ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಮಾದಕ ವಸ್ತುಗಳ ದಂಧೆಗೆ ಕಡಿವಾಣ ಹಾಕಿ: ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಶಾಶ್ವತಿ ಮಹಿಳಾ ವೇದಿಕೆ ಒತ್ತಾಯ

On: March 5, 2026 2:24 PM
Follow Us:

ಶಿವಮೊಗ್ಗ: ಜಿಲ್ಲೆಯಲ್ಲಿನ ಶಾಲಾ ಮಕ್ಕಳಲ್ಲಿ ಡ್ರಗ್ಸ್, ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಶಾಶ್ವತಿ ಮಹಿಳಾ ವೇದಿಕೆಯ ಪದಾಧಿಕಾರಿಗಳು ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ಮಾಡಿ ಶಾಲೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾದಕ ವಸ್ತುಗಳು ಸುಲಭವಾಗಿ ಲಭ್ಯವಾಗುತ್ತಿರುವ ಬಗ್ಗೆ ಹಲವು ದೂರುಗಳು ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ವೇದಿಕೆಯ ಅಧ್ಯಕ್ಷೆ ಶ್ರೀಮತಿ ಶಾಂತ ಸುರೇಂದ್ರ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಎಸ್‌ಪಿ ಕಚೇರಿಗೆ ಭೇಟಿ ನೀಡಿ, ಮಕ್ಕಳ ಕ್ಷೇಮ ಮತ್ತು ಸಾರ್ವಜನಿಕ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಮನವಿಯಲ್ಲಿ ಉಲ್ಲೇಖಿಸಿದಂತೆ, ಕೆಲವು ಶಾಲೆಗಳ ಹತ್ತಿರದ ಖಾಲಿ ಜಾಗಗಳಲ್ಲಿ ಯುವಕರು ಗುಂಪುಗೂಡಿ ಇಸ್ಪೀಟ್ ಆಟವಾಡುತ್ತಿದ್ದು, ಅಲ್ಲಿಯೇ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ವ್ಯವಹಾರ ನಡೆಯುತ್ತಿದೆ ಎಂಬ ಆರೋಪಗಳಿವೆ. ಇದರಿಂದ ಶಾಲಾ ವಿದ್ಯಾರ್ಥಿಗಳು ತಪ್ಪು ದಾರಿಯಲ್ಲಿ ಸಾಗುವ ಅಪಾಯ ಹೆಚ್ಚುತ್ತಿದೆ ಎಂದು ವೇದಿಕೆ ಆತಂಕ ವ್ಯಕ್ತಪಡಿಸಿದೆ.

ಇತ್ತೀಚೆಗೆ ಗಾಡಿಕೊಪ್ಪ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ದಂಪತಿಗಳ ಮೇಲೆ ಹಲ್ಲೆ ನಡೆಸಿ “ಗಾಂಜಾ ಕೊಡು” ಎಂದು ಗಲಾಟೆ ಮಾಡಿದ ಘಟನೆ ತುಂಗಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವುದನ್ನೂ ವೇದಿಕೆ ಉಲ್ಲೇಖಿಸಿದೆ. ಇಂತಹ ಘಟನೆಗಳು ಜಿಲ್ಲೆಯ ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗಿದೆ ಎಂದು ತಿಳಿಸಿದೆ.

ಶಾಶ್ವತಿ ಮಹಿಳಾ ವೇದಿಕೆಯ ಮುಖ್ಯ ಉದ್ದೇಶ ಶಾಲಾ ಮಕ್ಕಳಿಗೆ ನೇರವಾಗಿ ಡ್ರಗ್ಸ್ ಲಭ್ಯವಾಗುವ ಪರಿಸ್ಥಿತಿಗೆ ಕಡಿವಾಣ ಹಾಕುವುದು. ಈ ಹಿನ್ನೆಲೆಯಲ್ಲಿ ಅವರು ಕೆಳಕಂಡ ಬೇಡಿಕೆಗಳನ್ನು ಮುಂದಿರಿಸಿದ್ದಾರೆ:

  • ಪ್ರತಿಯೊಂದು ಶಾಲೆ ಹಾಗೂ ಕಾಲೇಜುಗಳ ಸುತ್ತಮುತ್ತ ಕಟ್ಟು ನಿಟ್ಟಿನ ಪೊಲೀಸ್ ಪಹರೆ ಹಾಕುವುದು.
  • ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು.
  • ಶಾಲಾ-ಕಾಲೇಜುಗಳಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸುವುದು.
  • ಸಾರ್ವಜನಿಕರಿಂದ ಬಂದ ದೂರುಗಳಿಗೆ ತ್ವರಿತ ಪ್ರತಿಕ್ರಿಯೆ ನೀಡುವುದು.
  • ಮಾದಕ ವಸ್ತು ಜಾಲವನ್ನು ಬೇರು ಸಮೇತ ನಿರ್ಮೂಲ ಮಾಡುವ ಕಾರ್ಯಾಚರಣೆ ಮಾಡುವುದು.

