ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

SIR ಮನೆ ಮನೆ ಅಭಿಯಾನಕ್ಕೆ ಯುವಶಕ್ತಿ ಸಜ್ಜಾಗಲಿ; ಕಾಂಗ್ರೆಸ್ ಅಪಪ್ರಚಾರಕ್ಕೆ ತಕ್ಕ ಉತ್ತರ ಕೊಡಿ: ಸಂಸದ ಬಿ.ವೈ. ರಾಘವೇಂದ್ರ

On: July 25, 2026 2:15 PM
Follow Us:

ಶಿವಮೊಗ್ಗ: ದೇಶದಲ್ಲಿ ಯುವಜನರ ಭವಿಷ್ಯವನ್ನು ರೂಪಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ದಿಟ್ಟ ಹಾಗೂ ಪಾರದರ್ಶಕ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಬೆಂಬಲಿತ ಶಕ್ತಿಗಳು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ದೇಶ ಹಾಳಾದರೂ ಪರವಾಗಿಲ್ಲ ಎಂಬಂತೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿವೆ. ಇಂತಹ ಕುತಂತ್ರಗಳಿಗೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಎದೆಗುಂದದೆ ಧೈರ್ಯದಿಂದ ಮುನ್ನುಗ್ಗಿ ಸೂಕ್ತ ಪ್ರತ್ಯುತ್ತರ ನೀಡಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಕರೆ ನೀಡಿದರು.

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ “ಬಿಜೆಪಿ ಯುವ ಮೋರ್ಚಾ ಶಿವಮೊಗ್ಗ ಜಿಲ್ಲೆ – ಜಿಲ್ಲಾ ಕಾರ್ಯಕಾರಿಣಿ ಸಭೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

NEET ಪರೀಕ್ಷಾ ಅಕ್ರಮ ತಡೆಗೆ ಕೇಂದ್ರದ ಕಟ್ಟುನಿಟ್ಟಿನ ಕ್ರಮಗಳು: ಪ್ರಧಾನಿ ಮೋದಿಯ ನಾಯಕತ್ವಕ್ಕೆ ಶ್ಲಾಘನೆ

🧡 ತ್ವರಿತ ಕ್ರಮ ಹಾಗೂ ಪಾರದರ್ಶಕ ಮರುಪರೀಕ್ಷೆ

ಕಳೆದ ಕೆಲವು ವಾರಗಳಿಂದ ದೇಶದಲ್ಲಿ ನಡೆದಿರುವ ಬೆಳವಣಿಗೆಗಳನ್ನು ಎಲ್ಲರೂ ಗಮನಿಸುತ್ತಿದ್ದೀರಿ. ಮೇ ತಿಂಗಳಲ್ಲಿ ನಡೆದ NEET ಪರೀಕ್ಷೆಯ ಬಳಿಕ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಆರೋಪಗಳು ಕೇಳಿಬಂದವು. ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವುದೇ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ತ್ವರಿತ ಕ್ರಮ ಕೈಗೊಂಡಿತು.

ಅಲ್ಪಾವಧಿಯಲ್ಲೇ ಹೊಸ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ, ಯಾವುದೇ ಲೋಪವಾಗದಂತೆ ಅತ್ಯಂತ ಪಾರದರ್ಶಕವಾಗಿ ಮರುಪರೀಕ್ಷೆಯನ್ನು ನಡೆಸಿತು. ಮರುಪರೀಕ್ಷೆಯ ಫಲಿತಾಂಶವೂ ಪ್ರಕಟವಾಗಿದ್ದು, ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ಮುಂದುವರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
💚 ವಿಶೇಷ ನ್ಯಾಯಾಲಯ ಹಾಗೂ ಹೊಸ ಕಾಯ್ದೆ

