ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಾಂತಿಯುತ ಬದುಕೇ ನಿಜವಾದ ಶ್ರೀಮಂತಿಕೆ: ಶ್ರೀ ರಂಭಾಪುರಿ ಜಗದ್ಗುರುಗಳು

On: January 3, 2026 5:51 PM
Follow Us:

ಅಜ್ಜಂಪುರ, ಜ.3: ಭೌತಿಕ ಸಂಪತ್ತು ಮಾನವನಿಗೆ ಶಾಶ್ವತ ತೃಪ್ತಿಯನ್ನು ನೀಡಲಾರದು. ಶಾಂತಿಯುತ ಜೀವನವೇ ನಿಜವಾದ ಸಂಪತ್ತು ಎಂಬ ಸತ್ಯವನ್ನು ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಸ್ಪಷ್ಟಪಡಿಸಿದರು.

ಇಂದು ತಾಲ್ಲೂಕಿನ ಪವಿತ್ರ ಬುಕ್ಕಾಂಬುಧಿ ಬೆಟ್ಟದ ಗುಹೆಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಮೌನಾನುಷ್ಠಾನದ ಪ್ರಥಮ ದಿನದ ಪೂಜಾನುಷ್ಠಾನ ನೆರವೇರಿಸಿದ ಬಳಿಕ ನೀಡಿದ ಆಶೀರ್ವಚನದಲ್ಲಿ ಅವರು ಮಾತನಾಡಿದರು. ಮಾನವ ಜೀವನದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳ ಮಹತ್ವವನ್ನು ವಿವರಿಸಿದ ಜಗದ್ಗುರುಗಳು, ಧರ್ಮಾಚರಣೆಯಲ್ಲೇ ಸುಖ ಮತ್ತು ಮಾನಸಿಕ ಶಾಂತಿಯ ಮೂಲ ಅಡಗಿದೆ ಎಂದು ಹೇಳಿದರು.

ಶಿವತಪ, ಶಿವಕರ್ಮ, ಶಿವಜಪ, ಶಿವಧ್ಯಾನ ಮತ್ತು ಶಿವಜ್ಞಾನ ಎಂಬ ಪಂಚಯಜ್ಞಗಳನ್ನು ಅನುಸರಿಸಿ ಬದುಕಿನಲ್ಲಿ ಶ್ರೇಯಸ್ಸನ್ನು ಕಾಣಬಹುದು. ಪರಮ ತಪಸ್ವಿ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಅನುಷ್ಠಾನ ಕೈಗೊಂಡು ಗ್ರಾಮಕ್ಕೆ ತಗುಲಿದ್ದ ಶಾಪ ವಿಮೋಚನೆ ಮಾಡಿ ಆಶೀರ್ವದಿಸಿದ್ದರು. ಶ್ರೀ ರಂಭಾಪುರಿ ಪೀಠದ ಸಮಸ್ಯೆ ಪರಿಹರಿಸಿ ಶ್ರೀ ಶಿವಾನಂದ ಜಗದ್ಗುರುಗಳ ಪಟ್ಟಾಭಿಷೇಕ ನೆರವೇರಿಸಿ ಶುಭ ಹಾರೈಸಿದವರು ಎಂಬುದನ್ನು ಸ್ಮರಿಸಿದರು.

ಅಂತಹ ಪವಿತ್ರ ಕ್ಷೇತ್ರದಲ್ಲಿ ಗುರುಬಲ, ಆತ್ಮಬಲ ಮತ್ತು ಸಮಾಜದಲ್ಲಿ ಸಾಮರಸ್ಯ ಮೂಡಿಬರಬೇಕು ಎಂಬ ಸತ್ಯ ಸಂಕಲ್ಪದೊಂದಿಗೆ ಐದು ದಿನಗಳ ಕಾಲ ಗುಹೆಯಲ್ಲಿ ಇಷ್ಟಲಿಂಗ ಪೂಜೆ–ಕೊನೆಯೊಂದಿಗೆ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ 90ನೇ ಪುಣ್ಯಸ್ಮರಣೋತ್ಸವ ನಡೆಯುತ್ತಿದೆ. ಪುಣ್ಯದಿನ ಹಾಗೂ ಜನ್ಮದಿನ ಒಂದೇ ದಿನ ಬಂದಿರುವುದರಿಂದ ಭಕ್ತರು ವಿಶೇಷವಾಗಿ ಸಂಭ್ರಮಿಸಿದರು.

