ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಒಣಗಿದ ಕೆರೆಗಳಿಗೆ ಜೀವ ತುಂಬಿದ ಆಧುನಿಕ ಭಗೀರಥ: ಬರಡು ಭೂಮಿಯಲ್ಲಿ ಹಸಿರು ಉಸಿರಾಗಿಸಿದ ಜಲಋಷಿ ಶ್ರೀ ತರಳಬಾಳು ಜಗದ್ಗುರುಗಳು

On: June 5, 2026 9:33 AM
Follow Us:

ಕೆರೆಗಳಿಗೆ ಜೀವ ತುಂಬಿದ ಆಧುನಿಕ ಭಗೀರಥ ತರಳಬಾಳು ಶ್ರೀಗಳು

ಜಗಳೂರು, ಚನ್ನಗಿರಿ, ದಾವಣಗೆರೆ, ತರೀಕೆರೆ, ಹಳೇಬೀಡು, ಭರಮಸಾಗರ ಹಾಗೂ ಸಿರಿಗೆರೆ ವ್ಯಾಪ್ತಿಯ ನೂರಾರು ಒಣಗಿದ ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗಳನ್ನು ಸಾಕಾರಗೊಳಿಸಿದ ಕೀರ್ತಿ ಪೂಜ್ಯ ಶ್ರೀಗಳಿಗೆ ಸಲ್ಲುತ್ತದೆ. ಅವರ ಅಚಲ ಸಂಕಲ್ಪ ಮತ್ತು ನಿರಂತರ ಪ್ರಯತ್ನದ ಫಲವಾಗಿ ಇಂದು ತುಂಗೆ-ಭದ್ರೆಯರು ಹಳ್ಳಿಗಳ ಕೆರೆ-ಕಟ್ಟೆಗಳಲ್ಲಿ ಅವಿರ್ಭವಿಸಿರುವುದು ಜನಸಾಮಾನ್ಯರಿಗೆ ಪವಾಡದಂತೆ ಗೋಚರಿಸುತ್ತಿದೆ. ಈ ಭಗೀರಥ ಪ್ರಯತ್ನದಿಂದಾಗಿಯೇ ಶ್ರೀಗಳಿಗೆ ‘ಜಲಋಷಿ’ ಎಂಬ ಸಾರ್ಥಕ ಅಭಿದಾನ ಒಲಿದುಬಂದಿದೆ.

​ಸಸ್ಯರಾಶಿ ಮತ್ತು ಜೀವಜಲದ ರಕ್ಷಣೆಗಾಗಿ ತ್ರಿಕಾಲದಲ್ಲೂ ಚಿಂತಿಸುವ ಪೂಜ್ಯ ಶ್ರೀಗಳ ಪರಿಸರ ಕಾಳಜಿಯನ್ನು ಗುರುತಿಸಿ ಭಾರತ ಸರ್ಕಾರವು 1987ರಲ್ಲಿಯೇ ಅವರಿಗೆ ಪ್ರತಿಷ್ಠಿತ ‘ಇಂದಿರಾ ಪ್ರಿಯದರ್ಶನಿ ವೃಕ್ಷಮಿತ್ರ ಪ್ರಶಸ್ತಿ’ ನೀಡಿ ಗೌರವಿಸಿದೆ. ವಿನಾಶದ ಅಂಚಿನಲ್ಲಿದ್ದ ಆಯುರ್ವೇದ ಮೂಲಿಕೆ ಹಾಗೂ ವೈದ್ಯಕೀಯ ಸಸ್ಯಗಳ ಸಂರಕ್ಷಣೆಗಾಗಿ 2002ರಲ್ಲಿ ಅವರಿಗೆ ‘Certificate of Excellence’ ಗೌರವ ಪುರಸ್ಕಾರ ಲಭಿಸಿದೆ.

