ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಹಣಕ್ಕಾಗಿ ತನ್ನ ದೊಡ್ಡಪ್ಪ–ದೊಡ್ಡಮ್ಮನನ್ನು ಕೊಂದ ವೈದ್ಯ,..!: ಭದ್ರಾವತಿ ಹಳೇನಗರ ಪೊಲೀಸರ ಶ್ಲಾಘನೀಯ ಕಾರ್ಯಚರಣೆ

On: January 21, 2026 4:53 PM
Follow Us:

ವಯೋವೃದ್ಧ ದೊಡ್ಡಪ್ಪ–ದೊಡ್ಡಮ್ಮನಿಗೆ ಮರಣ ಇಂಜೆಕ್ಷನ್ ಕೊಟ್ಟ ವೈದ್ಯ,.! ಹಣದ ಆಸೆಗೆ ರಕ್ತ ಸಂಬಂಧವನ್ನೇ ಬಲಿ ಪಡೆದ ಪಾಪಿ,.! 24 ಗಂಟೆಯೊಳಗೆ ಆರೋಪಿಯನ್ನು ಪತ್ತೆಹಚ್ಚಿದ ಶಿವಮೊಗ್ಗ ಪೊಲೀಸರ ಶ್ಲಾಘನೀಯ ಕಾರ್ಯಚರಣೆ

ಭದ್ರಾವತಿ: ಭದ್ರಾವತಿ ನಗರದ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭೂತನಗುಡಿ ಪ್ರದೇಶದಲ್ಲಿ ನಡೆದ ವೃದ್ಧ ದಂಪತಿಯ ಅನುಮಾನಾಸ್ಪದ ಸಾವಿನ ಪ್ರಕರಣವು ಜಿಲ್ಲೆಯಲ್ಲಿ ಬೆಚ್ಚಿಬೀಳುವಂತೆ ಮಾಡಿತ್ತು. ಆದರೆ, ಈ ಭೀಕರ ಘಟನೆಯ ಹಿಂದೆ ಅಡಗಿದ್ದ ಕ್ರೂರ ಸತ್ಯವನ್ನು ಕೇವಲ 24 ಗಂಟೆಗಳೊಳಗೆ ಬಯಲುಗೊಳಿಸುವ ಮೂಲಕ ಶಿವಮೊಗ್ಗ ಜಿಲ್ಲಾ ಪೊಲೀಸರು ತಮ್ಮ ಕಾರ್ಯಕ್ಷಮತೆ, ಬದ್ಧತೆ ಮತ್ತು ತನಿಖಾ ಚಾತುರ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ದಿನಾಂಕ 20/01/2026 ರಂದು ವಿಶ್ವನಾಥ ಜಿ.ಸಿ. ಅವರು ತಮ್ಮ ತಂದೆ ಚಂದ್ರಪ್ಪ ಹಾಗೂ ತಾಯಿ ಜಯಮ್ಮ ಅವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಕುರಿತು ಹಳೇನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೊದಲು ಯು.ಡಿ.ಆರ್ ನಂ. 01/2026 ಕಲಂ 194(3)(iv) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ನಂತರದ ತನಿಖೆಯ ವೇಳೆ, ಮೃತರ ಮೈಮೇಲಿದ್ದ ಹಾಗೂ ಮನೆಯಲ್ಲಿದ್ದ ಚಿನ್ನಾಭರಣಗಳು ಕಾಣೆಯಾಗಿರುವುದು ಮತ್ತು ಸಂಬಂಧಿಕನಾದ ಜಿ.ಪಿ. ಮಲ್ಲೇಶ್ ಮೃತರ ಸಾವಿನ ಬಳಿಕವೂ ಶವ ನೋಡಲು ಬಾರದಿರುವುದು ಪೊಲೀಸರ ಅನುಮಾನಕ್ಕೆ ಕಾರಣವಾಯಿತು. ಈ ಹಿನ್ನೆಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಯು.ಡಿ.ಆರ್ ಪ್ರಕರಣವನ್ನು ಅಪರಾಧ ಸಂಖ್ಯೆ 14/2026 ಕಲಂ 103(1) ಬಿ.ಎನ್.ಎಸ್ ಅಡಿಯಲ್ಲಿ ಪರಿವರ್ತಿಸಿ ತನಿಖೆ ಚುರುಕುಗೊಳಿಸಿದರು.

