ರೋಲ್ಸ್–ರಾಯ್ಸ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಕರ್ನಾಟಕದ ಕಿರಿಯ ವಯಸ್ಸಿನ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ತುಳುನಾಡಿನ ರಿತುಪರ್ಣ ಪಾತ್ರರಾಗಿದ್ದಾರೆ. 72.3 ಲಕ್ಷ ವಾರ್ಷಿಕ ಪ್ಯಾಕೇಜ್ ಪಡೆದ ರಿತುಪರ್ಣ, ರೊಬೊಟಿಕ್ಸ್ ಸಾಫ್ಟ್ವೇರ್ ಎಂಜಿನಿಯರ್ ಆಗಿ ಅಮೆರಿಕದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ವಿಶ್ವದ ಪ್ರತಿಷ್ಠಿತ ಕಾರು ಸಂಸ್ಥೆ ರೋಲ್ಸ್-ರಾಯ್ಸ್ ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಮೂಲಕ ತುಳುನಾಡಿನ ಹೆಣ್ಣು ಮಗಳೊಬ್ಬಳು ಕೆಲಸ ಗಿಟ್ಟಿಸಿಕೊಳ್ಳುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಈ ಮೂಲಕ ರೋಲ್ಸ್-ರಾಯ್ಸ್ ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಕರ್ನಾಟಕದ ಕಿರಿಯ ವಯಸ್ಸಿನ ಮೊದಲ ಯುವತಿ ಎಂಬ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಈ ಮೂಲಕ ತೀರ್ಥಹಳ್ಳಿ ಮೂಲದ ಮಂಗಳೂರು ನಿವಾಸಿ ರಿತುಪರ್ಣ ಕೆ.ಎಸ್ 72.3 ಲಕ್ಷ ವಾರ್ಷಿಕ ಪ್ಯಾಕೇಜ್ ಪಡೆಕೊಂಡಿದ್ದಾರೆ. ವೈದ್ಯೆಯಾಗಬೇಕೆಂಬ ಕನಸು ಹೊಂದಿದ್ದ ಯುವತಿ ಕಾರಣಾಂತಗಳಿಂದ ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ರೊಬೊಟಿಕ್ಸ್ ಮತ್ತು ಆಟೊಮೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಮಾಡಿದರು.
ಇನೋವೇಷನ್ ವಿಭಾಗದಲ್ಲಿ ಚಿನ್ನದ ಪದಕ ಪಡೆದ ರಿತುಪರ್ಣ ಕೆ.ಎಸ್., ಬಳಿಕ ರೋಲ್ಸ್-ರಾಯ್ಸ್ ಸಂಸ್ಥೆಯಲ್ಲಿ ಇಂಟರ್ನಿಷಿಪ್ ಮಾಡಲು ತೆರಳಿದರು. 8 ತಿಂಗಳ ಬಳಿಕ ಇವರ ಕೆಲಸದ ಕಾರ್ಯ ನೋಡಿ ಕಂಪೆನಿ ಉದ್ಯೋಗ ಆಫರ್ ನೀಡಿದೆ. ಈಗ ರೊಬೊಟಿಕ್ಸ್ ಸಾಫ್ಟ್ವೇರ್ ಎಂಜಿನಿಯರ್ ಹುದ್ದೆಗೆ ರೂ. 72.3 ಲಕ್ಷ ವಾರ್ಷಿಕ ಪ್ಯಾಕೇಜ್ ಪಡೆಯುವ ಅದ್ಭುತ ಸಾಧನೆ ಮಾಡಿದ್ದಾರೆ. ಕೇವಲ 20 ವರ್ಷದ ರಿತುಪರ್ಣ ಕೆಲವೇ ತಿಂಗಳಲ್ಲಿ ಅಮೆರಿಕಕ್ಕೆ ತೆರಳಲಿದ್ದಾರೆ. ಕಾಲೇಜು ಮತ್ತು ಪೋಷಕರು ಈಕೆಯ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ
ಹಿನ್ನೆಲೆ:
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ರಿತುಪರ್ಣ ಅವರ ಸಾಧನೆಯ ಹಾದಿ ಸರಳ ಇಂಟರ್ನ್‌ಶಿಪ್ ಅರ್ಜಿಯಿಂದ ಆರಂಭವಾಯಿತು. ಕಠಿಣ ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿದ ಬಳಿಕ, ಇಂಟರ್ನ್‌ಶಿಪ್ ಅವರಿಗೆ ಅತ್ಯಾಧುನಿಕ ರೊಬೊಟಿಕ್ಸ್ ಯೋಜನೆಗಳಲ್ಲಿ ಪ್ರಾಯೋಗಿಕ ಅನುಭವವನ್ನು ಒದಗಿಸಿತು. ಅವರು ತೋರಿದ ಪರಿಶ್ರಮ ಮತ್ತು ಸಮರ್ಪಣೆ ಅವರಿಗೆ ರೂ. 39.58 ಲಕ್ಷ ಪೂರ್ವ ನಿಯೋಜನೆಯ ಆಫರ್ ಪಡೆಯಲು ಕಾರಣವಾಯಿತು.