​ಗ್ರಾಮೀಣ ಭಾಗದ ಪರಿಸರವನ್ನು ಸ್ವಚ್ಛ ಹಾಗೂ ಸುರಕ್ಷಿತವಾಗಿಡಲು ಶ್ರೀಗಳು ನೂರಾರು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಪ್ರಸ್ತುತ ದೇಶಾದ್ಯಂತ ಸಾಗುತ್ತಿರುವ ‘ಸ್ವಚ್ಛ ಭಾರತ’ ಪರಿಕಲ್ಪನೆಗೆ ಶ್ರೀಗಳು 1990ರ ದಶಕದಲ್ಲೇ ಮುನ್ನುಡಿ ಬರೆದಿದ್ದರು. ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ಅಂದಿನ ದಿನಗಳಲ್ಲೇ 421 ಹಳ್ಳಿಗಳಲ್ಲಿ 4426 ಶೌಚಾಲಯಗಳನ್ನು ನಿರ್ಮಿಸಿಕೊಡುವ ಮೂಲಕ ಗ್ರಾಮೀಣ ಆರೋಗ್ಯ ರಕ್ಷಣೆಗೆ ನಾಂದಿ ಹಾಡಿದರು. ಅಷ್ಟೇ ಅಲ್ಲದೆ, ದಾವಣಗೆರೆಯಲ್ಲಿ ಸ್ಥಾಪಿತವಾಗಿರುವ ‘ತರಳಬಾಳು ಕೃಷಿ ವಿಜ್ಞಾನ ಕೇಂದ್ರ’ವು ಕಳೆದ ಹಲವು ದಶಕಗಳಿಂದ ನಾಲ್ಕು ಜಿಲ್ಲೆಗಳ ರೈತರಿಗೆ ಕೃಷಿ ಉತ್ತೇಜನ ಮತ್ತು ವೈಜ್ಞಾನಿಕ ಸಲಹೆಗಳನ್ನು ನೀಡುವ ಮೂಲಕ ಅಪ್ಪಟ ರೈತಸ್ನೇಹಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.

🌱 ಹಸಿರು ಉಸಿರಾಗಿಸಿದ ಹತ್ತು ಲಕ್ಷ ಬೀಜದುಂಡೆಗಳ ಅಭಿಯಾನ

ಕಳೆದ ವರ್ಷ ಪರಮಪೂಜ್ಯ ಶ್ರೀಗಳ ದಿವ್ಯ ನೇತೃತ್ವದಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ವತಿಯಿಂದ ಒಂದು ಅಭೂತಪೂರ್ವ ಹಸಿರು ಕ್ರಾಂತಿ ನಡೆಯಿತು. ಸಾವಿರಾರು ವಿದ್ಯಾರ್ಥಿಗಳು, ಭಕ್ತಾದಿಗಳು ಹಾಗೂ ಶಿಷ್ಯ ಸಮುದಾಯ ಒಗೂಡಿ ಬರೋಬ್ಬರಿ 10 ಲಕ್ಷ ಬೀಜದುಂಡೆಗಳನ್ನು (Seed Balls) ಸಿದ್ಧಪಡಿಸಿದ್ದರು. ಮೆದಿಕೇರಿಪುರ ಸಮೀಪವಿರುವ ಶ್ರೀಮಠದ ಸಾವಿರಾರು ಎಕರೆ ವ್ಯಾಪ್ತಿಯ ‘ಶ್ರೀ ಶಿವಕುಮಾರವನ’ದಲ್ಲಿ ಈ ಬೀಜದುಂಡೆಗಳನ್ನು ಭೂತಾಯಿಯ ಮಡಿಲಿಗೆ ಅರ್ಪಿಸಲಾಯಿತು. ಇಂದು ಆ ಬೀಜಗಳು ಮೊಳಕೆಯೊಡೆದು ಹಸಿರಾಗಿ ನಳನಳಿಸುತ್ತಿರುವುದು ಶ್ರೀಗಳ ದೂರದೃಷ್ಟಿಗೆ ಸಾಕ್ಷಿಯಾಗಿದೆ.

ವಿಶ್ವ ಪರಿಸರ ದಿನದ ಈ ಶುಭ ಸಂದರ್ಭದಲ್ಲಿ, ಪ್ರಕೃತಿಯ ಶುದ್ಧತೆ ಹಾಗೂ ಮಾನವನ ಸನ್ಮನಕ್ಕಾಗಿ ಸದಾ ಹಂಬಲಿಸುವ, ಮಾತೃ  ಹೃದಯದ ಸಂಕಲ್ಪ ಋಷಿ,  ಕನ್ನಡ ನಾಡಿನ ಪ್ರತ್ಯಕ್ಷ ದೈವ ಎಂದೇ ಕರೆಸಿಕೊಳ್ಳುವ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶ್ರೀ  ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಲೋಕಕಲ್ಯಾಣದ ಕೈಂಕರ್ಯಗಳನ್ನು ಕೃತಜ್ಞತೆಯಿಂದ ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅವರ ಹಸಿರು ನಡೆ ನಮಗೆಲ್ಲರಿಗೂ ದಾರಿದೀಪವಾಗಲಿ.

