ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಚುನಾವಣೆಗೂ ಮುನ್ನ ಅಣ್ಣಾಮಲೈ ರಾಜೀನಾಮೆ: ತಮಿಳುನಾಡು ಬಿಜೆಪಿಗೆ ದೊಡ್ಡ ಹೊಡೆತ

On: February 3, 2026 8:18 PM
Follow Us:

ಚೆನೈ (ತಮಿಳುನಾಡು): ತಮಿಳುನಾಡು ರಾಜಕೀಯದಲ್ಲಿ ಬಿಜೆಪಿ ಎದುರಿಸುತ್ತಿರುವ ಸಂಕಷ್ಟಗಳಿಗೆ ಮತ್ತೊಂದು ದೊಡ್ಡ ಸೇರ್ಪಡೆ ಆಗಿದೆ. ರಾಜ್ಯದಲ್ಲಿ ಪಕ್ಷಕ್ಕೆ ಹೊಸ ಉಸಿರು ತುಂಬಿದ್ದ, “ಸಿಂಗಂ” ಎಂದೇ ಕರೆಯಲ್ಪಟ್ಟ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಪಕ್ಷ ನೀಡಿದ್ದ ಮಹತ್ವದ ಚುನಾವಣಾ ಜವಾಬ್ದಾರಿಯಿಂದ ಹಿಂದೆ ಸರಿಯುವ ಮೂಲಕ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣರಾಗಿದ್ದಾರೆ. ಇದು ಕೇವಲ ವೈಯಕ್ತಿಕ ನಿರ್ಧಾರವಲ್ಲ; ಬದಲಾಗಿ ತಮಿಳುನಾಡು ಬಿಜೆಪಿಯ ಒಳಗಿನ ಗೊಂದಲಗಳು, ನಾಯಕತ್ವದ ಅಸಮಾಧಾನ ಮತ್ತು ಅಣ್ಣಾಮಲೈ ಅವರನ್ನು ಕ್ರಮೇಣ ಅಂಚಿಗೆ ತಳ್ಳುತ್ತಿರುವ ಪಕ್ಷದ ನಿಲುವಿನ ಪ್ರತಿಬಿಂಬವೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಚುನಾವಣೆಗೂ ಮುನ್ನ ಬಿಜೆಪಿಗೆ ಅತಿ ದೊಡ್ಡ ಹೊಡೆತ

ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಾಗಲೇ ಈ ಬೆಳವಣಿಗೆ ನಡೆದಿದೆ. ರಾಜ್ಯದ ಎಲ್ಲಾ 234 ಕ್ಷೇತ್ರಗಳಲ್ಲಿ ಸಂಘಟನಾ ಪ್ರವಾಸ ಮತ್ತು ಪ್ರಚಾರಕ್ಕೆ ಬಿಜೆಪಿ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿತ್ತು. ಅದರ ಭಾಗವಾಗಿ ಅಣ್ಣಾಮಲೈ ಅವರಿಗೆ ಆರು ಪ್ರಮುಖ ಕ್ಷೇತ್ರಗಳ ಉಸ್ತುವಾರಿ ವಹಿಸಲಾಗಿತ್ತು. ಆದರೆ, ಇದೇ ಜವಾಬ್ದಾರಿಯಿಂದ ಅವರು ಹಿಂದೆ ಸರಿದಿರುವುದು ಪಕ್ಷದ ಸಂಘಟನೆಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

ವೈಯಕ್ತಿಕ ಕಾರಣಗಳ ಹಿಂದೆ ರಾಜಕೀಯ ಮೌನವೇ?