ಇದರೊಂದಿಗೆ ಮಾತ್ರ ಸರ್ಕಾರ ತನ್ನ ಜವಾಬ್ದಾರಿಯನ್ನು ಮುಗಿಸಿಲ್ಲ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ (Special Court) ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಜೊತೆಗೆ, ಪರೀಕ್ಷಾ ಅಕ್ರಮಗಳನ್ನು ತಡೆಯಲು ಇನ್ನಷ್ಟು ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಲು ಸಂಸತ್ತಿನಲ್ಲಿ ವಿಶೇಷ ವಿಧೇಯಕ (Bill) ಮಂಡಿಸುವ ಉದ್ದೇಶವನ್ನು ಪ್ರಕಟಿಸಲಾಗಿದೆ. ತನಿಖೆಯ ಭಾಗವಾಗಿ ಹಲವಾರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ ಸಂಶಯ ವ್ಯಕ್ತವಾಗಿರುವ ಕೆಲ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.
🧡 ಬಿ.ವೈ.ರಾಘವೇಂದ್ರ ಅವರ ಹೇಳಿಕೆ
“ಹಿಂದಿನ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿಯೂ ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿದ್ದವು. ಆದರೆ ಅವುಗಳನ್ನು ತಡೆಯಲು ಇಷ್ಟೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಉದಾಹರಣೆಗಳು ವಿರಳ. ಇಂದಿನ ತಂತ್ರಜ್ಞಾನ ಯುಗದಲ್ಲಿ ಕೆಲವರು ಅಕ್ರಮ ಮಾರ್ಗದಿಂದ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಲು ಯತ್ನಿಸಿದರೂ, ಕೇಂದ್ರ ಸರ್ಕಾರ ಪಾರದರ್ಶಕವಾಗಿ ಮರುಪರೀಕ್ಷೆ ನಡೆಸುವ ಮೂಲಕ ಅರ್ಹ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವ ಕೆಲಸ ಮಾಡಿದೆ” ಎಂದು ಬಿ.ವೈ.ರಾಘವೇಂದ್ರ ಹೇಳಿದರು.

ದೇಶದ ಯುವಕರ ಭವಿಷ್ಯ ಸುರಕ್ಷಿತಗೊಳಿಸಲು ಮೋದಿ ಸರ್ಕಾರ ಬದ್ಧವಾಗಿದೆ

🧡 ಐತಿಹಾಸಿಕ ನಿರ್ಧಾರಗಳು ಹಾಗೂ ನವ ದೃಷ್ಟಿಕೋನ

ಪ್ರಧಾನಿ ನರೇಂದ್ರ ಮೋದಿ ದೇಶದ ಯುವಜನರ ಭವಿಷ್ಯಕ್ಕಾಗಿ ಹಲವು ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಶಿಕ್ಷಣ, ವೈದ್ಯಕೀಯ, ಕೌಶಲಾಭಿವೃದ್ಧಿ, ಉದ್ಯೋಗ ಸೃಷ್ಟಿ, ಸ್ಟಾರ್ಟ್‌ಅಪ್, ಡಿಜಿಟಲ್ ಇಂಡಿಯಾ, ವಿಶ್ವಕರ್ಮ ಯೋಜನೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ದೇಶವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸಿದ್ದಾರೆ.

💚 ಯುವಜನತೆಗೆ ಹೊಸ ಅವಕಾಶಗಳು

ಮೆಡಿಕಲ್ ಕಾಲೇಜುಗಳ ಸಂಖ್ಯೆ ಹೆಚ್ಚಳ, ವೈದ್ಯಕೀಯ ಸೀಟುಗಳ ವಿಸ್ತರಣೆ, ಕೌಶಲಾಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ಯೋಜನೆಗಳಿಂದ ಯುವಜನರಿಗೆ ಹೊಸ ಅವಕಾಶಗಳು ದೊರಕಿವೆ.

