ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

“ಪ್ರೀ ವೆಡ್ಡಿಂಗ್ ಶೂಟ್ ” ದುಂದುವೆಚ್ಚದ ಮೇಲೆ ಮರಾಠ ಸಮುದಾಯದ ಕಟ್ಟುನಿಟ್ಟು.!

On: August 6, 2025 8:35 PM
Follow Us:

ಅಹಲ್ಯಾನಗರ : ವರದಕ್ಷಿಣೆಗಾಗಿ ಪತಿ ಮನೆಯವರಿಂದ ಕಿರುಕುಳಕ್ಕೊಳಗಾಗಿ ಪುಣೆಯ ವೈಷ್ಣವಿ ಹಗವಣೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಳಿಕ, ಮರಾಠ ಸಮುದಾಯದಲ್ಲಿನ ವಿವಾಹದ ಅದ್ದೂರಿತನ ಮತ್ತು ತಪ್ಪು ಪದ್ಧತಿಗಳ ಕುರಿತು ವ್ಯಾಪಕ ಚರ್ಚೆಗಳು ಆರಂಭವಾಗಿವೆ. ಇದರ ಬೆನ್ನಲ್ಲೇ, ಸಮಾಜವು ಇಂತಹ ಪದ್ಧತಿಗಳ ವಿರುದ್ದ ಒಗ್ಗೂಡಿದ್ದು, ವಿವಾಹ ಸಮಾರಂಭಗಳಿಗೆ ನೀತಿ ಸಂಹಿತೆಯನ್ನು ರೂಪಿಸಿದೆ.

ವೈಷ್ಣವಿ ಹಗವಾಣೆ  ಆತ್ಮಹತ್ಯೆಯ ಘಟನೆಯ ನೆಪ್ಪೆಯಲ್ಲಿ ಮರಾಠಿ ಸಮುದಾಯದಲ್ಲಿ ಹುದುಗಿರುವ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಅಹಿಲ್ಯಾನಗರದ ಸುವರ್ಣಮ್ ಪ್ರೈಡ್ ಸಭಾಂಗಣದಲ್ಲಿ ಒಂದು ಮಹತ್ವದ ಸಭೆ ನಡೆಯಿತು. ಹರಿಭಕ್ತ ಪಾರಾಯಣ ಬದ್ರಿನಾಥ್ ಮಹಾರಾಜ್ ತನ್ಪುರೆ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಸಮುದಾಯದ ನಾಯಕರು ಈ ಕೆಳಗಿನ ನಿರ್ಣಯಗಳನ್ನು ಘೋಷಿಸಿದ್ದಾರೆ.

ಈ ಸಂಬಂಧ, ಅಹಲ್ಯಾನಗರ ದಲ್ಲಿ ಸಭೆ ಸೇರಿದ ಸಂತರು, ಮಹಂತರು ಹಾಗೂ ಸಮಾಜದ ಮುಖಂಡರು, 20 ಅಂಶಗಳನ್ನೊಳಗೊಂಡ ‘ಮರಾಠ ವಿವಾಹ ನೀತಿ ಸಂಹಿತೆ’ಯನ್ನು ಜಾರಿ ಗೊಳಿಸಲು ಪ್ರತಿಜ್ಞೆ ಸ್ವೀಕರಿಸಿದರು.

ಈ ನಿರ್ಣಯಗಳು ವೈಷ್ಣವಿ ಹಗವಾಣೆ ತರಹದ ದುರ್ಘಟನೆಗಳನ್ನು ತಡೆಯಲು ಮತ್ತು ವಿವಾಹಗಳನ್ನು ಸರಳಗೊಳಿಸಲು ಗಂಭೀರ ಪ್ರಯತ್ನವಾಗಿದೆ. ಹುಂಡಾ, ಆರ್ಥಿಕ ಹಿಂಸೆ ಮತ್ತು ಅದ್ದೂರಿತನ ವಿವಾಹಗಳ ಒತ್ತಡವನ್ನು ತೊಡೆದುಹಾಕಿ ಮಹಿಳೆಯರ ಗೌರವವನ್ನು ಕಾಪಾಡುವುದು ಇದರ ಗುರಿ. ಮರಾಠಿ ಸಮುದಾಯ ಈಗ ಈ ಸುಧಾರಣೆಗಳನ್ನು ಅನುಷ್ಠಾನಗೊಳಿಸುವುದರ ಮೇಲೆ ಎಲ್ಲರ ಗಮನ ಸೆಳೆದಿದೆ.

