ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ದೇಶದ್ರೋಹ ಪ್ರಕರಣಗಳಿಗೆ ಶಿಕ್ಷೆ ಇಲ್ಲ: ಸರ್ಕಾರದ ವಿರುದ್ಧ ಡಿ.ಎಸ್. ಅರುಣ್ ಆಕ್ರೋಶ

On: January 30, 2026 1:28 PM
Follow Us:

ಬೆಂಗಳೂರು: ರಾಜ್ಯದ ವಿವಿಧೆಡೆ ಸಾರ್ವಜನಿಕವಾಗಿ “ಪಾಕಿಸ್ತಾನ್ ಜಿಂದಾಬಾದ್” ಹಾಗೂ “ಬಾಂಗ್ಲಾದೇಶ ಜಿಂದಾಬಾದ್” ಎಂಬ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದ ಪ್ರಕರಣಗಳಲ್ಲಿ ಈವರೆಗೆ ಒಬ್ಬನೇ ಒಬ್ಬ ಆರೋಪಿಗೂ ಶಿಕ್ಷೆಯಾಗದಿರುವುದನ್ನು ಉಲ್ಲೇಖಿಸಿ, ವಿಧಾನಪರಿಷತ್ ಸದಸ್ಯರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್. ಅರುಣ್ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.

ವಿಧಾನಪರಿಷತ್ ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟು 18 ರಾಷ್ಟ್ರವಿರೋಧಿ ಪ್ರಕರಣಗಳು ದಾಖಲಾಗಿದ್ದರೂ, ಯಾವ ಪ್ರಕರಣದಲ್ಲಿಯೂ ಶಿಕ್ಷೆ ಆಗಿಲ್ಲವೆಂಬುದು ಸರ್ಕಾರದ ತನಿಖಾ ವೈಫಲ್ಯವನ್ನು ತೋರಿಸುತ್ತದೆ ಎಂದರು. ಇದರಿಂದ ದೇಶಭಕ್ತ ನಾಗರಿಕರ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದ್ದು, ಸಮಾಜದಲ್ಲಿ ಅಶಾಂತಿ ಮತ್ತು ಅಸಹಿಷ್ಣುತೆ ಹೆಚ್ಚುವ ಆತಂಕವಿದೆ ಎಂದು ಅವರು ಹೇಳಿದರು.

ಕೇವಲ ಎಫ್‌ಐಆರ್ ದಾಖಲಿಸಿ ಪ್ರಕರಣಗಳನ್ನು ತಣ್ಣಗಾಗಿಸುವ ಪ್ರವೃತ್ತಿಯನ್ನು ಸರ್ಕಾರ ಕೈಬಿಡಬೇಕು. ದೇಶದ ಅಸ್ಮಿತೆಗೆ ಸವಾಲು ಹಾಕುವ ಇಂತಹ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಧೈರ್ಯವಿಲ್ಲವೇ? ಎಂದು ಡಿ.ಎಸ್. ಅರುಣ್ ಪ್ರಶ್ನಿಸಿದರು.

ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ತಡೆಯಲು ಅಸ್ತಿತ್ವದಲ್ಲಿರುವ ಕಾನೂನುಗಳಿಗೆ ತಿದ್ದುಪಡಿ ತರಬೇಕು ಅಥವಾ ಹೊಸದಾಗಿ ಕಠಿಣ ಕಾನೂನನ್ನು ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದರು. ಶಾಂತಿ ಮತ್ತು ಸೌಹಾರ್ದತೆಯ ಹೆಸರಿನಲ್ಲಿ ದೇಶವಿರೋಧಿಗಳಿಗೆ ರಕ್ಷಣೆ ನೀಡಲಾಗುತ್ತಿದೆ ಎಂಬ ಆರೋಪವನ್ನೂ ಅವರು ಈ ವೇಳೆ ಮಾಡಿದರು.

ರಾಜ್ಯ ಸರ್ಕಾರ ತಕ್ಷಣವೇ ಸ್ಪಷ್ಟ ಹಾಗೂ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಜನತೆಯೊಂದಿಗೆ ಸೇರಿ ಹೋರಾಟ ನಡೆಸಬೇಕಾಗುತ್ತದೆ ಎಂದು ಡಿ.ಎಸ್. ಅರುಣ್ ಎಚ್ಚರಿಕೆ ನೀಡಿದರು.

K.M.Sathish Gowda

Join WhatsApp

Join Now

Facebook

Join Now

Read more

ಜಲಕ್ರಾಂತಿಗೆ ದೆಹಲಿಯಲ್ಲಿ ಹೊಸ ಚೈತನ್ಯ: ಶ್ರೀ ತರಳಬಾಳು ಜಗದ್ಗುರು ಮತ್ತು ಜಲತಜ್ಞ ಡಾ. ರಾಜೇಂದ್ರ ಸಿಂಗ್ ನಡುವೆ ಮಹತ್ವದ ಮಾತುಕತೆ

ಹಾಸನದಲ್ಲಿ ಗೂಂಡಾಗಿರಿ: ಬೆಟ್ಟದ ಭೈರವೇಶ್ವರ ದೇವಸ್ಥಾನ ಬಳಿ ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ, ಪ್ರಕರಣ ದಾಖಲು

ಶಿವಮೊಗ್ಗ ಪೊಲೀಸರಿಗೆ ಗೌರವ: ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ರಮೇಶ್ ಕುಮಾರ್ ಸೇರಿದಂತೆ ಮೂವರಿಗೆ ಮುಖ್ಯಮಂತ್ರಿ ಪದಕ ಘೋಷಣೆ

ಕೇಂದ್ರವನ್ನು ಟೀಕಿಸುವುದರಲ್ಲೇ 3 ವರ್ಷ ವ್ಯರ್ಥ: ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಶ್ರೀ ರಾಮನವಮಿ ಸಂಭ್ರಮ: ಶಿವಮೊಗ್ಗದಲ್ಲಿ ಅದ್ಧೂರಿ ರಥೋತ್ಸವ ಹಾಗೂ ದುರ್ಗಿಗುಡಿ ಮಿತ್ರಕೂಟದಿಂದ ಪಾನಕ–ಕೋಸಂಬರಿ ವಿತರಣೆ

ಇಂಧನ ಬೆಲೆ ಏರಿಕೆ ಭೀತಿ ನಡುವೆ ಕೇಂದ್ರದ ದೊಡ್ಡ ನಿರ್ಧಾರ: ಪೆಟ್ರೋಲ್ ಸುಂಕ 3 ರೂ., ಡೀಸೆಲ್ ಸುಂಕ ಸಂಪೂರ್ಣ ರದ್ದು

Leave a Comment