ಯುರೋಪ್: ಜಗಜ್ಯೋತಿ ಶ್ರೀ ಬಸವೇಶ್ವರರ ಸಮಾನತೆಯ ಸಂದೇಶವನ್ನು ವಿಶ್ವದಾದ್ಯಂತ ಹರಡುವ ಮಹತ್ತರ ಉದ್ದೇಶದೊಂದಿಗೆ, ಯುರೋಪಿನ ವಿವಿಧ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಹಾಗೂ ಬಸವಭಕ್ತರು ಒಂದಾಗಿ ಮತ್ತೊಮ್ಮೆ ಐತಿಹಾಸಿಕ ಹೆಜ್ಜೆ ಇಟ್ಟಿದ್ದಾರೆ. ಬಸವ ಸಮಿತಿ ಯುರೋಪ್ ವತಿಯಿಂದ ಎರಡನೇ ಬಸವ ಜಯಂತಿ ಸಮಾವೇಶವನ್ನು 2026ರ ಮೇ 16ರಂದು ಜರ್ಮನಿಯ ಎರ್ಲಾಂಗನ್ ನಗರದಲ್ಲಿ ಭಕ್ತಿಭಾವ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಆಯೋಜಿಸಲಾಗಿದೆ.

ಸಮಾನತೆಯ ಸಂದೇಶ ಸಾರಿದ ಮಹಾನ್ ದಾರ್ಶನಿಕ
12ನೇ ಶತಮಾನದ ಮಹಾನ್ ಸಮಾಜ ಸುಧಾರಕ, ವಿಶ್ವಮಾನವತೆಯ ಹರಿಕಾರ, ಕಾಯಕ ಮತ್ತು ದಾಸೋಹ ತತ್ವಗಳ ಪ್ರವರ್ತಕರಾದ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಯುರೋಪಿನ ನೆಲದಲ್ಲಿ ಆಚರಿಸುವುದು ಎಲ್ಲ ಕನ್ನಡಿಗರಿಗೂ ಹಾಗೂ ಬಸವ ಭಕ್ತರಿಗೂ ಹೆಮ್ಮೆಯ ಸಂಗತಿಯಾಗಿದೆ.

ವಿಶ್ವಗುರುವಿನ ಸಂದೇಶಕ್ಕೆ ಯುರೋಪ್ ಸಾಕ್ಷಿ
ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿ, ಲಿಂಗ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಭದ್ರ ಬುನಾದಿ ಹಾಕಿದ ಬಸವಣ್ಣನವರ “ಕಾಯಕವೇ ಕೈಲಾಸ” ಎಂಬ ಸಂದೇಶವನ್ನು ಯುರೋಪ್ ದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಹಾಗೂ ಸ್ಥಳೀಯರಿಗೆ ತಲುಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಜರ್ಮನಿ, ಬೆಲ್ಜಿಯಂ, ಇಟಲಿ ಸೇರಿದಂತೆ ಯುರೋಪಿನ ವಿವಿಧ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರು ಒಗ್ಗೂಡಿ ಕಟ್ಟಿರುವ ‘ಬಸವ ಸಮಿತಿ ಯುರೋಪ್’ ಸತತ ಎರಡು ವರ್ಷಗಳ ಪ್ರಯತ್ನದ ಫಲವಾಗಿ ಈ ಸಂಘಟನೆಯನ್ನು ಬಲಪಡಿಸಿದೆ.

ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಬಸವ ತತ್ವದ ಸಂದೇಶ
ಈ ಐತಿಹಾಸಿಕ ಸಮಾರಂಭಕ್ಕೆ ಚಿಕ್ಕಮಗಳೂರಿನ ಶ್ರೀ ಬಸವತತ್ತ್ವ ಪೀಠ ಹಾಗೂ ಶಿವಮೊಗ್ಗ ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿಯವರ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಶ್ರೀಗಳು ಬಸವತತ್ವದ ಹರಿವು, ವಚನ ಸಾಹಿತ್ಯದ ಪ್ರಸ್ತುತತೆ ಹಾಗೂ ನಿತ್ಯ ಜೀವನದಲ್ಲಿ ಬಸವ ಮಾರ್ಗವನ್ನು ಅಳವಡಿಸಿಕೊಳ್ಳುವ ಕುರಿತು ಆಶೀರ್ವಚನ ನೀಡಲಿದ್ದಾರೆ. ಶರಣ ಸಾಹಿತ್ಯ ಪರಿಷತ್ ಮತ್ತು ಬಸವ ತತ್ವದ ಪ್ರಚಾರದಲ್ಲಿ ಶ್ರೀಗಳ ಸೇವೆ ಅನನ್ಯವಾದುದು.