ದುಂದುವೆಚ್ಚ ಪ್ರೀ-ವೆಡ್ಡಿಂಗ್ ಶೂಟ್‌ಗೆ ನಿರ್ಬಂಧ :

ಫೋಟೋ/ವೀಡಿಯೋ ಶೂಟಿಂಗ್ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾರಾದರೂ ಇದನ್ನು ವಿವಾಹ ಸಮಾರಂಭದಲ್ಲಿ ಪ್ರದರ್ಶಿಸಿದರೆ, ಸಮುದಾಯವು ತಕ್ಷಣ ಸಮಾರಂಭವನ್ನು ಬಹಿಷ್ಕರಿಸಬೇಕು. 

ಸಭೆಯಲ್ಲಿ ಮಾತನಾಡಿದ ಎಚ್ ಬಿ.ಪಿ. ಜಂಗ್ಲೆ ಶಾಸ್ತ್ರಿ ಮಹಾರಾಜ್ ಅವರು, ನಮ್ಮ ಹಳೆಯ ಉತ್ತಮ ಸಂಪ್ರದಾಯಗಳನ್ನು ಮುಂದುವರಿಸಬೇಕು. ಆದರೆ, ಕೆಲವು ತಪ್ಪು ಪದ್ದತಿಗಳು ನಮ್ಮ ವಿವಾಹ ಸಮಾರಂಭಗಳಲ್ಲಿ ಸೇರಿಕೊಳ್ಳುತ್ತಿವೆ. ಮರಾಠ ಸಮುದಾಯವು ಇದರ ಹಿಂದಿನ ಉದ್ದೇಶವನ್ನು ಅರಿತು, ತನ್ನದೇ ಆದ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ನೀತಿಸಂಹಿತೆಯ ಪ್ರಮುಖಾಂಶಗಳು

  • ವಿವಾಹಕ್ಕೆ ಮಾಡುವ ಅನಗತ್ಯ ಹಾಗೂ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು.
  • ಪ್ರೀ-ವೆಡ್ಡಿಂಗ್ ಶೂಟ್, ಡಿ.ಜೆ ಸದ್ದು, ಆರತಕ್ಷತೆ ಹಾಗೂ ಅನಗತ್ಯ ಭಾಷಣಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು.
  • ಸಾಲ ಮಾಡಿ ಮದುವೆ ಮಾಡುವ ಪದ್ಧತಿ ಕೈಬಿಡಬೇಕು.
  • ಸಾಂಪ್ರದಾಯಿಕ ವಾದ್ಯಗಳು, ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು.
  • ಆಮಂತ್ರಿಸುವ ಅತಿಥಿಗಳ ಸಂಖ್ಯೆ 300ರಿಂದ 500ಕ್ಕೆ ಸೀಮಿತವಾಗಿರಬೇಕು.
  • ವರನ ಮುಂದೆ ಮದ್ಯಪಾನ ಮಾಡಿ ನರ್ತಿಸುವುದನ್ನು ನಿಲ್ಲಿಸಬೇಕು.
  • ಹಾರ ಬದಲಿಸಿಕೊಳ್ಳುವಾಗ ವಧು-ವರರನ್ನು ಎತ್ತಿ ಹಿಡಿಯಬಾರದು.
  • ಈ ವಿವಾಹದಲ್ಲಿ ವಧು-ವರರ ತಂದೆಯರು ಮಾತ್ರ ಪೇಟ ಧರಿಸಬೇಕು.
  • ದುಬಾರಿ ಉಡುಗೊರೆಗಳ ಬದಲಿಗೆ ಪುಸ್ತಕ, ಸಸಿಗಳನ್ನು ನೀಡಬೇಕು.
  • ಗಣ್ಯರಿಂದ ಚಿನ್ನಾಭರಣ, ಕಾರಿನ ಕೀಲಿ ಮೊದಲಾದ ವಸ್ತುಗಳನ್ನು ಕೊಡಿಸುವ ಮೂಲಕ ಪ್ರದರ್ಶನ ಮಾಡುವುದನ್ನು ನಿಲ್ಲಿಸಬೇಕು.
  • ವಿವಾಹದ ಅನಂತರ ವಧುವಿನ ತಾಯಿ ಪದೇ ಪದೆ ಕರೆ ಮಾಡಿ ನವದಂಪತಿಯ ದಾಂಪತ್ಯ ಜೀವನದಲ್ಲಿ ಹಸ್ತಕ್ಷೇಪ ಮಾಡಬಾರದು.

ವಿವಾಹ ಸಂಪ್ರದಾಯಗಳನ್ನು ಸರಳೀಕರಿಸುವ, ಹೆಣ್ಣಿನ ಘನತೆಯನ್ನು ಕಾಪಾಡುವ ಮತ್ತು ಸಾಮಾಜಿಕ ಸೌಹಾರ್ದವನ್ನು ಬಲಪಡಿಸುವ ಐತಿಹಾಸಿಕ ನಿರ್ಣಯಗಳನ್ನು ಮರಾಠಿ ಸಮುದಾಯ ಜಾರಿಗೊಳಿಸಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment