೊಂದಿಗೆ ಎಸ್. ಎಸ್. ಜ್ಯೋತಿಪ್ರಕಾಶ್, ಹೆಚ್.ಎಂ. ಚಂದ್ರಶೇಖರಪ್ಪ, ರುದ್ರಮುನಿ ಸಜ್ಜನ್, ಜೆ. ವಿರೂಪಾಕ್ಷಪ್ಪ, ಹೆಚ್.ವಿ. ಮಹೇಶ್ವರಪ್ಪ ಅವರಂತಹ ಹಿರಿಯರ ಮಾರ್ಗದರ್ಶನದಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸಿ, ಕಾರ್ಯಕ್ರಮದ ಪ್ರತಿ ಹಂತದಲ್ಲೂ ಶಿಸ್ತು ಕಾಯ್ದುಕೊಳ್ಳಲಾಯಿತು.

ಸಹಸ್ರಾರು ಸಂಖ್ಯೆಯಲ್ಲಿ ಸಮಾಜದ ಬಾಂಧವರನ್ನು ಒಂದೇ ವೇದಿಕೆಯಡಿ ತಂದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸಮಾಜಸೇವೆಯನ್ನು ಗೌರವಿಸಿದ ರೀತಿಗೆ ಪಂಚಪೀಠದ ಜಗದ್ಗುರುಗಳು ಅತ್ಯಂತ ಪ್ರಸನ್ನರಾಗಿ ಆಶೀರ್ವಚನ ನೀಡಿದರು. ಇಡೀ ವೀರಶೈವ ಲಿಂಗಾಯತ ಸಮಾಜದ ಹಿರಿಯರು, ಗಣ್ಯರು, ಮಹಿಳಾ ಘಟಕಗಳು ಹಾಗೂ ಯುವ ಘಟಕಗಳು ಈ ಜೋಡಿಯ ಸಂಘಟನಾ ಚಾತುರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದವು.

​ಈ ಐತಿಹಾಸಿಕ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವದ ಮೆರವಣಿಗೆಯು ನಗರದ ಐತಿಹಾಸಿಕ ಶ್ರೀ ಬಸವೇಶ್ವರ ದೇವಸ್ಥಾನದಿಂದ ಅತ್ಯಂತ ಸಡಗರ-ಸಂಭ್ರಮದಿಂದ ಪ್ರಾರಂಭವಾಯಿತು. ಶಿವಮೊಗ್ಗ ಜಿಲ್ಲೆಯ ಕೇವಲ ನಗರ ಪ್ರದೇಶ ಮಾತ್ರವಲ್ಲದೆ, ಜಿಲ್ಲೆಯ ಎಲ್ಲಾ ತಾಲೂಕುಗಳು ಹಾಗೂ ಮೂಲೆ ಮೂಲೆಗಳ ಗ್ರಾಮೀಣ ಪ್ರದೇಶಗಳಿಂದಲೂ ವೀರಶೈವ ಲಿಂಗಾಯತ ಸಮಾಜದ ಸಾವಿರಾರು ಬಂಧುಗಳನ್ನು ಒಗ್ಗೂಡಿಸಿ, ಒಂದೇ ವೇದಿಕೆಯಡಿ ತರುವಲ್ಲಿ ಸಿ.ಎಸ್. ಷಡಾಕ್ಷರಿ ಹಾಗೂ ಬಳ್ಳೇಕೆರೆ ಸಂತೋಷ್ ಜೋಡಿ ಅಭೂತಪೂರ್ವ ಯಶಸ್ಸು ಸಾಧಿಸಿತು.

ಹಳ್ಳಿ ಹಳ್ಳಿಗಳಿಂದ ಹರಿದುಬಂದ ಭಕ್ತಸಾಗರ, ಸಾಂಪ್ರದಾಯಿಕ ಕಲಾತಂಡಗಳ ವೈಭವ ಹಾಗೂ ಜಗದ್ಗುರುಗಳ ದರ್ಶನ ಪಡೆಯಲು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನಸ್ತೋಮ ಶಿವಮೊಗ್ಗದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಭಕ್ತಿ ಸಂಚಲನವನ್ನು ಸೃಷ್ಟಿಸಿತು. ಪ್ರತಿಯೊಬ್ಬ ಗ್ರಾಮೀಣ ಮತ್ತು ತಾಲೂಕು ಮಟ್ಟದ ಸಮಾಜದ ಬಾಂಧವರನ್ನು ತಲುಪಿ, ಅವರನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಿದ ಈ ಜೋಡಿಯ ಶ್ರಮ ನಿಜಕ್ಕೂ ಶ್ಲಾಘನೀಯ.

​ಶಿವಮೊಗ್ಗದ ಮಣ್ಣಿನಲ್ಲಿ ಈ ಮಹೋತ್ಸವದ ಮೂಲಕ ಸಿ.ಎಸ್.ಷಡಾಕ್ಷರಿ ಹಾಗೂ ಬಳ್ಳೇಕೆರೆ ಸಂತೋಷ್ ಜೋಡಿ ಇತಿಹಾಸ ನಿರ್ಮಿಸಿದೆ. ಸಮಾಜಕ್ಕೆ ಕಣ್ಣುಗಳಂತಿರುವ ಈ ಇಬ್ಬರು ಧೀಮಂತ ನಾಯಕರು ಭವಿಷ್ಯದಲ್ಲಿ ರಾಜಕೀಯವಾಗಿಯೂ ಉನ್ನತ ಮಟ್ಟಕ್ಕೇರಿ, ಸಮಾಜಕ್ಕೆ ಮತ್ತಷ್ಟು ದೊಡ್ಡ ಕೊಡುಗೆಗಳನ್ನು ನೀಡುವಂತಾಗಲಿ. ಇವರ ಈ ಒಗ್ಗಟ್ಟಿನ ಶ್ರಮ, ಮುಂಬರುವ ದಿನಗಳಲ್ಲಿ ಮಹಿಳೆಯರಿಗೆ, ಯುವಕರಿಗೆ ಹಾಗೂ ಇಡೀ ಸಮಾಜಕ್ಕೆ ಸದಾ ಪ್ರೇರಣೆಯಾಗಿ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ಸಮಸ್ತ ಸಮಾಜದ ಹಾರೈಕೆಯಾಗಿದೆ.

