ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಪ್ರಧಾನಿ, ಮುಖ್ಯಮಂತ್ರಿ , ಸಚಿವ ಆಗಿರಲಿ, ಜೈಲಿಗೆ ಹೋದರೆ ಪದವಿ ತ್ಯಜಿಸಲೇಬೇಕು,.!

On: August 20, 2025 6:36 PM
Follow Us:

ನವದೆಹಲಿ: ಗಂಭೀರ ಕ್ರಿಮಿನಲ್ ಆರೋಪಗಳ ಮೇಲೆ ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆಗೆ ಅರ್ಹವಾದ ಅಪರಾಧಗಳಲ್ಲಿ ಬಂಧನಕ್ಕೊಳಗಾಗಿ, ಸತತ 30 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ಅವರ ಹುದ್ದೆಯಿಂದ ತೆಗೆದುಹಾಕುವ ಮೂರು ಮಸೂದೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಇಂದು ಮಂಡಿಸಿದರು.

ಇಂದು ಲೋಕಸಭೆಯಲ್ಲಿ ಈ ಮಸೂದೆ ಮಂಡನೆಯಾಗಿದೆ. ಈ ಮಸೂದೆ ಮಂಡನೆಯಾಗಿ ಕಾನೂನಾದರೆ ಯಾವುದೇ ಗಂಭೀರ ಪ್ರಕರಣಗಳಲ್ಲಿ 30 ದಿನಗಳ ಕಾಲ ನಾಯಕರು ಜೈಲಿನಲ್ಲಿದ್ದರೆ ಅವರನ್ನು ಕೂಡಲೇ ಅಧಿಕಾರದಿಂದ ಕೆಳಗಿಳಿಸಲಾಗುತ್ತದೆ. ಈ ಮಸೂದೆ ಬಗ್ಗೆ ಇಲ್ಲಿದೆ ಮಾಹಿತಿ.

ಈ ಮಸೂದೆಯ ಕುರಿತು ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಉತ್ತಮ ಆಡಳಿತ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡಿಕೊಳ್ಳಲು ಈ ಮಸೂದೆ ಅಗತ್ಯವಾಗಿದೆ ಎಂದು ಹೇಳಿದರು. ಗಂಭೀರ ಅಪರಾಧಗಳ ಆರೋಪದ ಮೇಲೆ ಬಂಧಿಸಲ್ಪಟ್ಟ ಸಚಿವರು ಅಧಿಕಾರದಲ್ಲಿ ಮುಂದುವರಿದರೆ, ಅದು ಸಾಂವಿಧಾನಿಕ ಮೌಲ್ಯಗಳು ಮತ್ತು ಉತ್ತಮ ಆಡಳಿತಕ್ಕೆ ಅಪಾಯವನ್ನುಂಟುಮಾಡಬಹುದು ಎಂದು ಅವರು ಹೇಳಿದ್ದರು.

ಪ್ರತಿಪಕ್ಷಗಳ ಆತಂಕವೇನು?

ಪ್ರತಿಪಕ್ಷಗಳು ಈ ಮಸೂದೆಗಳನ್ನು ಕಠಿಣ ಎಂದು ಬಣ್ಣಿಸಿವೆ. ಕಾಂಗ್ರೆಸ್ ನಾಯಕಿ ಮತ್ತು ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿ, “ಇದನ್ನು ಭ್ರಷ್ಟಾಚಾರ ವಿರೋಧಿ ಕ್ರಮ ಎಂದು ಹೇಳುವುದರಿಂದ ಜನರಿಗೆ ಮೋಸ ಎಸಗಿದಂತಾಗುತ್ತದೆ. ಇದು ಜಾರಿಗೆ ಬಂದರೆ ನೀವು ಮುಖ್ಯಮಂತ್ರಿಯ ಮೇಲೆ ಯಾವುದೇ ರೀತಿಯ ಪ್ರಕರಣವನ್ನು ದಾಖಲಿಸಬಹುದು. ಅವರನ್ನು 30 ದಿನಗಳವರೆಗೆ ಬಂಧಿಸಬಹುದು ಮತ್ತು ಇದರಿಂದ ಅವರು ಹುದ್ದೆಯಿಂದ ಕೆಳಗಿಳಿಯಬೇಕಾಗುತ್ತದೆ. ಇದು ಸಂಪೂರ್ಣವಾಗಿ ಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿ” ಎಂದು ಖಂಡಿಸಿದ್ದಾರೆ.

ಯಾವಾಗ ರಾಜೀನಾಮೆ ನೀಡಬೇಕಾಗುತ್ತದೆ?

-ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಲಾದ ಪ್ರಕರಣಗಳಲ್ಲಿ ಹುದ್ದೆಯಿಂದ ತೆಗೆದುಹಾಕುವ ನಿಯಮ ಅನ್ವಯವಾಗುತ್ತದೆ. -ಸಚಿವರು ಅಥವಾ ಸಿಎಂಗೆ 30 ದಿನಗಳ ಒಳಗೆ ಜಾಮೀನು ಸಿಗದಿದ್ದರೆ, ಅವರು ತಕ್ಷಣವೇ ರಾಜೀನಾಮೆ ನೀಡಬೇಕಾಗುತ್ತದೆ. -ಬಂಧನವಾದ 30 ದಿನಗಳ ನಂತರವೂ ಅವರು ರಾಜೀನಾಮೆ ನೀಡದಿದ್ದರೆ, 31 ನೇ ದಿನದಂದು ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಪರಿಗಣಿಸಲಾಗುತ್ತದೆ.

ಆರೋಪ ಸಬೀತಾಗದಿದ್ದರೆ ಹುದ್ದೆಯನ್ನು ಹಿಂತಿರುಗಿಸಲಾಗುತ್ತದೆ

ರಾಜಕೀಯ ಕಾರಣಗಳಿಂದ ಅಥವಾ ಸುಳ್ಳು ಆರೋಪಗಳಿಂದ ಸಚಿವರು ತೊಂದರೆಗೆ ಸಿಲುಕಿ ಜೈಲಿಗೆ ಹೋಗಿರಬಹುದು, ಅಂತಹ ಸಂದರ್ಭದಲ್ಲಿ, ಅವರನ್ನು ಅವರ ಹುದ್ದೆಗಳಿಂದ ತೆಗೆದುಹಾಕುವುದು ಅನ್ಯಾಯವಾಗುತ್ತದೆ, ಆದರೆ ಈ ಮಸೂದೆಯಲ್ಲಿ ಬಂಧನದಿಂದ ಬಿಡುಗಡೆಯಾದ ನಂತರ ಅವ ಹುದ್ದೆಯನ್ನು ಮತ್ತೆ ಪಡೆಯಬಹುದಾಗಿದೆ.

ಈಗ ನಿಬಂಧನೆ ಏನು?

ಬಂಧನದ ನಂತರವೂ ಸಚಿವರು ತಮ್ಮ ಹುದ್ದೆಗಳಲ್ಲಿ ಉಳಿಯಲು ಇಲ್ಲಿಯವರೆಗೆ ಯಾವುದೇ ನಿರ್ಬಂಧವಿರಲಿಲ್ಲ. ಅಂದರೆ, ಅವರು ತಪ್ಪಿತಸ್ಥರೆಂದು ಸಾಬೀತಾಗುವವರೆಗೆ ಅವರನ್ನು ಹುದ್ದೆಗಳಿಂದ ತೆಗೆದುಹಾಕಲಾಗುವುದಿಲ್ಲ. ಆದಾಗ್ಯೂ, ಸುಪ್ರೀಂ ಕೋರ್ಟ್ ಆದೇಶ ನೀಡಿದರೆ, ಅದನ್ನು ಪಾಲಿಸುವುದು ಅವಶ್ಯಕ. ಕೆಲವು ವರ್ಷಗಳ ಹಿಂದೆ ರಾಜಕೀಯದಲ್ಲಿ, ಗಂಭೀರ ಆರೋಪಗಳು ಅಥವಾ ಬಂಧನದ ನಂತರ, ಸಚಿವರು ಅಥವಾ ಮುಖ್ಯಮಂತ್ರಿ ತಕ್ಷಣವೇ ರಾಜೀನಾಮೆ ನೀಡುತ್ತಿದ್ದರು. ಆದರೆ ಈಗ ಈ ಸಂಪ್ರದಾಯ ಬದಲಾಗಿದೆ. ಜೈಲಿಗೆ ಹೋದ ಬಳಿಕವೂ ಅನೇಕ ಸಚಿವರು ತಮ್ಮ ಹುದ್ದೆಗಳಲ್ಲಿಯೇ ಉಳಿದಿದ್ದಾರೆ. ಅವರ ವಿರುದ್ಧದ ರಾಜಕೀಯ ಪಿತೂರಿಯೇ ಇದಕ್ಕೆ ಕಾರಣ ಎಂದು ಹೇಳಿಕೊಳ್ಳುತ್ತಾ ಹುದ್ದೆಯಲ್ಲಿ ಉಳಿದುಕೊಳ್ಳುತ್ತಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Leave a Comment