ವಿಶ್ವಕರ್ಮ ಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿದ್ದು, ಹೆಚ್ಚಿನ ಸಂಖ್ಯೆಯ ಯುವಕರು ಇದರ ಲಾಭ ಪಡೆದಿದ್ದಾರೆ ಎಂದು ತಿಳಿಸಿದರು.
🧡 ದೃಢ ಸಂಕಲ್ಪದ ನಾಯಕತ್ವ
ದೇಶದ ಅಭಿವೃದ್ಧಿಗೆ ಅಡ್ಡಿಯಾಗದೆ ಯುವಜನರ ಕನಸುಗಳನ್ನು ಸಾಕಾರಗೊಳಿಸುವ ದೃಢ ಸಂಕಲ್ಪದೊಂದಿಗೆ ಪ್ರಧಾನಿ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

ಮೋದಿಜಿಯವರ ಮೇಲಿನ ಹಳೆಯ ಸವಾಲುಗಳು ಮತ್ತು ಕಾಂಗ್ರೆಸ್‌ನ ಸುದೀರ್ಘ ಪಿತೂರಿಯ ಇತಿಹಾಸ

ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಗೋದ್ರಾ ಘಟನೆಯ ಮೂಲಕ ಅವರಿಗೆ ಎಷ್ಟೇ ಮಾನಸಿಕ ಹಿಂಸೆ ನೀಡಿದರೂ, ಆ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತರು. ಪ್ರಧಾನಿಯಾದ ಮೇಲೆಯೂ ಕಾಂಗ್ರೆಸ್ ಒಂದಿಲ್ಲೊಂದು ವಿಘ್ನ ತರುತ್ತಲೇ ಬಂದಿದೆ.

💚 ಸವಾಲುಗಳು ಮತ್ತು ವಿಘ್ನಗಳ ಕಾಲಾನುಕ್ರಮ (2015 – 2021)
  • 2015: ಲ್ಯಾಂಡ್ ಅಕ್ವಿಸಿಷನ್ (ಭೂಸ್ವಾಧೀನ) ಮಸೂದೆ ತಂದಾಗ ದೇಶಾದ್ಯಂತ ಅಪಪ್ರಚಾರ ನಡೆಸಿದರು.
  • 2015-16: GST ಮಸೂದೆ ಅಂಗೀಕಾರಕ್ಕೆ ದೀರ್ಘಕಾಲದ ಕಂಟಕ ತಂದೊಡ್ಡಿದರು.
  • 2016: ನೋಟು ಅಮಾನ್ಯೀಕರಣ (Demonetisation) ಸಮಯದಲ್ಲಿ ಜನರನ್ನು ಎತ್ತಿಕಟ್ಟುವ ಕೆಲಸ ಮಾಡಿದರು.
  • 2018: ರಫೇಲ್ ಯುದ್ಧ ವಿಮಾನ ಒಪ್ಪಂದದ ವಿಚಾರದಲ್ಲಿ ಸುಳ್ಳುಗಳನ್ನು ಹಬ್ಬಿಸಿ ತಪ್ಪುದಾರಿಗೆ ಎಳೆದರು.
  • ಆರ್ಟಿಕಲ್ 370: 1990ರಲ್ಲಿ ಮೋದಿಜಿಯವರು ತೊಡಗಿಸಿಕೊಂಡು, ದೇಶದ ಹಿತಕ್ಕಾಗಿ ಕಾಯಿದೆ ರದ್ದುಗೊಳಿಸಿದಾಗಲೂ ವಿರೋಧಿಸಿದರು.
  • 2019-20: ಪೌರತ್ವ ತಿದ್ದುಪಡಿ ಕಾಯಿದೆ (CAA) ವಿರುದ್ಧ ದೇಶಾದ್ಯಂತ ದಂಗೆಯೆಬ್ಬಿಸುವ ಯತ್ನ ಮಾಡಿದರು.
  • 2020 (ಕೋವಿಡ್ ಸಮಯ): ಇಡೀ ಪ್ರಪಂಚವೇ ಕೊರೊನಾದಿಂದ ಸಾವು-ನೋವು ಕಂಡು ಆರ್ಥಿಕವಾಗಿ ನರಳುತ್ತಿರುವಾಗಲೂ ರಾಜಕಾರಣ ಮಾಡಿದರು.
  • 2020-21 (ಕೃಷಿ ಕಾಯಿದೆ): ರೈತ ಹೋರಾಟದ ನೆಪದಲ್ಲಿ ಕೆಂಪುಕೋಟೆಯ ಮೇಲೆ ಖಾಲಿಸ್ತಾನ್ ಧ್ವಜ ಹಾರಿಸುವ ಮಟ್ಟಕ್ಕೆ ಪ್ರಚೋದನೆ ನೀಡಿದರು.
🧡 ತುರ್ತು ಪರಿಸ್ಥಿತಿಯ ಇತಿಹಾಸ ಮತ್ತು ರಾಜಕೀಯ

