ನಮ್ಮ ಹಿರಿಯರು ನಮಗೆ ಸ್ವಾತಂತ್ರ್ಯವನ್ನಷ್ಟೇ ಗಳಿಸಿ ಕೊಟ್ಟಿಲ್ಲ,ನಂತರದ ದಿನಗಳಲ್ಲಿ ಅಹಾರದ ಹಂಚಿಕೆಗಾಗಿ ಅರೆಹೊಟ್ಟೆಯಿಂದಲೂ ಬದುಕಿದ್ದರು!
ಸ್ವಾತಂತ್ರ ಭಾರತ ಆರಂಭದ ವರ್ಷಗಳಲ್ಲಿ ಅಹಾರದ ಕೊರತೆ ಅನುಭವಿಸಿತ್ತು. ಸರ್ಕಾರ ಅಹಾರ ಸ್ವಾವಲಂಬನೆ ಗುರಿಯೊಂದಿಗೆ ಅಹಾರ ಬಳಕೆಗೂ ಕಡಿವಾಣ ಹಾಕಿಕೊಳ್ಳಲು ಜನರಿಗೆ ಮನವಿ ಮಾಡಿದ್ದರು. ನಂತರದ ದಿನಗಳಲ್ಲಿ ಭಾರತ ಅಹಾರ ಸ್ವಾವಲಂಬನೆಗೆ ಅತ್ಯಂತ ಹೆಚ್ಚು ಮಹತ್ವ ಕೊಟ್ಟಿದ್ದರಿಂದ ಇಂದು ದೇಶ ಅಹಾರ ಕೊರತೆಯಿಂದ ಹೊರ ಬಂದಿದೆ.
ಆದರೆ ಇಂದು ಸಮಾರಂಭಗಳಲ್ಲಿ, ಕಾರ್ಯಕ್ರಮಗಳಲ್ಲಿ ವೈಭವೀಕರಣಕ್ಕಾಗಿ ಅಗತ್ಯ ಕ್ಕಿಂತ ಹೆಚ್ಚು ಅಹಾರ ತಯಾರಿಸಿ ವ್ಯರ್ಥ ಮಾಡುವುದು, ಜನರು ಅಗತ್ಯ ಕ್ಕಿಂತ ಹೆಚ್ಚು ಅಹಾರ ಬಡಿಸಿಕೊಂಡು ಊಟ ಮಾಡದೆ ವ್ಯರ್ಥ ಮಾಡುವುದು ಒಂದು ರೀತಿಯಲ್ಲಿ ಫ್ಯಾಷನ್ ಆಗಿಬಿಟ್ಟಿದೆ!

ಅಹಾರದ ಬೆಲೆ ಗೊತ್ತಾಗದೇ ಇರುವುದು ವಿದ್ಯಾವಂತ ನಾಗರೀಕ ಸಮಾಜದ ದುರಂತವೇ ಸರಿ.
ನಾವು ವ್ಯರ್ಥ ಮಾಡುವ ಅಹಾರ ಹಸಿದ ಇನ್ನೊಂದು ಜೀವದ ಆಹಾರವನ್ನು ಕಸಿದುಕೊಂಡಂತೆ ಎಂದು ತಿಳಿದು ಅಗತ್ಯ ದಷ್ಟೇ ಬಳಸಿಕೊಂಡರೆ ಇಂದಿನ ದೇಶಕ್ಕೊಂದು ಕೊಡುಗೆ ಎನ್ನಬಹುದು. ಅಂದಿನ ಹಿರಿಯರ ಹಸಿವಿಗೊಂದು ನಾವು ನೀಡುವ ಕೃತಜ್ಞತೆಯೂ ಆಗುತ್ತದೆ ಎಂದೂ ಭಾವಿಸಬಹುದು ಅಲ್ಲವೆ….
– ತ್ಯಾಗರಾಜ ಮಿತ್ಯಾಂತ,
– ಶಿವಮೊಗ್ಗ.