ಬಸವತತ್ವದ ಬೆಳಕನ್ನು ವಿಶ್ವದತ್ತ ಹರಡುತ್ತಿರುವ ಡಾ. ಬಸವ ಮರುಳಸಿದ್ಧ ಸ್ವಾಮೀಜಿ
ಬಸವತತ್ವದ ಪ್ರಚಾರ, ವಚನ ಸಾಹಿತ್ಯದ ಉಳಿವು-ಬೆಳವಣಿಗೆ, ಯುವ ಪೀಳಿಗೆಗೆ ನೈತಿಕ ಮೌಲ್ಯಗಳ ಬೋಧನೆ ಹಾಗೂ ಕನ್ನಡ ಸಂಸ್ಕೃತಿಯ ಸಂರಕ್ಷಣೆಯಲ್ಲಿ ಡಾ. ಬಸವ ಮರುಳಸಿದ್ಧ ಸ್ವಾಮೀಜಿಯವರ ಸೇವೆ ಅಪಾರವಾಗಿದೆ. ಬಸವಣ್ಣನವರ ಆದರ್ಶಗಳನ್ನು ಕೇವಲ ಉಪನ್ಯಾಸಗಳಿಗೆ ಸೀಮಿತಗೊಳಿಸದೇ, ಸಮಾಜಮುಖಿ ಚಟುವಟಿಕೆಗಳ ಮೂಲಕ ಜನಜೀವನದಲ್ಲಿ ಅಳವಡಿಸುವ ಕಾರ್ಯವನ್ನು ಅವರು ನಿರಂತರವಾಗಿ ಮಾಡುತ್ತಿದ್ದಾರೆ.
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಅಮೂಲ್ಯ ಸೇವೆ
ವಚನ ಸಾಹಿತ್ಯದ ಮಹತ್ವವನ್ನು ಜಗತ್ತಿಗೆ ಪರಿಚಯಿಸುವಲ್ಲಿ, ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸುವಲ್ಲಿ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಆಶಯಗಳಿಗೆ ಬೆಂಬಲವಾಗಿ ಅವರು ಸಲ್ಲಿಸುತ್ತಿರುವ ಸೇವೆ ಅಪೂರ್ವವಾಗಿದೆ. ಅವರ ಮಾರ್ಗದರ್ಶನ ಯುರೋಪಿನ ಕನ್ನಡಿಗರಿಗೆ ಮತ್ತಷ್ಟು ಪ್ರೇರಣೆಯಾಗಲಿದೆ.

ಕಾರ್ಯಕ್ರಮದ ವಿವರಗಳು
- ದಿನಾಂಕ: 16 ಮೇ 2026, ಶನಿವಾರ
- ಸಮಯ: ಬೆಳಗ್ಗೆ 9:30 ಗಂಟೆಯಿಂದ
- ಸ್ಥಳ: ಜೆಮಿಂಡೆಜೆಂಟ್ರಮ್ ಫ್ರೌನಾರಾಚ್ (Gemeindezentrum Frauenaurach)
- ವಿಳಾಸ: ಫ್ರೌನಾರಾಚ್ ಸಮುದಾಯ ಕೇಂದ್ರ, ಎರ್ಲಾಂಗೆನ್