ಜೂನ್ 25, 1975 ರಂದು ರಾಹುಲ್ ಗಾಂಧಿಯವರ ಅಜ್ಜಿ (ಇಂದಿರಾ ಗಾಂಧಿ) ದೇಶದ ಮೇಲೆ ತುರ್ತು ಪರಿಸ್ಥಿತಿ (Emergency) ಹೇರಿದ್ದರು.

ಇಂತಹ ಇತಿಹಾಸವಿರುವ ಕಾಂಗ್ರೆಸ್, ಇವತ್ತು ಪ್ರಜಾಪ್ರಭುತ್ವದ ಹತ್ಯೆಯಾಗಿದೆ ಎಂದು ಮಾತನಾಡುತ್ತಾ ಹೋರಾಟಗಾರರ ಮುಖಾಂತರ ಪಿತೂರಿ ನಡೆಸುತ್ತಿದೆ.
💚 ದೇಶ ನಿರ್ಮಾಣದ ದೃಢ ಸಂಕಲ್ಪ
ಮೋದಿಯವರಿಗೆ ಒಂದು ದಿನವೂ ನೆಮ್ಮದಿಯಿಂದ ಕೆಲಸ ಮಾಡಲು ಬಿಟ್ಟಿಲ್ಲವಾದರೂ, ಅವರು ತಲೆಗೆ ಕೈಹೊತ್ತು ಕುಳಿತುಕೊಳ್ಳದೆ ಎಲ್ಲ ಬಾಣಗಳನ್ನು ಹೊಡೆದೋಡಿಸಿ ದೇಶ ಕಟ್ಟುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕು: ಪ್ರಿಯಾಂಕ್ ಖರ್ಗೆ ಮತ್ತು ಬಿ.ಕೆ. ಹರಿಪ್ರಸಾದ್ ವಿರುದ್ಧ ವಾಗ್ದಳಿ

ಆರ್‌ಎಸ್‌ಎಸ್ ಹಾಗೂ ಸ್ವಯಂಸೇವಕರಿಗೆ ಕಿರುಕುಳದ ಆರೋಪ

ರಾಜ್ಯ ಸರ್ಕಾರದ ಕೆಟ್ಟ ನಡವಳಿಕೆಯನ್ನು ಖಂಡಿಸಿದ ಸಂಸದರು, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳು ತೀವ್ರ ಪ್ರಚೋದನಕಾರಿಯಾಗಿವೆ ಎಂದರು.

ಬೇಕು ಅಂತಲೇ ನಮ್ಮ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS), ನಮ್ಮ ಪರಿವಾರದ ಕಚೇರಿಗಳು ಹಾಗೂ ಸ್ವಯಂಸೇವಕರಿಗೆ ಕಿರುಕುಳ ನೀಡುವ ಚಿಂತನೆ ಗೃಹ ಸಚಿವರ ಮಾತಿನಲ್ಲಿ ಎದ್ದು ಕಾಣುತ್ತಿದೆ.
ಬಿಜೆಪಿಯವರ ಮೇಲಿನ ದಾಳಿ ಹಾಗೂ ಸರ್ಕಾರದ ಪ್ರಚೋದನೆ

ಇನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿ. ಕೆ. ಹರಿಪ್ರಸಾದ್ ಅವರ ಹಿಸ್ಟರಿ ಮತ್ತು ಬ್ಯಾಕ್‌ಗ್ರೌಂಡ್ ಬಗ್ಗೆ ಮಾತನಾಡುವ ಅವಶ್ಯಕತೆಯೇ ಇಲ್ಲ. ಅವರ ಪ್ರಚೋದನೆಯ ಫಲವಾಗಿಯೇ ನೆನ್ನೆ ಕಾಂಗ್ರೆಸ್ ಪುಢಾರಿಗಳು ಬಿಜೆಪಿ ಆಫೀಸಿಗೆ ಎರಗುವ ಕೆಲಸ ಮಾಡಿದ್ದಾರೆ. ಹರಿಹರ ಶಾಸಕ ಬಿ.ಪಿ.ಹರೀಶ್ ಅವರ ಮೇಲೆ ಮೊಟ್ಟೆ ಎಸೆಯುವ ಪ್ರಯತ್ನ ಮಾಡಿದರು.

ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರನ್ನು ಪೊಲೀಸ್ ವ್ಯಾನ್‌ನಲ್ಲಿ ಬಂಧಿಸಿ ಕರೆದೊಯ್ಯುವಾಗ, ಬೇಕೆಂದೇ ಕೆಪಿಸಿಸಿ ಆಫೀಸ್ ಮುಂಭಾಗ ವಾಹನವನ್ನು ಸ್ಲೋ ಡೌನ್ ಮಾಡಿ, “ಕಲ್ಲು ಹೊಡೆಯಿರಿ, ಮೊಟ್ಟೆ ಹೊಡೆಯಿರಿ” ಎಂದು ಪೊಲೀಸರೇ ಇಂಡೈರೆಕ್ಟಾಗಿ ಪ್ರೇರಣೆ ನೀಡುವಂತೆ ಈ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿದೆ.
ಬಿ.ವೈ.ರಾಘವೇಂದ್ರ ಅವರ ಎಚ್ಚರಿಕೆ
ಬರುವಂತಹ 1.5 ರಿಂದ 2 ವರ್ಷಗಳು ಸವಾಲಿನ ದಿನಗಳಾಗಿದ್ದು, ಆ ಸವಾಲಿಗೆ ನಾವು ತೊಡೆ ತಟ್ಟಿ ನಿಲ್ಲಬೇಕಾಗಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

ಮಹಾ ಸಂಪರ್ಕ ಅಭಿಯಾನ ಮತ್ತು ಜುಲೈ 25-26 ರ ಮನೆ ಮನೆ ಭೇಟಿ (SIR)

ಸ್ವಾತಂತ್ರ್ಯದ ಮೌಲ್ಯ ಹಾಗೂ ದೇಶ ಕಟ್ಟುವ ಕಾಯಕ

ದೇಶದಲ್ಲಿ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಚಂದ್ರಶೇಖರ್ ಆಜಾದ್ ಅವರಂತಹ ಮಹಾನಾಯಕರ ಹೋರಾಟದ ಫಲವಾಗಿ ಸಿಕ್ಕ ಸ್ವಾತಂತ್ರ್ಯವನ್ನು ಉಳಿಸಿಕೊಂಡು ದೇಶ ಕಟ್ಟುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಾಲಿಗೆ ಒಂದು ಹನಿ ಹುಳಿ ಹಾಕಿದರೆ ಹಾಲು ಕೆಡುವಂತೆ ಕಾಂಗ್ರೆಸ್ ಹುಳಿ ಹಿಂಡುವ ಕೆಲಸ ಮಾಡುತ್ತಿದೆ.

“ಕಾಂಗ್ರೆಸ್ ಸ್ವಾತಂತ್ರ್ಯ ಬಂದಾಗಿನಿಂದಲೂ ಯುವಜನತೆಗೆ ಆಶ್ವಾಸನೆ ಮತ್ತು ಆಮಿಷ ಒಡ್ಡುವುದನ್ನು ಬಿಟ್ಟರೆ ಬೇರೇನೂ ಮಾಡಲಿಲ್ಲ” ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಜುಲೈ 25 ಮತ್ತು 26 ರ ‘ಮಹಾ ಸಂಪರ್ಕ ಅಭಿಯಾನ’

SIR (ವಿಶೇಷ ಸಂಕ್ಷಿಪ್ತ ಪರಿಷ್ಕರಣೆ) ಅಂಗವಾಗಿ ಇಂದು ಮತ್ತು ನಾಳೆ (ಜುಲೈ 25 ಹಾಗೂ 26) ಮನೆ ಮನೆಗೆ ಭೇಟಿ ನೀಡುವ ‘ಮಹಾ ಸಂಪರ್ಕ ಅಭಿಯಾನ’ ಆಯೋಜಿಸಲಾಗಿದೆ.