ಈ ಮಹೋತ್ಸವವು ಶಿವಮೊಗ್ಗ ಜಿಲ್ಲೆಯ ಹೆಸರನ್ನು ರಾಜ್ಯ ಮಾತ್ರವಲ್ಲದೆ ಜಗತ್ತಿನ ಮಟ್ಟದಲ್ಲೂ ಹೆಮ್ಮೆಯಿಂದ ಪ್ರತಿಧ್ವನಿಸುವಂತೆ ಮಾಡಿತು. ಮಹಿಳೆಯರು, ಯುವಕರು, ಹಿರಿಯರು ಸೇರಿದಂತೆ ಸಮಾಜದ ಪ್ರತಿಯೊಬ್ಬರಿಗೂ ಇದು ಮುಂದಿನ ದಿನಗಳಲ್ಲಿ ಪ್ರೇರಣೆಯಾಗಲಿದೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

ಸಮಾಜದ ಒಗ್ಗಟ್ಟಿಗೆ ಶ್ರಮಿಸಿದ ಸಿ.ಎಸ್.ಷಡಾಕ್ಷರಿ–ಬಳ್ಳೇಕೆರೆ ಸಂತೋಷ್ ಜೋಡಿಗೆ ಡಿಟೆಕ್ಟಿವ್ ನ್ಯೂಸ್24 ಕೃತಜ್ಞತೆಗಳು

ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟು, ಗುರುಪರಂಪರೆಯ ವೈಭವ ಹಾಗೂ ಶಿವಮೊಗ್ಗದ ಹೆಮ್ಮೆಯನ್ನು ರಾಜ್ಯದ ಗಮನ ಸೆಳೆಯುವಂತೆ ಮಾಡಿದ ಸಿ.ಎಸ್. ಷಡಾಕ್ಷರಿ ಮತ್ತು ಬಳ್ಳೇಕೆರೆ ಸಂತೋಷ್ ಅವರ ಸಮಾಜಮುಖಿ ಸೇವೆ ನಿಜಕ್ಕೂ ಶ್ಲಾಘನೀಯ. ಇಂತಹ ಐತಿಹಾಸಿಕ ಮಹೋತ್ಸವವನ್ನು ಯಶಸ್ವಿಗೊಳಿಸಿದ ಈ ಹೆಮ್ಮೆಯ ಜೋಡಿಗೆ ನಮ್ಮ ಡಿಟೆಕ್ಟಿವ್ ನ್ಯೂಸ್24 ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಕೃತಜ್ಞತೆಗಳು.

K.M.Sathish Gowda

Join WhatsApp

Join Now

Facebook

Join Now

Read more

ಮಾನವ ಜನ್ಮ ಭಗವಂತನ ಅಪೂರ್ವ ಕೊಡುಗೆ; ಧರ್ಮದ ಹಾದಿಯಲ್ಲಿ ಬದುಕು ಸಾರ್ಥಕವಾಗಲಿ: ಶ್ರೀ ರಂಭಾಪುರಿ ಜಗದ್ಗುರುಗಳು

ಯುವಶಕ್ತಿ ಜಾಗೃತವಾದರೆ ರಾಷ್ಟ್ರದ ಭವಿಷ್ಯ ಬದಲಾಗುತ್ತದೆ: ಶ್ರೀ ರಂಭಾಪುರಿ ಜಗದ್ಗುರುಗಳು

ಮಾನವೀಯತೆಯ ಬೆಳವಣಿಗೆಯೇ ಸಮಾಜದ ಶಕ್ತಿ; ಧರ್ಮ ಪ್ರಜ್ಞೆಯನ್ನು ಆಚರಣೆಯಲ್ಲಿ ಅಳವಡಿಸಿಕೊಂಡಾಗಲೇ ಶಾಂತಿ ಸಾಧ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

ಸ್ವಾರ್ಥ ತೊರೆದು ಸತ್ಯದ ಹಾದಿಯಲ್ಲಿ ನಡೆದರೆ ಬದುಕು ಸಾರ್ಥಕ: ಶ್ರೀ ರಂಭಾಪುರಿ ಜಗದ್ಗುರುಗಳು

ದಾವಣಗೆರೆಯಲ್ಲಿ ವೈಭವದ ‘ಜನಜಾಗೃತಿ ಧರ್ಮ ಸಮಾರಂಭ’; ಬದಲಾವಣೆಯ ಹಾದಿಯಲ್ಲಿ ಬೆಳವಣಿಗೆ ಸಾಧಿಸಿ ಮೌಲ್ಯಯುತ ಬದುಕು ರೂಪಿಸಿಕೊಳ್ಳಿ: ಶ್ರೀ ರಂಭಾಪುರಿ ಜಗದ್ಗುರುಗಳು

ಧರ್ಮ ಮತ್ತು ಆಧ್ಯಾತ್ಮಿಕ ಮೌಲ್ಯಗಳೇ ಸುಖ-ಶಾಂತಿಯ ಬದುಕಿನ ಅಡಿಪಾಯ: ಶ್ರೀ ರಂಭಾಪುರಿ ಜಗದ್ಗುರುಗಳು

Leave a Comment