ಜನವರಿ 6ರ ವರೆಗೆ ಶ್ರೀ ರಂಭಾಪುರಿ ಜಗದ್ಗುರುಗಳ ಮೌನಾನುಷ್ಠಾನ ಮುಂದುವರಿಯಲಿದ್ದು, ಈ ಅವಧಿಯಲ್ಲಿ ಜಗದ್ಗುರುಗಳು ನೇರ ಪ್ರವಚನ ನೀಡದೆ ಲಿಖಿತ ಸಂದೇಶಗಳ ಮೂಲಕ ಭಕ್ತರಿಗೆ ಆತ್ಮಿಕ ಮಾರ್ಗದರ್ಶನ ನೀಡಲಿದ್ದಾರೆ. ಮೌನಾನುಷ್ಠಾನದ ಮೂಲಕ ಆಂತರಿಕ ಶುದ್ಧಿ, ಮಾನಸಿಕ ಶಾಂತಿ ಹಾಗೂ ಸಮಾಜದಲ್ಲಿ ಸೌಹಾರ್ದತೆ ವೃದ್ಧಿಯಾಗಲಿ ಎಂಬ ಸಂಕಲ್ಪ ವ್ಯಕ್ತವಾಗಿದ್ದು, ಪ್ರತಿದಿನ ಲಿಖಿತ ಆಶೀರ್ವಚನದ ಮೂಲಕ ಧರ್ಮ, ಶಾಂತಿ ಮತ್ತು ಮಾನವೀಯ ಮೌಲ್ಯಗಳ ಸಂದೇಶವನ್ನು ಸಾರಲಿದ್ದಾರೆ.

ಈ ಸಂದರ್ಭದಲ್ಲಿ ತಾವರೆಕೆರೇ, ಬಿಳಕಿ, ತೋಗಸೂರು, ರಟ್ಟೀಹಳ್ಳಿ, ಚಿಕ್ಕಮಗಳೂರು ಶ್ರೀಗಳು ಹಾಗೂ ಹಲೇಹುಬ್ಬಳ್ಳಿ ಹಿರೇಮಠದ ರೇಣುಕ ಪ್ರಸಾದ ಪಾಲ್ಗೊಂಡಿದ್ದರು. ಶ್ರೀಮಠ ಉಜ್ಜಯಿನಿ ಸಿದ್ಧಲಿಂಗ ಶಿವಾಚಾರ್ಯ ಟ್ರಸ್ಟ್‌ನ ಕಾರ್ಯದರ್ಶಿ ಹೆಚ್.ಪಿ. ಸುರೇಶ್, ಗುರುಮೂರ್ತಿ, ಹೆಚ್.ಪಿ. ಮಲ್ಲಿಕಾರ್ಜುನ, ಬೀರುರಿನ ನವೀನ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಬಂದ ಎಲ್ಲಾ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.

K.M.Sathish Gowda

Join WhatsApp

Join Now

Facebook

Join Now

Read more

ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಆಯುರ್ವೇದ ಮಹತ್ವದ ಪಾತ್ರ ವಹಿಸುತ್ತದೆ: ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ

ಹುತಾತ್ಮ ಯೋಧರ ಪತ್ನಿಯ ತ್ಯಾಗವೇ ಶ್ರೇಷ್ಠತೆ: ತರಳಬಾಳು ಜಗದ್ಗುರುಗಳ ಹೃದಯಸ್ಪರ್ಶಿ ಸಂದೇಶ

ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ವೈಯಕ್ತಿಕ–ಕುಟುಂಬ ನಿಂದನೆಗೆ ತೆರೆ ಎಳೆಯಲು ರಾಜಕೀಯ ನಾಯಕರಿಗೆ ಜಗದ್ಗುರುಗಳ ಖಡಕ್ ಸೂಚನೆ,.!

ಬೆಳ್ಳಿ ಪಲ್ಲಕ್ಕಿಯಲ್ಲಿ ಜಗದ್ಗುರುಗಳ ದರ್ಶನ: ಭದ್ರಾವತಿಯಲ್ಲಿ ತರಳಬಾಳು ಹುಣ್ಣಿಮೆಯ ವೈಭವ, ಲಕ್ಷಾಂತರ ಭಕ್ತರ ಸಮಾಗಮ

ತರಳಬಾಳು ಹುಣ್ಣಿಮೆ ಮಹೋತ್ಸವ 2026: ‘ಮನೆಯೊಳಗೆ ಧರ್ಮ, ಹೊರಗೆ ಸಂವಿಧಾನ’ – ನ್ಯಾಯಮೂರ್ತಿ ಶ್ರೀಶಾನಂದ ಸಂದೇಶ

ತರಳಬಾಳು ಹುಣ್ಣಿಮೆ ಮಹೋತ್ಸವ 2026: ಸಮೂಹ ಮಾಧ್ಯಮ ಸಮಾಜದ ದಿಕ್ಕು ನಿರ್ಧರಿಸುವ ಶಕ್ತಿಯಾಗಿದೆ: ಸಿ.ಎಸ್. ಷಡಾಕ್ಷರಿ

Leave a Comment