ಈಗಾಗಲೇ ನಾನು ಬೆಳಗ್ಗೆ 3 ಮನೆ ಮುಗಿಸಿದ್ದು, ಇಂದು 10 ಹಾಗೂ ನಾಳೆ 10 ಮನೆಗಳು ಸೇರಿದಂತೆ ಒಟ್ಟು 20 ಮನೆಗಳಿಗೆ ಭೇಟಿ ನೀಡುತ್ತಿದ್ದೇನೆ. ಹಿರಿಯ ಮುಖಂಡರಾದ ದತ್ತಾತ್ರೇಯ ಅವರ ನೇತೃತ್ವದಲ್ಲಿ ಈ ಅಭಿಯಾನ ನಡೆಯುತ್ತಿದ್ದು, ಇದನ್ನು ಯಶಸ್ವಿಗೊಳಿಸಬೇಕು.
ಅಕ್ರಮ ವಾಸಸ್ಥಳ ಪ್ರಮಾಣಪತ್ರಗಳಿಗೆ ತಡೆ ಹಾಗೂ ಯುವ ಮೋರ್ಚಾಗೆ ಸೂಚನೆ

ತಂದೆ-ತಾಯಿಯ ವಿಳಾಸವಿಲ್ಲದವರಿಗೂ ಸಹ ಅತ್ಯಂತ ಸುಲಭವಾಗಿ ಪರ್ಮನೆಂಟ್ ರೆಸಿಡೆನ್ಸ್ ಸರ್ಟಿಫಿಕೇಟ್ (ವಾಸಸ್ಥಳ ಪ್ರಮಾಣಪತ್ರ) ಸಿಗುವಂತಾಗಿದೆ. ಅಧಿಕಾರಿಗಳು SIR ಕೆಲಸದಲ್ಲಿ ಬ್ಯುಸಿಯಾಗಿರುವುದನ್ನು ಬಳಸಿಕೊಂಡು, ‘ಮಾಹಿತಿ ಇಲ್ಲ’ ಎಂದು ಬರೆಸಿಕೊಂಡು ಕೋರ್ಟ್ ಮೂಲಕ ನಕಲಿ/ಅಕ್ರಮ ದಾಖಲೆ ಮಾಡಿಕೊಳ್ಳುವ ಜಾಲ ರಾಜ್ಯದಲ್ಲಿದೆ.

ಈ ಬಗ್ಗೆ ಯುವ ಮೋರ್ಚಾ ಎಚ್ಚರಿಕೆಯಿಂದಿರಬೇಕು ಎಂದು ಸಂಸದರು ಹೇಳಿದರು.

ಕಾಂಗ್ರೆಸ್‌ನ ಈ ತಂತ್ರಗಳಿಗೆ ಭಾರತೀಯ ಜನತಾ ಪಕ್ಷದ ಯುವಶಕ್ತಿ ಗಲಿಬಿಲಿಗೊಳ್ಳುವ ಪ್ರಶ್ನೆಯೇ ಇಲ್ಲ. ನೆನ್ನೆ ಶಿವಮೊಗ್ಗದಲ್ಲಿ ನಮ್ಮ ಯುವ ಮೋರ್ಚಾದ ಕಾರ್ಯಕರ್ತರು ಅತ್ಯುತ್ತಮವಾಗಿ ಸ್ಪಂದಿಸಿದ್ದಾರೆ.