ಶಿವಮೊಗ್ಗ ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಡ್ರಗ್ಸ್, ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳು ಸುಲಭವಾಗಿ ಸಿಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ಇದು ಮಕ್ಕಳ ಭವಿಷ್ಯಕ್ಕೂ ಸಮಾಜದ ಸುರಕ್ಷತೆಯಿಗೂ ದೊಡ್ಡ ಅಪಾಯವಾಗಬಹುದು. ಆದ್ದರಿಂದ ಶಾಲೆಗಳು ಮತ್ತು ಕಾಲೇಜುಗಳ ಸುತ್ತಮುತ್ತ ನಡೆಯುತ್ತಿರುವ ಇಂತಹ ಅಕ್ರಮ ದಂಧೆಗಳಿಗೆ ತಕ್ಷಣ ಕಡಿವಾಣ ಹಾಕಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ನಡೆಸಬೇಕು ಎಂದು ಶಾಶ್ವತಿ ಮಹಿಳಾ ವೇದಿಕೆಯ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಶಾಂತ ಸುರೇಂದ್ರ ತಿಳಿಸಿದ್ದಾರೆ.

ಈ ವೇಳೆ ಪದಾಧಿಕಾರಿಗಳಾದ ಚಂದ್ರಮತಿ ಹೆಗಡೆ, ರೇಣುಕಮ್ಮ, ಶಿಲ್ಪಾ ಸತೀಶ್, ಜಯಂತಿ, ಪುಷ್ಪಾ, ಲೀಲಾ ನಾಯ್ಕ, ದೀಪಾ ಮಂಜುನಾಥ, ಲಲಿತಾ ಪ್ರಕಾಶ್, ಸಂಗೀತಾ ಜೆ., ಮೀನಾ, ಪ್ರೇಮಾ, ಸುಮಾ ಪ್ರಕಾಶ್, ಕಲಾ, ದೀಪಾ ಲಕ್ಷ್ಮೀ, ಮಂಜುಳ ಉದಯ್, ಚೈತ್ರಾ, ಗೀತಾ, ಸುಮಾ ಸಾಯಿನಾಥ್, ಉಮಾ, ಶೋಭಾ, ಶಾರದಾ, ಮಂಜುಳಮ್ಮ, ದೀಪಾ ಸೋಮಶೇಖರ್, ಸುಜಾತಾ, ಮಾಲಾ ಹಾಗೂ ಸುಗಂಧಿನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಿವಮೊಗ್ಗ ಜಿಲ್ಲೆಯ ಜನತೆ ಮತ್ತು ವಿಶೇಷವಾಗಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ತಕ್ಷಣ ಕ್ರಮ ಕೈಗೊಳ್ಳುವಂತೆ ಶಾಶ್ವತಿ ಮಹಿಳಾ ವೇದಿಕೆ ಆಗ್ರಹಿಸಿದೆ.

K.M.Sathish Gowda

Join WhatsApp

Join Now

Facebook

Join Now

Read more

ಯುವಕರು ಸಂಘಟಿತರಾಗಿ ನಾರಾಯಣ ಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿ: ಸಚಿವ ಮಧು ಬಂಗಾರಪ್ಪ

ಧರ್ಮ, ಪರಂಪರೆ ಹಾಗೂ ಮಠಮಾನ್ಯಗಳ ಸಂರಕ್ಷಣೆಗೆ ಸಂಘಟಿತ ಪ್ರಯತ್ನ ಅಗತ್ಯ: ಭಿನ್ನಾಭಿಪ್ರಾಯ ಬದಿಗಿಟ್ಟು ಸಮಾಜದ ಹಿತಕ್ಕಾಗಿ ಒಂದಾಗ ಬೇಕು: ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟು ಕಾಪಾಡುವುದು ಎಲ್ಲರ ಜವಾಬ್ದಾರಿ: ಬಿ.ವೈ. ವಿಜಯೇಂದ್ರ

ಭಕ್ತಿಯ ಮಹಾಪ್ರವಾಹದಲ್ಲಿ ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಲಕ್ಷಾಂತರ ಜನರ ಸಾಕ್ಷಿ! ಕಾಲಿಡಲೂ ಜಾಗವಿಲ್ಲ, ಬಾನಂಗಳದಲ್ಲಿ ಜೈಕಾರ! ಶಿವಮೊಗ್ಗದಲ್ಲಿ ಮೈ ನವಿರೇಳಿಸಿದ ಗಣೇಶೋತ್ಸವದ ಅದ್ಧೂರಿ ಮೆರವಣಿಗೆ!

ಸೆ.26-27ರಂದು ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಮಹಾಸಮ್ಮೇಳನ: ಪಂಚಪೀಠಾಧೀಶರ ಸಾನ್ನಿಧ್ಯ

ಶಿವಮೊಗ್ಗ ಹಿಂದೂ ಗಣಪತಿ ಮೆರವಣಿಗೆಗೆ ಭಕ್ತಿಯ ಸಾಥ್: ಐದು ಸಾವಿರ ಭಕ್ತರಿಗೆ ಅನ್ನದಾಸೋಹ: ಮೂರನೇ ವರ್ಷವೂ ಸೇವಾ ಪರಂಪರೆ ಮುಂದುವರಿಸಿದ ಎಸ್‌ಆರ್‌ವಿ ಎಂಟರ್‌ಪ್ರೈಸಸ್ ಗೆಳೆಯರ ಬಳಗ

50 ವರ್ಷಗಳ ದಾಂಪತ್ಯ ಜೀವನ ಸಮಾಜಕ್ಕೆ ಮಾದರಿ: ಸಂಸ್ಕಾರ, ಶಿಕ್ಷಣದೊಂದಿಗೆ ಬದುಕು ಕಟ್ಟಿಕೊಳ್ಳಿ: ತಾಯ್ನಾಡಿಗೆ ಮರಳಿ ಸೇವೆ ಸಲ್ಲಿಸಿ ಎಂದು ವಿದ್ಯಾರ್ಥಿಗಳಿಗೆ ಕೆ.ಈ. ಕಾಂತೇಶ್ ಕರೆ

Leave a Comment