ಅಣ್ಣಾಮಲೈ ಅವರು ತಮ್ಮ ತಂದೆಯ ಗಂಭೀರ ಆರೋಗ್ಯ ಸ್ಥಿತಿಯೇ ರಾಜೀನಾಮೆಗೆ ಕಾರಣ ಎಂದು ಹೇಳಿದ್ದಾರೆ. ಇದನ್ನು ಯಾರೂ ನಿರ್ಲಕ್ಷ್ಯ ಮಾಡುವಂತಿಲ್ಲ. ಆದರೆ, ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಪ್ರಶ್ನೆ ಒಂದೇ—

ಈ ನಿರ್ಧಾರ ಕೇವಲ ವೈಯಕ್ತಿಕವೇ, ಅಥವಾ ಪಕ್ಷದೊಳಗಿನ ನಿರಂತರ ನಿರ್ಲಕ್ಷ್ಯದಿಂದ ಹುಟ್ಟಿದ ಅಸಮಾಧಾನವೇ?

ಎಐಎಡಿಎಂಕೆಯೊಂದಿಗಿನ ಮೈತ್ರಿ ನಂತರ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯುವಂತೆ ಮಾಡಿದ ಸಂದರ್ಭದಿಂದಲೇ ಅವರು ಪಕ್ಷದಲ್ಲಿ ‘ಸೈಡ್‌ಲೈನ್’ ಆಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಪಕ್ಷದ ಪ್ರಮುಖ ತೀರ್ಮಾನಗಳಲ್ಲಿ ಅವರ ಪಾತ್ರ ಸೀಮಿತವಾಗುತ್ತಾ ಬಂದಿದ್ದು, ಇದೀಗ ಚುನಾವಣಾ ಉಸ್ತುವಾರಿ ಹುದ್ದೆಯಿಂದಲೂ ಹಿಂದೆ ಸರಿಯುವ ಮೂಲಕ ಆ ಅನುಮಾನಗಳಿಗೆ ಬಲ ನೀಡಿದೆ.

‘ಹೊಸ ಭರವಸೆಯಿಂದ ಹೊರಗುಳಿದ ನಾಯಕ’

ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದ ಅಣ್ಣಾಮಲೈ, ತಮಿಳುನಾಡು ಬಿಜೆಪಿಗೆ ಅಪರೂಪದ ಜನಮಟ್ಟದ ನಾಯಕನಾಗಿ ಗುರುತಿಸಿಕೊಂಡಿದ್ದರು. ದಿಟ್ಟ ಭಾಷಣ, ಸಂಘಟನಾ ಚುರುಕು ಮತ್ತು ಡಿಎಂಕೆ ವಿರುದ್ಧದ ಆಕ್ರಮಣಕಾರಿ ರಾಜಕಾರಣದಿಂದ ಅವರು ಪಕ್ಷಕ್ಕೆ ಹೊಸ ಶಕ್ತಿ ನೀಡಿದ್ದರು. ಆದರೆ, ಮೈತ್ರಿ ರಾಜಕಾರಣದ ಒತ್ತಡದಲ್ಲಿ ಅವರ ತೀಕ್ಷ್ಣತೆಯನ್ನು ಪಕ್ಷವೇ ಕಡಿಮೆ ಮಾಡಿತೇ ಎಂಬ ಪ್ರಶ್ನೆ ಇಂದು ಮತ್ತೆ ಎದ್ದಿದೆ.

ಬಿಜೆಪಿಗೆ ಮುಂದಿನ ದಿನಗಳಲ್ಲಿ ಆತಂಕ

ಅಣ್ಣಾಮಲೈ ಅವರು “ಪಕ್ಷ ಕೇಳಿದರೆ ಪ್ರಚಾರದಲ್ಲಿ ಭಾಗವಹಿಸುತ್ತೇನೆ” ಎಂದು ಹೇಳಿದ್ದರೂ, ನಿರಂತರ ಸಂಘಟನಾ ಹೊಣೆಗಾರಿಕೆಯಿಂದ ಹಿಂದೆ ಸರಿದಿರುವುದು ಬಿಜೆಪಿಗೆ ಸ್ಪಷ್ಟ ಎಚ್ಚರಿಕೆಯಾಗಿದೆ. ಈಗಾಗಲೇ ತಮಿಳುನಾಡಿನಲ್ಲಿ ನೆಲೆಯ ಕೊರತೆ ಎದುರಿಸುತ್ತಿರುವ ಬಿಜೆಪಿಗೆ, ಜನಮಟ್ಟದಲ್ಲಿ ಪ್ರಭಾವಿ ನಾಯಕನೊಂದು ಹೀಗೆ ಹಿಂದೆ ಸರಿಯುವುದು ಚುನಾವಣಾ ಸಮರದಲ್ಲಿ ದುಬಾರಿಯಾಗುವ ಸಾಧ್ಯತೆ ಇದೆ.