ಅಂತಾರಾಷ್ಟ್ರೀಯ ಗಣ್ಯರ ಉಪಸ್ಥಿತಿ
- ಶ್ರೀ ಅಜಿತ್ ವಿನಾಯಕ್ ಗುಪ್ತೆ: ಭಾರತದ ರಾಯಭಾರಿ (ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ)
- ಪ್ರೊ. ಡಾ. ರಾಬರ್ಟ್ ಜೆ. ಝೈಡೆನ್‌ಬೋಸ್: ಖ್ಯಾತ ಭಾರತಶಾಸ್ತ್ರಜ್ಞರು ಹಾಗೂ ದಕ್ಷಿಣ ಏಷ್ಯಾ ಅಧ್ಯಯನಗಳ ಪ್ರಾಧ್ಯಾಪಕರು.
- ಶ್ರೀ ರಾಹುಲ್ ನಾರಾಯಣ್ ಜಿ.: ವಿಶ್ವ ಹಿಂದೂ ಪರಿಷತ್ (VHP) ಯುರೋಪ್ ಪ್ರತಿನಿಧಿ.
- ಶ್ರೀ ರೋಹನ್ ಭಾರ್ಗವಪುರಿ: ಅಧ್ಯಕ್ಷರು, ಐಸಿರಿ ಫೌಂಡೇಶನ್, ಚಿಕ್ಕಮಗಳೂರು.
ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು
ಬೆಳಿಗ್ಗೆ 09:30ಕ್ಕೆ ಪ್ರಾರಂಭವಾಗುವ ಈ ಸಮಾರಂಭದಲ್ಲಿ ಬಸವೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆ, ಕಲಾತಂಡಗಳ ಪ್ರದರ್ಶನ, ಪುಸ್ತಕ ಬಿಡುಗಡೆ ಹಾಗೂ ದಾಸೋಹ ಕಾರ್ಯಕ್ರಮಗಳು ನಡೆಯಲಿವೆ. ಮಕ್ಕಳಿಂದ ವಚನ ವಾಚನ, ವಚನ ನೃತ್ಯ ಹಾಗೂ ಶಾಸ್ತ್ರೀಯ ನೃತ್ಯಗಳು ಕಾರ್ಯಕ್ರಮದ ಮೆರುಗು ಹೆಚ್ಚಿಸಲಿವೆ. ವಿಶೇಷ ಆಕರ್ಷಣೆಯಾಗಿ ತಂಡಗಳಿಂದ ವಚನ ಗಾಯನ ಮತ್ತು ಸಂಗೀತ ಸಂಜೆ ಏರ್ಪಡಿಸಲಾಗಿದೆ.

ಯುರೋಪಿನಲ್ಲಿ ಬಸವ ಭಕ್ತರ ಮಹಾಸಂಗಮ: ಸಮಿತಿಯ ಶ್ಲಾಘನೀಯ ಕಾರ್ಯ
ಉದ್ಯೋಗ ನಿಮಿತ್ತ ಯುರೋಪಿನ ವಿವಿಧೆಡೆ ನೆಲೆಸಿರುವ ಭಾರತೀಯರು ತಮ್ಮ ಬೇರುಗಳನ್ನು ಮರೆಯದೆ, ಕನ್ನಡದ ಸಂಸ್ಕೃತಿ ಮತ್ತು ಬಸವಣ್ಣನವರ ಲೋಕ ಕಲ್ಯಾಣದ ವಿಚಾರಗಳನ್ನು ವಿದೇಶಿ ಮಣ್ಣಿನಲ್ಲಿ ಬಿತ್ತುತ್ತಿರುವುದು ಹೆಮ್ಮೆಯ ಸಂಗತಿ. ಪಂಚಾಕ್ಷರಿ ಲಕ್ಷೇಶ್ವರಮಠ (ಪೋಲೆಂಡ್), ಹೇಮೇಗೌಡ ರುದ್ರಪ್ಪ (ಇಟಲಿ), ನವೀನ್ ಓದೊಗೌಡ್ರ (ಇಟಲಿ) ಸೇರಿದಂತೆ 11 ಸದಸ್ಯರ ಕಾರ್ಯಕಾರಿ ಸಮಿತಿಯು ಈ ಬೃಹತ್ ಸಮ್ಮೇಳನದ ಜವಾಬ್ದಾರಿ ಹೊತ್ತಿದೆ. ಯುರೋಪಿನ ವಿವಿಧ ಕನ್ನಡ ಸಂಘಟನೆಗಳು ಈ ಕಾರ್ಯಕ್ಕೆ ಬೆಂಬಲ ನೀಡಿದ್ದು, ಈಗಾಗಲೇ 150ಕ್ಕೂ ಹೆಚ್ಚು ಭಕ್ತರು ನೋಂದಣಿ ಮಾಡಿಕೊಂಡಿದ್ದಾರೆ.
”ಬಸವಣ್ಣನವರ ತತ್ವಗಳು ಸಾರ್ವಕಾಲಿಕ. ಯುರೋಪಿನಂತಹ ಮುಂದುವರಿದ ರಾಷ್ಟ್ರಗಳಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಈ ಪ್ರಯತ್ನ ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಷಯ.”
— ಬಸವ ಸಮಿತಿ ಯುರೋಪ್