K.M.Sathish Gowda

Join WhatsApp

Join Now

Facebook

Join Now

Read more

ಪ್ರಜಾಪ್ರಭುತ್ವದ ಶ್ರೇಷ್ಠತೆಗೆ ಸವಾಲೆಸೆದ ಶ್ರೀ ತರಳಬಾಳು ಜಗದ್ಗುರುಗಳು: ನಾಲ್ವಡಿಯವರ ‘ಜನಹಿತ’ದ ಮಾದರಿ ಇಂದೇಕೆ ಸಾಧ್ಯವಾಗುತ್ತಿಲ್ಲ!?ದಾವಣಗೆರೆಯಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿ ಅನಾವರಣ: ವ್ಯವಸ್ಥೆಯ ಆತ್ಮಾವಲೋಕನಕ್ಕೆ ತರಳಬಾಳು ಶ್ರೀಗಳ ಕರೆ

ಮೂರು ಸಾವಿರ ಕಂಠಗಳು… ಒಂದೇ ನಾದ… ಬಸವಣ್ಣನವರ ವಚನಗಳಿಗೆ ದಾವಣಗೆರೆ ಸಾಕ್ಷಿ!: ‘ವಚನ ನಾದಲೋಕ’ದಲ್ಲಿ ಎಲ್ಲರೂ ಭಾಗವಹಿಸಿ ಎಂದು ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಮನವಿ

‘ಗಲಾಟೆ ಗಣಪತಿ’ಗೆ ತೆರೆ: ಭಯದಿಂದ ಭಕ್ತಿಯ ಸಂಭ್ರಮದತ್ತ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ: ಎಸ್‌ಪಿ ನಿಖಿಲ್ ಬಿ. ಅವರ ಕಾರ್ಯತಂತ್ರದಲ್ಲಿ ತಂತ್ರಜ್ಞಾನಾಧಾರಿತ ಕಣ್ಗಾವಲು: ಶಾಂತಿಯುತ ಮೆರವಣಿಗೆಗೆ ಸಾರ್ವಜನಿಕರ ಮೆಚ್ಚುಗೆ

​ಶ್ರೀ ಜಗದ್ಗುರು ರೇಣುಕಾಚಾರ್ಯರು-ಶರಣರನ್ನು ಬೇರ್ಪಡಿಸುವ ಕುತಂತ್ರ ನಿಲ್ಲಲಿ!: ಒಳಗಿನ ಶತ್ರುಗಳಿಂದಲೇ ಧರ್ಮಕ್ಕೆ ಕಂಟಕ, ಸ್ವಾರ್ಥಿಗಳ ಕಪಟ ನಾಟಕ ಇನ್ಮುಂದೆ ನಡೆಯಲ್ಲ!: ಧರ್ಮದ್ರೋಹಿಗಳಿಗೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಖಡಕ್ ಎಚ್ಚರಿಕೆ!

ರೈತರೆ, ಸಾಲಕ್ಕೆ ಹೆದರಬೇಡಿ! ಆತ್ಮಹತ್ಯೆ ಮಾಡಿಕೊಳ್ಳಬೇಡಿ; ಎದೆತಟ್ಟಿ ‘ನಾನು ರೈತ’ ಎಂದು ಹೇಳಿ ಹೋರಾಡಿ: ಬರ ಪರಿಹಾರದ ಹೆಸರಿನಲ್ಲಿ ರೈತರನ್ನು ಕಾಯಿಸುವುದೇಕೆ? ಶಾಶ್ವತ ನೀರಾವರಿ ಕಲ್ಪಿಸಿ, ಸಾಲಮನ್ನಾ ಮಾಡಿ: ಸಿಎಂಗೆ ಎಚ್.ಆರ್. ಬಸವರಾಜಪ್ಪ ಒತ್ತಾಯ

​ಧರ್ಮ ಮತ್ತು ಕಾಯಕದ ಹಾದಿಯಲ್ಲಿ ‘ಶಿವನ ಕುಮಾರ’: ವೀರಶೈವ-ಲಿಂಗಾಯತ ವೇದಿಕೆಯಲ್ಲಿ ಸಿಎಂ ಡಿ.ಕೆ.ಶಿ ಭಾವನಾತ್ಮಕ ಧರ್ಮಸಂದೇಶ!: ‘ಜಾಗ ನನ್ನದು, ಕಟ್ಟಡ ನಿಮ್ಮದು’ – ಮಠಗಳಿಗೆ 2 ಎಕರೆ ಜಾಗ ನೀಡುವ ಭರವಸೆ

Leave a Comment