ಅಣ್ಣಾಮಲೈ ರಾಜೀನಾಮೆ ಒಂದು ವೈಯಕ್ತಿಕ ನಿರ್ಧಾರವಾಗಿರಬಹುದು. ಆದರೆ, ಅದು ಹೊರಹಾಕಿರುವ ರಾಜಕೀಯ ಸಂದೇಶ ಮಾತ್ರ ಗಂಭೀರ ತಮಿಳುನಾಡು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಪಕ್ಷ ತನ್ನದೇ ಶಕ್ತಿಶಾಲಿ ನಾಯಕರನ್ನು ಉಳಿಸಿಕೊಳ್ಳಲು ವಿಫಲವಾದರೆ, ಮುಂಬರುವ ಚುನಾವಣೆಯಲ್ಲಿ ಅದರ ಪರಿಣಾಮ ಎದುರಿಸಬೇಕಾಗುವುದು ಅನಿವಾರ್ಯ.

K.M.Sathish Gowda

Join WhatsApp

Join Now

Facebook

Join Now

Read more

‘ಅಭಿಮಾನೋತ್ಸವ’ ಯಶಸ್ವಿ, ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಇಂದಿನಿಂದಲೇ ಶ್ರಮಿಸಿ: ಬಿ.ವೈ.ರಾಘವೇಂದ್ರ ಕರೆ

ನೀಟ್ ವಿಚಾರದಲ್ಲಿ ಕೇಂದ್ರದ ವಿರುದ್ಧ ಅಪಪ್ರಚಾರ, ಹಿಜಾಬ್ ಮೂಲಕ ಮತಬ್ಯಾಂಕ್ ರಾಜಕಾರಣ: ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಎನ್.ಕೆ ಆರೋಪ

​ಶಿವಮೊಗ್ಗದಲ್ಲಿ ಹರಿದುಬರಲಿದೆ ಭಕ್ತಿಯ ಮಹಾಪೂರ: 34 ವರ್ಷಗಳ ಬಳಿಕ ಜಗದ್ಗುರುಗಳ ಭವ್ಯ ಅಡ್ಡಪಲ್ಲಕ್ಕಿ ಉತ್ಸವ, ಬಿಎಸ್‌ವೈಗೆ ಅಭಿನಂದನೆ ಹಾಗೂ ಬಸವೇಶ್ವರ ಸೊಸೈಟಿಯ ಶತಮಾನೋತ್ಸವದ ತ್ರಿವೇಣಿ ಸಂಗಮ!

​ರೇಣುಕಾಸ್ವಾಮಿ ಹತ್ಯೆ ಕೇಸ್: ದರ್ಶನ್‌ಗೆ ಸುಪ್ರೀಂ ‘ಶಾಕ್’; ಇನ್ನೂ ಒಂದು ವರ್ಷ ಜೈಲೇ ಫಿಕ್ಸ್!

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ (SIR) ಚುನಾವಣಾ ಆಯೋಗದ ‘ಮಹಾ ಮಾಸ್ಟರ್ ಪ್ಲಾನ್’: ಜೂನ್ 30ರಿಂದ ಮನೆ-ಮನೆಗೆ ಅಧಿಕಾರಿಗಳ ಭೇಟಿ ಆರಂಭ

ನೀಟ್ ಅಕ್ರಮದಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲ: ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ ಖಂಡನೀಯ – ಮುಖ್ಯಮಂತ್ರಿ ಸಿದ್ದರಾಮಯ್ಯ

Leave a Comment