“ನಮ್ಮ ಮನೆಗೆ ಕಲ್ಲು ಹೊಡೆಯುವ ಕೆಲಸ ಮಾಡಿದರೆ, ನಿಮ್ಮ ಮನೆಗೂ ಕಲ್ಲು ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬುದನ್ನು ನಮ್ಮ ಶಿವಮೊಗ್ಗದ ಯುವ ಮೋರ್ಚಾ ಕಾರ್ಯಕರ್ತರು ನೆನ್ನೆ ಮಾಡಿ ತೋರಿಸಿದ್ದಾರೆ. ಇಂತಹ ಘರ್ಷಣೆಗಳು ನಡೆಯಬೇಕು ಎನ್ನುವುದು ನಮ್ಮ ಅಪೇಕ್ಷೆಯಲ್ಲ. ಆದರೆ ನಾವೆಲ್ಲರೂ ತಾಯಿಯ ಹಾಲು ಕುಡಿದು ಬಂದಿರುವ ಸ್ವಾಭಿಮಾನಿ ಕಾರ್ಯಕರ್ತರು. ನಮ್ಮ ಮನೆಗೆ, ನಮ್ಮ ವಿಚಾರಗಳಿಗೆ, ನಮ್ಮ ‘ಆಪರೇಷನ್ ಸಿಂಧೂ’ ಹಾಗೂ ತಾಯಂದಿರ ಹಣೆಯ ಕುಂಕುಮಕ್ಕೆ ಕೈ ಹಾಕಿದರೆ, ಮೋದಿಜಿಯವರು ಪಾಕಿಸ್ತಾನಕ್ಕೆ ನುಗ್ಗಿ ಹೊಡೆದಂತೆ, ಕಾರ್ಯಕರ್ತರು ಕೂಡ ನಿಮ್ಮ ಜಾಗ ಯಾವುದು ಎಂದು ತೋರಿಸಿಕೊಡುತ್ತಾರೆ.” ಎಂದು ಬಿ.ವೈ.ರಾಘವೇಂದ್ರ ಎಚ್ಚರಿಕೆ ನೀಡಿದರು.