ಬಸವ ಸಮಿತಿ ಯುರೋಪ್: ಕಾರ್ಯಕಾರಿ ಸಮಿತಿ
ವಿದೇಶಿ ಮಣ್ಣಿನಲ್ಲಿ ಬಸವ ತತ್ವದ ಕಂಪನ್ನು ಹರಡಲು ಶ್ರಮಿಸುತ್ತಿರುವ ಕ್ರಿಯಾಶೀಲ ತಂಡ:
| ಹೆಸರು | ಪ್ರತಿನಿಧಿಸುವ ದೇಶ |
|---|---|
| ಪಂಚಾಕ್ಷರಿ ಲಕ್ಷೇಶ್ವರಮಠ | ಪೋಲೆಂಡ್ |
| ಹೇಮೇಗೌಡ ರುದ್ರಪ್ಪ | ಇಟಲಿ |
| ನವೀನ್ ಓದೊಗೌಡ್ರ | ಇಟಲಿ |
| ಸತೀಶ ಪಲ್ಲೇದ | ಆಸ್ಟ್ರಿಯಾ |
| ದೀಪಕ್ ಜಗದೀಶ್ ಗೋಶ್ವಾಲ್ | ಬೆಲ್ಜಿಯಂ |
| ಸಂಜಯ್ ಗೊಡಬನಹಾಳ ಪ್ರಸನ್ನಕುಮಾರ | ಫ್ರಾನ್ಸ್ |
| ವಿಜಯಕುಮಾರ ತುಮಕೂರು ಚಿಕ್ಕ ರುದ್ರಯ್ಯ | ಜರ್ಮನಿ |
| ಪ್ರಿಯಾ ಚಂದ್ರಶೇಖರ | ಜರ್ಮನಿ |
| ವೇದ ಕುಮಾರಸ್ವಾಮಿ | ಜರ್ಮನಿ |
| ಪ್ರಶಾಂತ ಶಿವನಾಗಣ್ಣ | ಜರ್ಮನಿ |
| ಶಶಿಕಾಂತ ಗ. ಗುಡ್ಡದಮಠ | ಜರ್ಮನಿ |