24 ಗಂಟೆಯೊಳಗೆ ಆರೋಪಿ ವಶಕ್ಕೆ

ಪಿ.ಎಸ್.ಐ ಸುನಿಲ್ ಬಿ. ತೇಲಿ ಅವರ ನೇತೃತ್ವದಲ್ಲಿ ರಚಿಸಲಾದ ವಿಶೇಷ ತಂಡವು, ದಿನಾಂಕ 21/01/2026 ರಂದು ಬೆಳಿಗ್ಗೆಯೇ ಆರೋಪಿ ಜಿ.ಪಿ. ಮಲ್ಲೇಶ್ ಅವರನ್ನು ಪತ್ತೆಹಚ್ಚಿ ವಿಚಾರಣೆಗೆ ಒಳಪಡಿಸಿತು. ವಿಚಾರಣೆಯ ವೇಳೆ, ಹಣದ ಅವಶ್ಯಕತೆಯಿಂದ ತನ್ನ ದೊಡ್ಡಪ್ಪ-ದೊಡ್ಡಮ್ಮರಾದ ಚಂದ್ರಪ್ಪ ಮತ್ತು ಜಯಮ್ಮ ಅವರನ್ನು ದಿನಾಂಕ 19/01/2026 ರಂದು ಮನೆಗೆ ಹೋಗಿ Propofol injection ನೀಡಿ ಹತ್ಯೆ ಮಾಡಿ, ಅವರ ಮೈಮೇಲಿದ್ದ ಹಾಗೂ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಮಾನವೀಯತೆಯ ಮಿತಿಯನ್ನೇ ಮೀರಿದ ಕ್ರೂರ ಕೃತ್ಯ

ಹಣದ ಆಸೆಗೆ ವಯೋವೃದ್ಧ, ರಕ್ತಸಂಬಂಧಿಗಳನ್ನೇ ಕೊಂದ ಈ ಪಾಪಿ ಸಮಾಜದ ಮುಂದೆ ತಲೆತಗ್ಗಿಸುವಂತಹ ಅಪರಾಧ ಎಸಗಿದ್ದಾನೆ. ವೈದ್ಯನಾಗಿದ್ದ ವ್ಯಕ್ತಿಯೊಬ್ಬ ಮಾನವ ಜೀವ ರಕ್ಷಿಸಬೇಕಾದ ಜಾಗದಲ್ಲಿ, ಅದನ್ನೇ ಹರಣ ಮಾಡಿರುವುದು ಅತ್ಯಂತ ಖಂಡನೀಯ ಹಾಗೂ ಅಕ್ಷಮ್ಯ ಅಪರಾಧವಾಗಿದೆ.

ಪೊಲೀಸ್ ಇಲಾಖೆಗೆ ಸಾರ್ವಜನಿಕರ ಶ್ಲಾಘನೆ

ಈ ಪ್ರಕರಣವನ್ನು ಅತಿ ಕಡಿಮೆ ಅವಧಿಯಲ್ಲಿ ಭೇದಿಸಿ, ಆರೋಪಿಯನ್ನು ಬಂಧಿಸುವ ಮೂಲಕ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಶ್ಲಾಘನೀಯ ಕಾರ್ಯಚರಣೆ ನಡೆಸಿದೆ. ಈ ಯಶಸ್ವಿ ಪತ್ತೆ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳಾದ ನಿಖಿಲ್.ಬಿ, ಅವರು ತಂಡವನ್ನು ಪ್ರಶಂಸಿಸಿದ್ದಾರೆ.