ಮುಂದಿನ ಒಂದೂವರೆ ರಿಂದ ಎರಡು ವರ್ಷಗಳು ರಾಜಕೀಯವಾಗಿ ಸವಾಲಿನ ಅವಧಿಯಾಗಲಿವೆ. ಆದರೆ ಬಿಜೆಪಿ ಕಾರ್ಯಕರ್ತರು ಯಾವುದೇ ಬೆದರಿಕೆಗೆ ಮಣಿಯದೆ ಸಂಘಟಿತವಾಗಿ ಕೆಲಸ ಮಾಡಬೇಕು. ಪ್ರಚೋದನೆಗೆ ಒಳಗಾಗದೆ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲೇ ಜನರ ವಿಶ್ವಾಸ ಗಳಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಸಂಘಟಿತ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಪಕ್ಷದ ವಿಚಾರಧಾರೆ ಹಾಗೂ ಕಾರ್ಯಕರ್ತರ ಸ್ವಾಭಿಮಾನವನ್ನು ಕಾಪಾಡುವಲ್ಲಿ ಎಲ್ಲರೂ ಬದ್ಧರಾಗಿರಬೇಕು ಎಂದು ಹೇಳಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಹೋರಾಟ ನಡೆಸಿದ್ದಾರೆ. ಇಂದು ಆ ಪರಂಪರೆಯನ್ನು ಮುಂದುವರಿಸಿಕೊಂಡು ದೇಶ ಕಟ್ಟುವ ಜವಾಬ್ದಾರಿ ಯುವಜನರ ಮೇಲಿದೆ. ಒಂದು ಹನಿ ಹುಳಿ ಹಾಲನ್ನು ಹಾಳು ಮಾಡುವಂತೆ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಶಕ್ತಿಗಳಿಗೆ ಅವಕಾಶ ನೀಡಬಾರದು. ದೇಶದ ಅಭಿವೃದ್ಧಿಯೇ ನಮ್ಮ ಗುರಿಯಾಗಿರಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರದ ವಿವಿಧ ಜನಪರ ಯೋಜನೆಗಳು ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ತಲುಪುತ್ತಿವೆ. ಯುವಕರು ಈ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ, ಅರ್ಹ ಫಲಾನುಭವಿಗಳಿಗೆ ನೆರವಾಗಬೇಕು. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳೇ ಮುಂದಿನ ಭಾರತದ ಭದ್ರ ಅಡಿಪಾಯವಾಗಲಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಕೆ. ಜಗದೀಶ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪ್ರಶಾಂತ್ ಕುಕ್ಕೆ, ದಾವಣಗೆರೆ ವಿಭಾಗ ಪ್ರಭಾರಿ ಟಿ.ಡಿ. ಮೇಘರಾಜ್, ಬಿಜೆಪಿ ಪ್ರಕೋಷ್ಟಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ, ಮಾಜಿ ಪಾಲಿಕೆ ಸದಸ್ಯರಾದ ಮಾಲತೇಶ್, ಬಿಜೆಪಿ ಯುವ ಮೋರ್ಚಾ ರಾಜ್ಯ ಸಹಪ್ರಭಾರಿ ಸಂತೋಷ್ ಹೊಳಲೂರು, ಮಾಧ್ಯಮ ಪ್ರಮುಖರಾದ ಚಂದ್ರಶೇಖರ್, ಮಂಜುನಾಥ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಸಂಜಯ್, ಆಶಿಕ್, ನಾಗಪ್ಪ, ಪ್ರವೀಣ್ ಬೆಣ್ಣೆ ಹಾಗೂ ಯಶಸ್ವಿ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ವಿವಿಧ ಮಂಡಲಗಳಿಂದ ಆಗಮಿಸಿದ್ದ ಯುವ ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಮಣ್ಣಿನ ಅಡಿಯಲ್ಲಿರುವ ಇತಿಹಾಸವನ್ನು ಸಮಾಜದ ಮುಂದೆ ತರುತ್ತಿರುವ ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆಯ ಕಾರ್ಯ ಶ್ಲಾಘನೀಯ; ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ: ಕೆ.ಎಸ್. ಈಶ್ವರಪ್ಪ

ಧರ್ಮೇಂದ್ರ ಪ್ರಧಾನ ನಿರ್ಧಾರ ವಿದ್ಯಾರ್ಥಿಗಳ ಹಿತಕ್ಕಾಗಿ; ಪರೀಕ್ಷಾ ವ್ಯವಸ್ಥೆಯಲ್ಲಿ ಮೋದಿ ಸರ್ಕಾರ ಮಹತ್ವದ ಸುಧಾರಣೆ ತಂದಿದೆ, ಕಾಂಗ್ರೆಸ್ ಮಾತ್ರ ರಾಜಕೀಯ ಮಾಡುತ್ತಿದೆ: ಬಿ.ವೈ. ವಿಜಯೇಂದ್ರ

​ನೀಟ್-ಯುಜಿ ಅಕ್ರಮ ವಿವಾದ: ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ಮತದಾನ ನಮ್ಮ ಹಕ್ಕು, ಹೆಸರು ನೋಂದಣಿ ನಮ್ಮ ಹೊಣೆ: ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಜುಲೈ 25-26ರಂದು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ

SIR ಪರಿಷ್ಕರಣೆ ಕ್ರಾಂತಿ: ಜು. 25-26 ರಂದು ಶಿವಮೊಗ್ಗ ಜಿಲ್ಲಾದ್ಯಂತ 21 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರಿಂದ ಮನೆ ಮನೆ ಅಭಿಯಾನ – ಶಾಸಕ ಚನ್ನಬಸಪ್ಪ

ಶಿವಮೊಗ್ಗ ಬಿಜೆಪಿ ಕಾರ್ಯಾಲಯದ ಮೇಲೆ ಕಾಂಗ್ರೆಸ್ ಗೂಂಡಾಗಿರಿ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯ ಖಂಡಿಸಿ ಬಿಜೆಪಿ ಮುಖಂಡರ ಆಕ್ರೋಶ!

Leave a Comment