ವಿಶ್ವದತ್ತ ಹರಡುತ್ತಿರುವ ಬಸವ ಸಂದೇಶ
ಯುರೋಪಿನ ನೆಲದಲ್ಲಿ ಬಸವಣ್ಣನವರ ತತ್ವ, ವಚನ ಸಾಹಿತ್ಯ, ಕನ್ನಡ ಸಂಸ್ಕೃತಿ ಹಾಗೂ ಭಾರತೀಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ದಿಟ್ಟ ಹೆಜ್ಜೆಯಾಗಿ ಈ ಬಸವ ಜಯಂತಿ ಸಮಾರಂಭ ರೂಪುಗೊಳ್ಳುತ್ತಿದೆ. ವಿಶ್ವಮಾನವತೆಯ ಸಂದೇಶ ಸಾರಿದ ಬಸವೇಶ್ವರರ ಆದರ್ಶಗಳನ್ನು ಜಾಗತಿಕ ಮಟ್ಟದಲ್ಲಿ ಹರಡುವ ಕಾರ್ಯದಲ್ಲಿ ಬಸವ ಸಮಿತಿ ಯುರೋಪ್ ಕೈಗೊಂಡಿರುವ ಈ ಪ್ರಯತ್ನ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.
Basava Jayanti Celebrations to Echo Across Europe on May 16: Divine Presence of Dr. Basava Marulasiddha Swamiji
EUROPE: In a historic move to spread the message of equality by Jagajjyothi Basaveshwara globally, Kannadigas and Basava followers residing across Europe have come together once again. Under the aegis of the Basava Samithi Europe, the second Basava Jayanti Convention is scheduled to be held on May 16, 2026, in Erlangen, Germany, with great devotion and cultural splendor.
Europe to Witness the Universal Guru’s Message
The primary objective of this event is to convey Basavanna’s core principles of “Work is Worship” (Kayakaave Kailasa), social justice, and gender equality to both the Indian diaspora and local residents in Europe. The ‘Basava Samithi Europe’, a collective of Kannadigas from Germany, Belgium, Italy, and other nations, has strengthened its foundation through two years of dedicated effort.
Divine Presence of Dr. Basava Marulasiddha Swamiji
The historic ceremony will be graced by the divine presence of Dr. Basava Marulasiddha Swamiji of Sri Basavatatva Peetha, Chikmagalur, and Basava Kendra, Shivamogga. Swamiji will deliver a discourse on the flow of Basava philosophy, the relevance of Vachana literature in modern times, and adopting the Basava path in daily life. His service to the Sharana Sahitya Parishat and the promotion of Basava values is exemplary.
Distingushed International Guests
The event will be attended by several notable dignitaries:
- Shri Ajit Vinayak Gupte: Ambassador of India to the Federal Republic of Germany.
- Prof. Dr. Robert J. Zydenbos: Renowned Indologist and Professor of South Asian Studies.
- Shri Rahul Narain G.: Representative of Vishwa Hindu Parishad (VHP) Europe.
- Shri Rohan Bhargavapuri: President, Iciri Foundation, Chikmagalur.
Event Details
- Date: Saturday, May 16, 2026
- Time: Starting from 9:30 AM
- Venue: Gemeindezentrum Frauenaurach
- Address: Gaisbuhlstrasse-4, 91056, Erlangen-Frauenaurach, Germany.
Vibrant Cultural Programs
The celebrations will commence at 9:30 AM with a grand procession of Basaveshwara’s portrait, followed by cultural performances, book launches, and Dasoha (community meal). Highlights include:
- Vachana recitation and classical dance performances by children.
- Vachana singing and a musical evening by various troupes.
A Mega Gathering of Basava Followers
It is a matter of pride that Indians living in Europe are staying true to their roots by sowing the seeds of Kannada culture and Basavanna’s vision of global welfare. An 11-member executive committee, including Panchakshari Laksheshwarmath (Poland), Hemegowda Rudrappa (Italy), and Naveen Odogoudra (Italy), is leading the convention. Various Kannada organizations across Europe have extended their support, with over 150 devotees already registered.
“Basavanna’s principles are eternal. This effort to preserve and grow our culture in advanced nations like those in Europe is a moment of pride for all Kannadigas.” — Basava Samithi Europe
Basava Samithi Europe: Executive Committee
| Name | Country Represented |
|---|---|
| Panchakshari Laksheshwarmath | Poland |
| Hemegowda Rudrappa | Italy |
| Naveen Odogoudra | Italy |
| Satish Palled | Austria |
| Deepak Jagadish Goshwal | Belgium |
| Sanjay Godabanahal Prasannakumar | France |
| Vijaykumar Tumkur Chikka Rudraiah | Germany |
| Priya Chandrashekar | Germany |
| Veda Kumaraswamy | Germany |
| Prashanth Shivanaganna | Germany |
| Shashikant G. Guddadamath | Germany |
This Basava Jayanti celebration is shaping up to be a bold step in introducing the next generation to Basava philosophy, Vachana literature, and the rich Indian heritage on European soil.