ಈ ಕಾರ್ಯಚರಣೆ ಜಿಲ್ಲಾ ರಕ್ಷಣಾಧಿಕಾರಿಗಳಾದ ನಿಖಿಲ್.ಬಿ ರವರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರಿಯಪ್ಪ ಹಾಗೂ ರಮೇಶ್ ಬಿ., ಅವರ ಮಾರ್ಗದರ್ಶನದಲ್ಲಿ, ಪ್ರಕಾಶ್ ರಾಠೋಡ್ ಡಿ.ವೈ.ಎಸ್.ಪಿ ಭದ್ರಾವತಿ, ಶ್ರೀಮತಿ ನಾಗಮ್ಮ – ಸಿ.ಪಿ.ಐ ನಗರವೃತ್ತ, ಭದ್ರಾವತಿ, ಸುನಿಲ್ ಬಿ. ತೇಲಿ – ಪಿ.ಎಸ್.ಐ ಹಳೇನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರ ಸಮನ್ವಯದಿಂದ ಯಶಸ್ವಿಯಾಗಿ ನಡೆದಿರುತ್ತದೆ.

ಅಪರಾಧ ಎಷ್ಟೇ ಚತುರವಾಗಿ ಎಸಗಿದರೂ, ಕಾನೂನಿನ ಕೈ ದೀರ್ಘವಾಗಿದ್ದು ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂಬುದನ್ನು ಈ ಪ್ರಕರಣ ಸ್ಪಷ್ಟಪಡಿಸಿದೆ. ಇಂತಹ ಕ್ರೂರ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ಈ ಶ್ಲಾಘನೀಯ ಕಾರ್ಯಚರಣೆ ಸಾರ್ವಜನಿಕರಲ್ಲಿ ಭದ್ರತೆ ಮತ್ತು ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

K.M.Sathish Gowda

Join WhatsApp

Join Now

Facebook

Join Now

Read more

‘ಕೊಟ್ಟ ಮಾತು ಉಳಿಯುತ್ತದೆಯೇ?’ – ಕಾಂಗ್ರೆಸ್ ಒಳಕಿಚ್ಚಿಗೆ ಸುರೇಶ್ ಮಾರ್ಮಿಕ ನುಡಿ, ಡಿಕೆಶಿ ದೆಹಲಿ ಪಯಣ ರಾಜಕೀಯ ಚರ್ಚೆ ತೀವ್ರ

“ಮೊದಲು ನಿಮ್ಮ ಹೈಕಮಾಂಡ್‌ ಹುಡುಕಿ, ಬಳಿಕ ಮೋದಿ ಬಗ್ಗೆ ಮಾತನಾಡಿ”: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ತೀವ್ರ ವಾಗ್ದಾಳಿ

ಪ್ಲಾಸ್ಟಿಕ್ ಮುಕ್ತ ಶಿವರಾತ್ರಿ ಉತ್ಸವಕ್ಕೆ ಹರಕೆರೆ ಹರಕೇಶ್ವರ ದೇವಸ್ಥಾನದಲ್ಲಿ ಸಂಕಲ್ಪ

ಜನಸೇವೆಗೆ ಬದ್ಧ ನಾಯಕತ್ವ: ಹಾರನಹಳ್ಳಿಯಲ್ಲಿ ಡಿ.ಎಸ್. ಅರುಣ್ ಅವರಿಂದ ಪಂಚಾಯಿತಿ ಕಟ್ಟಡ ಉದ್ಘಾಟನೆ ಹಾಗೂ ಹಕ್ಕುಪತ್ರ ವಿತರಣೆ

‘ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು’: ಕಾಂಗ್ರೆಸ್ ನಾಯಕರಿಗೆ ಡಿಕೆಶಿ ಖಡಕ್ ಸಂದೇಶ

ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ–ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಮೇಲೆ ಒತ್ತಡ: ಮುಖ್ಯಮಂತ್ರಿ ಸಿದ್ದರಾಮಯ್ಯ

Leave a Comment